Saturday, March 5, 2011

ಬಿಡುಗಡೆಗೊಳಿಸಿರುವವರನ್ನು ಶೀಘ್ರ ಬಂಧಿಸಲು ಒತ್ತಾಯ: ದಸಂಸ
ಚಿಕ್ಕನಾಯಕನಹಳ್ಳಿ,ಮಾ.05: ಹುಳಿಯಾರು ಪೋಲಿಸ್ ಠಾಣಾ ವ್ಯಾಪ್ತಿಯ ಹೊಸಹಳ್ಳಿಯ ದಲಿತ ಮುಖಂಡ ಹನುಮಂತಯ್ಯ ಮತ್ತು ನರಸಿಂಹಯ್ಯನವರ ಮೇಲೆ ಇತ್ತೀಚಿಗೆ ಸವಣರ್ಿಯರಿಂದ ದೌರ್ಜನ್ಯ ನಡೆದಿರುವುದು ನಾಗರೀಕ ಸಮಾಜ ತಲೆ ತಗ್ಗಿಸುವಂತಹದು ಈ ರೀತಿಯ ಕೃತ್ಯಗಳ ಹುಳಿಯಾರು ಸುತ್ತ ಮುತ್ತ ನಡೆಯುತ್ತಿದ್ದು ಇದರಿಂದ ದಲಿತರಲ್ಲಿ ಕಳವಳ ಉಂಟಾಗಿದೆ ಎಂದು ತಾಲೂಕು ದಸಂಸ ಸಂಘನಾ ಸಂಚಾಲಕ ಪಿ.ಕೃಷ್ಣಮೂತರ್ಿ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ಈ ಸಂಭಂಧವಾಗಿ ಪೋಲಿಸರು ತನಿಖೆ ಮಾಡುತ್ತಿದ್ದು ಮೂರು ಜನ ಆರೋಪಿಗಳ ವಿರುದ್ದ ಎಫ್.ಐ.ಆರ್ ಹಾಕಿ ಬಂದಿಸಿದ್ದು ಉಳಿದ ಆರೋಪಿಗಳ ಶೋಧನೆಯಲ್ಲಿರುವಾಗಲೇ ಏಕಾ ಏಕೀ ಮಾಜಿ ಶಾಸಕರೊಬ್ಬರು ತಮ್ಮ ಅನುಯಾಯಿಗಳೊಂದಿಗೆ ಪೋಲಿಸ್ ಠಾಣೆ ಮುಂದೆ ಧರಣಿ ಮಾಡಿ ಮುಖ್ಯ ಆರೋಪಿಯಾದ ತಾಲ್ಲೂಕು ಪಂಚಾಯ್ತಿ ಸದಸ್ಯ ಜಯಣ್ಣ ಎಂಬುವರನ್ನು ಬಂಧ ಮುಕ್ತಗೊಳಿಸಿರುವುದು ದೇಶದ ಸಂವಿಧಾನಕ್ಕೆ ಅಪಮಾನ ಮಾಡಿದಂತಾಗಿದೆ, ಪೋಲಿಸರು ಈ ಧರಣಿಗೆ ಹೆದರಿ ರಾಜಕೀಯ ಮುಖಂಡರಿಗೆ ಆರೋಪಿಯನ್ನು ಬಿಡುಗಡೆಗೊಳಿಸಿರುವುದು ದಲಿತರಲ್ಲಿ ಭಯ ಹುಟ್ಟಿಸಿದೆ, ಪೋಲಿಸರು ಈ ರೀತಿ ಮಾಡಿದಲ್ಲಿ ನ್ಯಾಯಾಲಯ ಮತ್ತು ಜೈಲು, ಕಾನೂನಿನ ಗತಿಯೇನು ಎಂದು ಪ್ರಶ್ನಿಸಿರುವ ಅವರು ಮಾಜಿ ಶಾಸಕರಿಂದ ಈ ರೀತಿ ಆಗಿರಬೇಕಾದರೆ ದಲಿತ ಸಮುದಾಯಗಳ ರಕ್ಷಣೆ ಎಲ್ಲಿದೆ, ಸಕರ್ಾರ ಈ ಕೂಡಲೇ ಕಾನೂನು ರೀತ್ಯಾ ಕಠಿಣ ಕ್ರಮ ತೆಗೆದುಕೊಂಡು ಬಂಧ ಮುಕ್ತಗೊಂಡಿರುವ ಆರೋಪಿಯನ್ನು ತಕ್ಷಣ ಬಂಧಿಸಿ ಇನ್ನಿತರ ಆರೋಪಿಗಳನ್ನು ಬಂಧಿಸಬೇಕು ಇಲ್ಲವಾದಲ್ಲಿ ದಸಂಸ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ನಾರಾಯಣ್, ಕೆಂಚಪ್ಪ ತಿಳಿಸಿದ್ದಾರೆ.


No comments:

Post a Comment