Tuesday, May 10, 2011

ದಲಿತ ರಂಗಯ್ಯನನ್ನು ಕೊಲೆಮಾಡಿರುವವರನ್ನು ಕೂಡಲೇ ಬಂಧಿಸಿ ಹುಳಿಯಾರ್ ಎಸ್.ಐ.ರವರನ್ನು ಅಮಾನತ್ತು ಪಡಿಸಿ ರಂಗಯ್ಯನ ಕುಟುಂಬಕ್ಕೆ ಐದು ಲಕ್ಷ ರೂ ಪರಿಹಾರಕ್ಕೆ ಒತ್ತಾಯಚಿಕ್ಕನಾಯಕನಹಲ್ಲಿ,

ಮೇ.11: ಕಲ್ಲಹಳ್ಳಿ ದಲಿತ ರಂಗಯ್ಯನನ್ನು ಅಮಾನುಷವಾಗಿ ಕೊಲೆ ಮಾಡಿರುವ ಎಲ್ಲಾ ಆರೋಪಿಗಳನ್ನು ಕೂಡಲೇ ಬಂಧಿಸಬೇಕು, ಎಫ್.ಐ.ಆರ್.ನಲ್ಲಿ ಕಠಿಣವಾದ ಕಾಲಂಗಳನ್ನು ನಮೂದಿಸಬೇಕು, ಹುಳಿಯಾರು ಎಸ್.ಐ.ರವರನ್ನು ಅಮಾನತ್ತುಗೊಳಿಸಬೇಕು ಹಾಗೂ ಮೃತ ರಂಗಯ್ಯನ ಕುಟುಂಬಕ್ಕೆ 5ಲಕ್ಷ ರೂ ಪರಿಹಾರ ನೀಡಬೇಕೆಂದು ಮಾದಿಗ ದಂಡೋರ ಹೋರಾಟ ಸಮಿತಿಯ ರಾಜ್ಯ ಘಟಕದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ. ಹುಳಿಯಾರು ಹೋಬಳಿಯ ಕಲ್ಲಹಳ್ಳಿ ರಂಗಯ್ಯನನ್ನು ಗವಿರಂಗಯ್ಯ, ಅನಂತಯ್ಯ, ಯೋಗೀಶ್, ಶಿವಣ್ಣ, ನಿರುವಗಲ್ ಆಟೋ ಗುರು ಎಂಬುವರು ಔತಣಕೂಟಕ್ಕೆಂದು ಕರೆದುಕೊಂಡು ಹೋಗಿ ಅವನನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿರುವ ಬೇವಿನಹಳ್ಳಿ ಚನ್ನಬಸವಯ್ಯ, ಮೂರು ಕುಂಟೆ ಜಮೀನಿಗಾಗಿ ಒಂದು ಪ್ರಾಣವನ್ನೆ ತೆಗೆದಿರುವ ಆರೋಪಿಗಳನ್ನು ಕಠಿಣ ಕಾನೂನಿ ಅಡಿಯಲ್ಲಿ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ. ಈ ಹಿಂದೆ ದಲಿತ ಮಹಿಳೆ ಹೊನ್ನಮ್ಮನ ಹತ್ಯೆ ಪ್ರಕರಣದಲ್ಲಿ ಆರೋಪಿಗಳನ್ನು ಕಠಿಣ ಕಾನೂನಿನಡಿಯಲ್ಲಿ ಬಂಧಿಸದೇ, ಅವರಲ್ಲಿ ಬಹುತೇಕರು ಜೈಲಿನಿಂದ ಹೊರಬಂದಿರುವುದು ದಲಿತರ ಮೇಲಿನ ದೌರ್ಜನ್ಯಕ್ಕೆ ಕುಮ್ಮುಕ್ಕು ನೀಡಿದೆ ಎಂದಿರುವ ಚನ್ನಬಸವಯ್ಯ, ಈ ಪ್ರಕರಣದಲ್ಲಿ ಮತ್ತೇ ಇಂತಹದೇ ತಪ್ಪು ಮಾಡದೇ ರಂಗಯ್ಯನನ್ನು ಕೊಲೆ ಮಾಡಿರುವ ಆರೋಪಿಗಳಿಗೆ ಬಿಗಿಯಾದ ಕಾನೂನಿನಡಿಯಲ್ಲಿ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾದಿಗ ದಂಡೋರ ಸಮಿತಿಯ ರಾಜ್ಯ ಪ್ರಧಾನ ಕಾರ್ಯದಶರ್ಿ ಗೋಪಾಲಪುರ ಮಹದೇವ್, ಡಿ.ಕುಮಾರ್, ಈಚನೂರು ಮಹದೇವ್, ಜಿಲ್ಲಾ ಅಧ್ಯಕ್ಷ ಮಣಿವಿನ ಕುರಿಕೆ ಶಿವಕುಮಾರ್, ಸಿಂಗದಹಳ್ಳಿ ಗಿರಿಯಪ್ಪ, ಮಾರುಹೊಳೆ ನಾಗರತ್ನಮ್ಮ, ತಿಮ್ಮಯ್ಯ, ಹನುಮಯ್ಯ, ಹೊನ್ನೆಬಾಗಿ ಕೃಷ್ಣಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಜೆ.ಸಿ.ಪುರ ಗ್ರಾ.ಪಂ. ಪಿ.ಡಿ.ಓ. ಅಮಾನತ್ತುಚಿಕ್ಕನಾಯಕನಹಳ್ಳಿ,

ಮೇ.11: ತಾಲೂಕಿನ ಜೆ.ಸಿ.ಪುರ ಗ್ರಾ.ಪಂ.ಯ ಪಿ.ಡಿ.ಓ. ಸುಭಾಷ್ ಚಂದ್ರ ಅವರನ್ನು ಜಿ.ಪಂ. ಸಿ.ಇ.ಓ.ರವರು ಸೇವೆಯಿಂದ ಅಮಾನತ್ತು ಗೊಳಿಸಿದ್ದಾರೆ ಎಂದು ಇ.ಓ. ದಯಾನಂದ ತಿಳಿಸಿದ್ದಾರೆ. ಜೆ.ಸಿ.ಪುರ ಗ್ರಾ.ಪಂ.ವ್ಯಾಪ್ತಿಯ ಅಭಿವೃದ್ದಿ ಅಧಿಕಾರಿ ಸಾರ್ವಜನಿಕರೊಂದಿಗೆ ಬೇಜವಬ್ದಾರಿ ವರ್ತನೆ ಹಾಗೂ 3.5 ಲಕ್ಷ ರೂಗಳ ಕಾಮಗಾರಿ ಒಂದರ ಓಚರ್ ನಿರ್ವಹಣೆ ಹಾಗೂ ಕ್ಯಾಷ್ ಬುಕ್ ಬರೆದಿಲ್ಲದಿರುವುದು ಮೇಲ್ನೊಟಕ್ಕೆ ಕಂಡು ಬಂದಿದ್ದು ತನಿಖೆಯನ್ನು ಕಾಯ್ದಿರಿಸಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಜಿ.ಪಂ. ಸಿ.ಇ.ಓ. ಅಮಾನತ್ತು ಆದೇಶ ಹೊರಡಿಸಿದ್ದಾರೆ ಎಂದರು.
ರೇವಣ್ಣ ಮಠ ಶಾಲೆಯ 11ವಿದ್ಯಾಥರ್ಿಗಳು ವಸತಿ ಶಾಲೆಗೆ ಆಯ್ಕೆಚಿಕ್ಕನಾಯಕನಹಳ್ಳಿ,ಮೇ.10: ಪಟ್ಟಣದ ರೇವಣ್ಣ ಮಠ ಸಕರ್ಾರಿ ಹೆಚ್.ಪಿ.ಎಸ್ ಶಾಲೆಯ 11 ವಿದ್ಯಾಥರ್ಿಗಳು ಸಕರ್ಾರಿ ವಸತಿ ಶಾಲೆಗೆ ನಡೆದ ಪ್ರವೇಶ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದಾರೆ. ಈ ಶಾಲೆಯ ಸಿ.ಆರ್.ಸವಿತ 98 ಅಂಕ 4ನೇ ರ್ಯಾಂಕ್, ಸಿ.ಆರ್.ಚೈತನ್ಯ 95 ಅಂಕ 17ನೇ ರ್ಯಾಂಕ್, ಎ.ಎಚ್.ರೂಪ 90 ಅಂಕ 125ನೇ ರ್ಯಾಂಕ್, ಕೋಕಿಲ 90 ಅಂಕ126ನೇ ರ್ಯಾಂಕ್, ಸಿ.ಕೆ.ಭೂಮಿಕ 85 ಅಂಕ, ಸಿ.ಎನ್.ವೀಣಾ 85, ಹೆಚ್.ಎಂ.ದೇವರಾಜು 83, ಸಿ.ಎನ್.ಶ್ವೇತ 81, ಸಿ.ಆರ್.ಹೇಮಲತ 81, ಸಿ.ಪಿ.ಹಷರ್ಿತ 76, ಸಿ.ಡಿ.ಮಧು 75ಅಂಕ ಪಡೆದಿದ್ದು ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಸಿ.ಜಿ. ರೇವಣ್ಣ, ಮುಖ್ಯೋಪಾಧ್ಯಾಯನಿ ತಿಲೋತ್ತಮೆ, ಶಿಕ್ಷಕ ಬಸವರಾಜು ಸೇರಿದಂತೆ ಶಿಕ್ಷಕ ವೃಂದ ಮಕ್ಕಳನ್ನು ಅಭಿನಂದಿಸಿದ್ದಾರೆ.

No comments:

Post a Comment