ಸಕರ್ಾರಿ ನೌಕರರಿಗೆ ಕ್ರೀಡಾ ಕೂಟ ಮತ್ತು ಪ್ರತಿಭಾ ಪುರಸ್ಕಾರ
ಚಿಕ್ಕನಾಯಕನಹಳ್ಳಿ,ಫೆ.21: ರಾಜ್ಯ ಸಕರ್ಾರಿ ನೌಕರರ ಕ್ರೀಡಾ ಕೂಟ ಮತ್ತು ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭವನ್ನು ಇದೇ 26ರ ಬೆಳಗ್ಗೆ 9ಗಂಟೆಗೆ ಏರ್ಪಡಿಸಲಾಗಿದೆ.ಸಮಾರಂಭವನ್ನು ಸಕರ್ಾರಿ ಪ್ರೌಡಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದು ಕ್ರೀಡೆಯಲ್ಲಿ ಭಾಗವಹಿಸಿದವರಿಗೆ ಓ.ಓ.ಡಿ. ಸೌಲಭ್ಯವಿದ್ದು, ಶಿಕ್ಷಣ ಇಲಾಖೆ ಉಪನಿದರ್ೇಶಕ ಮೋಹನ್ಕುಮಾರ್ ಸಮಾರಂಭದ ಧ್ವಜಾರೋಹಣ ನೆರವೇರಿಸಲಿದ್ದು ತಾ.ರಾ.ಸ.ನೌ.ಸಂಘದ ಆರ್.ಪರಶಿವಮೂತರ್ಿ ಅಧ್ಯಕ್ಷತೆ ವಹಿಸಲಿದ್ದು ರಾ.ಸ.ನೌ,ಸಂಘದ ಅಧ್ಯಕ್ಷ ಎಲ್.ಭೈರಪ್ಪ ನಿವೃತ್ತ ನೌಕರರಿಗೆ ಸನ್ಮಾನಿಸಲಿದ್ದಾರೆ.
ರಾ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಬಸವರಾಜ್ ಗುರಿಕಾರ್ ಪ್ರತಿಭಾ ಪುರಸ್ಕಾರ ನೀಡಲಿದ್ದು ಜಿಲ್ಲಾ ಕ.ರಾ.ಸ.ನೌ.ಸಂಘದ ಅಧ್ಯಕ್ಷ ಜಿ.ಎಂ.ಸಣ್ಣಮುದ್ದಯ್ಯ ಕ್ರೀಡಾ ಜ್ಯೋತಿ ಮತ್ತು ತಹಶೀಲ್ದಾರ್ ಟಿ.ಸಿ.ಕಾಂತರಾಜು ವಂದನಾ ಸ್ವೀಕರಣೆ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಪುರಸಭಾಧ್ಯಕ್ಷ ರಾಜಣ್ಣ, ಉಪಾಧ್ಯಕ್ಷ ಕವಿತಾಚನ್ನಬಸವಯ್ಯ, ತಾ.ಪಂ.ಅಧ್ಯಕ್ಷ ಸೀತಾರಾಮಯ್ಯ, ಉಪಾಧ್ಯಕ್ಷೆ ಬಿ.ಫಾತೀಮ, ಜಿ.ಪಂ.ಸದಸ್ಯೆ ಮಂಜುಳಗವಿರಂಗಯ್ಯ, ಜಾನಮ್ಮರಾಮಚಂದ್ರಯ್ಯ, ಹೆಚ್.ಬಿ.ಪಂಚಾಕ್ಷೆರಿ, ನಿಂಗಮ್ಮರಾಮಯ್ಯ, ಲೋಹಿತಾಬಾಯಿ, ಗಣಿ ಮಾಲೀಕರ ಸಂಘದ ಅಧ್ಯಕ್ಷ ಎಸ್.ಎ.ನಭಿ, ರಂಗೇಗೌಡರು, ನಾರಾಯಣಸ್ವಾಮಿ, ಇ.ಓ ಎನ್.ಎಂ.ದಯಾನಂದ್, ಬಿ.ಇ.ಓ ಸಾ.ಚಿ.ನಾಗೇಶ್, ಬಿ.ಭಾಸ್ಕರಾಚಾರ್ಯ, ಡಾ.ಶ್ರೀಧರ್, ಸಿ.ಪಿ.ಐ. ರವಿಪ್ರಸಾದ್, ವಿಶೇಷ ಆಹ್ವಾನಿತರಾಗಿ ಸೈಯದ್ಮುನೀರ್, ರಂಗಸ್ವಾಮಿ, ಹೆಚ್.ಆಂಜನೇಯ, ಅನೀಸ್ಖೈಸರ್, ಡಿ.ಉಮೇಶ್, ರೇಣುಕಪ್ರಸನ್ನ, ಬಿ.ಹೆಚ್.ಮಾರುತಿ, ಆರ್.ಎಂ.ಜಯರಾಮ್, ಹೊನ್ನಪ್ಪ, ತಿಮ್ಮರಾಜು, ನರಸಿಂಹಮೂತರ್ಿ, ಸಿ.ಎಚ್.ಶೋಭಾ, ಹೆಚ್.ಎಂ.ಸುರೇಶ್ ಸಿ.ಎಸ್.ಕುಮಾರಸ್ವಾಮಿ ಉಪಸ್ಥಿತರಿರುವರು.
ಸೊಂಡೇನಹಳ್ಳಿಯ ಹೃದಯ ವಿದ್ರಾವಕ ಘಟನೆ ನಾಗರೀಕ ಸಮಾಜ ತಲೆ ತಗ್ಗಿಸುವಂತ ವಿಷಯ
ಚಿಕ್ಕನಾಯಕನಹಳ್ಳಿ,ಫೆ.21: ಸೊಂಡೇನಹಳ್ಳಿ ಗೊಲ್ಲರಹಟ್ಟಿಯಲ್ಲಿ ದ್ವೇಷದಿಂದ ಐವರನ್ನು ಸಜೀವವಾಗಿ ಸುಟ್ಟು ಹಾಕಿರುವ ಹೃದಯ ವಿದ್ರಾವಕ ಘಟನೆಯು ಇಡೀ ನಾಗರೀಕ ಸಮಾಜ ತಲೆ ತಗ್ಗಿಸುವಂತಿದೆ ಎಂದು ಚಿತ್ರದುರ್ಗದ ಯಾದವಾನಂದಸ್ವಾಮೀಜಿ ವಿಷಾದಿಸಿದರು.ತಾಲೂಕಿನ ಸೊಂಡೇನಹಳ್ಳಿ ಗೊಲ್ಲರಹಟ್ಟಿ ಗ್ರಾಮಕ್ಕೆ ಭೇಟಿ ನೀಡಿ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಯಾರಿಗಾದರೂ ಈ ಘಟನೆಯ ಸತ್ಯ ಸಂಗತಿ ಗೊತ್ತಿದ್ದರೂ ಮುಚ್ಚಿಟ್ಟರೆ ಅದು ಕಾನೂನು ಅಪರಾಧವಾಗುತ್ತದೆ, ಸೊಂಡೇನಹಳ್ಳಿಯ ಗೊಲ್ಲರಹಟ್ಟಿ ಘಟನೆಯಿಂದ ಯಾದವ ಸಮಾಜದಲ್ಲಿ ಇಂತಹ ಕ್ರೂರಿಗಳು ಇದ್ದಾರಯೇ ಎಂದು ನನಗೆ ಸಮಾಜದಲ್ಲಿ ಕೇಳುತ್ತಿದ್ದಾರೆ. ಈ ಘಟನೆಗೆ ಕಾರಣರಾದವರ ಬಗ್ಗೆ ಪೋಲಿಸರಿಗಾಗಲಿ ಶಾಸಕರಿಗಾಗಲಿ, ತಮಗಗಾಲಿ ದೂರವಾಣಿಯ ಮುಖೇನ ತಿಳಿಸಿ, ಎಂದ ಅವರು ಸಣ್ಣ ಪುಟ್ಟ ಸಮುದಾಯಗಳಲ್ಲಿ ಇಂತಹ ಘಟನೆಗಳು ನಡೆದರೆ ಹೇಗೆ? ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಎಲ್ಲೂ ಇಂತಹ ಕೃತ್ಯ ನಡೆಯಬಾರದು ಈ ಕೃತ್ಯಕ್ಕೆ ಕಾರಣರಾದವರನ್ನು ಊರಿನ ಒಳಗೆ ಸೇರಿಸಬೇಡಿ ಎಂದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಉಳಿಸಿಕೊಂಡು ಹೋಗಬೇಕಾಗಿದೆ, ಸಮಾಜದಲ್ಲಿ ಯಾದವ ಜನಾಂಗ ಮುಗ್ದರು ಎಂಬ ಭಾವನೆ ಇದೆ ಈ ಕೃತ್ಯದ ಬಗ್ಗೆ ಪೋಲಿಸರಿಗೆ ಸಹಕರಿಸಿ, ಯಾರು ಗ್ರಾಮ ಬಿಟ್ಟು ತೆರಳ ಬೇಡಿ ಇದರಿಂದ ಪೋಲಿಸರಿಗೆ ಅನುಮಾನ ಬರುತ್ತದೆ ಎಂದರು.
ತಹಶೀಲ್ದಾರ್ ಟಿ.ಸಿ.ಕಾಂತರಾಜು ಮಾತನಾಡಿ ಮುಂದೆ ಇಂತಹ ಕೃತ್ಯ ಎಲ್ಲಿಯೂ ಆಗಬಾರದು ಮಾನವೀಯತೆಯನ್ನು ಕಾಪಾಡಿಕೊಂಡು ಹೋಗುವುದು ಎಲ್ಲರ ಕರ್ತವ್ಯ ಎಂದರು.
ಸಿ.ಪಿ.ಐ ರವಿಪ್ರಸಾದ್ ಮಾತನಾಡಿ ಸೊಂಡೇನಹಳ್ಳಿ ಗೊಲ್ಲರಹಟ್ಟಿ ಗ್ರಾಮದ ರಕ್ಷಣೆಗೆ ಮಾತ್ರ ಪೋಲಿಸರನ್ನು ನಿಯೋಜಿಸಿದ್ದೇವೆ ಇದರಿಂದ ಜನ ಭೀತಿಗೆ ಒಳಗಾಗಬಾರದು ಈ ಕೃತ್ಯದ ಹಿಂದೆ ಯಾರಿದ್ದಾರೆ ಎಂಬುದನ್ನು ಸ್ಥಳೀಯರಿಂದ ತಿಳಿಯಬೇಕಾಗಿದೆ ಅದ್ದರಿಂದ ಗ್ರಾಮಸ್ಥರು ಪೋಲಿಸರ ಆಡಳಿತಕ್ಕೆ ಸಹಕರಿಸಿ ಎಂದು ಮನವಿ ಮಾಡಿಕೊಂಡರು.
ಶಾಂತಿ ಸಭೆಯಲ್ಲಿ ತಿಪಟೂರು ಡಿವೈಎಸ್ಪಿ ಡಾ.ಬೋರಲಿಂಗೇಗೌಡ, ಡಿವೈಎಸ್ಪಿ ಶಿವಣ್ಣ, ತಾ.ಪಂ.ಕಾರ್ಯನಿವರ್ಾಹಣಾಧಿಕಾರಿ ದಯಾನಂದ್, ಗ್ರಾ.ಪಂ.ಸದಸ್ಯ ತಿಮ್ಮೇಗೌಡ ಮುಂತಾದವರಿದ್ದರು.
ಸೊಂಡೇನಹಳ್ಳಿ ಘಟನೆಯ ಸ್ಥಳಕ್ಕೆ ಕೆ.ಪಿ.ಸಿ.ಸಿ. ಅಧ್ಯಕ್ಷರ ಭೇಟಿ
ತಪ್ಪಿತಸ್ಥರನ್ನು ಶೀಘ್ರ ಬಂಧಿಸುವಂತೆ ಒತ್ತಾಯ
ಚಿಕ್ಕನಾಯಕನಹಳ್ಳಿ,ಫೆ.21: ಕುಟುಂಬದಲ್ಲಿನ ಸದಸ್ಯರ ವೈಷಮ್ಯ ಇಡೀ ಕುಟುಂಬ ಬೆಂಕಿಗೆ ಆಹುತಿಯಾಗಿರುವುದು ದುರದೃಷ್ಟಕರ ಈ ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ತಕ್ಷಣವೇ ಬಂಧಿಸವಂತೆ ಸಕರ್ಾರವನ್ನು ಒತ್ತಾಯಿಸುತ್ತೇನೆ ಎಂದು ರಾಜ್ಯ ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಆಗ್ರಹಿಸಿದರು.ತಾಲೂಕಿನ ಸೊಂಡೇನಹಳ್ಳಿ ಯಾದವರ ಹಟ್ಟಿಯ ಬೆಂಕಿಗೆ ಆಹುತಿಯಾಗಿರುವ ತೋಟದ ಮನೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಂತರ ಪತ್ರಕರ್ತರ ಜೊತೆ ಮಾತನಾಡಿದರು.
ಈ ದುರ್ಘಟನೆಯಿಂದ ಇಡೀ ಕುಟುಂಬ ಬೆಂಕಿಯಲ್ಲಿ ಬೆಂದಿದ್ದು, ಉಳಿದ ಹೆಣ್ಣು ಮಕ್ಕಳಿಗೆ ಮಾನವೀಯ ದೃಷ್ಠಿಯಲ್ಲಾದರೂ ಸಕರ್ಾರ ಪರಿಹಾರ ನೀಡಬೇಕೆಂದರು.
ಈ ಕುಟುಂಬದ ಸಾವಿಗೆ ಕಾರಣನಾಗಿರಬಹುದೆಂದು ಊಹಿಸಲಾಗಿರುವ ಮೃತ ಕೃಷ್ಣಯ್ಯನ ಸಂಬಂಧಿ ಹಾಗೂ ಅವನ ಸಹಚರರನ್ನು ಶೀಘ್ರ ಬಂಧಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದು, ಈ ವಿಷಯವಾಗಿ ಪೊಲೀಸ್ ಇಲಾಖೆಯೂ ಎಚ್ಚರವಾಗಿದೆ ಎಂದರಲ್ಲದೆ, ಎಸ್.ಪಿ.ಯವರ ನೇತೃತ್ವದಲ್ಲಿ ರಚನೆಯಾಗಿರುವ ತಂಡಗಳು ಕಾರ್ಯ ಪ್ರವೃತ್ತವಾಗಿವೆ ಎಂದರಲ್ಲದೆ, ತನಿಖೆಯನ್ನು ಚುರುಕುಗೊಳಿಸಲು ಸಕರ್ಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
ಜಮೀನು ವಿಷಯಕ್ಕಾಗಿ ಉಂಟಾಗುತ್ತಿರುವ ಗೊಂದಲಗಳು ಪ್ರಾಣ ಹತ್ಯೆಯಂತಹ ಅಮಾನವೀಯ ಹಂತವನ್ನು ತಲುಪುತ್ತಿರುವುದರ ಹಿನ್ನೆಲೆಯಲ್ಲಿ ಲೋಕ ಅದಾಲತ್, ತಹಶೀಲ್ದಾರ್ರವರ ನೇತೃತ್ವದಲ್ಲಿ ರಚನೆಯಾಗಿರುವ ಪಂಚಾಯ್ತಿಗಳು ರಾಜಿ ಸಂಧಾನದ ಮೂಲಕ ನಡೆಯುವಂತಹ ಜಮೀನು ವಿವಾದದ ಕಾನೂನು ಪ್ರಕ್ರಿಯೆಗಳು ಶೀಘ್ರ ಇತ್ಯಾರ್ಥ ಮಾಡುವ ಮೂಲಕ ಜನರು ಶಾಂತಿ ಮತ್ತು ನೆಮ್ಮದಿಯಿಂದ ಬಾಳುವಂತಾಗಬೇಕೆಂದರು.
ರಾಜ್ಯದಲ್ಲಿರುವ ಜಮೀನು ವಿವಾದಗಳ ಬಗ್ಗೆ ಪೊಲೀಸರು ಹೆಚ್ಚು ಜಾಗೃತರಾಗಿರಬೇಕೆಂದರು.
ವಿಧಾನ ಸಭೆಯ ವಿರೋಧ ಪಕ್ಷದ ಉಪ ನಾಯಕ ಟಿ.ಬಿ.ಜಯಚಂದ್ರ ಮಾತನಾಡಿ, ಹೆಣ್ಣು, ಹೊನ್ನು, ಮಣ್ಣು, ಈ ಮೂರು ವಿಷಯಗಳಿಗೆ ಏಳುತ್ತಿರುವ ಗಲಾಟೆಗಳು ಹೆಚ್ಚುತ್ತಿವೆ ಎಂದರಲ್ಲದೆ, ಅದರಲ್ಲೂ ಜಮೀನು ವಿವಾದಗಳು ಇತ್ತೀಚೆಗೆ ಕೊಲೆಯ ಹಂತ ತಲುಪುತ್ತಿರುವುದಕ್ಕೆ ನ್ಯಾಯ ನಿರ್ಣಯಗಳಲ್ಲಿ ಆಗುತ್ತಿರುವ ವಿಳಂಬ ಕಾರಣ, ಇದನ್ನು ತಪ್ಪಿಸಲು ಸಕರ್ಾರ ಚಿಂತನೆ ನಡೆಸಬೇಕೆಂದರು.
ಮೃತ ಕೃಷ್ಣಯ್ಯನ ಕುಟುಂಬದಲ್ಲಿ ಉಳಿದಿರುವ ಮಕ್ಕಳಿಗೆ ಮಾನವೀಯ ನೆಲೆಯಲ್ಲಿ ಪರಿಹಾರ ನೀಡಬೇಕೆಂದರು.
ಸ್ಥಳದಲ್ಲಿದ್ದ ಡಿ.ಸಿ.ಸಿ.ಬ್ಯಾಂಕ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಮಾತನಾಡಿ, ಜಿಲ್ಲೆಯಲ್ಲಿ ಜಮೀನು ವಿವಾದಗಳು ಅತಿಯಾಗುತ್ತಿವೆ, ಜಿಲ್ಲೆಯ ಸಿಂಗೋನಹಳ್ಳಿಯಲ್ಲಿ ಜಮೀನು ವಿವಾದಕ್ಕಾಗಿ ನಡೆದ ಕೊಲೆಯ ಘಟನೆಯ ನಂತರದಲ್ಲಿ ಸೊಂಡೇನಹಳ್ಳಿ ಘಟನೆ ಜನರನ್ನು ಭೀತಿಗೊಳಿಸಿದೆ. ಆಮೀನು ಕಾನೂನಿನಲ್ಲಿ ಆಗುತ್ತಿರುವ ತೊಡಕುಗಳನ್ನು ತಪ್ಪಿಸಲು ಅಧಿಕಾರಿಗಳು ಸೇರಿದಂತೆ ಎಲ್ಲರೂ ಸಹಕಾರಯುತವಾಗಿ ವತರ್ಿಸಬೇಕೆಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಬಿ.ಲಕ್ಕಪ್ಪ, ಕೆ.ಪಿ.ಸಿ.ಸಿ.ಸದಸ್ಯ ಸೀಮೆಣ್ಣೆ ಕೃಷ್ಣಯ್ಯ, ನಗರ ಘಟಕದ ಅಧ್ಯಕ್ಷ ಕೆ.ಜಿ.ಕೃಷ್ಣೇಗೌಡ, ಡಿ.ಸಿ.ಸಿ.ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್, ಟಿ.ಎ.ಪಿ.ಸಿ.ಎಂ.ಎಸ್. ಅಧ್ಯಕ್ಷ ಕೊಡಲಾಗರ ಲೋಕೇಶ್, ರಾಮನಹಳ್ಳಿ ವಿ.ಎಸ್.ಎಸ್.ಎನ್. ಅಧ್ಯಕ್ಷ ಕೇಶವಮೂತರ್ಿ ಉಪಸ್ಥಿತರಿದ್ದರು.
No comments:
Post a Comment