ಮಹಾತ್ಮಾಗಾಂಧಿ ವಿದ್ಯಾಥರ್ಿ ವೇತನ ವಿತರಣೆ ಸಮಾರಂಭ
ಚಿಕ್ಕನಾಯಕನಹಳ್ಳಿ,ಆ.13: 2009-10ನೇ ಸಾಲಿನ ಮಹಾತ್ಮಗಾಂಧಿ ಬುನ್ಕರ್ ಭೀಮಾ ಯೋಜನೆಯ ವಿದ್ಯಾಥರ್ಿ ವೇತನವು 140 ನೇಕಾರರ ಮಕ್ಕಳಿಗೆ 1.68000 ಸಾವಿರ ವಿದ್ಯಾಥರ್ಿ ವೇತನ ಬಂದಿದೆ ಎಂದು ಕಂಬಳಿ ಸೊಸೈಟಿ ಕಾರ್ಯದಶರ್ಿ ಸಿ.ಎಚ್.ಗಂಗಾಧರ್ ತಿಳಿಸಿದ್ದಾರೆ.
ರೇವಣಸಿದ್ದೇಶ್ವರ ಕಂಬಳಿ ಉತ್ಪಾದನಾ ಮತ್ತು ಮಾರಾಟ ಸಹಕಾರ ಸಂಘದ ಆವರಣದಲ್ಲಿ ಆಗಷ್ಟ್ 15ರ ಭಾನುವಾರ ಮಧ್ಯಾಹ್ನ 3ಗಂಟೆಗೆ ಚೆಕ್ಗಳನ್ನು ವಿತರಿಸಲಿದ್ದು ಅರ್ಹ ಫಲಾನುಭವಿಗಳು ಕಾರ್ಯಕ್ರಮಕ್ಕೆ ಆಗಮಿಸಿ ಚೆಕ್ಗಳನ್ನು ಪಡೆದುಕೊಳ್ಳಲು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.
ಸಂಗೊಳ್ಳಿರಾಯಣ್ಣನವರ 214ನೇ ಜನ್ಮದಿನಾಚರಣಾ ಸಮಾರಂಭ
ಚಿಕ್ಕನಾಯಕನಹಳ್ಳಿ,ಆ.13: ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಯುವಸೇನೆ ಸಂಯುಕ್ತಾಶ್ರಯದಲ್ಲಿ ವಿದ್ಯಾಥರ್ಿವೇತನ ವಿತರಣೆ ಹಾಗೂ ಸ್ವತಂತ್ರ್ಯ ಸೇನಾನಿ ಸಂಗೊಳ್ಳಿ ರಾಯಣ್ಣನವರ 214ನೇ ಜನ್ಮದಿನಾಚರಣೆ ಸಮಾರಂಭವನ್ನು ಇದೇ ಆಗಷ್ಟ್ 15ರಂದು ಏರ್ಪಡಿಸಲಾಗಿದೆ.
ಸಮಾರಂಭವನ್ನು ಶ್ರೀ ರೇವಣಸಿದ್ದೇಶ್ವರ ಕಂಬಳಿ ಸೊಸೈಟಿ ಸಂಘದ ಕಛೇರಿ ಆವರಣದಲ್ಲಿ ಮಧ್ಯಾಹ್ನ 3ಗಂಟೆಗೆ ಹಮ್ಮಿಕೊಂಡಿದ್ದು ಸಂಪಾದಕ ಚಿ.ನಾ.ಏಕೇಶ್ವರ್ ಉದ್ಘಾಟನೆ ನೆರವೇರಿಸುವರು.
ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು ಬಿ.ಇ.ಓ ಸಾ.ಚಿ.ನಾಗೇಶ್, ಪುರಸಭೆ ಮುಖ್ಯಾಧಿಕಾರಿ ಹೊನ್ನಪ್ಪ, ತಾಲೂಕು ಸಹಕಾರ ಅಭಿವೃದ್ದಿ ಅಧಿಕಾರಿ ಡಿ.ಕೆ.ಮುಕುಂದಯ್ಯ ವಿದ್ಯಾಥರ್ಿ ವೇತನದ ಚೆಕ್ ವಿತರಣೆ ಮಾಡಲಿದ್ದು, ಸ್ವಾತಂತ್ರ ಹೋರಾಟಗಾರ ಸಿ.ಎನ್.ನಾಗೇಶಯ್ಯ ಮತ್ತು ಪ್ರಾಂಶುಪಾಲರಾದ ಎನ್.ಇಂದಿರಮ್ಮನವರಿಗೆ ಸೇನೆ ವತಿಯಿಂದ ಸನ್ಮಾನಿಸಲಿದ್ದು ರೋಟರಿ ಕ್ಷಬ್ ಅಧ್ಯಕ್ಷ ಎನ್.ಶ್ರೀಕಂಠಯ್ಯ ನೋಟ್ಪುಸ್ತಕ ವಿತರಣೆ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕನಕ ಭವನದ ಅಧ್ಯಕ್ಷ ಸಿ.ಎಸ್.ಬಸವರಾಜು, ರಾಜ್ಯ ಅಹಿಂದ ಸಂಚಾಲಕ ಚಿ.ಲಿಂ.ರವಿಕುಮಾರ್, ಕನಕ ಭವನದ ಉಪಾಧ್ಯಕ್ಷ ಸಿ.ಕೆ.ಲೋಕೇಶ್, ನಿದರ್ೇಶಕರಾದ ಸಿ.ಹೆಚ್.ಅಳವೀರಯ್ಯ, ಸಿ.ಎಂ.ಬೀರಲಿಂಗಯ್ಯ, ಸಿ.ಎನ್.ವಿಜಯ್ಕುಮಾರ್, ಆರ್.ಜಿ.ಗಂಗಾಧರಯ್ಯ, ಗೋವಿಂದಯ್ಯ, ಭಾರತಿ ಉಪಸ್ಥಿತರಿರುವರು.
ಶಾದಿ ಮಹಲ್ ನಿವೇಶನಕ್ಕೆ ವಿರೋಧ
ಚಿಕ್ಕನಾಯಕನಹಳ್ಳಿ,ಆ.13: ಚಿಕ್ಕನಾಯಕನಹಳ್ಳಿ ನಗರದ ಶ್ರೀತಾತಯ್ಯ ಘೋರಿ ಪಕ್ಕದ ನಿವೇಶನದಲ್ಲಿ ಶಾದಿಮಹಲ್ ನಿಮರ್ಾಣಕ್ಕೆ ಮುಸ್ಲಿಂ ಬಾಂದವರು ಅನುಮತಿ ಕೇಳಿದ್ದಾರೆಂದು ಪುರಸಭೆಯ ತುತರ್ು ಸಭೆಯಲ್ಲಿ ಶಾಸಕರು ಪ್ರಸ್ತಾಪಮಾಡಿರುವ ಸುದ್ದಿ ಪ್ರಕಟವಾಗಿರುವುದಕ್ಕೆ ತಾ.ಬಿ.ಜೆ.ಪಿ ಮಾಜಿ ಅಧ್ಯಕ್ಷ ಶ್ರೀನಿವಾಸಮೂತರ್ಿ ಸ್ಪಷ್ಟೀಕರಣ ಬಯಸಿದ್ದಾರೆ.
ಈ ನಿವೇಶನ ಮೂಲತ: ಯಾರಿಗೆ ಸಂಬಂದಿಸಿದ್ದು ಈಗ ಯಾರ ಹೆಸರಿಗೆ ದಾಖಲಿದೆ ಸದರಿಯವರಿಗೆ ಬದಲಾದ ರೀತಿ ಹೇಗೆ? ಇದು ನಿಯಮ ಬದ್ದವಾಗಿದೆಯೇ ಅಥವ ನಿಯಮ ಬಾಹಿರವಾಗಿದೆಯೇ ಸಕರ್ಾರ ಅನುಮತಿ ನೀಡಿದೆಯೆ ಮುಂತಾದ ಪ್ರಶ್ನೆಗಳು ಉದ್ಭವವಾಗುತ್ತದೆ. ಹಾಲಿ ನಿವೇಶನದಲ್ಲಿ ಮೈಸೂರು ರಾಜವಂಶದವರಿಗೆ ಸಂಬಂದಿಸಿದ ಒಂದು ಸ್ಮಾರಕವಿದ್ದು ಇತಿಹಾಸದ ಪುಸ್ತಕದಲ್ಲೂ ಇದು ದಾಖಲಿದ್ದು ಇದಕ್ಕೆ ಸಂಬಂದಿಸಿದ ಅಧಿಕಾರಿಗಳು ಹಾಗೂ ಪುರಸಭೆಯ ಪ್ರತಿನಿಧಿಗಳು ಕುಲಂಕುಷವಾಗಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಹಿಂದೆ ಜೋಗಿಹಳ್ಳಿ ಗ್ರಾಮದಲ್ಲಿ ಇಂತಹದೆ ವಿವಾದ ಸೃಷ್ಟಿಯಾಗಿ ಹೋರಾಟ ನಡೆದದ್ದು ನೆನಪಿನಂಗಳದಲ್ಲಿ ಇನ್ನೂ ಹಸಿರಾಗಿಯೇ ಇದೆ ಆದ್ದರಿಂದ ಇಂತಹದಕ್ಕೆ ಅವಕಾಶ ನೀಡಬಾರದೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ಮಧರ್ಾತ್ಮಕ ಪರೀಕ್ಷೆಗಳಿಗೆ ಬೆಂಬಲ: ಜೆ.ಸಿ.ಎಂ
ಚಿಕ್ಕನಾಯಕನಹಳ್ಳಿ,ಆ.13: ವಿದ್ಯಾಥರ್ಿಗಳು ಎಲ್ಲಾ ಕ್ಷೇತ್ರಗಳ ಬೆಳವಣಿಗೆಯನ್ನು ಉತ್ತೇಜಿಸುತ್ತಾ ವಿದ್ಯಾ ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ವಿಷದಪಡಿಸಿದರು ಮತ್ತು ವಿದ್ಯಾಥರ್ಿಗಳಿಗೆ ಸ್ಮಧರ್ಾತ್ಮಕ ಪರೀಕ್ಷೆಗಳ ತಯಾರಿಗೆ ಬೆಂಬಲ ನೀಡುವುದಾಗಿ ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ವಿದ್ಯಾಥರ್ಿಗಳಿಗೆ ಭರವಸೆ ನೀಡಿದರು.
ಪಟ್ಟಣದ ನವೋದಯ ಪ್ರಥಮ ದಜರ್ೆ ಕಾಲೇಜಿನಲ್ಲಿ ನಡೆದ ಸಾಂಸ್ಕೃತಿಕ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನಾ ಚಟುವಟಿಕೆಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ವಿದ್ಯಾಥರ್ಿಗಳ ಸರ್ವತೋಮುಖ ಅಭಿವೃದ್ದಿಯ ನಿಟ್ಟಿನಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ, ಮತ್ತು ರಾಷ್ಟ್ರೀಯ ಸೇವಾ ಯೋಜನೆಗಳಲ್ಲಿ ವಿದ್ಯಾಥರ್ಿಗಳು ತಮ್ಮನ್ನು ತೊಡಗಿಸಿಕೊಳ್ಳುವುದರ ಮೂಲಕ ಅವರ ಪ್ರತಿಭೆ ಬೆಳಕಿಗೆ ಬಂದಂತಾಗುತ್ತದೆ ಇದರಿಂದ ಅವರ ವ್ಯಕ್ತಿತ್ವದ ವಿಕಸನ ಸಾಧಿಸಲು ಸಾಧ್ಯ ಎಂದರು.
ಅನೂಹ್ಯ ಟ್ರಸ್ಟ್ನ ಮುಖ್ಯಸ್ಥರಾದ ಬಾಲಸೂರ್ಯ ಮಾತನಾಡಿ ರಾಷ್ಟ್ರ ರಕ್ಷಣೆಯ ಕಾರ್ಯದಲ್ಲಿ ವಿದ್ಯಾಥರ್ಿಗಳ ಪಾತ್ರ ಮಹತ್ವದ್ದಾಗಿದ್ದು ಕನರ್ಾಟಕದಲ್ಲಿನ ಜನರಿಗಿರುವ ರಕ್ಷಣಾ ಸೇವೆಯ ಬಗೆಗಿನ ನಿರಾಸಕ್ತಿಯನ್ನು ಅಂಕಿ ಅಂಶಗಳ ಮೂಲಕ ತಿಳಿಸಿದರು.
ಭೂಮಿ ಬಳಗದ ಅಧ್ಯಕ್ಷರಾದ ಸೋಮಶೇಖರ್ ಮಾತನಾಡಿ ವಿವಿಧ ದೇಶಗಳಿಗೆ ಬೇರೆ ಬೇರೆ ಸಂಸತ್ತುಗಳಿರುವ ಹಾಗೆ ಕ್ರೀಡೆಗೆ ಸಂಸತ್ತುಗಳಿಲ್ಲ, ಎಲ್ಲ ದೇಶಗಳಲ್ಲೂ ಕ್ರೀಡೆಗೆ ಒಂದೇ ರೀತಿಯ ನಿಬಂದನೆಗಳಿರುತ್ತವೆ ಎಂದು ವಿದ್ಯಾಥರ್ಿಗಳನ್ನು ಕ್ರೀಡಾ ಕ್ಷೇತ್ರದೆಡೆಗೆ ಹುರಿದುಂಬಿಸಿದರು.
ಸಮಾರಂಭದಲ್ಲಿ ಪ್ರಾಂಶುಪಾಲ ಕೆ.ಸಿ.ಬಸಪ್ಪ, ಉಪನ್ಯಾಸಕರಾದ ಪರಮಶಿವಯ್ಯ, ರೇಣುಕಾರ್ಯ, ಕೈಲಾಸ್ನಾಥ್ ಉಪಸ್ಥಿತರಿದ್ದರು.
No comments:
Post a Comment