Thursday, February 17, 2011




ಚಿ.ನಾ.ಹಳ್ಳಿಯಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಕಛೇರಿ ಉದ್ಘಾಟನೆ
ಚಿಕ್ಕನಾಯಕನಹಳ್ಳಿ,ಫೆ.17: ಆಥರ್ಿಕ, ಸಾಮಾಜಿಕ, ಆರೋಗ್ಯ, ಶೈಕ್ಷಣಿಕ ಈ ಎಲ್ಲಾ ಕ್ಷೇತ್ರಗಳಲ್ಲಿ ತಾಲೂಕು ಮುಂದುವರಿಯಬೇಕಾದರೆ ಸಕರ್ಾರ ಹಾಗೂ ಖಾಸಗಿ ಸಂಸ್ಥೆಗಳು ಜೊತೆಗೂಡಿ ಸಾರ್ವಜನಿಕ ಕೆಲಸ ಮಾಡಿದರೆ ತಾಲೂಕು ಅಭಿವೃದ್ದಿಯಾಗುತ್ತದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ಪಟ್ಟಣದಲ್ಲಿ ನೂತನವಾಗಿ ಆರಂಭಗೊಂಡ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾ ಕಛೇರಿಯನ್ನು ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ತಾಲೂಕು ಅಭಿವೃದ್ದಿಯಾಗಬೇಕಾದರೆ ತಾಲೂಕಿನ ಎಲ್ಲಾ ಗ್ರಾಮಗಳು ಶೈಕ್ಷಣಿಕವಾಗಿ ಮುಂದುವರಿಯಬೇಕು, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಗ್ರಾಮೀಣ ಕೃಷಿಕರು ಹಾಗೂ ಮಹಿಳೆಯರ ಸಂಘಟನೆಯ ಸಬಲೀಕರಣಕ್ಕಾಗಿ ಮುಂದೆ ಬಂದಿದೆ, ಈ ಯೋಜನೆಗೆ ನಾವೆಲ್ಲರೂ ಪ್ರೋತ್ಸಾಹಿಸಬೇಕು ಎಂದ ಅವರು ಉಳಿತಾಯ ಸಾಲ ವಿತರಣೆ ಮೂಲಕ ಆಥರ್ಿಕ ಸಂಪನ್ಮೂಲಗಳನ್ನು ಸ್ವಸಹಾಯ ಪದ್ದತಿಯಲ್ಲಿ ಕ್ರೂಡಿಕರಿಸಿ ಕೃಷಿಕ ಮತ್ತು ಮಹಿಳೆಯರನ್ನು ಆಥರ್ಿಕ, ಸಾಮಾಜಿಕ ಬದಲಾವಣೆ ಮಾಡಲು ಈ ಮೂಲಕ ಪ್ರಯತ್ನಿಸುತ್ತಿರುವುದು ಯೋಜನೆಯ ಉತ್ತಮ ಉದ್ದೇಶವಾಗಿದೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ನಿದರ್ೇಶಕ ಸಿ.ಪಿ.ಪುರುಷೋತ್ತಮ್ ಮಾತನಾಡಿ ತಾಲೂಕಿನಲ್ಲಿ ಎರಡು ಸಾವಿರಕ್ಕಿಂತ ಹೆಚ್ಚು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸಂಘಗಳನ್ನು ರೂಪಿಸಿ, ಗ್ರಾಮಗಳನ್ನು ಅಭಿವೃದ್ದಿ ಪಡಿಸಲು ಯತ್ನಿಸುತ್ತೇವೆ ಅಲ್ಲದೆ ಗ್ರಾಮಗಳಲ್ಲಿ ಸಂಘಗಳನ್ನು ರಚಿಸಿ ಅಲ್ಲಿ ಹೈನುಗಾರಿಕೆ, ಕೃಷಿ, ತೋಟಗಾರಿಕೆ, ಮೈಕ್ರೋಫೈನಾನ್ಸ್ಗಳ ಬಗ್ಗೆ ತರಬೇತಿ ನೀಡುತ್ತೇವೆ ಎಂದ ಅವರು ಪ್ರತಿ ಜಿಲ್ಲೆಯಲ್ಲಿ ಇರುವ ತಾಲೂಕುಗಳಿಗೆ ಈಗಾಗಲೇ ಈ ಯೋಜನೆ ಮೂಲಕ 850ಕೋಟಿ ಹಣವನ್ನು ಸಂಘಗಳ ಸದಸ್ಯರಿಗೆ ವಿಸ್ತರಿಸಿದ್ದು 250ಕೋಟಿ ಉಳಿತಾಯವಾಗಿದೆ. ಈಗಾಗಲೇ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಅನ್ನದಾನ, ಮೆಡಿಕಲ್ ಮತ್ತು ಇಂಜನಿಯರ್ ಕಾಲೇಜುಗಳನ್ನು ಸ್ಥಾಪಿಸಿದ್ದು ಸಂಚಾರಿ ಆಸ್ಪತ್ರೆ, ಉಚಿತ ಔಷದಿಗಳನ್ನು ಶಾಂತವನ ಟ್ರಸ್ಟ್ ವತಿಯ ಮುಖಾಂತರ ಅಭಿವೃದ್ದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ತಹಶೀಲ್ದಾರ್ ಟಿ.ಸಿ.ಕಾಂತರಾಜು ಮಾತನಾಡಿ ತಾಲೂಕು ಹಿಂದುಳಿದ ಪ್ರದೇಶವಾಗಿದ್ದು ಕೃಷಿಯಲ್ಲಿ ತಾಲೂಕು ಮುಂದುವರಿದರೆ ತಾಲೂಕು ಅಭಿವೃದ್ದಿಯಾಗುತ್ತದೆ ಇದಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ರೈತರಿಗೆ ಬೆಳೆಯ ಮತ್ತು ಮಹಿಳೆಯರಿಗೆ ಸಂಘಗಳ ರಚನೆಯ ಮಾಹಿತಿ ನೀಡುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದರು.
ಸಮಾರಂಭದಲ್ಲಿ ಪುರಸಭಾ ಅಧ್ಯಕ್ಷ ರಾಜಣ್ಣ, ಸದಸ್ಯ ಸಿ.ಡಿ.ಚಂದ್ರಶೇಖರ್, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ಸಕರ್ಾರಿ ನೌಕರರ ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ, ದರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾಧಿಕಾರಿ ರೋಹಿತಾಕ್ಷ ಉಪಸ್ಥಿತರಿದ್ದರು.
ಮುಹಿಳಾ ದಿನಾಚರಣೆ ಅಂಗವಾಗಿ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪಧರ್ೆಗಳು
ಚಿಕ್ಕನಾಯಕನಹಳ್ಳಿ,ಫೆ.17: ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳೆಯರಿಗೆ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪಧರ್ೆಗಳನ್ನು ಸೃಜನ ಮಹಿಳಾ ಸಂಘಟನೆಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಸದಸ್ಯೆ ಎನ್.ಇಂದಿರಮ್ಮ ತಿಳಿಸಿದ್ದಾರೆ.
ಇದೇ 19 ಮತ್ತು 20ರಂದು 9.30ಕ್ಕೆ ಪಟ್ಟಣದ ದೇಶೀಯ ವಿದ್ಯಾಪೀಠ ಪ್ರೌಡಶಾಲಾ ಆವರಣದಲ್ಲಿ ಸ್ಪಧರ್ೆಗಳನ್ನು ಏರ್ಪಡಿಸಲಾಗಿದ್ದು ಜನಪದ ಗೀತೆ, ಭಾವಗೀತೆ, ಭಕ್ತಿಗೀತೆ, ಏಕಪಾತ್ರಾಭಿನಯ, ಛದ್ಮವೇಶ, ಆಶುಭಾಷಣ ಸ್ಪಧರ್ೆ, ರಂಗೋಲಿ, ಬಕೇಟ್ಗೆ ರಿಂಗ್ ಹಾಕುವುದು, ಮ್ಯೂಸಿಕಲ್ ಛೇರ್, ಮಡಿಕೆ ಒಡೆಯುವುದು, ಚಮಚ ಮತ್ತು ನಿಂಬೆಹಣ್ಣು ಓಟ, ಪಾಸಿಂಗ್ ದಿ ಬಾಲ್, ಬಾಂಬ್ ಇನ್ ದಿ ಸಿಟಿ, ಥ್ರೋಬಾಲ್, ಬಾವಿದಡ ಸ್ಪದರ್ೆಗಳನ್ನು ಹಮ್ಮಿಕೊಂಡಿದ್ದು ಸ್ಪಧರ್ೆಗೆ ಭಾಗವಹಿಸುವವರು ಹೆಚ್ಚಿನ ವಿವರಗಳಿಗಾಗಿ 9448648436, 9980760326 ನಂ.ಗಳಿಗೆ ಸಂಪಕರ್ಿಸಬಹುದು ಎಂದು ತಿಳಿಸಿದ್ದಾರೆ.

ಕಂದಿಕೆರೆ ಗವಿಶಾಂತವೀರಸ್ವಾಮಿ ಜಾತ್ರ್ರಾ ಮಹೋತ್ಸವ
ಚಿಕ್ಕನಾಯಕನಹಳ್ಳಿ,ಫೆ.17: ಅವಧೂತ ಶ್ರೀ ಗವಿಶಾಂತವೀರಸ್ವಾಮಿಗಳ 21ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವವು ಇದೇ 19ರವರಗೆ ನಡೆಯಲಿದೆ.
18ರಂದು ರಥಕ್ಕೆ ಕಳಸ ಸ್ಥಾಪನೆ, ಪುಣ್ಯಾರ್ಚನೆ, ರಥದ ಗಾಲೆಗೆ ಅಭಿಷೇಕ, 19ರಂದು ರಥೋತ್ಸವ ಹಾಗೂ ಅನ್ನಸಂತರ್ಪಣೆಯನ್ನು ಹಮ್ಮಿಕೊಳ್ಳಲಾಗಿದೆ.

No comments:

Post a Comment