Friday, March 11, 2011



ಚಿಂತನ 3-ಡಿ ಚಿತ್ರ ರಚನಾ ಸ್ಪಧರ್ೆಯಲ್ಲಿ ವಿಜೇತರು
ಚಿಕ್ಕನಾಯಕನಹಳ್ಳಿ,ಮಾ.11: ತಾಲೂಕಿನ ಶೆಟ್ಟಿಕೆರೆ ಸಕರ್ಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ವಿದ್ಯಾಥರ್ಿಗಳು ಚಿಂತನ 3-ಡಿ ಚಿತ್ರರಚನಾ ಸ್ಫದರ್ೆಯಲ್ಲಿ ಭಾಗವಹಿಸಿ ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ರ್ಯಾಂಕ್ ಪಡೆದಿದ್ದಾರೆ.
5ನೇ ತರಗತಿಯ ಲೋಕೇಶ್ ಎಸ್. ಬಿಂದುಕುಮಾರಿ, ಸಿಂಧು ಬಿ.ಎಸ್ ಈ ವಿದ್ಯಾಥರ್ಿಗಳನ್ನು ಕ್ಷೇತ್ರಶಿಕ್ಷಣಾಧಿಕಾರಿ ಸಾ.ಚಿ.ನಾಗೇಶ್, ಮಾರ್ಗದಶರ್ಿ ಶಿಕ್ಷಕ ಹೆಚ್. ಜಿ. ಜಗದೀಶ್, ಸಹಶಿಕ್ಷಕರು ಮತ್ತು ಎಸ್.ಡಿ.ಎಮ್.ಸಿ. ಹಾಗೂ ಗ್ರಾಮಪಂಚಾಯ್ತಿ ಸಮಿತಿ ಸದಸ್ಯರು ಅಭಿನಂದಿಸಿದ್ದಾರೆ.
ತಾಲೂಕಿಗೆ ಹೇಮೆ ಹರಿಸಲು ಭಾಜಪ ಒತ್ತಾಯ
ಚಿಕ್ಕನಾಯಕನಹಳ್ಳಿ,ಮಾ.11: ಕೃಷಿ ಪ್ರಧಾನ ಬದುಕನ್ನು ಅವಲಂಬಿಸಿರುವ ಈ ತಾಲೂಕಿಗೆ ಬೇಸಿಗೆ ಹತ್ತಿರವಾದಂತೆ ಜನ, ಜಾನುವಾರಿಗೂ ಕುಡಿಯಲು ನೀರಿಲ್ಲದ ಸ್ಥಿತಿ ನಿಮರ್ಾಣವಾಗಿದ್ದು, ತಾಲೂಕಿನ ನೀರಿನ ಸಮಸ್ಯೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪನವರು ಬಗೆಹರಿಸಬೇಕೆಂದು ತಾ.ಭಾಜಪಾ ಕಾರ್ಯದಶರ್ಿ ಸುರೇಶ್ ಹಳೇಮನೆ ಒತ್ತಾಯಿಸಿದ್ದಾರೆ.
ಶೆಟ್ಟಿಕೆರೆ ಮಾರ್ಗವಾಗಿ ಬೋರನಕಣಿವೆಗೆ ಹಾಗೂ ರಜತಾದ್ರಿಪುರ ಮೂಲಕ ಚಿಕ್ಕನಾಯಕನಹಳ್ಳಿ ನಂತರ ಬೋರನಕಣಿವೆಗೆ ಹೇಮಾವತಿಯ ನೀರನ್ನು ಗುರುತ್ವಾಕರ್ಷಣೆಯ ಮೂಲಕ ಹರಿಸಲು ಸಾಧ್ಯವಿದ್ದು ಜೀವನಾವಶ್ಯಕವಾದ ಕುಡಿಯುವ ನೀರನ್ನು ಜನ ಜಾನುವಾರುಗಳಿಗಾಗಿ ನೀಡಲು ಮುಂದಾಗಬೇಕೆಂದು ಭಾಜಪಾ ಕಾರ್ಯಕರ್ತರು ಪತ್ರಿಕಾ ಪ್ರಕಟಣೆಯ ಮೂಲಕ ಒತ್ತಾಯಿಸಿದ್ದಾರೆ.
ಯುವ ಕಾಂಗ್ರೆಸ್ಗೆ ಹೆಚ್ಚುತ್ತಿರುವ ಸದಸ್ಯತ್ವ: ಸಂತೋಷ ಜಯಚಂದ್ರ
ಚಿಕ್ಕನಾಯಕನಹಳ್ಳಿ,ಮಾ.11: ತಾಲೂಕಿನ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿತ್ತಿದ್ದಾರೆ, ಕಾಂಗ್ರೆಸ್ ಪಕ್ಷವು ಯುವಕರನ್ನು ತನ್ನತ್ತ ಸೆಳೆಯುವಲ್ಲಿ ಸಫಲವಾಗುತ್ತಿದೆ ಎಂದು ಸಂತೋಷ ಜಯಚಂದ್ರ ತಿಳಿಸಿದರು.
ಈ ಕ್ಷೇತ್ರದ ಕಂದಿಕೆರೆ, ತಿಮ್ಮನಹಳ್ಳಿ, ಬುಕ್ಕಾಪಟ್ಣ ಭಾಗದ ಭೂತ್ ಮಟ್ಟದ ಪ್ರವಾಸ ಮುಗಿಸಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಪ್ರತಿ ಭೂತ್ನಲ್ಲಿ ಕನಿಷ್ಟ 25 ಜನರಂತೆ ಸದಸ್ಯತ್ವವನ್ನು ನೊಂದಿಯಿಸಿಕೊಂಡಿದ್ದು, ಈಗಾಗಲೇ 1400 ಯುವಕರು ತಮ್ಮ ಹೆಸರನ್ನು ಪಕ್ಷದಲ್ಲಿ ನೊಂದಿಯಿಸಿಕೊಂಡಿದ್ದಾರೆ. ಇವರೆಲ್ಲಾ ನಿಷ್ಠಾವಂತ ಕಾರ್ಯಕರ್ತರಾಗಿ ದುಡಿಯುವುದಾಗಿ ತಿಳಿಸಿದ್ದಾರೆ. ನಾವು ಸದಸ್ಯತ್ವವನ್ನು ನೀಡುವಾಗ ಎಚ್ಚರಿಕೆಯಿಂದ ನೀಡುತ್ತಿದ್ದೇವೆ. ಪಕ್ಷಕ್ಕೆ ನಿಷ್ಠರಾಗಿ ದುಡಿಯುವಂತಹವರಿಗೆ ಮಾತ್ರ ಅವಕಾಶ ಕಲ್ಪಿಸಿದ್ದೇವೆ ಎಂದರು.
ಕ್ಷೇತ್ರದಲ್ಲಿ 20 ದಿನಗಳ ಪ್ರವಾಸವನ್ನು ಹಮ್ಮಿಕೊಂಡಿದ್ದು, ಈ ಅವಧಿಯಲ್ಲಿ 100 ಮತಕೇಂದ್ರಗಳಲ್ಲಿನ ಯುವಕರನ್ನು ನೊಂದಾಯಿಸಿಕೊಳ್ಳುವ ಜೊತೆಗೆ, ಗ್ರಾಮೀಣ ಭಾಗದ ಹಿರಿಯ ಮುಖಂಡರಗಳನ್ನು ಭೇಟಿ ಮಾಡಿ ಅವರೊಂದಿಗೆ ಪಕ್ಷ ಕಟ್ಟುವ ನಿಟ್ಟಿನಲ್ಲಿ ಅನುಸರಿಸಬೇಕಾಗಿರುವ ಕ್ರಮಗಳ ಬಗ್ಗೆ ಚಚರ್ಿಸುತ್ತಿದ್ದೇವೆ ಎಂದರು.
ಶೆಟ್ಟೀಕೆರೆ, ಹಂದನಕೆರೆ ಭಾಗಗಳಿಗೆ ವಿಧಾನ ಸಭೆಯ ಉಪನಾಯಕ ಟಿ.ಬಿ.ಜಯಚಂದ್ರ ಪ್ರವಾಸ ಕೈಗೊಳ್ಳಲಿದ್ದು, ಅವರೊಂದಿಗೆ ನಾವೆಲ್ಲಾ ಕೈ ಜೋಡಿಸಲಿದ್ದೇವೆ ಎಂದರು.
ಈ ಭಾಗದ 200 ಭೂತ್ಗಳ ಪೈಕಿ 100 ಭೂತ್ಗಳಿಗೆ ನಮ್ಮ ತಂಡದೊಂದಿಗೆ ಆಯಾ ಭಾಗದ ಮುಖಂಡರು ಪ್ರವಾಸದಲ್ಲಿ ಭಾಗವಹಿಸುತ್ತಿದ್ದಾರೆ. ಉಳಿದ ಭೂತ್ಗಳಿಗೆ ನಮ್ಮ ಪಕ್ಷದ ಹಿರಿಯ ನಾಯಕರೊಂದಿಗೆ ಪ್ರವಾಸ ಕೈಗೊಳ್ಳಲಾಗುವುದು ಎಂದು ಸಂತೋಷ್ ಜಯಚಂದ್ರ ತಿಳಿಸಿದರು.


No comments:

Post a Comment