Tuesday, March 8, 2011

ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಸಲಹೆ: ಅನಿತಾಕುಮಾರಸ್ವಾಮಿ
ಚಿಕ್ಕನಾಯಕನಹಳ್ಳಿ,ಮಾ.08: ಹೆಣ್ಣು ಹುಟ್ಟಿದಾಗ ತಾತ್ಸರ ಮಾಡದೆ ಉತ್ತಮ ಶಿಕ್ಷಣ ನೀಡಿ ಉತ್ತಮ ಪ್ರಜೆಯನ್ನಾಗಿ ಮಾಡಬೇಕು ಎಂದು ಶಾಸಕಿ ಅನಿತಾಕುಮಾರಸ್ವಾಮಿ ಸಲಹೆ ನೀಡಿದರು.
ಪಟ್ಟಣದ ಸಕರ್ಾರಿ ಪ್ರೌಡಶಾಲಾ ಆವರಣದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಹೆಣ್ಣು ಮಕ್ಕಳಿಗೆ ಮಡಿಲು(ಸೀಮಂತ) ತುಂಬುವ ಕಾರ್ಯಕ್ರಮದ ಅಂಗವಾಗಿ ಮಹಿಳೆಯರಿಗೆ ವಿವಿಧ ಸವಲತ್ತುಗಳನ್ನು ವಿತರಣೆ ಮಾಡಿ ಮಾತನಾಡಿದ ಅವರು ಪ್ರತಿ ಕುಟುಂಬದಲ್ಲಿ ಹುಟ್ಟಿದ ಹೆಣ್ಣು ಮಗು ಎಣ್ಣೆ ಕಲಿತರೆ ಸ್ವಾವಲಂಬಿಯಾಗಿ ಆಥರ್ಿಕವಾಗಿ ಸಬಲರಾಗಿ ಜೀವನ ನಡೆಸಲು ಸಾಧ್ಯ ಸಕರ್ಾರ ಸ್ತ್ರೀಯರಿಗೆ ನೀಡುವ ಸವಲತ್ತುಗಳನ್ನು ಉಪಯೋಗಿಸಿಕೊಂಡು ಆಥರ್ಿಕ ಸ್ವಾವಲಂಬಿಗಳಾಗಿ ಅಂತರಾಷ್ಟ್ರೀ ಮಹಿಳಾ ದಿನಾಚರಣೆ ನಡೆಸುತ್ತಿರುವುದು ಪುರುಷರ ವಿರುದ್ದವಲ್ಲ ಎಂದರು. ನಗರಗಳಲ್ಲಿ ನಡೆಯುತ್ತಿರುವ ಸಿದ್ದ ಉಡುಪು ಕಾಖರ್ಾನೆಗಳಲ್ಲಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆದರೂ ಇದು ಬಯಲಿಗೆ ಬರುತ್ತಿಲ್ಲ ಕಾರಣ ನಮ್ಮನ್ನು ಕೆಲಸದಿಂದ ಎಲ್ಲಿ ತಗೆಯುತ್ತಾರೋ ಎಂಬ ಭಯ, ಗ್ರಾಮೀಣ ಪ್ರದೇಶದಲ್ಲೂ ಹಾಗೂ ನಗರಗಳಲ್ಲೂ ಮಹಿಳೆಯರ ಮೇಲೆ ಹೆಚ್ಚಿನ ಲೈಂಗಿಕ ದೌರ್ಜನ್ಯ ನಡೆದರೂ ಯಾರೂ ಪೋಲಿಸರಿಗೆ ದೂರು ನೀಡುತ್ತಿಲ್ಲ ಎಲ್ಲಿ ಮಾನ ಹೋಗುತ್ತದೋ ಎಂಬ ಭಯದಿಂದ ಎಂದರು.
ಸ್ತ್ರೀರೋಗ ತಜ್ಞರಾದ ಡಾ.ಪದ್ಮಿನಿ ಪ್ರಸಾದ್ ಮಾತನಾಡಿ ಗಬರ್ಿಣಿ ಸ್ತ್ರೀಯರು ತಮ್ಮ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು, ಸಮಾಜದಲ್ಲಿ ಹೆಣ್ಣುಮಕ್ಕಳ ಬಗ್ಗೆ ತಾರತಮ್ಯವಿದ್ದು ಇದನ್ನು ಹೋಗಲಾಡಿಸಲು ಎಲ್ಲರೂ ಶ್ರಮಿಸಬೇಕಾಗಿದೆ ಬ್ರೂಣ ಹತ್ಯೆ ಮಾಡದೆ ಯಾವುದೇ ಮಗುವಾದರೂ ತಂದೆ ತಾಯಿ ಸಮಾನವಾಗಿ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ಹೆಣ್ಣು ಮಕ್ಕಳಿಗೆ ಯಾವುದೇ ತರಹದ ಸಮಸ್ಯೆ ಬಂದಲ್ಲಿ ನಿವಾರಣೆ ಮಾಡುವುದು ಜನ ಪ್ರತಿನಿಧಿಗಳಿಗೆ ಕರ್ತವ್ಯ ಗಭರ್ಿಣಿ ಸ್ತ್ರೀಯರು ಹಾಗೂ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆಗೆ ಉಚಿತ ವೈದ್ಯಕೀಯ ಶಿಬಿರವನ್ನು ಹಮ್ಮಿಕೊಳ್ಳಲಾಗುವುದು, 1800 ಗಭರ್ಿಣಿ ಸ್ತ್ರೀಯರಿಗೆ ಮಡಿಲು ತುಂಬುವ ಕಾರ್ಯಕ್ರಮ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ತಾ.ಪಂ.ಅಧ್ಯಕ್ಷ ಸೀತಾರಾಮಯ್ಯ, ಉಪಾಧ್ಯಕ್ಷೆ ಬಿ.ಬಿ.ಫಾತೀಮ, ಜಿ.ಪಂ.ಸದಸ್ಯೆ ಮಂಜುಳ ಗವಿರಂಗಯ್ಯ, ಪುರಸಭಾ ಉಪಾಧ್ಯಕ್ಷೆ ಕವಿತಾಚನ್ನಬಸವಯ್ಯ ಉಪಸ್ಥಿತರಿದ್ದರು.

ಜೆ.ಸಿ.ಎಂ ಮೇಲೆ ಅವಹೇಳನಕಾರಿ ಮಾತಿಗೆ ಅಭಿಮಾನಿ ಬಳಗ ಖಂಡನೆ
ಚಿಕ್ಕನಾಯಕನಹಳ್ಳಿ,ಮಾ.08: ಹುಳಿಯಾರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಹಲ್ಲೆ ನಡೆದಿರುವ ಘಟನೆಗೆ ಭಾಗಿಯಾಗದ ಜಯಣ್ಣನನ್ನು ಬಂಧಿಸಿರುವುದಕ್ಕೆ ವಿರೋಧಿಸುತ್ತೇವೆ ಹೊರತು ನಿಜವಾದ ಆರೋಪಿಗಳನ್ನು ಬೆಂಬಲಿಸುವುದಿಲ್ಲ, ಈ ಘಟನೆಗೆ ದಲಿತರಿಗೆ ಅವಮಾನವಾಗುವಂತೆ ಅವಹೇಳನಕಾರಿಯಾದ ಯಾವುದೇ ಮಾತನ್ನು ಮಾಜಿ ಶಾಸಕರು ಆಡಿರುವುದಿಲ್ಲ ಎಂದು ಮಾಜಿ ಶಾಸಕರ ಅಭಿಮಾನ ಬಳಗ ಹೇಳಿಕೆ ನೀಡಿದ್ದಾರೆ.
ಪಟ್ಟಣದ ಹಳೆಯ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಕೆಲ ದಲಿತ ಮುಖಂಡರು ಈ ಘಟನೆಗೆ ಸಂಬಂಧಿಸಿದಂತೆ ಜೆ.ಸಿ.ಮಾಧುಸ್ವಾಮಿಯರವರ ವಿರುದ್ದ ರಾಜಕೀಯ ಪಿತೂರಿ ಹೇಳಿಕೆ ನೀಡಿ ಅವರನ್ನು ಬಂಧಿಸಿ ಗಡಿಪಾರು ಮಾಡಿ ಎಂಬ ಹೇಳಿಕೆ ನೀಡಿರುವುದನ್ನು ಜಿಲ್ಲಾ ಡಿ.ಸಿ.ಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್, ತಾ.ಪಂ.ಸದಸ್ಯರಾದ ಶಶಧರ್, ನಿರಂಜನಾಮೂತರ್ಿ ಖಂಡಿಸಿದ್ದಾರೆ.
ಹುಳಿಯಾರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಹಲ್ಲೆ ಮಾಡಿದ್ದಾರೆಂದು 5ಜನರ ಮೇಲೆ ಕೇಸು ದಾಖಲಾಗಿದ್ದು, ಈ ಘಟನೆಗೆ ಯಾವುದೇ ಪ್ರೇರಣೆ ನೀಡಿಲ್ಲದಿದ್ದರೂ ತಿಮ್ಲಾಪುರ ತಾಲೂಕು ಪಂಚಾಯ್ತಿ ಸದಸ್ಯ ಜಯಣ್ಣನವರ ಬಂಧಿಸಿದ್ದನ್ನು ಗ್ರಾಮಸ್ಥರು, ಮತ್ತು ಜೆ.ಡಿ.ಯು ಪಕ್ಷದ ಕಾರ್ಯಕರ್ತರು ಬಂಧಿಸಿರುವುದಕ್ಕೆ ವಿರೋಧಿಸಿ ಪ್ರತಿಭಟಿಸಿದಾಗ ಪೋಲಿಸ್ ಇಲಾಖೆಯವರು ಜಯಣ್ಣನವರನ್ನು ಬಿಡುಗಡೆಗೊಳಿಸಿದರು ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಮಾಜಿ ಶಾಸಕರಾದ ಜೆ.ಸಿ.ಮಾಧುಸ್ವಾಮಿಯವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವಾಗ ದಲಿತರಿಗೆ ಅವಮಾನವಾಗುವಂತೆ ಅವಹೇಳನಕಾರಿಯಾದ ಯಾವುದೇ ಮಾತನ್ನು ಆಡಿರುವುದಿಲ್ಲ, ತಾಲೂಕು ಕ್ಷೇತ್ರದಲ್ಲಿ ಮೂರು ಬಾರಿ ಶಾಸಕರಾಗಿ ಅನೇಕ ದಲಿತ ಪರ ಕೆಲಸಗಳನ್ನು ಮಾಡಿರುವ ಇಂತಹವರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ ರಾಜಕೀಯ ಪಿತೂರಿ ಮಾಡುವುದನ್ನು ಖಂಡಿಸುತ್ತೇವೆ ಎಂದರು.
ಗೋಷ್ಠಿಯಲ್ಲಿ ಜೆ.ಸಿ.ಪುರ ಗ್ರಾ.ಪಂ.ಉಪಾಧ್ಯಕ್ಷ ಕೆ.ಆರ್.ಶಿವಾನಂದ, ಡಿ.ಎಸ್.ಎಸ್ ಮುಖಂಡ ಆರ್.ಗೋವಿಂದಯ್ಯ, ಗ್ರಾ.ಪಂ.ಸದಸ್ಯೆ ಬಿ.ಎನ್.ಶಶಿಕಲಾ, ದಲಿತ ಮುಖಂಡರಾದ ಬಾಲಾಜಿ, ಶ್ರೀರಂಗಯ್ಯ, ರಂಗಸ್ವಾಮಿ, ವಿಶ್ವನಾಥ್, ಎ.ಪಿ.ಎಂ.ಸಿ ನಿದರ್ೇಶಕ ಮಲ್ಲಿಗೆರೆ ರಾಜಶೇಖರ್, ಜಿ.ಎಸ್.ಬಸವರಾಜು, ಶಿವಣ್ಣ ಉಪಸ್ಥಿತರಿದ್ದರು.
ಆಕಸ್ಮಿಕ ಬೆಂಕಿ: 4ಲಕ್ಷ ರೂ ನಷ್ಠ

ಚಿಕ್ಕನಾಯಕನಹಳ್ಳಿ,ಮಾ.08: ತಾಲೂಕಿನ ಕಸಬಾ ಹೋಬಳಿ ಸಾವೆಶೆಟ್ಟಿ ಹಳ್ಳಿ ಬೆಳೆ ತೆಂಗಿನ ತೋಟಕ್ಕೆ ಆಕಸ್ಮಿಕ ಬೆಂಕಿ ತಗುಲಿ ಒಬ್ಬ ಸಾವನ್ನಪ್ಪಿದ್ದಾರೆೆ.
ದೇವರಾಜು ಎಂಬುವರ ತೋಟಕ್ಕೆ ಆಕಸ್ಮಿಕ ಬೆಂಕಿ ಬಿದ್ದ ಪರಿಣಾಮ 80ಗಿಡ ತೆಂಗು, 30ಅಡಿಕೆ, 30 ಮಾವು, ಸಪೋಟ, ಹಲಸಿನಗಿಡ ಹಾಗೂ ತೆಂಗಿಗೆ ಅಳವಡಿಸಿದ್ದ ಡ್ರಿಪ್ಪೈಪ್ಲೈನ್, ಪಿವಿಸಿ ಪೈಪ್ಗಳು ಸೇರಿ 4ಲಕ್ಷಕ್ಕೂ ಹೆಚ್ಚು ನಷ್ಠವುಂಟಾಗಿದೆ, ಮೃತ ರಾಮಯ್ಯ(65) ಬೆಂಕಿ ಹೊಗೆಗೆ ಆಚೆ ಬರಲಾಗದೆ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

No comments:

Post a Comment