ಟಾಟಾ ಸಫಾರಿ ಕಾರಿಗೆ ಲಾರಿ ಡಿಕ್ಕಿ
ಚಿಕ್ಕನಾಯಕನಹಳ್ಳಿ,ಮೇ.01: ತಾಲ್ಲೂಕಿನ ಬಿ.ಎಚ್.ರಸ್ತೆಯ ಬಳ್ಳೆಕಟ್ಟೆ ಬಳಿಯ ಪೋಚಕಟ್ಟೆ ಗೇಟ್ ಹತ್ತಿರ ಟಾಟಾ ಸಫಾರಿ ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ 5 ಜನ ಗಾಯಗೊಂಡು ಓರ್ವ ತೀವ್ರ ಗಾಯಗೊಂಡು ತುಮಕೂರು ಜಿಲ್ಲಾ ಆಸ್ವತ್ರೆಗೆ ಕಳಿಸಲಾಗಿದೆ.
ಹೊಸದುರ್ಗ ತಾಲ್ಲೂಕು ಕಿಟ್ಟದಾಳಿನ ಶರತ್ ಎನ್ನುವರು ಕುಟುಂಬ ಸಮೇತ ತುಮಕೂರಿನಲ್ಲಿ ತಮ್ಮ ಸಂಬಂಧಿಕರ ಮದುವೆ ಮುಗಿಸಿಕೊಂಡು ತಮ್ಮ ಸ್ವಂತ ಗ್ರಾಮವಾದ ಕಿಟ್ಟದಾಳಿಗೆ ವಾಪಸ್ಸು ಬರುವಾಗ ಪೋಚುಕಟ್ಟೆ ಬಳಿ ಎದುರಿನಿಂದ ಬಂದ ಲಾರಿ ಟಾಟಾ ಸಫಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲಯುಸುತ್ತಿದ್ದ ಶರತ್ ಸೇರಿದಂತೆ ಆತನ ಪತ್ನಿ ರೀತು ಮಕ್ಕಳಾದ ರಶ್ಮೀಕ, ದೀಕ್ಷಾ ಹಾಗೂ ಶರತ್ ಅತ್ತೆ ಮಾಲ ಇವರು ಗಾಯಗೊಂಡಿದ್ದಾರೆ. ರಶ್ಮೀಕ ತೀರ್ವವಾಗಿ ಗಾಯಗೊಂಡು ಹುಳಿಯಾರು ಸಕರ್ಾರಿ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಸಕರ್ಾರಿ ಆಸ್ವತ್ರೆಗೆ ದಾಖಲಿಸಲಾಗಿದೆ. ಈ ಸಂಬಂದ ಹುಳಿಯಾರು ಪೊಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಲಾರಿ ಚಾಲಕ ತಲೆಮರೆಸಿಕೊಂಡಿದ್ದಾನೆ.
ಸುದ್ದಿ ಇಲ್ಲ
ಚಿತ್ರ ಶೀಷರ್ಿಕೆ :
ಚಿಕ್ಕನಾಯಕನಹಳ್ಳಿ ಪಟ್ಟಣದ ಪುರಸಭಾ ಕಾಯರ್ಾಲಯದ ಸಿಬ್ಬಂದಿ ಮುರುಡಯ್ಯ ವಯೋನಿವೃತ್ತಿಯ ಪ್ರಯುಕ್ತ ಪುರಸಭಾ ವತಿಯಿಂದ ಬೀಳ್ಕೊಡಲಾಯಿತು. ಪುರಸಭಾಧ್ಯಕ್ಷೆ ರೇಣುಕಮ್ಮ, ಪುರಸಭಾ ಸಿಬ್ಬಂದಿಗಳಾದ ಚಂದ್ರಶೇಖರ್, ಗಂಗಾಧರಯ್ಯ, ಚಂದ್ರಶೇಖರ್, ರವಿಕುಮಾರ್, ಜಯಶಂಕರ್, ನಾಗರಾಜು, ಲಕ್ಷ್ಮಮ್ಮ ಉಪಸ್ಥಿತರಿದ್ದರು
ವಿವಿಧ ದೇವಾಲಯದ ಧಾಮರ್ಿಕ ಕಾರ್ಯಕ್ರಮಗಳು
ಚಿಕ್ಕನಾಯಕನಹಳ್ಳಿ,ಮೇ.01 : ತಾಲ್ಲೂಕಿನ ತಮ್ಮಡೀಹಳ್ಳಿಯಲ್ಲಿ ಬಸವೇಶ್ವರ ಸ್ವಾಮಿಯ ಜೀಣರ್ೊದ್ಧಾರ ನೂತನ ದೇವಾಲಯ ಪ್ರವೇಶ ಪ್ರಾಣ ಪ್ರತಿಷ್ಠಾಪನಾ ನೇತ್ರೋನ್ನಿಲನ ದೃಷ್ಠಿ ಹಾಗೂ ಹೋಮರ್ಚನಾಭಿಷೇಕ ಮಹೋತ್ಸವ ಮೇ 3 ರಿಂದ 4 ರವರೆಗೆ ನಡೆಯಲಿದೆ. 3 ರಂದು ಗೋಧೂಳಿ ಲಗ್ನದಲ್ಲಿ ವಿವಿಧ ಪೂಜೆ, ಶ್ರೀ ಬಸವೇಶ್ವರ ದೇವಾಲಯ ಪ್ರವೇಶವು ಶ್ರೀ ಮಲ್ಲಿಕಾಜರ್ುನಸ್ವಾಮಿ, ವಿರೂಪಾಕ್ಷಸ್ವಾಮಿ ದೇವರುಗಳ ಆಗಮನಗಳೊಂದಿಗೆ ನಡೆಯಲಿದೆ.
4 ರಂದು ಬೆಳಗಿನ ಜಾವ 4-30 ರಿಂದ 5 -30 ರ ಬ್ರಾಹ್ಮೀ ಮುಹೂರ್ತದಲ್ಲಿ ತಮ್ಮಡೀಹಳ್ಳಿ ಮಠದ ಡಾ.ಅಭಿನವ ಮಲ್ಲಿಕಾಜರ್ುನ ದೇಶಿಕೇಂದ್ರಸ್ವಾಮಿಯವರ ಅಮೃತ ಹಸ್ತದಿಂದ ಬಸವೇಶ್ವರ ಸ್ವಾಮಿ ಶಿಲಾ ಮೂತರ್ಿಯ ಪ್ರತಿಷ್ಠಾಪನೆ ಹಾಗೂ ಪ್ರಾಣ ಪ್ರತಿಷ್ಠಾಪನಾ ನಂತರ ನೇತ್ರೋನ್ಮಿಲನ ಬೆಳಿಗ್ಗೆ 7-30 ಕ್ಕೆ ರುದ್ರಭಿಷೇಕ ಹಾಗೂ ಮುಂತಾದ ಧಾಮರ್ಿಕ ಕಾರ್ಯಕ್ರಮಗಳು ನಡೆಯಲಿವೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಧಿಗಳು ಆಗಮಿಸುವಂತೆ ಮನವಿ ಮಾಡಿದ್ದಾರೆ.
8ನೇ ವರ್ಷ ವಾಷರ್ಿಕೋತ್ಸವ: ಶ್ರೀ ಬಿದಿರುಕೊಂತಮ್ಮ ಲಕ್ಷ್ಮೀದೇವಿ ಹಾಗೂ ಮಾಸ್ತಮ್ಮ ದೇವಾಲಯದ 8 ನೇ ವರ್ಷದ ವಾಷರ್ಿಕೋತ್ಸವ ಸಮಾರಂಭ ಮೇ 03 ಮತ್ತು 04 ರಂದು ನಡೆಯಲಿದೆ.
ಮೇ 3 ರಂದು ಸಂಜೆ 6.30 ವಿವಿಧ ಹೋಮ ಮತ್ತು ಮಹಾಮಂಗಳಾರತಿ, 4 ರಂದು ಪ್ರಾತಃಕಾಲ ವಿವಿಧ ಪೂಜೆ, 12-05 ಕ್ಕೆ ಪೂಣರ್ಾಹುತಿ, ಬಲಿ ಪ್ರಧಾನ, ಕಳಶ ಸ್ಥಾಪನೆ, ಅಭಿಷೇಕ, ಮಧ್ಯಾಹ್ನ 1-50 ಕ್ಕೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಕಾರ್ಯಕ್ರಮದಲ್ಲಿ ಭಕ್ತಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಶ್ರೀ ಬಿದಿರುಕೊಂತಮ್ಮ ಲಕ್ಷ್ಮೀದೇವರ ಟ್ರಸ್ಟ್ ಸಮಿತಿ ಮನವಿ ಮಾಡಿದೆ.
No comments:
Post a Comment