ಬರಪೀಡಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಕೆ.ಪಿ.ಮೋಹನ್ರಾಜ್ ಬೇಟಿ, ರೈತರ ಸಭೆ
ಚಿಕ್ಕನಾಯಕನಹಳ್ಳಿ,: ಹೇಮಾವತಿ ನಾಲೆಯಿಂದ ಕೊಂಡ್ಲಿಕೆರೆ ಹಾಗೂ ನಡುವನಹಳ್ಳಿ, ಜೆ.ಸಿ ಪುರದಿಂದ ತೀರ್ಥಪುರ ಭಾಗಗಳಿಗೆ ನೀರು ಹರಿಸುವ ಕಾರ್ಯಕ್ಕೆ ಯೋಜನೆಯನ್ನು ತಯಾರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಪಿ ಮೋಹನ್ರಾಜ್ ತಿಳಿಸಿದರು.
ತಾಲ್ಲೂಕಿನ ತೀರ್ಥರಾಮಲಿಂಗೇಶ್ವರ ವಜ್ರದಲ್ಲಿ ಶುಕ್ರವಾರ ತಾಲ್ಲೂಕು ಬರಪೀಡಿತ ಪ್ರದೇಶಕ್ಕೆ ಬರ ಪರಿಹಾರ ವೀಕ್ಷಣೆಯ ರೈತರ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆ ಹಾಗೂ ಅಂತರ್ಜಲ ಅಭಿವೃದ್ಧಿಗೆ ಹಣದ ಕೊರತೆ ಇಲ್ಲ. ರೂ.8 ಕೋಟಿವರೆಗೂ ಹಣ ಬಿಡುಗಡೆ ಮಾಡಲು ಜಿಲ್ಲಾಡಳಿತ ಸಿದ್ದವಿದೆ ಎಂದರು.
ಮಳೆಗಾಲದಲ್ಲಿ ಹರಿದು ಪೋಲಾಗುವ ನೀರನ್ನು ಇಂಗಿಸಲು ಸೇತುವೆ ಸಹಿತ ಬ್ಯಾರೇಜ್, ಚೆಕ್ಡ್ಯಾಂ ನಿಮರ್ಿಸಲು ಕ್ರಮ ಕೈಗೊಳ್ಳಲಾಗುವುದು. ಬರಗಾಲದ ಹಿನ್ನೆಲೆಯಲ್ಲಿ ಜನ ಜಾನುವಾರುಗಳಿಗೆ ನೀರು ಹಾಗೂ ಮೇವು ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಶಾಸಕ ಸಿ.ಬಿ ಸುರೇಶ್ಬಾಬು ಮಾತನಾಡಿ, ದೊಡ್ಡರಾಂಪುರದ ಮೂಲಕ ತೀರ್ಥರಾಮೇಶ್ವರ ವಜ್ರಕ್ಕೆ ಬರಲು ಬ್ರಿಡ್ಬ್ ಕಂ ಬ್ಯಾರೇಜ್ ನಿಮರ್ಿಸಲು ರೂ.1.5 ಕೋಟಿ ವೆಚ್ಚದಲ್ಲಿ ನಕ್ಷೆ ತಯಾರಾಗಿದೆ. ಕಾಮಗಾರಿ ಮುಗಿದರೆ ಅಂತರ್ಜಲ ಹೆಚ್ಚಿಸಲು ಸಹಕಾರಿಯಾಗಲಿದೆ. ಪಟ್ಟಣ ಹೊರತು ಪಡಿಸಿ ತಾಲ್ಲೂಕಿನ ಯಾವುದೇ ಭಾಗದಲ್ಲೂ ಕುಡಿಯುವ ನೀರಿನ ಕೊರತೆ ಇಲ್ಲ. ಪಟ್ಟಣದಲ್ಲಿ ಮಾತ್ರ ನೀರಿನ ಬರವಿದ್ದು ಎಂಟು-ಹತ್ತು ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ ಎಂದರು.
ಗಣಿಗಾರಿಕೆಯಿಂದ ಬಂದ ಹಣದಲ್ಲಿ 81 ಶುದ್ದ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲು ತೀಮರ್ಾನಿಸಲಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ನಾಗರಿಕರು ಒಟ್ಟಿಗೆ ಸೇರಿ ಹಳ್ಳಿಗಳ ಅಭಿವೃದ್ದಿಗೆ ಶ್ರಮಿಸಬೇಕಾಗಿದೆ. ಎಂದರು.
ತುಮಕೂರು ಅಭಿವೃದ್ದಿ ರೆವಲ್ಯೂಷನ್ ಪೋರಂ ಕಾರ್ಯದಶರ್ಿ ಕುಂದರನಹಳ್ಳಿ ರಮೇಶ್ ಮಾತನಾಡಿ, ಮಂಗಳೂರಿನ ಪಿಣಕುಲ ಪ್ರವಾಸಿ ತಾಣದ ಮಾದರಿಯಲ್ಲಿ ತೀರ್ಥರಾಮೇಶ್ವರ ವಜ್ರವನ್ನು ಅಭಿವೃದ್ದಿ ಪಡಿಸಬೇಕಿದೆ ಎಂದರು.
ಸಭೆಯಲ್ಲಿ ತಿಪಟೂರು ಉಪವಿಭಾಗಾಧಿಕಾರಿ ಪ್ರಜ್ಞಾ ಅಮ್ಮೆಂಬಳ, ತಹಶೀಲ್ದಾರ್ ಆರ್.ಗಂಗೇಶ್, ತೀರ್ಥಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗಭೂಷಣ, ರೈತರಾದ ರಾಮಕೃಷ್ಣಯ್ಯ, ಲಿಂಗರಾಜು, ಚೇತನ್, ರಾಜಣ್ಣ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಸಿಇಟಿ ತರಬೇತಿ ಶಿಬಿರಕ್ಕೆ ಜಿಲ್ಲಾಧಿಕಾರಿ ಭೇಟಿ
ಚಿಕ್ಕನಾಯಕನಹಳ್ಳಿ,ಏ.29 : ಸ್ಮಧರ್ಾತ್ಮಕ ಪರೀಕ್ಷೆಗಳಾದ ಐ.ಎ.ಎಸ್, ಐ.ಎ.ಎಮ್, ಕೆ.ಎ.ಎಸ್, ಕೆ.ಪಿ.ಎಸ್.ಸಿ, ಸಿಇಟಿ ಈ ರೀತಿಯ ಯಾವುದೇ ಪರೀಕ್ಷೆಗಳು ದಿನಕಳೆದಂತೆ ಬದಲಾಗುತ್ತಾ ಹೋಗುತ್ತಿದ್ದು ಈ ಬದಲಾವಣೆಗೆ ತಕ್ಕಂತೆ ವಿದ್ಯಾಥರ್ಿಗಳು ತರಬೇತಿ ಪಡೆಯುವುದು ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಪಿ.ಮೋಹನ್ರಾಜ್ ತಿಳಿಸಿದರು.

ಸಿಇಟಿ ತರಬೇತಿ ಪಡೆಯುತ್ತಿರುವ ವಿದ್ಯಾಥರ್ಿಗಳು ಅಂದುಕೊಂಡಷ್ಟು ಅಂಕಗಳನ್ನು ಪಡೆಯದೇ ಇದ್ದರೆ ಅದರ ಬಗ್ಗೆ ಯೋಚಿಸದೆ, ಹೆಚ್ಚಿನ ತರಬೇತಿ ಮತ್ತೊಂದು ಪರೀಕ್ಷೆಗೆ ಅನುಕೂಲವಾತ್ತದೆ ಎಂದು ತಿಳಿದುಕೊಳ್ಳಬೇಕು, ತಮ್ಮಲ್ಲಿರುವ ಆತ್ಮವಿಶ್ವಾಸವನ್ನು ವಿದ್ಯಾಥರ್ಿಗಳು ಎಂದಿಗೂ ಕಳೆದುಕೊಳ್ಳಬಾರದು, ಈ ವರ್ಷ ಪಡೆಯುತ್ತಿರುವ ತರಬೇತಿ ಮತ್ತೊಂದು ಸ್ಮಧರ್ಾತ್ಮಕ ಪರೀಕ್ಷೆಗೆ ಅನುಕೂಲವಾಗಲಿದೆ ಎಂದ ಅವರು ಹಣವಿದ್ದರೆ ವಿದ್ಯೆ ದೊರೆಯುವುದಿಲ್ಲ, ವಿದ್ಯೆ ಪಡೆಯಲು ಶ್ರಮ, ಸಾಧನೆ ಮಾಡುವ ಗುರಿ ಹೊಂದಿರಬೇಕು ಆಗಲೇ ವಿದ್ಯಾಥರ್ಿಗಳು ತಮ್ಮ ಜೀವನದ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ, ಪಟ್ಟಣದಲ್ಲಿ ಆರಂಭಿಸಿರುವ ಉಚಿತ ಸಿಇಟಿ ತರಬೇತಿ ಶಿಬಿರವನ್ನು ಪ್ರತಿ ವರ್ಷ ನಡೆಸಲಾಗುವುದು, ಈ ತರಬೇತಿ ಶಿಬಿರ ಪ್ರಥಮ ವರ್ಷವಾಗಿರುವುದರಿಂದ ವಿದ್ಯಾಥರ್ಿಗಳಿಗೆ ಕೆಲವು ತೊಂದರೆಗಳಾಗಿದೆ ಅದನ್ನು ಮುಂದಿನ ಶೈಕ್ಷಣಿಕ ವರ್ಷಕ್ಕೆ ಬರುವ ವಿದ್ಯಾಥರ್ಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು, ಹಾಗೂ ಉಚಿತ ಸಿಇಟಿ ತರಬೇತಿ ಪಡೆಯುತ್ತಿರುವ 3 ಸಾವಿರ ರ್ಯಾಂಕಿಂಗ್ ಒಳಗೆ ಬರುವ ಎಲ್ಲಾ ವಿದ್ಯಾಥರ್ಿಗಳಿಗೆ ನಗದು ಬಹುಮಾನ ವಿತರಿಸಲಾಗುವುದು ಎಂದು ತಿಳಿಸಿದರು.
ಶಿಬಿರದಲ್ಲಿ ಪಾಲ್ಗೊಂಡಿದ್ದ ವಿದ್ಯಾಥರ್ಿಗಳಿಗೆ ನೆನಪಿನ ಕಾಣಿಕೆಯನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಪುರಸಭಾಧ್ಯಕ್ಷ ಸಿ.ಟಿ.ದಯಾನಂದ್, ಉಪಾಧ್ಯಕ್ಷೆ ಇಂದಿರಾಪ್ರಕಾಶ್, ಕೆಐಎಡಿಬಿ ಜಂಟಿ ನಿದರ್ೇಶಕ ಸಿ.ಟಿ.ಮುದ್ದುಕುಮಾರ್, ಬೆಂಗಳೂರು ಆಂತರಿಕ ಭದ್ರತೆ ಡಿ.ವೈ.ಎಸ್.ಪಿ ಸಿ.ಆರ್.ರವೀಶ್ ಮತ್ತಿತರರು ಉಪಸ್ಥಿತರಿದ್ದರು.
ಬಾಕ್ಸ್ ಐಟಂ.
ವೈದ್ಯನಾಗುವ ಆಸೆ ಇತ್ತು : ವೈದ್ಯನಾಗಿ ನಂತರದಲ್ಲಿ ಐಎಎಸ್ ಬರೆಯಬೇಕೆಂಬ ಎರಡು ಗುರಿ ಇತ್ತು ಆದರೆ, ನನಗೆ ವೈದ್ಯನಾಗುವ ಅವಕಾಶವೇ ಸಿಗಲಿಲ್ಲ, ನಂತರ ಐಎಎಸ್ ಪರೀಕ್ಷೆ ಬರೆದೆ, ನಾಲ್ಕನೇ ಬಾರಿಗೆ ನನಗೆ ಐ.ಎ.ಎಸ್.ಗೆ ಅವಕಾಶ ಲಭಿಸಿತು, ನಾನು ಒಬ್ಬ ನಿಮ್ಮಂತೆ ತಾಲೂಕು ಪ್ರದೇಶದಿಂದಲೇ ಬಂದವನು, ಆದರೆ ನಮ್ಮ ಕಡೆ ಅನುಕೂಲಸ್ಥಿತಿ ಇದ್ದರೂ, ಐ.ಎ.ಎಸ್. ಪರೀಕ್ಷೆ ಬರೆಯುವ ಜೊತೆಯಲ್ಲಿ ಕೆಲ ದಿನಗಳ ಕಾಲ ಐಎಎಸ್ ಪರೀಕ್ಷೆ ಬರೆಯುವವರಿತೆ ತರಬೇತಿ ನೀಡುವ ತರಬೇತುದಾರನಾಗಿದ್ದೆ ನಂತರ ಐಎಎಸ್ ಪರೀಕ್ಷೆ ತೇರ್ಗಡೆಯಾಗಿ ಜಿಲ್ಲಾಧಿಕಾರಿಯಾದೆ ಎಂದು ಡಿ.ಸಿ.ಮೋಹನ್ ರಾಜ್ ತಮ್ಮ ಮನದಾಳದ ಮಾತುಗಳನ್ನು ವಿದ್ಯಾಥರ್ಿಗಳ ಮುಂದಿಟ್ಟರು.
ಸಾಸಲು ಬನಶಂಕರಿ ದೇವಿಯ ಜಾತ್ರಾಮಹೋತ್ಸವ
ಚಿಕ್ಕನಾಯಕನಹಳ್ಳಿ,ಏ.29: ಬಿರು ಬಿಸಿಲಿನಂಥ ಪ್ರಕೃತಿ ವಿಕೋಪ ಎದುರಾಗಿದೆ. ಮಳೆ ಇಲ್ಲದೆ ಜನ ಜಾನುವಾರುಗಳು ನೀರಿನಹಾಹಾಕಾರ ಎದುರಿಸುತ್ತಿವೆ. ಇದು ಮನುಷ್ಯ ದೈವಕ್ಕೆ ಸಮ ಎಂದುಕೊಂಡಿದ್ದರ ಫಲ ಎಂದು ಕೆರೆಗೋಡಿ ರಂಗಾಪುರ ಮಠದ ಶ್ರೀ ಗುರುಪರದೇಶಿಕೇಂದ್ರ ಮಹಾಸ್ವಾಮಿ ಹೇಳಿದರು.
ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ ಸಾಸಲು ಗ್ರಾಮದ ಶ್ರೀಬನಶಂಕರಿದೇವಿ ನೂತನ ದೇವಾಲಯದ ಪ್ರಾರಂಭೋತ್ಸವ ವಾಷರ್ಿಕ ಪೂಜಾ ಕಾರ್ಯಕ್ರಮದ ಅಂಗವಾಗಿ ಶುಕ್ರವಾರ ನಡೆದ ಧಾಮರ್ಿಕ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿ, ಬರ ಸಮೀಕ್ಷೆ ಹೆಸರಿನಲ್ಲಿ ರಾಜಕಾರಣಿಗಳು, ಅಧಿಕಾರಿಗಳು ಬಂದು ಹೋಗುತ್ತಾರೆ. ದೇವರ ಕರುಣೆ ಇಲ್ಲದೆ ಇಂಥ ಸಮಸ್ಯೆಗಳಿಗೆ ಪರಿಹಾರ ದೊರಕದು ಎಂದರು.
ತಮ್ಮಡಿಹಳ್ಳಿ ವಿರಕ್ತ ಮಠದ ಶ್ರೀಡಾ.ಅಭಿನವ ಮಲ್ಲಿಕಾಜರ್ುನ ಮಹಾಸ್ವಾಮೀಜಿ, ಮಾತನಾಡಿ, ನೀರು,ಗಾಳಿ ಮಣ್ಣು ಮುಂತಾದ ಪಕೃತಿ ಅಂಶಗಳಲ್ಲಿ ಭಗವಂತನನ್ನು ಕಾಣುವಂತಹ ಸಂಸ್ಕೃತಿ ನಮ್ಮದು. ಸಂಪತ್ತಿಗೆ , ಹಣಕ್ಕೆ ಭಗವಂತನ ಒಲಿಯುವುದಿಲ್ಲ ಎಂದರು. 1931ರಲ್ಲಿ ಈ ರೀತಿಯ ಬೀಸಿಲು ಇತ್ತು, ಇದು ಗುಲಬರ್ಗ, ರಾಯಚೂರುಗಳ ಕಡೆಗಳಲ್ಲಿ ಇರುವಂತಹ ತಾಪಮಾನ ನಮ್ಮಲ್ಲೂ ಸೃಷ್ಠಿಯಾಗಿದೆ ಎಂದರು.
ಗೋಡೆಕೆರೆಯ ಸಿದ್ದರಾಮದೇಶಿಕೇಂದ್ರ ಸ್ವಾಮೀಜಿ, ಮೃತ್ಯುಂಜಯ ದೇಶಿಕೇಂದ್ರ ಸ್ವಾಮೀಜಿ, ಮಾಜಿ ಶಾಸಕ ಬಿ.ಲಕ್ಕಪ್ಪ, ತಾ.ಪಂ.ಸದಸ್ಯೆ ಜಯಮ್ಮ, ಪಟೇಲ್ ಎಸ್ ಬಸವರಾಜು, ಆಡಿಟರ್ ಚಂದ್ರಶೇಖರ್, ಎಸ್.ಟಿ.ರವಿಕುಮಾರ್, ಸಾ.ಚಿ.ನಾಗೇಶ್, ವೆಂಕಟೇಶ, ನಟರಾಜ್, ಉಪನ್ಯಾಸಕ ದಿನೇಶ್, ಸಿದ್ದಲಿಂಗಮೂತರ್ಿ, ಉಮೇಶ್, ಸುರೇಶ್, ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
No comments:
Post a Comment