Saturday, April 18, 2015


ಕನರ್ಾಟಕ ಬಂದ್ಗೆ ಚಿ.ನಾ.ಹಳ್ಳಿಯಲ್ಲಿ ಉತ್ತಮ ಪ್ರತಿಕ್ರಿಯೆ


ಚಿಕ್ಕನಾಯಕನಹಳ್ಳಿ,ಏ.18 : ಮೇಕೆದಾಟು ಬಳಿ ಅಣೆಕಟ್ಟೆ ನಿಮರ್ಾಣ ಯೋಜನೆ ವಿರೋಧಿಸಿ ತಮಿಳುನಾಡು ನಡೆಸಿದ ಬಂದ್ಗೆ ಪ್ರತಿಯಾಗಿ ರಾಜ್ಯದಲ್ಲಿ ಶನಿವಾರ ಕರೆ ನೀಡಿದ್ದ ಕನರ್ಾಟಕ ಬಂದ್ಗೆ ಪಟ್ಟಣದಲ್ಲಿ  ಅಂಗಡಿ ಮುಂಗಟ್ಟುಗಳು ಸ್ವಯಂಪ್ರೇರಿತವಾಗಿ ಬಂದ್ ನಡೆಸಿದರು.
ಶನಿವಾರ ಬೆಳಗ್ಗೆ 6ಗಂಟೆಯಿಂದಲೇ ಎಂದಿನಂತೆ ಬಸ್ಗಳು ಸಂಚರಿಸದಿದ್ದರೂ ವಿರಳವಾಗಿ ವಾಹನಗಳು ಸಂಚರಿಸುತ್ತಿದ್ದವು, ಕನರ್ಾಟಕ ಬಂದ್ ಇರುವುದನ್ನು ಅರಿತಿದ್ದ ಪ್ರಯಾಣಿಕರು ಬಸ್ಗಳು ಬೆಳಗ್ಗೆ 6ಗಂಟೆಯಿಂದ ಸಂಜೆ 6ಗಂಟೆಯವರೆಗೆ ಇಲ್ಲದಿದ್ದರಿಂದ ಪ್ರಯಾಣಿಕರು ತಮ್ಮ ವಾಹನಗಳಲ್ಲಿ ಸಂಚರಿಸುತ್ತಿದ್ದರಲ್ಲದೆ, ಕಡಿಮೆಯಿರುವ ಬಗ್ಗೆ ಮೊದಲೇ ತಿಳಿದಿದ್ದ ಪ್ರಯಾಣಿಕರು ತಮ್ಮ ಕೆಲಸಗಳಿಗೆ ರಜೆ ಹಾಕಿ ಮನೆಯಲ್ಲಿ ದಿನ ಕಳೆದರು.
ಪಟ್ಟಣದಲ್ಲಿನ ಸಾರ್ವಜನಿಕರಿಗೆ ಆಸ್ಪತ್ರೆ ಚಿಕಿತ್ಸೆಗೆ, ಮೆಡಿಕಲ್ಶಾಪ್, ಆಂಬುಲೆನ್ಸ್ ಸೇವೆಗೆ ಯಾವುದೇ ತೊಂದರೆಯಾಗಲಿಲ್ಲ.
ಬೆಳಗ್ಗೆ 6ಗಂಟೆಗೆ ಬಂದ್ ಆರಂಭವಾದರೂ ಅದರ ಬಿಸಿ ತಟ್ಟಿದ್ದು ಮಾತ್ರ ನಿಧಾನವಾಗಿ, ಕನ್ನಡ ಪರ ಸಂಘಟನೆಗಳ ಮುಖಂಡರು ಪಟ್ಟಣದ ನೆಹರು ಸರ್ಕಲ್ನ ಬಳಿ ಸಂಚರಿಸುತ್ತಿದ್ದ ವಾಹನಗಳನ್ನು ತಡೆದು ಸಂಚಾರವನ್ನು ಸ್ಥಗಿತಗೊಳಿಸಿ ಇಲ್ಲವಾದರೆ ಮುಂದಿನ ಅನಾಹುತಗಳನ್ನು ಎದುರಿಸಬೇಕಾಗುತ್ತದೆ ಎಂದು ವಾಹನ ಸಂಚಾರಕರಿಗೆ ಹೇಳುತ್ತಿದ್ದರು. 
ಕನ್ನಡಪರ ಸಂಘಟನೆಗಳ ಬೆಂಬಲ : 

No comments:

Post a Comment