Thursday, February 17, 2011




ಶಾಸಕರನ್ನು ನಾಯಿ, ಕತ್ತೆ, ಹಂದಿಗಳಗೆ ಹೋಲಿಸಿದ ಗುಬ್ಬಿ ಎಂ.ಎಲ್.ಎ ಶ್ರೀನಿವಾಸ
ಚಿಕ್ಕನಾಯಕನಹಳ್ಳಿ,ಫೆ.17: ರಾಜ್ಯದ ಇತ್ತೀಚಿನ ಬೆಳವಣಿಗೆಯಿಂದ ಶಾಸಕರೆಂದರೆ ನಾಯಿ, ಕತ್ತೆ, ಹಂದಿಗಳಿಗಿಂತ ಕಡೆಯಾಗಿ ಹೋಗಿದ್ದೇವೆಂದು ಗುಬ್ಬಿ ಕ್ಷೇತ್ರದ ಶಾಸಕ ಶ್ರೀನಿವ್ಸಾ ವಿಶ್ಲೇಷಿಸಿದರು.
ಪಟ್ಟಣದ ಸಕರ್ಾರಿ ಪ್ರೌಡಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಶಾಸಕ ಸಿ.ಬಿ.ಸುರೇಶ್ಬಾಬುರವರ ಹುಟ್ಟು ಹಬ್ಬದ ಅಂಗವಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ ಪ್ರೇಕ್ಷಕರನ್ನು ರಂಜಿಸಲು ಇನ್ನಿಲ್ಲದ ಮಾತಿನ ಕಸರತ್ತು ನಡೆಸಿದರು.
ಮಾತನಾಡುವ ಭರಾಟೆಯಲ್ಲಿ ಸಭಾ ಮಯರ್ಾದೆಯನ್ನು ಮರೆತು ಮಾತನಾಡಿದ ಶ್ರೀನಿವಾಸ್ ಆಪರೇಶನ್ ಕಮಲದಲ್ಲಿ ಯಡಿಯೂರಪ್ಪ ಶಾಸಕರನ್ನು ಕೊಂಡುಕೊಳ್ಳುವ ರೀತಿಯೇ ಶಾಸಕರ ಬಗ್ಗೆ ಜನರಲ್ಲಿ ಇಂತಹ ಅಭಿಪ್ರಾಯ ಮೂಡಿದೆ ಎಂದರು.
ಈ ಸಕರ್ಾರದಲ್ಲಿ ಪಕ್ಷದ ಶಾಸಕರಿಗೆ ಕನಿಷ್ಠ ರಸ್ತೆಯಲ್ಲಿ ಬಿಟ್ಟಿರುವ ಗುಂಡಿಯನ್ನು ಮುಚ್ಚಿಸಲು ಯೋಗ್ಯತೆ ಇಲ್ಲವಾಗಿದೆ ಎಂದ ಅವರು ರಾಜ್ಯದ ಬಡವರು ತಮ್ಮ ಹೆಂಡತಿಗೆ ಸೀರೆ ಕೊಡಿಸಲಿಕ್ಕೂ ಯೋಗ್ಯತೆ ಇಲ್ಲದವರು ಎಂಬಂತೆ ಬಿಂಬಿಸುತ್ತಿದ್ದಾರೆ, ಹೊರ ರಾಜ್ಯದಲಿ 100 ರೂಗಳಿಗೊಂದು ಸೀರೆ ತಂದು ಅದನ್ನು ಇಲ್ಲಿ ವಿತರಿಸಿ ಸಕರ್ಾರದ ಲೆಕ್ಕದಲ್ಲಿ ಮೂರು ನೂರು ರೂ ಲೆಕ್ಕ ತೋರಿಸುತ್ತಿದ್ದಾರೆ ಎಂದರು.
ಜನರೂ ಅಷ್ಟೇ, ಯಡಿಯೂರಪ್ಪನವರ ಗಿಮಿಕ್ಗಳಿಗೆ ಒಳಗಾಗಿ ಗ್ರಾ.ಪಂ ಹಾಗೂ ಜಿ.ಪಂ.ಗಳಲ್ಲಿ ಅವರ ಪಕ್ಷಕ್ಕೆ ಓಟು ಹಾಕುತ್ತಿದ್ದಾರೆ ಎಂದರು.
ಈ ರಾಜ್ಯವನ್ನು ಕತ್ತಲೆಗೆ ನೂಕಿರುವ ಯಡಿಯೂರಪ್ಪ ರೈತರಿಗೆ ಸಮಪರ್ಕವಾಗಿ ಕರೆಂಟ್ ನೀಡಲಾಗುತ್ತಿಲ್ಲ, ಶೋಭಾ ಮೇಡಂ ಇಂಧನ ಸಚಿವರಾದ ಮೇಲಾದರೂ ಕರೆಂಟಿನ ಸಮಸ್ಯೆ ಬಗೆಹರಿಯಬಹುದೆಂರೆ ನಾವಂದು ಕೊಂಡಿದ್ದು ತಪ್ಪಾಯಿತು, ಈ ಯಡಿಯೂರಪ್ಪನವೇ ಕರೆಂಟ್ ಮುಟ್ಟಿದರೂ ಶಾಕ್ ಹೊಡೆಯುವುದಿಲ್ಲ ಈಗಿದೆ ರಾಜ್ಯದಲ್ಲಿ ಕರೆಂಟ್ನ ವೋಲ್ಟೇಜ್ನ ಸ್ಥಿತಿ ಎಂದು ಹೀಯಾಳಿಸಿದರು.
ಶಾಸಕ ಸಿ.ಬಿ.ಎಸ್ರವರ ಹುಟ್ಟು ಹಬ್ಬದ ಆಚರಣೆಯ ಬಗ್ಗೆ ಮಾತನಾಡಿದ ಅವರು, ನಾನು ಹುಟ್ಟು ಹಬ್ಬವನ್ನೇ ಆಚರಿಸಿಕೊಳ್ಳುವುದಿಲ್ಲ, ಏಕೆಂದರ ನನಗೆ ನನ್ನ ಹುಟ್ಟಿದ ದಿನಾಂಕವೇ ಗೊತ್ತಿಲ್ಲ, ಗೆಳೆಯ ಬಾಬುಗೆ ಅವರ ಪೋಷಕರು ಹುಟ್ಟಿದ ದಿನದ ಬಗ್ಗೆ ತಿಳಿಸಿರುವುದರಿಂದ ಅವರು ಆಚರಿಸಿಕೊಳ್ಳುತ್ತಿದ್ದಾರೆ, ನಾವೆಲ್ಲ ಆಚರಣೆಯಲ್ಲಿ ಭಾಗಿಯಾಗಿದ್ದೇವೆ ಎಂದರು.
ಶಾಸಕ ಸಿ.ಬಿ.ಸುರೇಶ್ಬಾಬು ತುಂಬಾ ಧಾರಾಳಿ, ಈ ಕ್ಷೇತ್ರದ ಜನ ಅವರನ್ನೇ ಹಂದಿ ಕುಯ್ದುಕೊಂಡಂತೆ, ಕೊಯ್ದಿಕೊಂಡರೂ ಸುಮ್ಮನಿರುತ್ತಾರೆ, ಹಾಗಂತ ಅವರು ಯಾವಾಗಲೂ ಬೆಂಗಳೂರಿನಲ್ಲೇ ಇರಬಾರದು, ಕ್ಷೇತ್ರದಲ್ಲಿ ಓಡಾಡಿಕೊಂಡಿರಬೇಕು, ಜನರು ಪೋನ್ ಮಾಡಿದರೆ, ಪೋನೆತ್ತಿ ಜನರೊಂದಿಗೆ ಮಾತನಾಡಬೇಕು, ಜನರು ಸಹ ಬಾಬುನ ಬಳಿ ಸಣ್ಣ ಪುಟ್ಟದಕ್ಕೆಲ್ಲಾ ದುಡ್ಡು ಕೇಳಬಾರದು ಎಂದ ಅವರು , ಈ ಬಗ್ಗೆ ನಮ್ಮ ನಾಯಕ ಕುಮಾರಣ್ಣನವರು ಬಾಬುಗೆ ಬುದ್ದಿ ಹೇಳಿದ್ದಾರೆ.
ನಾನು ಚಿ.ನಾ.ಹಳ್ಳಿಗೆ ಹಿಂದೊಮ್ಮೆ ಕಾರ್ಯಕ್ರಮಕ್ಕೆ ಬಂದಾಗ ಹೆಚ್ಚು ಜನ ಸೇರಿದ್ದರು , ಈಗ ಜನರ ಸಂಖ್ಯೆ ಆಗಿನಷ್ಠು ಇಲ್ಲ, ಇಲ್ಲಿನ ಜನ ಬಾಬುರವರನ್ನು ಬೆಂಬಲಿಸಬೇಕು, ಚುನಾವಣೆಗಳಲ್ಲಿ ಅವರ ಕೈ ಬಲ ಪಡಿಸಬೇಕು, ಮುಂದೆ ಏನಾದರೂ ಅದೃಷ್ಠಕ್ಕೆ ಬಾಬು ಸಚಿವರಾದರೆ ಅದರ ಲಾಭ ಈ ಕ್ಷೇತ್ರದ ಜನಕ್ಕೆ ಎಂದರು.

No comments:

Post a Comment