ದೇವರ ದಾಸಿಮಯ್ಯ ಜಯಂತಿ
ಚಿಕ್ಕನಾಯಕನಹಳ್ಳಿ : ದೇವರ ದಾಸಿಮಯ್ಯನವರು ಕಾವ್ಯವನ್ನು ಜನರಿಗೆ ಅರ್ಥವಾಗುವ ರೀತಿಯಲ್ಲಿ ರಚಿಸಿದ್ದಾರೆ, ಗದ್ಯಪದ್ಯ ಮಿಶ್ರಿತ ಸಾಹಿತ್ಯವನ್ನು ರಚಿಸಿದ ಅವರು, ಭಕ್ತಿಯಲ್ಲಿ ಹೆಚ್ಚು ತೊಡಗಿಸಿಕೊಂಡರು, ದಾಸಿಮಯ್ಯ ಹೆಚ್ಚಿನ ಅಧ್ಯಯನಕ್ಕಾಗಿ ಮದನೂರಿನಿಂದ ಶ್ರೀಶೈಲಕ್ಕೆ ಹೋಗುವ ಮಾರ್ಗಮಧ್ಯದಲ್ಲಿ ಜನರಿಗೆ ಭಕ್ತಿಯ ಬಗ್ಗೆ ಜಾಗೃತಿ ಮೂಡಿಸಲು ಶ್ರಮಿಸಿದರು ಎಂದು ನಿವೃತ್ತ ಶಿಕ್ಷಕ ಬನಶಂಕರಯ್ಯ ಹೇಳಿದರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ನಡೆದ ದೇವರ ದಾಸಿಮಯ್ಯನವರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ದೇವರ ದಾಸಿಮಯ್ಯ ವಚನಕಾರರಲ್ಲಿ ಮೊದಲಿಗರು, ವಸ್ತ್ರ ತಯಾರಿಕೆಯಲ್ಲಿ 7ನೇಯವರು ಎಂದರು, ದೇವರ ದಾಸಿಮಯ್ಯ ಜಯಂತ್ಯೋತ್ಸವಕ್ಕೆ ಹಿಂದಿನ ಸಕರ್ಾರವೂ ಕಾರಣವಾಗಿದ್ದು ದಾಸಿಮಯ್ಯನವರ ಹೆಸರಿನಲ್ಲಿ ಅಧ್ಯಯನ ಪೀಠ ರಚಿಸಿ ಕೋಟ್ಯಾಂತರ ರೂಪಾಯಿಗಳನ್ನು ಸಕರ್ಾರ ಬಿಡುಗಡೆ ಮಾಡಿದೆ, ಈಗಿರುವ ಸಕರ್ಾರ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ದೇವರ ದಾಸಿಮಯ್ಯ ಜಯಂತಿಯನ್ನು ಆಚರಿಸಲು ತೀಮರ್ಾನಿಸಿಸುವ ಹಂತದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆ ಉಮಾಶ್ರೀ ಹಾಗೂ ವಿಧಾನ ಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ ಸಕರ್ಾರದ ಮೇಲೆ ಒತ್ತಡ ತಂದಿರುವುದು ಗಮನಾರ್ಹ ಎಂದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ, ದೇವರ ದಾಸಿಮಯ್ಯನವರು ಸಮಾಜ ಸುಧಾರಣೆಗೋಸ್ಕರ ಶ್ರಮಿಸಿದ ಮಹಾನ್ ಪುರುಷ ಎಂದು ಹೇಳಿದರಲ್ಲದೆ, ಸಕರ್ಾರ ಪ್ರಥಮವಾಗಿ ದೇವರ ದಾಸಿಮಯ್ಯ ಕಾರ್ಯಕ್ರಮವನ್ನು ಸಕರ್ಾರದ ಮಟ್ಟದಲ್ಲಿ ಆಚರಿಸುತ್ತಿರುವುದು ಸಂತಸ ತಂದಿದ್ದು ದೇವರ ದಾಸಿಮಯ್ಯನವರ ಮಾರ್ಗದರ್ಶನ ಇಂದಿನ ಯುವಪೀಳಿಗೆಗೆ ಅವಶ್ಯವಾಗಿದ್ದು ಅವರ ಆದರ್ಶ ತತ್ವಗಳನ್ನು ರೂಡಿಸಿಕೊಂಡಾಗ ಮಾತ್ರ ಇಂತಹ ಜಯಂತ್ಯೋತ್ಸವಗಳಿಗೆ ಅರ್ಥ ಬರುತ್ತದೆ, ಅದೇ ರೀತಿ ಭೋವಿ ಜನಾಂಗದವರಿಗೂ ಸಿದ್ದರಾಮಜಯಂತಿ ಮಾಡಲು ಸಕರ್ಾರ ತೀಮರ್ಾನಿದೆ ಎಂದರು.
ಪುರಸಭಾಧ್ಯಕ್ಷೆ ರೇಣುಕಮ್ಮ ಮಾತನಾಡಿ, ವೃತ್ತಿಯ ಎಳೆಯಲ್ಲಿಯೇ ದೇವರನ್ನು ಕಂಡ ದಾಸಿಮಯ್ಯನವರ ತತ್ವ ಚಿಂತನೆಯನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.
ತಾ.ಪಂ.ಅಧ್ಯಕ್ಷೆ ಲತಾಕೇಶವಮೂತರ್ಿ ಮಾತನಾಡಿ, ದೇವರ ದಾಸಿಮಯ್ಯನವರು ಮೇಲು ಕೀಳು ಎಂದು ಭಾವನೆಯನ್ನು ತೊಡೆದು ಹಾಕಲು ಶ್ರಮಿಸಿದ ಮಹಾಪುರುಷ, ಕಾಯಕವೇ ಕೈಲಾಸ ಎಂದು ತಿಳಿದು ವಸ್ತ್ರವಿನ್ಯಾಸ ಮಾಡಿ ಜೀವನ ನಡೆಸುತ್ತಿದ್ದ ದೇವರ ದಾಸಿಮಯ್ಯ ಭಕ್ತಿಗೆ ಹೆಚ್ಚು ಪ್ರಾಧಾನ್ಯತೆ ನೀಡಿದ್ದರು ಎಂದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸಾಧಕರಾದ ಕೆ.ಟಿ.ತಿಮ್ಮರಾಯಪ್ಪ, ಸಿ.ಎಂ.ಅನಂತಯ್ಯ, ಶಂಕರಶೆಟ್ಟಿ, ಸಿ.ಎಲ್.ನಾರಾಯಣಪ್ಪ, ಹೆಚ್.ಜಿ.ಶಂಕರಯ್ಯ, ರೇವಣ್ಣ, ರಂಗಶೆಟ್ಟಿರವರಿಗೆ ಸನ್ಮಾನಿಸಲಾಯಿತು.
ತಹಶೀಲ್ದಾ ಕಾಮಾಕ್ಷಮ್ಮ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯೆ ಲೋಹಿತಬಾಯಿ, ಪುರಸಭಾ ಉಪಾಧ್ಯಕ್ಷೆ ನೇತ್ರಾವತಿ, ಸದಸ್ಯರಾದ ಸಿ.ಕೆ.ಕೃಷ್ಣಮೂತರ್ಿ, ಸಿ.ಆರ್.ತಿಮ್ಮಪ್ಪ, ಸಿ.ಡಿ.ಚಂದ್ರಶೇಖರ್, ಇಂದಿರಾಪ್ರಕಾಶ್, ಅಶೋಕ್, ಮಾಜಿ ಪುರಸಭಾಧ್ಯಕ್ಷ ಸಿ.ಟಿ.ವರದರಾಜು, ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ, ಅಕ್ಷರ ದಾಸೋಹದ ಸಹಾಯಕ ನಿದರ್ೇಶಕ ತಿಮ್ಮರಾಜು, ದೇವಾಂಗ ಸಂಘದ ಅಧ್ಯಕ್ಷ ಸಿ.ಎ.ಕುಮಾರಸ್ವಾಮಿ, ಹುಳಿಯಾರು ಅನಂತಯ್ಯ ಮತ್ತಿತರರು ಉಪಸ್ಥಿತರಿದ್ದರು.
ಸಮಾರಂಭಕ್ಕೂ ಮುನ್ನ ತಾಲ್ಲೂಕು ಕಛೇರಿಯಿಂದ ದಾಸಿಮಯ್ಯನವರ ಭಾವಚಿತ್ರ ಹಾಗೂ ನೇಯ್ಗೆಯ ಸಾಕ್ಷ್ಯಚಿತ್ರದೊಂದಿಗೆ ಮಹಿಳಾ ಭಜನಾ ತಂಡ, ಗಾರುಡಿಗ, ಕರಡಿಗೆ, ವಾದ್ಯಗೋಷ್ಠಿಯು ನೆಹರು ಸರ್ಕಲ್ ಮೂಲಕ ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆಯೊಂದಿಗೆ ಸಂಚರಿಸಿತು.
ಕಿಡಿಗೇಡಿಗಳಿಂದ ಫ್ಲೆಕ್ಸ್ ಹರಿದಿರುವ ಘಟನೆ
ಚಿಕ್ಕನಾಯಕನಹಳ್ಳಿ,ಮಾ.25 : ರಾಜ್ಯಾದ್ಯಂತ ದೇವರ ದಾಸಿಮಯ್ಯನವರ ಜಯಂತ್ಯೋತ್ಸವವನ್ನು ಸಕರ್ಾರದ ವತಿಯಿಂದ ವಿಜೃಂಭಣೆಯಿಂದ ಆಚರಿಸಲು ತೀಮರ್ಾನಿಸಿದ ಹಿನ್ನಲೆಯಲ್ಲಿ ಪಟ್ಟಣದ ದೇವಾಂಗ ಸಮಾಜದವರು ಸಕರ್ಾರದ ತೀಮರ್ಾನಕ್ಕೆ ಖುಷಿ ಪಟ್ಟು ಪ್ಲೆಕ್ಸ್ ಹಾಕಿಸಿ ಸಂತಸ ವ್ಯಕ್ತಪಡಿಸಿದ್ದ ಬ್ಯಾನರ್ಗೆ ಕಿಡಿಗೇಡಿಗಳು ಸಮುದಾಯದ ಮುಖಂಡರ ಭಾವಚಿತ್ರವನ್ನು ಹರಿದಿರುವ ಘಟನೆ ನಡೆದಿದೆ.
ಪಟ್ಟಣದ ಸಿವಿಲ್ ಬಸ್ಟ್ಯಾಂಡ್ನ ಹೊಸಬಾಗಿಲುಮೂಲೆ ಬಳಿ ಈ ಘಟನೆ ನಡೆದಿದ್ದು ಈ ಭಾಗದಲ್ಲಿ ದೇವಾಂಗ ಸಮುದಾಯದವರು ಹಾಕಿದ ಬ್ಯಾನರ್ಗಳನ್ನು ಕಿಡಿಗೇಡಿಗಳು ಹರಿದಿರುವ ಘಟನೆ ನಡೆದಿತ್ತು, ಬುಧವಾರದಂದು ದೇವರ ದಾಸಿಮಯ್ಯನವರ ಜಯಂತಿ ಹಿನ್ನಲೆಯಲ್ಲಿ ದೇವಾಂಗ ಸಮುದಾಯದ ಮುಖಂಡರು ದಾಸಿಮಯ್ಯನವರ ಜಯಂತಿಗೆ ಶುಭಾಷಯ ಕೋರಿ ಬ್ಯಾನರ್ ಹಾಕಿದ್ದರು ಆದರೆ ಮಂಗಳವಾರ ರಾತ್ರಿ ಕಿಡಿಗೇಡಿಗಳು ಬ್ಯಾನರ್ನ್ನು ಹರಿದ ಪರಿಣಾಮ ಸಮುದಾಯದ ಮುಖಂಡರು ಕಿಡಿಗೇಡಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿ ಬೆಳ್ಳಂಬೆಳಗ್ಗೆ ಪೋಲಿಸ್ ಠಾಣೆಗೆ ಜಮಾಯಿಸಿದ್ದರು.
ಈ ಸಂದರ್ಭದಲ್ಲಿ ತಾಲ್ಲೂಕು ದೇವಾಂಗ ಸಂಘದ ಅಧ್ಯಕ್ಷ ಸಿ.ಎ.ಕುಮಾರಸ್ವಾಮಿ ಮಾತನಾಡಿ, ಸಕರ್ಾರದ ವತಿಯಿಂದ ದಾಸಿಮಯ್ಯನವರ ಜಯಂತಿ ಆಚರಣೆ ಮಾಡುವಾಗ ಕಿಡಿಗೇಡಿಗಳು ಬ್ಯಾನರ್ನ್ನು ಹರಿದು ಹಾಕಿರುವುದು ಖಂಡನೀಯವಾಗಿದೆ, ಈ ಭಾಗದಲ್ಲಿ ಮೂರು ನಾಲ್ಕು ಬಾರಿ ಕಿಡಿಗೇಡಿಗಳು ಬ್ಯಾನರ್ನ್ನು ಹರಿದಿದ್ದು ಪೋಲಿಸ್ ಇಲಾಖೆ ಕಿಡಿಗೇಡಿಗಳನ್ನು ಬಂಧಿಸಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಪುರಸಭಾ ಸದಸ್ಯ ಸಿ.ಕೆ.ಕೃಷ್ಣಮೂತರ್ಿ ಮಾತನಾಡಿ, ಕಿಡಿಗೇಡಿಗಳ ಬ್ಯಾನರ್ ಹರಿದಿರುವ ಕೃತ್ಯದಿಂದಾಗ ದಾಸಿಮಯ್ಯನವರ ಜಯಂತಿಗೆ ಅಪಮಾನವಾದಂತಾಗಿದೆ, ಈ ಬಗ್ಗೆ ಪೋಲಿಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಮಾಜಿ ಪುರಸಭಾಧ್ಯಕ್ಷ ಸಿ.ಟಿ.ವರದರಾಜು ಮಾತನಾಡಿ, ಈ ಭಾಗದಲ್ಲಿ ಹಲವಾರು ಬಾರಿ ಶುಭಾಷಯಕ್ಕೆ ಸಂಬಂಧಪಟ್ಟ ಬ್ಯಾನರ್ಗಳು ಹರಿದಿವೆ, ದಾಸಿಮಯ್ಯನವರ ಜಯಂತಿಯಂದು ಸಮಾಜದ ಮುಖಂಡರು ಹಾಕಿರುವ ಶುಭಾಷಯ ಬ್ಯಾನರ್ನ್ನು ಹರಿದಿರುವ ದುಷ್ಕಮರ್ಿಗಳ ಪತ್ತೆಯನ್ನು ಪೋಲಿಸ್ ಇಲಾಖೆ ಮಾಡಬೇಕಿದೆ ಎಂದ ಅವರು ಬ್ಯಾನರ್ ಹಾಕಿರುವ ಪಕ್ಕದಲ್ಲೇ ಮನೆಯೊಂದರಲ್ಲಿ ಸಿಸಿಟಿವಿ ಇದ್ದು ಇದರ ಮೂಲಕ ಬ್ಯಾನರ್ ಹರಿದ ದುಷ್ಕಮರ್ಿಗಳನ್ನು ಪತ್ತೆಹಚ್ಚಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ದೇವಾಂಗ ಸಮಾಜದ ಮುಖಂಡರುಗಳಾದ ಸಿ.ಎ.ಕೋದಂಡರಾಮಯ್ಯ, ಸಿ.ವಿ.ಪ್ರಕಾಶ್, ಸಿ.ಎಸ್.ಗಿರೀಶ್, ನಟರಾಜು ಹಾಗೂ ದೇವಾಂಗ ಸಮುದಾಯದವರು ಉಪಸ್ಥಿತರಿದ್ದರು.
ಅಬಕಾರಿ ಕಾಯ್ದೆ ಬರುವವರೆಗೆ ನೀರಾ ಇಳಿಸಬೇಡಿ : ಲಿಂಗರಾಜು
ಚಿಕ್ಕನಾಯಕನಹಳ್ಳಿ,ಮಾ.25 : ಸಕರ್ಾರ ಅಬಕಾರಿ ಕಾಯ್ದೆಯನ್ನು ತಿದ್ದುಪಡಿ ಮಾಡುವ ತನಕ ರೈತರು ನೀರಾವನ್ನು ಇಳಿಸದೆ ಏಪ್ರಿಲ್ ತಿಂಗಳವರೆವಿಗೂ ಕಾಯುವಂತೆ ತೆಂಗು ಬೆಳೆಗಾರರ ಸಂಘದ ಅಧ್ಯಕ್ಷ ಲಿಂಗರಾಜು ಮನವಿ ಮಾಡಿದ್ದಾರೆ.
ಪಟ್ಟಣದ ಹಳೆಯ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಸಕ್ತ ಸಾಲಿನ ಬಜೆಟ್ ಮಂಡಿಸಿ ಅಬಕಾರಿ ಕಾಯ್ದೆಯನ್ನು ಸಡಿಲಗೊಳಿಸಿದ್ದಾರೆಂದು ಹುಳಿಯಾರಿನಲ್ಲಿ ರೈತರೊಬ್ಬರು ತೆಂಗಿನ ಮರದಿಂದ ನೀರಾ ಇಳಿಸಿ, ಮಾರುತ್ತಿರುವ ಸಂದರ್ಭದಲ್ಲಿ ಪೋಲಿಸ್ನವರು ಆ ರೈತನನ್ನು ಬಂಧಿಸಿದ್ದಾರೆ, ಇದರ ವಿರುದ್ದ ತಾಲ್ಲೂಕಿನ ರೈತರು ಒಗ್ಗಟ್ಟಾಗಿ ಬಂಧನಕ್ಕೊಳಗಾದ ರೈತನ ಪರವಾಗಿ ನಿಂತಿದ್ದರು ಆದ್ದರಿಂದ ರೈತರು ಅಬಕಾರಿ ಕಾಯ್ದೆಯ ನೀರಾ ಪಾಲಿಸಿ ಬಂದ ನಂತರ ನೀರಾ ಇಳಿಸುವಂತೆ ಸಲಹೆ ನೀಡಿದ ಅವರು, ರಾಜ್ಯದಲ್ಲಿ ತೆಂಗು ಬೆಳೆಗಾರರ ಸಂಘದ 5 ಕಂಪನಿಗಳು ಇದೆ, ತಾಲ್ಲೂಕಿನಲ್ಲಿ ತೆಂಗು ಬೆಳೆಗಾರರ ಕಂಪನಿ ರಚಿಸಲು ಸಿದ್ದತೆ ನಡೆಸುತ್ತಿದ್ದು 6ನೇ ತೆಂಗು ಬೆಳೆಗಾರರ ಸಂಘದ ಕಂಪನಿಯು ಚಿಕ್ಕನಾಯಕನಹಳ್ಳಿಯಲ್ಲಿ ಆಗಲಿದೆ ಇದರಿಂದ ತೆಂಗು ಬೆಳೆಗಾರರಿಗೆ ಅನುಕೂಲವಾಗಲಿದೆ ಎಂದರು.
ವಕೀಲ ಚನ್ನಬಸಪ್ಪ ಮಾತನಾಡಿ, ರಾಜ್ಯದಲ್ಲಿ ಚಿಕ್ಕನಾಯಕನಹಳ್ಳಿಯಲ್ಲಿಯೇ 6ನೇ ತೆಂಗು ಬೆಳೆಗಾರರ ಸಂಘದ ಆರಂಭಕ್ಕಾಗಿ ಸಿದ್ದತೆ ನಡೆಯುತ್ತಿದೆ ಎಂದರಲ್ಲದೆ ರೈತರು ನೀರಾ ಇಳಿಸಲು ಸಡಿಲತೆ ನೀಡಿರುವುದಕ್ಕೆ ಸಿದ್ದರಾಮಯ್ಯನವರಿಗೆ ಅಭಿನಂದನೆ ಸಲ್ಲಿಸಿದರು ಅದೇ ರೀತಿ ನೀರಾ ಮಾರಾಟಕ್ಕೆ ವ್ಯವಸ್ಥಿತ ಮಾರುಕಟ್ಟೆ ಕಲ್ಪಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ತೆಂಗು ಬೆಳೆಗಾರರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬಗರ್ಹುಕುಂ ಸಾಗುವಳಿದಾರರಿಂದ ಕನರ್ಾಟಕ ಉಚ್ಛ ನ್ಯಾಯಾಲಯಕ್ಕೆ ಅಜರ್ಿ
ಚಿಕ್ಕನಾಯಕನಹಳ್ಳಿ,ಮಾ.23 : ಬಗರ್ಹುಕುಂ ಸಾಗುವಳಿಯಲ್ಲಿ ಭೂಮಿಯನ್ನು ಉಳುಮೆ ಮಾಡಿದವರಿಗೆ ಸಕರ್ಾರ ಹಕ್ಕುಪತ್ರ ವಿತರಿಸುತ್ತೇವೆಂದು ಸುಳ್ಳು ಆಶ್ವಾಸನೆಗಳನ್ನು ನೀಡಿ ಹಕ್ಕುಪತ್ರ ವಿತರಿಸದೆ ರೈತರನ್ನು ಒಕ್ಕಲೆಬ್ಬಿಸುವ ಪ್ರಯತ್ನ ಮಾಡುತ್ತಿರುವುದರಿಂದ 60 ವರ್ಷಗಳಿಂದ ಸಕರ್ಾರಿ ಭೂಮಿಗಳಲ್ಲಿ ಉಳುಮೆ ಮಾಡುತ್ತಿರುವ ರೈತರು ಬೀದಿಗೆ ಬೀಳಲಿದ್ದು ರೈತರ ಉಳಿವಿಗಾಗಿ ಅವರ ರಕ್ಷಣೆ ಮಾಡುವಂತೆ ಒತ್ತಾಯಿಸಿ ಕನರ್ಾಟಕ ಉಚ್ಛ ನ್ಯಾಯಾಲಕ್ಕೆ ಅಜರ್ಿ ಸಲ್ಲಿಸುತ್ತಿದ್ದೇವೆಂದು ಕನರ್ಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಸಿ.ಅಜ್ಜಪ್ಪ ಹೇಳಿದರು.
ಭೂಸ್ವಾಧಿನ ಕಾಯ್ದೆಗೆ ಬಹುರಾಷ್ಟ್ರೀಯ ಕಂಪನಿಗಳ ಪರ ತಿದ್ದುಪಡಿಯನ್ನು ವಿರೋಧಿಸಿ, ನೈಸ್ ಹಾಗೂ ಇತರೇ ಕಂಪನಿಗಳ ಭೂ ಅಕ್ರಮಕ್ಕೆ ಶಿಕ್ಷೆಗೆ ಒತ್ತಾಯಿಸಿ, ನಿವೇಶನ ಸಹಿತ ಮನೆಗಾಗಿ, ಶುದ್ದ ಕುಡಿಯುವ ನೀರಿಗಾಗಿ, ಬಗರಹುಕ್ಕುಂ ಗೋಮಳ ಹಾಗೂ ಅರಣ್ಯ ಭೂಮಿ, ಗೋಮಾಳ, ಅರಣ್ಯ ಭೂಮಿ, ಸೇಂದಿವನ, ಹುಲ್ಲುಬನಿ ಕಾವಲ್ ಮುಂತಾದ ಭೂಮಿಯನ್ನೇ ನಂಬಿ ಉಳುಮೆ ಮಾಡುತ್ತಾ ಜೀವನ ಸಾಗಿಸುತ್ತಾ ಬಂದಿರುವ ರೈತರನ್ನು ಒಕ್ಕಲೆಬ್ಬಿಸುವ ಮತ್ತು ಬಹುರಾಷ್ಟ್ರೀಯ ಕಂಪನಿಗಳ ಪರವಾದ ಭೂ ಮಸೂದೆ ಕಾಯ್ದೆಯನ್ನು ಕನರ್ಾಟಕ ಪ್ರಾಂತ ರೈತ ಸಂಘ ವಿರೋಧಿಸುತ್ತದೆ ಎಂದಿದ್ದಾರೆ.
ಭೂಮಿಯಲ್ಲಿ ವ್ಯವಸಾಯ ಮಾಡುವುದರ ಮೂಲಕ ಜೀವನ ನಡೆಸುತ್ತಿರುತ್ತೇವೆ, ಜಮೀನು ಮಂಜುರಾತಿಗೆ ಅರ್ಹರಾಗಿರುತ್ತೇವೆ, ಆದುದರಿಂದ ನ್ಯಾಯಾಲಯದ ಪ್ರಕರಣದ ನೆಪದಲ್ಲಿ ನಾವು ಸ್ವಾಧೀನದಲ್ಲಿರುವ ಜಮೀನಿನಿಂದ ಹೊರದೂಡಿದರೆ ನಮ್ಮ ಬದುಕು ಬೀದಿಪಾಲಾಗುತ್ತದೆ, ಕನರ್ಾಟಕ ಕಂದಾಯದ ನಿಯಮದ ಪ್ರಕಾರ ಜಮೀನು ಮಂಜೂರು ಮಾಡಲು ನಾವು ಅರ್ಹರಿದ್ದು ಸಕರ್ಾರವು ತನ್ನ ಜಮೀನು ಮಂಜೂರು ಮಾಡವ ಕೆಲಸವನ್ನು ನಿರ್ವಹಿಸದೆ, ನಮ್ಮಂತಹ ಬಡ ರೈತರು ವ್ಯವಸಾಯ ಮಾಡಿಕೊಂಡು ಬದುಕುವವರನ್ನು ಹೊರದೂಡುವುದು ಅನ್ಯಾಯವಾಗುತ್ತದೆ, ಇದು ಭಾರತ ಸಂವಿಧಾನದಲ್ಲಿ ನೀಡಿರುವ ಜೀವನೋಪಾಯದ ಹಕ್ಕನ್ನು ಕಸಿದುಕೊಂಡಂತಾಗುತ್ತದೆ, ಅಧಿಕಾರಿಗಳು ಈ ಮೇಲ್ಕಂಡ ನ್ಯಾಯಾಲಯದ ಅಜರ್ಿ ಸಂಖ್ಯೆ ಮತ್ತು ಇತರೆ ಪ್ರಕರಣಗಳ ನೆಪವೊಡ್ಡಿ ರೈತರನ್ನು ಹೊರದೂಡುವ ಪ್ರಯತ್ನದಲ್ಲಿರುವುದರಿಂದ ರೈತರ ಸುಬಧರ್ಿನಲ್ಲಿರುವ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ಜೀವನ ನಡೆಸುತ್ತಿರುವ ಸಣ್ಣ ರೈತರು ವ್ಯಾಪಾರಕ್ಕಾಗಿ ಜಮೀನುಗಳನ್ನು ಅತಿಕ್ರಮಿಸಿಕೊಂಡಿರುವುದಿಲ್ಲ ಆದ್ದರಿಂದ ರೈತರ ಜಮೀನುಗಳನ್ನು ತೆರವು ಮಾಡದಂತೆ ಹಾಗೂ ಹಕ್ಕುಪತ್ರ ನೀಡಲು ಸಕರ್ಾರ ಆದೇಶಿಸಬೇಕು ಎಂದು ಕನರ್ಾಟಕ ಉಚ್ಛನ್ಯಾಯಾಲಯಕ್ಕೆ ಅಜರ್ಿ ಸಲ್ಲಿಸುತ್ತಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ರೈತರುಗಳಾದ ಪರಮೇಶ್, ನಟರಾಜ್ಹೊಸಹಳ್ಳಿ, ಕಂಟಯ್ಯ, ಓಬಳಗಿರಿಯಪ್ಪ, ಶ್ರೀನಿವಾಸ್, ರಾಮದಾಸಪ್ಪ, ಲೋಕೇಶ್, ಕೃಷ್ಣಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
No comments:
Post a Comment