ಪಟ್ಟಣದಲ್ಲಿ ಕಂಬಳಿ ಸಮುದಾಯ ಭವನ ಶೀಘ್ರ ಆರಂಭ
ಚಿಕ್ಕನಾಯಕನಹಳ್ಳಿ,ನ.30 : ಪಟ್ಟಣದಲ್ಲಿ ಕಂಬಳಿ ಭವನ ನಿಮರ್ಿಸಲು ಸಕರ್ಾರ ಹಣ ಬಿಡುಗಡೆ ಮಾಡಿದ್ದು ಶೀಘ್ರವೇ ಪಟ್ಟಣದಲ್ಲಿ ಕಂಬಳಿ ಸಮುದಾಯ ಭವನ ನಿಮರ್ಾಣವಾಗಲಿದೆ ಎಂದು ಶ್ರೀ ರೇವಣಸಿದ್ದೇಶ್ವರ ಕಂಬಳಿ ಉತ್ಪಾದನಾ ಮತ್ತು ಮಾರಾಟಗಾರರ ಸೊಸೈಟಿಯ ನಿದರ್ೇಶಕ ಸಿ.ಡಿ.ಚಂದ್ರಶೇಖರ್ ತಿಳಿಸಿದರು.
ಪಟ್ಟಣದ ಶ್ರೀ ರೇವಣಸಿದ್ದೇಶ್ವರ ಕಂಬಳಿ ಉತ್ಪಾದನಾ ಮತ್ತು ಮಾರಾಟಗಾರರ ಸೊಸೈಟಿಯಲ್ಲಿ ನಡೆದ ಅರ್ಹ ನೇಕಾರರಿಗೆ ಕುಂಚಿಗೆ ವಿತರಣಾ ಸಮಾರಂಭ, ಸನ್ಮಾನ ಕಾರ್ಯಕ್ರಮ ಹಾಗೂ ಕನಕದಾಸರ ಜಯಂತ್ಯೋತ್ಸವದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಕಂಬಳಿ ಸೊಸೈಟಿಗೆ ಅಗತ್ಯವಾಗಿರುವ ಕಟ್ಟಡ ನಿಮರ್ಿಸಲು ಸಕರ್ಾರಕ್ಕೆ ಸೊಸೈಟಿಯ ಅಧ್ಯಕ್ಷರು ಹಾಗೂ ನಿದರ್ೇಶಕರುಗಳು ಮನವಿ ಸಲ್ಲಿಸಿದ್ದು ಇದಕ್ಕೆ ಸ್ಪಂದಿಸಿರುವ ಮುಖ್ಯಮಂತ್ರಿಗಳು ಸಮುದಾಯ ಭವನ ನೀಡಿದ್ದಾರೆ ಹಾಗೂ ಸೊಸೈಟಿಗಾಗಿ ಬುಲೆರೋ ಕಾರು ವಾಹನವನ್ನು ನೀಡಿದ್ದಾರೆ, ಸಮುದಾಯ ಭವನಕ್ಕೆ ಹಣ ಬಿಡುಗಡೆಯಾಗಿದ್ದು ಭವನ ನಿಮರ್ಾಣಕ್ಕೆ ಈಗಾಗಲೇ ಟೆಂಡರ್ ಪ್ರಕ್ರಿಯೆಯೂ ಮುಗಿದಿದೆ, ನಿಮರ್ಾಣವಾಗುವ ಕಂಬಳಿ ಭವನದಲ್ಲಿ ಕಂಬಳಿ ತಯಾರಿಕೆಗೆ ನೆರವಾಗುವ ಸೌಕರ್ಯಗಳನ್ನು ಇರಿಸಲಾಗುವುದು, ನೇಕಾರರಿಗೆ ಅನುಕೂಲವಾಗುವಂತೆ ಕಟ್ಟಡ ನಿಮರ್ಾಣವಾಗುವುದು ಎಂದರಲ್ಲದೆ 2009ರಲ್ಲಿ ಕಂಬಳಿ ಸೊಸೈಟಿಗೆ ಇದೇ ತಂಡದ ಸದಸ್ಯರು ಆಯ್ಕೆಯಾದ ಸಂದರ್ಭ ಅಧ್ಯಕ್ಷರಾಗಿದ್ದಾಗ 16300 ರೂ ಹಣ ಶೇಖರಣೆಯಾಗಿದ್ದು ಸೊಸೈಟಿಯ ಎಲ್ಲರ ಉತ್ತಮ ಕಾರ್ಯದಿಂದ ಇಂದು 12.50ಲಕ್ಷ ಹಣ ಉಳಿತಾಯವಾಗಿದೆ ಎಂದ ಅವರು ಸಕರ್ಾರ ಕಂಬಳಿ ನೇಕಾರರ ಸಾಲವನ್ನು ಮನ್ನಾ ಮಾಡುವಂತೆ ಒತ್ತಾಯಿಸಿದರು.
ಕಂಬಳಿ ಸೊಸೈಟಿ ಅಧ್ಯಕ್ಷ ಕೆ.ಪಿ.ಧೃವಕುಮಾರ್ ಮಾತನಾಡಿ, ಕಂಬಳಿ ನೇಕಾರರಿಗೆ ವಿವಿಧ ರೀತಿಯ ಅಲಂಕಾರಿಕೆಯ ಕಂಬಳಿ ತಯಾರಿಸುವ ಬಗ್ಗೆ ತರಬೇತಿ ಅಗತ್ಯವಾಗಿದ್ದು, ಅಲಂಕಾರಿಕಾ ಕಂಬಳಿಗಳಿಗೆ ಉತ್ತಮ ಬೆಲೆ ಸಿಗಲಿದೆ, ಕಂಬಳಿ ನೇಕಾರರು ತಾವು ತಯಾರಿಸಿದ ಕಂಬಳಿಗಳನ್ನು ಮಾರಾಟ ಮಾಡಲು ಕಂಬಳಿ ಸೊಸೈಟಿಗೆ ತಂದು ಮಾರಾಟ ಮಾಡಿದರೆ ನೇಕಾರರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಇದರಿಂದ ಮಧ್ಯವತರ್ಿಗಳ ಹಾವಳಿಯನ್ನು ತಪ್ಪಿಸಬಹುದು ಎಂದರಲ್ಲದೆ ಕಂಬಳಿ ಸೊಸೈಟಿಗೆ ನಿಮರ್ಾಣವಾಗುವ ನೂತನ ಕಟ್ಟಡ ಶೀಘ್ರವೇ ಪ್ರಾರಂಭವಾಗುವುದು ಎಂದ ಅವರು ನೇಕಾರರಿಗೆ ಈಗ ಉಚಿತವಾಗಿ ಕುಂಚಿಗೆ ನೀಡಿದ್ದು ಇನ್ನು ಮುಂದೆ ಜಿಲ್ಲಾ ಪಂಚಾಯಿತಿ ವತಿಯಿಂದ ಕುಂಚಿಗೆ, ಭಂಡ, ಹುಣಸೆಹಿಟ್ಟು ಹಾಗೂ ಕಂಬಳಿ ತಯಾರಿಕೆಗೆ ಅವಶ್ಯವಿರುವ ವಸ್ತುಗಳನ್ನು ನೀಡಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಪತ್ರಕರ್ತ ಸಿ.ಬಿ.ಲೋಕೇಶ್, ನೇಕಾರರ ಮಕ್ಕಳು ತುಂಬ ಕಡುಬಡವರಾಗಿದ್ದಾರೆ ತಮ್ಮ ಜೀವನ ರೂಪಿಸಿಕೊಳ್ಳಲು ಇಂದು ಗುಳೇ ಹೋಗುತ್ತಿದ್ದಾರೆ ಅದನ್ನು ತಡೆಗಟ್ಟಲು ನೇಕಾರರಿಗೆ ಹಾಗೂ ಅವರ ಮಕ್ಕಳಿಗೆ ಸಕರ್ಾರದಿಂದ ಸಿಗುವಂತಹ ಸೌಲಭ್ಯವನ್ನು ನಿದರ್ೇಶಕರುಗಳು ಪ್ರಾಮಾಣಿಕವಾಗಿ ಪ್ರಯತ್ನಿಸಿ ನೇಕಾರರಿಗೆ ಸೌಲಭ್ಯ ದೊರಕಿಸಿಕೊಡಬೇಕು ಇದರಿಂದ ನೇಕಾರರ ಮಕ್ಕಳು ವಿದ್ಯಾಭ್ಯಾಸದತ್ತ ಗಮನ ಹರಿಸಿ ಉತ್ತಮ ಭವಿಷ್ಯ ಕಟ್ಟಿಕೊಳ್ಳಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕಂಬಳಿ ಸೊಸೈಟಿ ಉಪಾಧ್ಯಕ್ಷ ಶಶಿಧರ್, ನಿದರ್ೇಶಕರುಗಳಾದ ಭಾರತಮ್ಮ, ಸಿ.ಹೆಚ್.ಅಳವೀರಯ್, ಗೋವಿಂದಯ್ಯ, ವಿಜಯ್ಕುಮಾರ್, ಸಿ.ಜಿ.ಬೀರಲಿಂಗಯ್ಯ, ಸಿ.ಪಿ.ಗಂಗಾಧರಯ್ಯ, ಪಂಕಜಮ್ಮ, ಕಾರ್ಯದಶರ್ಿ ಎ.ಕೋದಂಡರಾಮಯ್ಯ , ಪಿಎಲ್ಡಿ ಬ್ಯಾಂಕ್ ಉಪಾಧ್ಯಕ್ಷ ಜಯದೇವ್ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಚಿತ್ರ ಶೀಷರ್ಿಕೆ :
ಬಿಡುವು ಕೊಟ್ಟಿದ್ದ ಮಳೆ ಮತ್ತೆ ಪ್ರಾರಂಭದ ಮುನ್ಸೂಚನೆ
ಚಿಕ್ಕನಾಯಕನಹಳ್ಳಿ,ನ.30 : ಕಳೆದ 3 ದಿನಗಳಿಂದ ಮಳೆ ಬಿಡುವು ಕೊಟಿದ್ದರಿಂದ ಜನ ನಿಟ್ಟುಸಿರು ಬಿಟ್ಟಿದ್ದರು, ತಾಲ್ಲೂಕಿನಾಧ್ಯಂತ ಕೊಯ್ಲು ಭರದಿಂದ ಸಾಗಿತ್ತು, ತಾಲ್ಲೂಕಿನಲ್ಲಿ ಶೇ.40 ಭಾಗ ಬೆಲೆ ಕಟಾವು ಕಾರ್ಯ ಮುಗಿದಿದೆ ಮತ್ತೆ ಮೋಡಗಳು ನೆಳ್ಳಂಜಿ ಆಟ ಶುರುಮಾಡಿದ್ದು ರೈತರನ್ನು ಕಂಗೆಡಿಸಿದೆ.
ಈಗಾಗಲೆ ಕೊಯ್ಲು ಮಾಡಿರುವ ಸಾವೆಯನ್ನು ರಸ್ತೆ ಮೇಲೆ ಹರಡಿ ಅಚ್ಚುಕಟ್ಟು ಮಾಡುತ್ತಿದ್ದ ದೃಶ್ಯ ವ್ಯಾಪಕವಾಗಿ ಕಂಡುಬಂತು. ಕೊಯ್ಲಾಗಿರುವ ರಾಗಿಯನ್ನು ಹೊಲಗಳಲ್ಲೇ ಗುಪ್ಪೆ ಹಾಕುತ್ತಿದ್ದ ದೃಶ್ಯ ಕೆಲವೆಡೆ ಕಂಡುಬಂತು. ಕಟಾವು ಮುಂದುವರೆಸುವುದೋ ಬೇಡವೋ ಎಂಬ ಗೊಂದಲದಲ್ಲೇ ಕೆಲವರು ರಾಗಿ ಕಟಾವಿಗೆ ಮುಂದಾದರು.
ತೋಯ್ದು ಹಾಳಾಗಿದ್ದ ನವಣೆ ಸಿವುಡುಗಳನ್ನು ಟಾಪರ್ಾಲಿನ್ ಹರಡಿ ಒಣಗಿಸುತ್ತಿದ್ದ, ಹೊಸಹಟ್ಟಿ ಶಿವಣ್ಣ ಮಾತನಾಡಿ, ಬೆಳೆ ಚನ್ನಾಗಿ ಬಂದಿತ್ತು ಸೈಕ್ಲೋನ್ ಬಂದು ಎಲ್ಲಾ ಹಾಳು ಮಾಡಿತು, ಹೇಗೋ ಬಿಡ್ತು ಅಂದ್ಕೊಳೋ ಹೊತ್ಗೆ ಮತ್ತೆ ಮೊಡಗಳು ಊದ್ಕಂಡ್ ಬತರ್ಿದಾವೆ. ಈಗಾಗ್ಲೆ ನವಣೆ ನೆಂದು ತೆನೆ ಕಪ್ಪು ಗಟ್ಟಿವೆ. ಎಲ್ಲಿ ಮೊಳಕೆ ಬಂದ್ ಬಿಡುತ್ತೋ ಅನ್ನೋ ಭಯದಿಂದ ದಿನಾಲೂ ಒಣಗುಸ್ಥಿದೀನಿ. ಮತ್ತೆ ಮಳೆ ಶುರುವಾದ್ರೆ ದೇವರೇ ಗತಿ ಎಂದರು.
ರೈತ ಮಹಿಳೆ ತಿಮ್ಮಕ್ಕ ಮಾತನಾಡಿ, ಬೆಳಗ್ಗಿನಿಂದ ಮಳೆ ಮೋಡ ಕಾಣಿಸ್ಕಂತಿದಾವೆ, ಕಾನ್ಕೆರೆಯಿಂದ ಆಳುಗಳನ್ನ ಕರೆತಂದಿದ್ದೀವಿ. ಈಗ ಕೊಯ್ಲು ಮಾಡುವಂತೆಯೂ ಇಲ್ಲ, ಬಿಡುವಂತೆಯೂ ಇಲ್ಲ. ಕೊಯ್ದರೆ ರಾಗಿ ಮಳೆಗೆ ನೆನೆಯುತ್ತದೆ. ಬಿಟ್ಟರೆ ಬಂದ ಆಳುಗಳಿಗೆ ಪುಗುಸಟ್ಟೆ ಕೂಲಿ ಕೊಡಬೇಕು. 2 ದಿನಗಳಿಂದ ಕೊಯ್ಲು ಮಾಡಿದ್ದೀವಿ. ಮಳೆ ಬಂದರೆ ಎಲ್ಲಾ ಹಾಳು. ಎರಡು ಎಕರೆ ರಾಗಿ ಬೆಳೆಯಲು, ಉಳುಮೆ, ಅತರ್ೆ, ಗೊಬ್ಬರ ಅಂತ ರೂ.6 ಸಾವಿರ ಕಚರ್ಾಗೈತೆ. ಮಳೆ ಬರವು ನೀಡಿದ್ದರೆ 8-10ಪಲ್ಲ ರಾಗಿ ಆಗಿರುತ್ತಿತ್ತು, ಮಳೆಯಿಂದ ಎಲ್ಲಾ ಹಾಳು ಎಂದು ನಿಟ್ಟುಸಿರು ಬಿಟ್ಟರು.
ರೈತ ದಾಸಪ್ಪ ಮಾತನಾಡಿ, ಈಗಾಗಲೇ ಸಾವೆ, ನವಣೆ, ಕೊರಲೆ ಮಳೆಗೆ ಹಾಳಾಗಿವೆ. ಮೊದಲ ಹಂತದಲ್ಲಿ ಬಿತ್ತನೆಯಾಗಿರುವ ರಾಗಿಯೂ ತೆನೆಯಲ್ಲಿ ಮೊಳಕೆಯೊಡೆದಿದೆ. ಎರಡನೇ ಹಂತದಲ್ಲಿ ಬಿತ್ತನೆಯಾಗಿರುವ ರಾಗಿಯಾದರೂ ಕೈ ಸೇರಬಹುದು ಎಂಬ ಆಸೆಯಿಂದ ಜನ ಕೊಯ್ಲು ಶುರು ಮಾಡಿದ್ದಾರೆ. ಮತ್ತೆ ಮಳೆ ಬಂದರೆ ಎಲ್ಲಾ ಮುಗಿಯಿತು ಎಂದು ಆಕಾಶ ದಿಟ್ಟಿಸಿದರು.
ಅಜರ್ಿ ಸಲ್ಲಿಸಿ: ಮತ್ತೆ ಮುಂದಿನ 4 ದಿನ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆಯ ವರದಿ ಹೇಳುತ್ತಿದೆ. ಆದ್ದರಿಂದ ರೈತರು ನೋಡಿಕೊಂಡು ಕಟಾವು ಮಾಡಬೇಕು. ಮತ್ತೆ ಮಳೆ ಬಂದರೆ ಸಂಪೂರ್ಣ ಬೆಲೆ ಹಾನಿ ಸಂಭವಿಸುತ್ತದೆ. ಬೆಳೆ ಹಾನಿಯ ಬಗ್ಗೆ ಪ್ರತ್ಯೇಕ ಸಮೀಕ್ಷೆ ಮಾಡಲು ಇಲಾಖೆಗೆ ಅಧಿಕಾರ ಇಲ್ಲ. ಆದ್ದರಿಂದ ಬೆಳೆ ಹಾನಿ ಬಗ್ಗೆ ರೈತರಿಂದ ಮನವಿ ಸ್ವೀಕರಿಸಲಾಗುತ್ತಿದೆ. ರೈತರು ಹಾಳಾಗಿರುವ ಬೆಳೆ ತಾಕಿನ ಫೋಟೋ, ಪಹಣಿ ಹಾಗೂ ಬ್ಯಾಂಕ್ ಅಕೌಂಟ್ ಛಾಯಾ ಪ್ರತಿಯೊಂದಿಗೆ ಕಛೇರಿ ಅಥವಾ ಹತ್ತಿರದ ರೈತ ಸಂಪರ್ಕ ಕೇಂದ್ರಗಳಲ್ಲಿ ಬೆಳೆ ಹಾನಿ ಪರಿಹಾರಕ್ಕಾಗಿ ಮನವಿ ಸಲ್ಲಿಸಬಹುದು ಎಂದು ತಾಲ್ಲೂಕು ಕೃಷಿ ಇಲಾಖೆ ಉಪನಿದರ್ೇಶಕ ಎಚ್.ಹೊನ್ನದಾಸೇಗೌಡ ತಿಳಿಸಿದ್ದಾರೆ.
:ಶ್ರಮ ಸಂಸ್ಕೃತಿಯ ಭಾಗವಾಗಿ ರಚನೆಯಾಗಿರುವ ಕನಕ ಕೀರ್ತನೆಗಳು ಸಾರ್ವಕಾಲಿಕ
ಚಿಕ್ಕನಯಕನಹಳ್ಳಿ,ನ.30 : :ಶ್ರಮ ಸಂಸ್ಕೃತಿಯ ಭಾಗವಾಗಿ ರಚನೆಯಾಗಿರುವ ಕನಕ ಕೀರ್ತನೆಗಳು ಸಾರ್ವಕಾಲಿಕ, ಅವು ದೈವೀ ನಿವೇಧನೆಯಂತೆ ಕಂಡರೂ ಸಮಾಜದ ಪಿಡುಗನ್ನು ಸರಿಮಾಡುವ ಚಿಕಿತ್ಸಕ ಮನೋಧೋರಣೆ ಹೊಂದಿರುವಂಥವು ಎಂದು ಉಪನ್ಯಾಸಕ ಸಿ.ರವಿಕುಮಾರ್ ಹೇಳಿದರು.
ಪಟ್ಟಣದ ಸುಭಾಸ್ಚಂದ್ರಬೋಸ್ ಆಟೋ ಚಾಲಕ ಹಾಗೂ ಮಾಲೀಕರ ಸಂಘ ಮತ್ತು ಕಸಾಪ ತಾಲ್ಲೂಕು ಘಟಕ ಆಯೋಜಿಸಿದ್ದ 'ಕನಕನ ತಾತ್ವಿಕ ಚಿಂತನೆ' ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಕನಕನ ಚಿಂತನೆಗಳು ಸರ್ವಕಾಲಕ್ಕೂ ಸಲ್ಲುವಂಥವು ಎಂದರು.
ಕಸಾಪ ಜಿಲ್ಲಾ ಸಂಚಾಲಕ ಸಿ.ಗುರುಮೂತರ್ಿ ಕೊಟ್ಟಿಗೆಮನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಸಂಘಟಿತ ಸಮುದಾಯಗಳ ಪ್ರತಿನಿಧಿಯಾಗಿರುವ ಕನಕನ ಚಿಂತನೆಗಳು ತಳ ಸಮುದಾಯಗಳಿಗೆ ಆಸರೆಯಾಗಬಲ್ಲವು. ಕನಕದಾಸರ ಒಡಪು ಹಾಗೂ ಮಂಡಿಗೆಗಳ ಮೇಲೆ ಬೆಳಕು ಚಲ್ಲುವ ಸಂಶೋಧನೆಗಳು ನಡೆಯಬೇಕಿದೆ ಎಂದರು.
ಪುರಸಭೆ ಸದಸ್ಯ ಸಿ.ಡಿ.ಚಂದ್ರಶೇಖರ್ ಮಾತನಾಡಿ,ವರ್ಗ ಹಾಗೂ ಜಾತಿ ಸಂಘರ್ಷಗಳನ್ನು ಮೆಟ್ಟಿನಿಂತು ಸಮ ಸಮಾಜ ನಿಮರ್ಾಣಕ್ಕೆ ದುಡಿದವರ ದೊಡ್ಡ ಪರಂಪರೆ ಬುದ್ಧನಿಂದ ಆರಂಭಗೊಂಡು ಬಸವಣ್ಣ, ಕನಕದಾಸ ಹಾಗೂ ಅಂಬೇಡ್ಕರ್ ಹೀಗೆ ಸಾಗಿಬರುತ್ತದೆ ಎಂದರು.
ಆಟೋಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್.ರವಿಕುಮಾರ್, ಮಾಜಿ ಅಧ್ಯಕ್ಷ ಶ್ರೀನಿವಾಸಮೂತರ್ಿ, ಸಂಗೋಳ್ಳಿ ರಾಯಣ್ಣ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಸಿದ್ಧು.ಜಿ.ಕೆರೆ ಮುಂತಾದವರು ಉಪಸ್ಥಿತರಿದ್ದರು.
ಗೋಡೆಕೆರೆಯಲ್ಲಿ ಡಿ.8ರಂದು ಲಕ್ಷ ದೀಪೋತ್ಸವ
ಚಿಕ್ಕನಾಯಕನಹಳ್ಳಿ,ನ.30 : ತಾಲ್ಲೂಕಿನ ಗೋಡೆಕೆರೆಯ ಸಿದ್ದರಾಮೇಶ್ವರ ದೇವಾಲಯದಲ್ಲಿ ಕಾತರ್ಿಕ ಮಾಸದ ಅಂಗವಾಗಿ ಡಿ.8ರಂದು ಬೆಳಗಿನ 5.30ಕ್ಕೆ ಲಕ್ಷ ದೀಪೋತ್ಸವ ಕಾರ್ಯಕ್ರಮ ನಡೆಯಲಿದೆ.
ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಕೈಂಕರ್ಯ ಸೇವಾ ಸಮಿತಿ ವತಿಯಿಂದ ಕಾರ್ಯಕ್ರಮ ನಡೆಯಲಿದೆ. ಲಕ್ಷದೀಪೋತ್ಸವದ ಅಂಗವಾಗಿ ಡಿ. 7ರಂದು ರಾತ್ರಿ 8.ಕ್ಕೆ ಅನ್ನದಾಸೋಹ ನಡೆಯಲಿದೆ. ಡಿ.8ರಂದು ಲಕ್ಷದೀಪೋತ್ಸವ, ಮಹಾಮಂಗಳಾರತಿ ನಡೆಯಲಿದೆ. ರಾತ್ರಿ 7.30ಕ್ಕೆ ಶ್ರೀ ಬಸವಲಿಂಗಪ್ರಭು ಸಭಾ ಭವನದಲ್ಲಿ ಬೆಂಗಳೂರಿನ ಶಿವಶಂಕರಶಾಸ್ತ್ರಿಗಳು ಮತ್ತು ಸಂಗಡಿಗರಿಂದ ಭಕ್ತಿಪ್ರಧಾನವಾದ ಶಿಶುನಾಳ ಷರೀಫರ ತತ್ವಪದಗಳನ್ನು ಏರ್ಪಡಿಸಲಾಗಿದೆ.
No comments:
Post a Comment