Sunday, August 15, 2010

ಚಿಕ್ಕನಾಯಕನಹಳ್ಳಿ,ಆ.15: ಗಡಿ ಸಮಸ್ಯೆ, ನೀರಿನ ಸಮಸ್ಯೆಗಳನ್ನು ಮರೆತು ಭಾರತದ ಪ್ರತಿಯೊಬ್ಬ ಪ್ರಜೆಯು ದೇಶಾಭಿಮಾನವನ್ನು ಬೆಳೆಸಿಕೊಂಡು ರಾಷ್ಟ್ರಕ್ಕಾಗಿ ಹೋರಾಡಬೇಕು ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
63ನೇ ಸ್ವಾತಂತ್ರ್ಯ ದಿನಾಚರಣೆಯ ಸಾರ್ವಜನಿಕ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸ್ವಾತಂತ್ರಕ್ಕಾಗಿ ಇಡೀ ದೇಶದ ಜನರೆಲ್ಲರೂ ಒಟ್ಟುಗೂಡಿ ಹೋರಾಡಿದ ಪರಿಣಾಮ ಇಂದು ನಮಗೆ ಸ್ವಾತಂತ್ರ ದೊರಕಿದೆ, ಮಹಾತ್ಮಾ ಗಾಂಧೀಜಿ, ಸುಭಾಷ್ಚಂದ್ರಭೋಸ್ ನಂತಹ ಕೆಚ್ಚೆದೆಯ ಉತ್ಸಾಹ ಯುವಕರು ಸೈನ್ಯಕ್ಕೆ ಸೇರಬೇಕು ಮತ್ತು ಸಮಾಜ ಕಟ್ಟುವಂತಹ ನಾಯಕತ್ವವನ್ನು ಬೆಳಸಿಕೊಳ್ಳಬೇಕು ಎಂದ ಅವರು ವೈದ್ಯಕೀಯ, ಸಮಾಜ, ಮತ್ತು ಪ್ರಗತಿಪರ ರೈತರನ್ನು ಇಂದು ಸನ್ಮಾನಿಸುತ್ತಿದ್ದು ಇದು ಕೇವಲ ಕಾಟಾಚರಕ್ಕೆ ಮಾಡುತ್ತಿಲ್ಲ ಇವರು ಸಮಾಜಕ್ಕೆ ಸಲ್ಲಿಸಿರುವ ಉತ್ತಮ ಕಾರ್ಯಗಳು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ನಿಷ್ಠೆ, ಪ್ರಮಾಣಿಕತೆಯಿಂದ ನಿರ್ವಹಿಸಿದ್ದಾರೆ ಎಂದರಲ್ಲದೆ, ರಾಷ್ಟ್ರಕ್ಕಾಗಿ ಸೇವೆ ಸಲ್ಲಿಸಲು ಕರೆ ಬಂದಾಗ ಇದು ತಮಗೆ ಒದಗಿದ ಒಂದು ಉತ್ತಮ ಅವಕಾಶವೆಂದು ಭಾವಿಸಬೇಕು ಎಂದು ಹೇಳಿದರು.
ತಹಶೀಲ್ದಾರ್ ಟಿ.ಸಿ.ಕಾಂತರಾಜು ಧ್ವಜಾರೋಹಣ ನೆರವೇರಿಸಿ ಮಾತನಾಡಿ ಅನರಕ್ಷತೆ, ಮೌಡ್ಯತೆ, ವೈಷಮ್ಯ ಇವು ದೇಶದಲ್ಲಿ ದೊಡ್ಡ ಪಿಡುಗಾಗಿದ್ದು ಇದನ್ನು ಹೋಗಲಾಡಿಸಲು ಇಂದಿನ ಯುವಕರು ಹೋರಾಡಬೇಕೆಂದು ಕರೆ ನೀಡಿದರು.
ಲಾಲಲಜಪತರಾಯ್, ಬಿಪಿನ್ ಚಂದ್ರಪಾಲ್ ಮುಂತಾದ ಸ್ವಾತಂತ್ರ ಹೋರಾಟಗಾರರು ಯುವಕರನ್ನು ಹುರಿದುಂಬಿಸಿ ಹಲವಾರು ಸಮಸ್ಯೆಗಳನ್ನು ಹೋಗಲಾಡಿಸಿದರು. ಇಂತಹವರ ಪರಿಶ್ರಮದಿಂದ ದೊರೆದ ಸ್ವಾತಂತ್ರವನ್ನು ಪ್ರತಿಯೊಬ್ಬರು ನೆನಪಿಸಿಕೊಂಡು ದೇಶದ ಅಭಿವೃದ್ದಿಗಾಗಿ ಭಾವೈಕ್ಯತೆಯಿಂದ ಬಾಳಬೇಕು ಎಂದರು.
ಸಮಾರಂಭದಲ್ಲಿ ವೈದ್ಯಕೀಯ ಕ್ಷೇತ್ರದ ಡಾ.ಹೆಚ್.ಕೆ.ದಾಸ್, ಸಮಾಜ ಕ್ಷೇತ್ರದ ಮಲ್ಲಿಕಾಜರ್ುನಯ್ಯ(ಸಾಯಿಬಾಬ), ಪ್ರಗತಿಪರ ರೈತ ಕೆ.ಬಸವರಾಜುರವರನ್ನು ತಾಲೂಕು ಆಡಳಿತ ವತಿಯಿಂದ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಮಾಜಿ ಜಿ.ಪಂ ಅಧ್ಯಕ್ಷೆ ಜಯಮ್ಮದಾನಪ್ಪ, ಮಾಜಿ ಶಾಸಕ ಬಿ.ಲಕ್ಕಪ್ಪ, ಪುರಸಭಾಧ್ಯಕ್ಷ ಸಿ.ಎಂ.ರಂಗಸ್ವಾಮಯ್ಯ, ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ, ಪುರಸಭಾ ಉಪಾಧ್ಯಕ್ಷೆ ರುಕ್ಮಿಣಮ್ಮ, ಇ.ಓ. ವೇದಮೂತರ್ಿ, ಸಿ.ಪಿ.ಐ ರವಿಪ್ರಸಾದ್ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಬಿ.ಇ.ಓ ಸಾ.ಚಿ.ನಾಗೇಶ್ ಸ್ವಾಗತಿಸಿ, ರಮೇಶ್ಕೆಂಬಾಳ್ ನಿರೂಪಿಸಿ, ನರಸಿಂಹಮೂತರ್ಿ ವಂದಿಸಿದರು.
ಚಿತ್ರ ಶೀಷರ್ಿಕೆ:

No comments:

Post a Comment