ರಾಜ್ಯದಲ್ಲಿ ವಿವಿಧ ರೀತಿಯ 36 ಸಾವಿರ ಸಹಕಾರ ಸಂಘಗಳ ಕಾರ್ಯನಿರ್ವಹಿಸುತ್ತಿವಗೆ : ರಮೇಶ್ಬಾಬು
ಚಿಕ್ಕನಾಯಕನಹಳ್ಳಿ,: ರಾಜ್ಯದಲ್ಲಿ ಪತ್ತಿನ ಸಹಕಾರ ಸಂಘ, ಮಹಿಳಾ ಸಂಘ, ಸ್ವಸಹಾಯ ಸಂಘಗಳು ಸೇರಿದಂತೆ ವಿವಿಧ ರೀತಿಯ 36 ಸಾವಿರ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿದೆ ಎಂದು ವಕೀಲ ರಮೇಶ್ಬಾಬು ಹೇಳಿದರು.
ಪಟ್ಟಣದ ಸಕರ್ಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ತಾಲ್ಲೂಕು ಉಪಾಧ್ಯಾಯರ ಸಹಕಾರ ಸಂಘದ ನೂತನ ಕಟ್ಟಡ ಪ್ರಾರಂಭೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿ, ಸಹಕಾರಿ ತತ್ವದ ಅಡಿಯಲ್ಲಿ ಪ್ರಾರಂಭವಾಗಿರುವ ಸಹಕಾರ ಸಂಘಗಳು ನಿತ್ಯ ಠೇವಣಿ ಸಂಗ್ರಹ, ನಿಶ್ಚಿತ ಠೇವಣಿ ಸಂಗ್ರಹಿಸಲು ಬೈಲಾ ತಿದ್ದುಪಡಿ ಮಾಡಿಕೊಂಡು ಹಣ ಸಂಗ್ರಹ ಮಾಡಿ ಶಿಕ್ಷಕರಿಗೆ ನಿವೇಶನ ಕಟ್ಟಡ ನಿಮರ್ಾಣಕ್ಕೆ ಹಾಗೂ ಮಕ್ಕಳ ಉನ್ನತ ಶಿಕ್ಷಣಕ್ಕೆ ಈ ಹಣವನ್ನು ಉಪಯೋಗಿಸಿಕೊಳ್ಳಲು ಸಲಹೆ ನೀಡಿದ ಅವರು ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ 10 ಸಾವಿರ ರೂಪಾಯಿ ಮೇಲ್ಪಟ್ಟು ಬಡ್ಡಿ ಬಂದರೆ ಸಹಜವಾಗಿ ಟಿ.ಡಿ.ಎಸ್ ಕಟ್ಟಬೇಕಾಗುತ್ತದೆ, ಸಹಕಾರಿ ಸಂಘಗಳಲ್ಲಿ ಠೇವಣಿ ಇಟ್ಟರೆ ಟಿ.ಡಿ.ಎಸ್ ಇರುವುದಿಲ್ಲ ಆದ್ದರಿಂದ ಸಹಕಾರ ಸಂಘಗಳಲ್ಲಿ ಠೇವಣಿ ಇಟ್ಟರೆ ಟಿ.ಡಿ.ಎಸ್ ಕಟ್ಟಬೇಕಾಗುತ್ತದೆ, ಸಹಕಾರಿ ಸಂಘಗಳಲ್ಲಿ ಠೇವಣಿಗೆ ಇಡಲು ಉತ್ತೇಜನ ನೀಡಿ ಇದರಿಂದ ಶಿಕ್ಷಕರಿಗೂ ಅನುಕೂಲವಾಗಲಿದೆ, ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರು ಎಲ್ಲಾ ರಾಜಕೀಯ ರಂಗಗಳಲ್ಲೂ ಇದ್ದಾರೆ ಎಂದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ, ಸಹಕಾರಿ ಸಂಘಗಳ ಹೆಚ್ಚುವರಿ ಕೊಠಡಿ ನಿಮರ್ಿಸಲು 2ಲಕ್ಷ ರೂಪಾಯಿ ನೀಡುವುದಾಗಿ ಮತ್ತು ಸಕರ್ಾರಿ ನೌಕರರ ಸಂಘದ ಕಟ್ಟಡದ ಗ್ರಂಥಾಲಯಕ್ಕೆ 2ಲಕ್ಷದ 70ಸಾವಿರ ರೂಪಾಯಿ ಬಿಡುಗಡೆ ಮಾಡುವುದಾಗಿ ಹೇಳಿದ ಅವರು ಅಕ್ಷರ ದಾಸೋಹ ಶಿಕ್ಷಣ ಇಲಾಖೆಗೆ ಬರುವ ಅನುದಾನದ ಹಣವನ್ನು ಶಿಕ್ಷಕರ ಸಹಕಾರ ಸಂಘದಲ್ಲಿ ಇಡುವಂತೆ ಅಧಿಕಾರಿಗಳಿಗೆ ಸೂಚಿಸುವುದಾಗಿ ಹೇಳಿದ ಅವರು ಶಿಕ್ಷಕರಿಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.
ಶಿಕ್ಷಕರು ಸಹಕಾರ ಸಂಘವನ್ನು ಪ್ರಾಮಾಣಿಕವಾಗಿ ಮುನ್ನೆಡೆಸಿಕೊಂಡು ಹೋದರೆ ತಾವು ಹೆಚ್ಚಿನ ಸಹಕಾರ ನೀಡುವುದಾಗಿ ತಿಳಿಸಿದರು. ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕ ಪಡೆದ ವಿದ್ಯಾಥರ್ಿಗಳಿಗೆ ಬೆಳ್ಳಿ ಪದಕ ನೀಡುತ್ತಿದ್ದು ಇನ್ನು ಹೆಚ್ಚಿನ ವಿದ್ಯಾಥರ್ಿಗಳಿಗೆ ಪದಕ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಚಿಕ್ಕಮಂಗಳೂರು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನ್ಯಾಸಕ ಸಾ.ಚಿ.ನಾಗೇಶ್ರವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯರಾದ ಜಾನಮ್ಮರಾಮಚಂದ್ರಯ್ಯ, ಮಂಜುಳಗವಿರಂಗಯ್ಯ, ಪುರಸಭಾಧ್ಯಕ್ಷೆ ರೇಣುಕಮ್ಮ, ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ದೊರೆಮುದ್ದಯ್ಯ, ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆಕೃಷ್ಣಯ್ಯಬಿ.ಇ.ಓ ಕೃಷ್ಣಮೂತರ್ಿ, ತಾ.ಸ.ನೌ.ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ಹೆಚ್.ಎಂ.ಸುರೇಶ್, ಸಿ.ಜಿ.ಶಂಕರ್, ರಾಜಯ್ಯ, ಸಿ.ಎಂ.ದಿನಕರ್, ಶಿವಕುಮಾರ್, ಚಿ.ನಾ.ಪುರುಷೋತ್ತಮ್ ಮತ್ತಿತರರರು ಉಪಸ್ಥಿತರಿದ್ದರು.
ಜಾತಿಗಣತಿಯಲ್ಲಿ ಸವಿತಾ ಮಾಜದವರು ಸವಿತಾ ಎಂದು ಬರೆಸಲು ಮನವಿ
ಚಿಕ್ಕನಾಯಕನಹಳ್ಳಿ, : ಜಾತಿಗಣತಿಯ ಸಂದರ್ಭದಲ್ಲಿ ಪ್ರತಿ ಸವಿತಾ ಸಮಾಜದ ಬಂಧುಗಳು ತಮ್ಮ ಜಾತಿಯ ಕಾಲಂನಲ್ಲಿ ಸವಿತಾ ಎಂದು ದಾಖಲಿಸಬೇಕೆಂದು ತಾಲ್ಲೂಕು ಸವಿತಾ ಸಮಾಜದ ಅಧ್ಯಕ್ಷ ಸುಬ್ರಹ್ಮಣ್ಯ(ಸುಪ್ರಿಂ) ಕೋರಿದ್ದಾರೆ.
ಉಪಜಾತಿಯ ಕಾಲಂನಲ್ಲಿ ಭಜಂತ್ರಿ ಅಥವಾ ನಾಯಿಂದ ಎಂದು ದಾಖಲಿಸಬೇಕೆಂದು ಮನವಿ ಮಾಡಿದ್ದಾರೆ.
ಜಾತಿಗಣತಿಯಲ್ಲಿ ಮಾದಿಗ ಜನಾಂಗದವರು ಮಾದಿಗ ಹಾಗೂ ಹೊಲೆಯ ಜನಾಂಗದವರು ಛಲವಾದಿ ಎಂದು ಬರೆಸಲು ಮನವಿ
ಚಿಕ್ಕನಾಯಕನಹಳ್ಳಿ, : ರಾಜ್ಯ ಸಕರ್ಾರ ಏಪ್ರಿಲ್ 11ರಿಂದ ಆರಂಭಿಸಲಿರುವ ಜಾತಿಗಣತಿಯ ಸಂದರ್ಭದಲ್ಲಿ ಗಣತಿದಾರರು ತಮ್ಮ ಮನೆಗೆ ಬಂದಾಗ ಪರಿಶಿಷ್ಠ ಜಾತಿ ಕಾಲಂನಲ್ಲಿ ಮಾದಿಗ ಜನಾಂಗದವರು ಮಾದಿಗ ಅಂತಲೂ ಹಾಗೂ ಹೊಲೆಯ ಸಮುದಾಯದವರು ಛಲವಾದಿ ಎಂತಲೂ ನಮೂದಿಸುವಂತೆ ದಲಿತ ಸಂಘರ್ಷ ಸಮಿತಿ ಮುಖಂಡರು ಮನವಿ ಮಾಡಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ದಸಂಸ ಮುಖಂಡ ಲಿಂಗದೇವರು ಮಾತನಾಡಿ, ಪರಿಶಿಷ್ಟ ಜಾತಿಯಲ್ಲಿನ ಒಳ ಮೀಸಲಾತಿ ವಗರ್ೀಕರಣಕ್ಕೆ ಇಂದಿನ ಪರಿಶಿಷ್ಠ ಜಾತಿಯ ಉಪಜಾತಿಯ ಜನಸಂಖ್ಯಾ ಆಧಾರಿತ ಸಾಮಾಜಿಕ ಮತ್ತು ಶೈಕ್ಷಣಿಕ ಸಮಿಕ್ಷೆ ಅನಿವಾರ್ಯವಾಗಿದ್ದು ಇದೇ ತಿಂಗಳ ಏಪ್ರಿಲ್ 11ರಿಂದ ಆರಂಭವಾಗುತ್ತಿರುವ ಸಾಮಾಜಿಕ ಜನಗಣತಿಯ ಸಮೀಕ್ಷೆಗಾಗಿ ದಸಂಸ ಮುಖಂಡರುಗಳು ತಾಲ್ಲೂಕಿನಾದ್ಯಂತ ಮಾದಿನ ಜನಾಂಗದವರ ಮನೆಮನೆಗೆ ತೆರಳಿ ಗಣತಿಯ ಬಗ್ಗೆ ಅರಿವು ಮೂಡಿಸುತ್ತೇವೆ, ತಾಲ್ಲೂಕು ಕಛೇರಿಗಳಲ್ಲಿ ಸಟರ್ಿಫಿಕೇಟ್ಗಳಿಗಾಗಿ ಆದಿಕನರ್ಾಟಕ ಎಂದು ನಮೂದಿಸಿರುವ ಜನಾಂಗದವರು ಗಣತಿ ಸಂದರ್ಭದಲ್ಲಿ ಮಾದಿಗ ಎಂದು ನಮೂದಿಸಿ, ಇದರಿಂದ ಸವಲತ್ತುಗಳು ದೊರಕುವುದಿಲ್ಲವೆಂಬ ಭಯ ಬೇಡ ಎಂದ ಅವರು ಮಾದಿಗ ಜನಾಂಗದವರು ಗಣತಿ ಅಜರ್ಿಯಲ್ಲಿ ಕಾಲಂ ನಂ 6ರಲ್ಲಿನ ಬಿ061ರಲ್ಲಿ ಮಾದಿಗ ಎಂದು ನಮೂದಿಸುವಂತೆ ಮನವಿ ಮಾಡಿದರು.
ಛಲವಾದಿ ಜನಾಂಗದ ಮುಖಂಡ ದೇವರಾಜು ಮಾತನಾಡಿ, ಆದಿದ್ರಾವಿಡ ಜನಾಂಗದಲ್ಲಿ ಜನಸಂಖ್ಯೆ ಎಷ್ಟಿದೆ ಎಂದು ತಿಳಿಯಲು ಜಾತಿಗಣತಿ ಸಹಕಾರಿಯಾಗಿದ್ದು ಜನಾಂಗದವರು ಗಣತಿ ಸಂದರ್ಭದಲ್ಲಿ ಹೊಲೆಯ ಸಮುದಾಯದವರು ಛಲವಾದಿ ಎಂದು ನಮೂದಿಸಲು ಮನವಿ ಮಾಡಿದ ಅವರು ಗಣತಿಯ ಅಜರ್ಿಯ ಕಾಲಂ ನಂ 6ರಲ್ಲಿ ಬಿ027ರಲ್ಲಿ ಛಲವಾದಿ ಎಂದು ನಮೂದಿಸಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ದಸಂಸ ಮುಖಂಡರುಗಳಾದ ಗೋ.ನಿ.ವಸಂತ್ಕುಮಾರ್, ಗೋವಿಂದರಾಜು, ಸತೀಶ್, ಗಂಗಾಧರ್ ಮತ್ತಿತರರು ಉಪಸ್ಥಿತರಿದ್ದರು.
ಗಣಿಬಾಧಿತ ಪ್ರದೇಶದ ಅಭಿವೃದ್ದಿಗೆ ಬಳಸುವ ನಿಟ್ಟಿನಲ್ಲಿ ಗಣಿ ಭಾದಿತ ಪ್ರದೇಶದ ಜನರಿಗೆ ಪ್ರಾತಿನಿಧ್ಯ ನೀಡಲು ಒತ್ತಾಯ
ಚಿಕ್ಕನಾಯಕನಹಳ್ಳಿ, : ಗಣಿಗಾರಿಕಾ ಪ್ರದೇಶದಲ್ಲಿ ನಡೆದ ಅಕ್ರಮ ಅದಿರು ಹರಾಜಿನಿಂದ ಸಂಗ್ರಹವಾದ 3ಸಾವಿರ ಕೋಟಿ ಹಣವನ್ನು ಗಣಿಬಾಧಿತ ಪ್ರದೇಶದ ಅಭಿವೃದ್ದಿಗೆ ಬಳಸುವ ನಿಟ್ಟಿನಲ್ಲಿ ಸಕರ್ಾರ ಗಣಿ ಪರಿಸರ ಪುನರ್ ಸ್ಥಾಪನಾ ನಿಗಮ ಸ್ಥಾಪಿಸಲು ಮುಂದಾಗಿದ್ದು ಇದರಲ್ಲಿ ಗಣಿ ಭಾದಿತ ಪ್ರದೇಶದ ಜನರಿಗೆ ಪ್ರಾತಿನಿಧ್ಯ ನೀಡಬೇಕೆಂದು ಸಾಮಾಜಿಕ ಕಾರ್ಯಕರ್ತ ನಂಜುಂಡಯ್ಯ ಒತ್ತಾಯಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಗಣಿ ಪ್ರದೇಶಗಳ ಅಕ್ರಮ ಅದಿರಿನಿಂದ ಸಂಗ್ರಹವಾದ ಹಣವನ್ನು ಸವರ್ೋಚ್ಛ ನ್ಯಾಯಾಲಯದ ಆದೇಶದಂತೆ ಗಣಿಭಾದಿತ ಪ್ರದೇಶಗಳಿಗೆ ವೆಚ್ಚ ಮಾಡಬೇಕು ಹಾಗೂ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಟಾಸ್ಕ್ಪೋಸರ್್ ಸಮಿತಿ ಸಭೆಯಲ್ಲಿ ಚಚರ್ಿಸಲು ಸ್ಥಳೀಯ ಜನರನ್ನು ಆಯ್ಕೆ ಮಾಡಿ ಸಭೆಯಲ್ಲಿ ಭಾಗವಹಿಸುವಂತೆ ಅವಕಾಶ ನೀಡಬೇಕು ಎಂದರಲ್ಲದೆ, ಗಣಿಭಾದಿತ ಪ್ರದೇಶಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಹಾಗೂ ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿ ಅಧಿಕಾರಿಗಳಿಗೆ ಯೋಜನೆ ರೂಪಿಸಿ ಕಾಮಗಾರಿ ಆರಂಭಿಸುವಂತೆ ತಿಳಿಸಿದರೂ ಇದುವರೆವಿಗೂ ಯಾವುದೇ ಕಾಮಗಾರಿ ಆರಂಭವಾಗಿಲ್ಲ, ಈಗಾಗಲೇ ದಂಡದ ರೂಪದಲ್ಲಿ ವಸೂಲಾಗಿರುವ ಹಣ ಸಕರ್ಾರದ ಬೊಕ್ಕಸದಲ್ಲಿದೆ ಈ ಹಣವನ್ನು ಕಾಮಗಾರಿಗಳ ಅನುಷ್ಠಾನಕ್ಕೆ ಶೀಘ್ರ ಆರಂಭಿಸದಿದ್ದರೆ ಬೇರೆ ಯಾವುದಾದರೂ ಉದ್ದೇಶಕ್ಕೆ ಬಳಕೆಯಾಗಲಿದೆ ಆದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಗಣಿಭಾದಿತ ಪ್ರದೇಶಗಳ ಪುನರ್ವಸತಿ ಮತ್ತು ಪುನಶ್ಚೇತನ ಪರಿಸರಕ್ಕೆ ಸಂಬಂಧಪಟ್ಟ ಅಭಿವೃದ್ದಿ ಕಾಮಗಾರಿಗಳನ್ನು ಶೀಘ್ರ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಕೆಲವು ಗಣಿ ಮಾಲೀಕರು ಗಣಿಭಾಗದಲ್ಲಿ ಅಂಗನವಾಡಿ ಕೇಂದ್ರ, ಶೌಚಾಲಯ ಮತ್ತು ಇತರೆ ಕೆಲವು ಅಭಿವೃದ್ದಿ ಮಾಡಿದ್ದೇವೆಂದು ತೋರ್ಪಡಿಸುತ್ತಿದ್ದು ಈ ಕಾಮಗಾರಿಗಳನ್ನು ಸ್ಥಳೀಯ ಜನರಿಗೆ ನೀಡದೆ ಪರಸ್ಥಳದ ಹಾಗೂ ರಾಜಕಾರಣಿಗಳ ಬೆಂಬಲವಿರುವವರಿಗೆ ನೀಡುತ್ತಿದ್ದು ಇಂಥಾ ದ್ವಂದ್ವ ನೀತಿ ಅನುಸರಿಸುವುದನ್ನು ತಕ್ಷಣ ನಿಲ್ಲಿಸಬೇಕು ಹಾಗೂ ಸವರ್ೋಚ್ಚ ನ್ಯಾಯಾಲಯದ ಆದೇಶದಂತೆ ಸ್ಥಳೀಯರಿಗೆ ಮೊದಲ ಆಧ್ಯತೆ ನೀಡಬೇಕು ಇಲ್ಲದೇ ಹೋದರೆ ಈ ಬಗ್ಗೆ ಜನಾಂದೋಲನ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಗೋಡೆಕೆರೆ ಗ್ರಾ.ಪಂ.ಸದಸ್ಯರಾದ ಗೋ.ನಿ.ವಸಂತ್ಕುಮಾರ್, ತಿಮ್ಮೇಗೌಡ ಉಪಸ್ಥಿತರಿದ್ದರು.
ಕಾಡು ಹಂದಿಗೆ ಡಿಕ್ಕಿ ಶಿಕ್ಷಕ ಸಾವು
ಚಿಕ್ಕನಾಯಕನಹಳ್ಳಿ, : ಚಿಕ್ಕನಾಯಕನಹಳ್ಳಿ ಯಿಂದ ಹುಳಿಯಾರಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಶಿಕ್ಷಕರೊಬ್ಬರು ಕಾಡುಹಂದಿಗೆ ಢಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯವಾಗಿ ಆಸ್ಪತ್ರೆಗೆ ಸಾಗಿಸುವ ಮುನ್ನ ಸಾವನ್ನಪ್ಪಿದ್ದಾರೆ.
ತಾಲ್ಲೂಕಿನ ಯಳನಡು ಸಕರ್ಾರಿ ಪ್ರೌಢಶಾಲೆಯ ಶಿಕ್ಷಕ ಚಂದ್ರಯ್ಯ(57) ಚಿಕ್ಕನಾಯಕನಹಳ್ಳಿಯಿಂದ ಹುಳಿಯಾರಿಗೆ ತೆರಳುವಾಗ ಆಲದಕಟ್ಟೆ ಸಮೀಪದಲ್ಲಿ ಶನಿವಾರ ರಾತ್ರಿ 7.30ರ ಸುಮಾರಿನಲ್ಲಿ ಅಪಘಾತದ ಸಂಭವಿಸಿದ್ದು, ತಕ್ಷಣ ಚಿಕ್ಕನಾಯಕನಹಳ್ಳಿ ಸಕರ್ಾರಿ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿದ್ದರು, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಯೊಂದಕ್ಕೆ ಕರೆದೊಯ್ಯುವ ಮಾರ್ಗಮಧ್ಯದಲ್ಲಿ ಸಾವನ್ನಪ್ಪಿದ್ದಾರೆ. ಹಿಂಭಾಗದಲ್ಲಿ ಕುಳಿತಿದ್ದ ಚಂದ್ರಯ್ಯನವರ ಮಗ ದೀಕ್ಷಿತ್(22) ಎಂಬುವವರಿಗೆ ಗಾಯವಾಗಿದ್ದು ಚಿ.ನಾ.ಹಳ್ಳಿ ಆಸ್ಪತ್ರೆಗೆ ಸೇರಿಸಲಾಗಿದೆ.. ಚಿ.ನಾ.ಹಳ್ಳಿ ಪೋಲಿಸರು ಪ್ರಕರಣ ದಾಖಲಿಸಿದ್ದಾರೆ.
ಕಪ್ಪುಹಣ ವಾಪಸ್ ತರದ ಬಿಜೆಪಿ ಸಕರ್ಾರದ ವಿರುದ್ದ ಯುವ ಕಾಂಗ್ರೆಸ್ ಪ್ರತಿಭಟನೆ
ಚಿಕ್ಕನಾಯಕನಹಳ್ಳಿ, : ಬಿಜೆಪಿ ಸಕರ್ಾರ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ 100 ದಿನದೊಳಗೆ ವಿದೇಶದಲ್ಲಿರುವ ಕಪ್ಪುಹಣವನ್ನು ವಾಪಾಸ್ ತಂದು ಭಾರತೀಯ ಪ್ರತಿ ಪ್ರಜೆಗೆ 15ಲಕ್ಷ ರೂಪಾಯಿಗಳನ್ನು ಹಂಚುವುದಾಗಿ ಹೇಳಿದ್ದರು ಆದರೆ ಕಳೆದ ಹತ್ತು ತಿಂಗಳಿಂದಲೂ ಬಿಜೆಪಿ ಸಕರ್ಾರ ಅಧಿಕಾರದಲ್ಲಿದ್ದರೂ ಕಪ್ಪುಹಣದ ಬಗ್ಗೆ ಯಾವುದೇ ಚಕಾರವನ್ನು ಎತ್ತುತ್ತಿಲ್ಲ ಎಂದು ಆರೋಪಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದಲ್ಲಿ ಸೋಮವಾರ ಪ್ರತಿಭಟಿಸಿದರು.
ಪಟ್ಟಣದ ತಾಲ್ಲೂಕು ಕಛೇರಿ ಮುಂಭಾಗ ಪ್ರತಿಭಟಿಸಿದ ತಾಲ್ಲೂಕು ಯುವ ಕಾಂಗ್ರೆಸ್ ಕಾರ್ಯಕರ್ತರು, ಕಪ್ಪು ಹಣದ ಬಗ್ಗೆ ಜನತೆಯ ಪ್ರಶ್ನೆಗಳಿಗೆ ಪ್ರಧಾನ ಮಂತ್ರಿ ನರೇಂದ್ರಮೋದಿರವರು ಕೂಡಲೇ ಉತ್ತರಿಸಬೇಕೆಂದು ಆಗ್ರಹಿಸಿ ಶಿರಸ್ತೆದಾರ್ ಶಿವಕುಮಾರ್ರವರ ಮೂಲಕ ಸಕರ್ಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಚಿನಾಹಳ್ಳಿ ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಮಾತನಾಡಿ, ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನರೇಂದ್ರಮೋದಿಯವರು ಹಾಗೂ ಅಮಿತ್ಷಾರವರು ಕಪ್ಪುಹಣವನ್ನು ಸಕರ್ಾರ ಅಧಿಕಾರಕ್ಕೆ ಬಂದ 100 ದಿನದೊಳಗೆ ತರುತ್ತೇವೆಂದು ಭರವಸೆ ನೀಡಿದ್ದರೂ ಕಪ್ಪುಹಣದ ಬಗ್ಗೆ ಯಾವ ಚಚರ್ೆಯೂ ನಡೆಯುತ್ತಿಲ್ಲ ಆದ್ದರಿಂದ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ರಾಜೇಂದ್ರರವರ ಸೂಚನೆ ಮೇರೆಗೆ ಕಪ್ಪುಹಣದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು 15ಲಕ್ಷ ನಮೂದಿಸಿರುವ ಚೆಕ್ ಮಾದರಿಯ ಕರಪತ್ರವನ್ನು ಸಾರ್ವಜನಿಕರಿಗೆ ಹಂಚುವ ಮೂಲಕ ಮೋದಿಯವರು ಚುನಾವಣಾ ಸಮಯದಲ್ಲಿ ನೀಡಿದ್ದ ಸುಳ್ಳು ಆಶ್ವಾಸನೆಯನ್ನು ಜನತೆಗೆ ಮನದಟ್ಟು ಮಾಡಿ ಕೇಂದ್ರ ಸಕರ್ಾರ ಪೊಳ್ಳು ಭರವಸೆಗಳನ್ನು ದೇಶದ ಜನರಿಗೆ ನೀಡುತ್ತಿದೆ ಎಂದು ತಿಳಿಸಲು ಪ್ರತಿಭಟನೆ ನಡೆಸುತ್ತಿದ್ದೇವೆಂದು ಹೇಳಿದರು.
ಕಪ್ಪುಹಣವನ್ನು ಭಾರತಕ್ಕೆ ತರಲು ಯಾವುದೇ ಒಂದು ನಿಧರ್ಿಷ್ಠವಾದ ಪ್ರಯತ್ನವನ್ನು ಮಾಡಿರದ ಬಿಜೆಪಿ ಸಕರ್ಾರ ಚುನಾವಣಾ ಸಮಯದ ರಾಜಕೀಯ ತಂತ್ರಗಾರಿಕೆಗಾಗಿ ಬಿಜೆಪಿ ಪಕ್ಷ ಮತದಾರರಿಗೆ ಸುಳ್ಳಿನ ಆಶ್ವಾಸನೆ ನೀಡಿದ್ದಾರೆ, ಯುಪಿಎ ಸಕರ್ಾರವಿದ್ದಾಗ ಮೇ. 2012ರಲ್ಲಿ ಶ್ವೇತ ಪತ್ರವನ್ನು ಹೊರಡಿಸಿ ಕಪ್ಪು ಹಣವನ್ನು ತರುವಲ್ಲಿ ಸಕರ್ಾರದ ಪ್ರಯತ್ನಗಳು ಹಾಗೂ ಕಪ್ಪುಹಣದ ಬಗ್ಗೆ ಅಂಕಿ-ಅಂಶಗಳನ್ನು ಮತ್ತು ಸೂಕ್ಷ್ಮವಿಚಾರಗಳನ್ನು ತಿಳಿಸಲಾಗಿತ್ತು, ಯುಪಿಎ ಸಕರ್ಾರದ ಕಪ್ಪು ಹಣದ ಬಗೆಗಿನ ವರದಿಯ ನಂತರವೂ ಕಪ್ಪುಹಣದ ವಿಚಾರವು ತುಂಬ ಸಂಕೀರ್ಣವಾದುದೆಂದು ತಿಳಿದಿದ್ದರೂ ಬಿಜೆಪಿಯು ಸುಳ್ಳು ಆಶ್ವಾಸನೆ, ಸುಳ್ಳು ಭರವಸೆಗಳನ್ನು ನೀಡಿ ದೇಶದ ಜನರನ್ನು ವಂಚಿಸಿದ್ದಾರೆ ಆದ್ದರಿಂದ ಜನತೆಗೆ ಆಶ್ವಾಸನೆ ವಂಚನೆಯ ಬಗ್ಗೆ ಬಹಿರಂಗ ಪಡಿಸಬೇಕಾಗಿದೆ ಎಂದು ಕಾರ್ಯಕರ್ತತರು ತಮ್ಮ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ಕಾರ್ಯತರುಗಳಾದ ಶಶಿಧರ್, ಕೆ.ಜಿ.ಕೃಷ್ಣೆಗೌಡ, ಜ್ಞಾನೇಷ್, ಅಮೀರ್ಪಾಷ, ಗೋವಿಂದರಾಜು ಮತ್ತಿತರರು ಉಪಸ್ಥಿತರಿದ್ದರು.
ಏಪ್ರಿಲ್ 10ರಿಂದ 12ರವರೆಗೆ ಹೆಸರಹಳ್ಳಿ-ಗೌಡನಹಳ್ಳಿ ಜಾತ್ರಾಮಹೋತ್ಸವ
ಚಿಕ್ಕನಾಯಕನಹಳ್ಳಿ, : ತಾಲ್ಲೂಕಿನ ಹೆಸರಹಳ್ಳಿ-ಗೌಡನಹಳ್ಳಿಯ ಶ್ರೀ ಲಕ್ಷ್ಮೀರಂಗನಾಥಸ್ವಾಮಿಯವರ ಜಾತ್ರಾ ಮಹೋತ್ಸವವು ಇದೇ 10 ರಿಂದ 12ರವರೆಗೆ ನಡೆಯಲಿದೆ.
ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿಯ ಹೆಸರಹಳ್ಳಿ ಮತ್ತು ಗೌಡನಹಳ್ಳಿಯ ಶ್ರೀ ಲಕ್ಷ್ಮೀರಂಗನಾಥಸ್ವಾಮಿ, ಶ್ರೀ ಬೀರಲಿಂಗೇಶ್ವರಸ್ವಾಮಿ ಜಾತ್ರಾ ಉತ್ಸವಾದಿಗಳು ನೆರವೇರಲಿದೆ.
10ರಂದು ಗೌಡನಹಳ್ಳಿ ರಂಗನಾಥಸ್ವಾಮಿ ಮದನಿಂಗ ಮತ್ತು ಹೆಸರಹಳ್ಳಿ ಗ್ರಾಮದ ಶ್ರೀ ಲಕ್ಷ್ಮೀದೇವರು ಮದನಗಿತ್ತಿಯ ಹೊಳೆಸೇವೆ, ಮತ್ತು ಪಾನಕ ಫಲಹಾರ ಸೇವೆ, ಆರತಿಬಾನ ಮತ್ತು ಧ್ವಜಾರೋಹಣ ನೆರವೇರಲಿದೆ.
11ರಂದು ಬೆಳಗ್ಗೆ 7ಕ್ಕೆ ಗೌಡನಹಳ್ಳಿಯಲ್ಲಿ ದೂಪದ ಸೇವೆ, ಮಧ್ಯಾಹ್ನ 3ಕ್ಕೆ ಹೆಸರಹಳ್ಳಿಯಲ್ಲಿ ಶ್ರೀ ಲಕ್ಷ್ಮೀರಂಗನಾಥಸ್ವಾಮಿಯವರ ಮುಹೂರ್ತ, ಬಂಡಿಬಾನ, ಕಳಸೋತ್ಸವ, ಕಳಸಬಾನ ನೆರವೇರಲಿದೆ.
12ರಂದು ಬೆಳಗ್ಗೆ 7ಕ್ಕೆ ಚಿಕ್ಕಮ್ಮನಹಳ್ಳಿಯಲ್ಲಿ ಗಂಗಾಸ್ನಾನ ಮತ್ತು ಪಾನಕ ಫಲಹಾರ ಸೇವಾರ್ಥ, ಲಕ್ಷ್ಮೀರಂಗನಾಥಸ್ವಾಮಿಗೆ ತುಂಬೆ ಹೂವಿನ ಧಾರೆ, ಬನ್ನಿಮರದ ಪವಾಡ ಹಾಗೂ ಹೆಸರಹಳ್ಳಿಯಲ್ಲಿ ಬನ್ನಿ ಮರ ಹತ್ತಿಸುವ ಪವಾಡ ನಡೆಯಲಿದೆ. ಹೆಸರಹಳ್ಳಿ ಗ್ರಾಮಸ್ಥರಿಂದ ರಾತ್ರಿ 8.30ಕ್ಕೆ ಹೆಸರಹಳ್ಳಿಯಲ್ಲಿ ಮಹಾಮಂಗಳಾರತಿ, ಓಕಳಿ ಉತ್ಸವ, ಧ್ವಜಾವರೋಹಣ ನಡೆಯಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ನಾಡಜಾಗೃತಿ ಜಿಲ್ಲಾಧ್ಯಕ್ಷ ನಿಂಗರಾಜು ತಿಳಿಸಿದ್ದಾರೆ.
ಬೈಕ್ಗೆ ನಾಯಿ ಡಿಕ್ಕಿ ಯುವಕ ಸಾವು
ಚಿಕ್ಕನಾಯಕನಹಳ್ಳಿ, : ತಾಲ್ಲೂಕಿನ ಹಂದನಕೆರೆ ರಾಮಘಟ್ಟದ ಕೆರೆಕೋಡಿ ಬಳಿ ಆರ್.ಸಿ.ಮರುಳೇಗೌಡ(20) ಎಂಬುವವರು ಭಾನುವಾರ ರಾತ್ರಿ ತಮ್ಮ ಮನೆಯ ವಸ್ತುಗಳನ್ನು ತರಲು ರಾಮಘಟ್ಟದಿಂದ ಹಂದನಕೆರೆಗೆ ತೆರಳುವಾಗ ಕೆರೆಕೋಡಿ ಬಳಿ ಆಕಸ್ಮಿಕ ನಾಯಿ ಅಡ್ಡ ಬಂದಾಗ ಬ್ರೇಕ್ ಹೊಡೆದ ಪರಿಣಾಮ ಡಾಂಬರ್ ರಸ್ತೆಗೆ ಬಿದ್ದಿದ್ದರಿಂದ ತಲೆಗೆ ಪೆಟ್ಟಾಗಿ ಪ್ರಥಮ ಚಿಕಿತ್ಸೆ ನೀಡಿ ತುಮಕೂರು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು ಆದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಈ ಸಂಬಂಧ ಹಂದನಕೆರೆ ಪೋಲಿಸರು ಪ್ರಕರಣ ದಾಖಲಿಸಿದ್ದಾರೆ.
No comments:
Post a Comment