Wednesday, May 11, 2011





ತಾಲೂಕು ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಲಿಂಗದೇವರು ಹಳೇಮನೆ
ಚಿಕ್ಕನಾಯಕನಹಳ್ಳಿ,ಮೇ.11: ತಾಲೂಕಿನ ನಾಲ್ಕನೇ ಸಾಹಿತ್ಯ ಸಮ್ಮೇಳನ ಜೂನ್ 10ರಂದು ಪಟ್ಟಣದಲ್ಲಿ ಹಮ್ಮಿಕೊಂಡಿದ್ದು, ಸಮ್ಮೇಳನಾಧ್ಯಕ್ಷರಾಗಿ ರಂಗಾಯಣ ನಿದರ್ೇಶಕ ಲಿಂಗದೇವರು ಹಳೇಮನೆಯವರನ್ನು ಆಯ್ಕೆ ಮಾಡಲಾಗಿದೆ ಎಂದು ತಾ..ಸಾ.. ಅಧ್ಯಕ್ಷ ಎಂ.ವಿ.ನಾಗರಾಜ್ ರಾವ್ ತಿಳಿಸಿದ್ದಾರೆ.
ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಹತ್ತಕ್ಕು ಹೆಚ್ಚು ಸಾಹಿತಿಗಳು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗುವ ಅರ್ಹತೆ ಇರುವ ಸಾಹಿತಿಗಳಿದ್ದು, ಇವರಲ್ಲಿ ಅಂತಿಮವಾಗಿ ಮೂವರ ಹೆಸರು ಪ್ರಬಲವಾಗಿ ಕೇಳಿಬಂದಿದ್ದು ನಮ್ಮ ಕಾರ್ಯಕಾರಿ ಸಮಿತಿ ಜಿಲ್ಲಾ .ಸಾ. ಅಧ್ಯಕ್ಷ ಪ್ರೊ.ಡಿ.ಚಂದ್ರಪ್ಪನವರ ನೇತೃತ್ವದಲ್ಲಿ ಸಭೆ ಸೇರಿ ಲಿಂಗದೇವರು ಹಳೇಮನೆಯವರನ್ನು ಒಮ್ಮತದಿಂದ ತೀಮರ್ಾನಿಸಲಾಯಿತು ಎಂದರು.
ಸಮ್ಮೇಳನವನ್ನು ಒಂದು ದಿನ ನಡೆಸಲು ತೀಮರ್ಾನಿಸಿದ್ದು, ಜೂನ್ 10 ಬೆಳಗ್ಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆಯೊಂದಿಗೆ ಆರಂಭಗೊಳ್ಳುವ ಸಮ್ಮೇಳನ, ಉದ್ಘಾಟನೆ, ವಿಶೇಷ ಉಪನ್ಯಾಸ, ವಿಚಾರ ಸಂಕಿರಣ, ಕವಿ ಗೋಷ್ಠಿ,ಸಾಂಸ್ಕೃತಿ ಕಾರ್ಯಕ್ರಮ ಹಾಗೂ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ತಾಲೂಕಿನಲ್ಲಿದ್ದು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವವರನ್ನು ಸನ್ಮಾನಿಸಲಾಗುವುದಲ್ಲದೆ, ತಾಲೂಕಿನ ಮೂಲದವರಾಗಿದ್ದು ಹೊರಭಾಗದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಪ್ರತಿಭಾವಂತರನ್ನು ಸನ್ಮಾನಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ತಾ. .ಸಾ.. ಕಾರ್ಯದಶರ್ಿ ಸಿ.ಗುರುಮೂತರ್ಿ ಕೊಟಿಗೆಮನೆ ಉಪಸ್ಥಿತರಿದ್ದರು.

ನೆಲಮೂಲದ ಸಂಸ್ಕೃತಿ ನೈಜವಾಗಿರುವುದು ರಂಗಭೂಮಿ, ಜಾನಪದ ಕಲೆಗಳಲ್ಲಿ ಮಾತ್ರ : ಎಸ್.ಜಿ.ಎಸ್
ಚಿಕ್ಕನಾಯಕನಹಳ್ಳಿ,ಮೇ.11: ನಮ್ಮ ನೆಲದ ಪುರಾಣ ಪರಂಪರೆಯನ್ನು ಉಳಿಸಿ ಬೆಳಸಿಕೊಳ್ಳುವುದು ಅಗತ್ಯವಾಗಿದ್ದು, ನೆಲಮೂಲ ಸಂಸ್ಕೃತಿಯನ್ನು ಉಳಿಸಬೇಕಾದರೆ ಬೇರು ಮೂಲದ ಕಲೆಗಳಾದ ರಂಗಭೂಮಿ ಮತ್ತು ಜಾನಪದ ಕಲೆಗಳನ್ನು ಬೆಳಸಬೇಕೆಂದು ಕವಿ, ವಿಮರ್ಶಕ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ನಮ್ಮ ಯುವ ಜನಾಂಗದಲ್ಲಿ ಪುರಾಣದ ತಿಳುವಳಿಕೆ ಕಡಿಮೆಯಾಗಿದೆ, ಪಠ್ಯಪುಸ್ತಕದಲ್ಲಿ ಪುರಾಣಗಳಿಗೆ ಸಂಬಂಧಿಸಿದ ಪಾತ್ರಗಳನ್ನು ಪರಚಯಿಸುವುದು ಅವಶ್ಯವಾಗಿದೆ ಎಂದರು. ದೃಶ್ಯಮಾಧ್ಯಮಗಳ ದಾಳಿಯ ಕಾಲದಲ್ಲೂ ಯಕ್ಷಗಾನ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡು ಪುರಾಣ ಪಾತ್ರಗಳಿಗೆ ಜೀವತುಂಬವ ಕೆಲಸವನ್ನು ಅನುಚಾನವಾಗಿ ನಡೆಸಿಕೊಂಡು ಬಂದಿದೆ ಎಂದರು.
ಜಿಲ್ಲಾಧಿಕಾರಿ ಡಾ. ಸಿ.ಸೋಮಶೇಖರ್ ಮಾತನಾಡಿ ಕಿರು ತೆರೆಯಲ್ಲಿ ಕಲಾವಿದ ಕುಬ್ಜನಾಗಿ ಕಾಣುತ್ತಾನೆ, ಬೆಳ್ಳಿ ತೆರೆಯಲ್ಲಿ ಹಿರಿದಾಗಿ ಕಾಣುತ್ತಾನೆ ಆದರೆ ರಂಗ ಭೂಮಿಯಲ್ಲಿ ಕಲಾವಿದ ನೈಜವಾಗಿ ಕಾಣುತ್ತಾನೆ, ಇದೇ ರಂಗಭೂಮಿಯ ವಿಶೇಷತೆ ಎಂದರಲ್ಲದೆ, ಹಿರಿ ತೆರೆ, ಕಿರು ತೆರೆ ನಡುವೆ ಅನುಸಂಧಾನ ಕಾರ್ಯವನ್ನು ಮಾಡುತ್ತಿರುವುದು ರಂಗ ಕಲೆ ಎಂದರು.
ರಂಗಭೂಮಿಯಲ್ಲಿ ಸ್ಪಂದನ, ಸಂವೇದನೆ ಎರಡಕ್ಕೂ ಸೂಕ್ತ ಅವಕಾಶವಿರುತ್ತದೆ ಆದ್ದರಿಂದಲೇ ಇಲ್ಲಿ ಪ್ರೇಕ್ಷಕನ ಆಸಕ್ತಿಯನ್ನು ನೇರವಾಗಿ ಏಕ ಕಾಲದಲ್ಲಿ ಸಮಗ್ರವಾಗಿ ಕಾಣುವ ಕಲೆ ಇದಾಗಿದೆ ಎಂದರು.
ಕುಪ್ಪೂರು ಪೀಠಾಧ್ಯಕ್ಷ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮಿ ಮಾತನಾಡಿ ರಂಗ ಕಲೆ ಇಂದಿಗೂ ಜೀವಂತವಾಗಿರುವುದು ಗ್ರಾಮೀಣ ಭಾಗದಲ್ಲಿ ಅದಕ್ಕೆ ಕಾರಣ ನಮ್ಮಲ್ಲಿ ಇನ್ನೂ ಜಾನಪದ ಕಲೆಗಳ ಬಗ್ಗೆ ಜನರಲ್ಲಿರುವ ಆಸಕ್ತಿ ಮತ್ತು ಒಲವು ಎಂದರಲ್ಲೆ, ಪ್ರತಿ ಮನುಷ್ಯನಲ್ಲೂ ಒಂದೊಂದು ಕಲೆ ಸುಪ್ತವಾಗಿರುತ್ತದೆ ಅದಕ್ಕೆ ಅಗತ್ಯವಿರುವ ವೇದಿಕೆಗಳನ್ನು ಒದಗಿಸಿದರೆ ಹೊರ ಹೊಮ್ಮಲು ಅವಕಾಶ ಕಲ್ಪಿಸಿದಂತಾಗುತ್ತದೆ ಎಂದರು.
ಸಮಾರಂಭದಲ್ಲಿ ಚಿತ್ರ ನಿದರ್ೇಶಕ ಲಿಂಗದೇವರು ಬ್ಯಾಲಕೆರೆ ಮಾತನಾಡಿದರು, .ಸಿ. ಪಾಟೀಲ್, ತಹಶೀಲ್ದಾರ್ ಟಿ.ಸಿ.ಕಾಂತರಾಜು, ಕನ್ನಡ ಮತ್ತು ಸಂಸ್ಕೃತಿ ಸಹಾಯಕ ನಿದರ್ೇಶಕ ಚಂದ್ರಪ್ಪ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಗೋವಿಂದಗೌಡ, ಚಿ.ನಿ.ಪುರಷೋತ್ತಮ್ ಉಪಸ್ಥಿತರಿದ್ದರು.
ದಿವ್ಯ ಜ್ಯೋತಿ ಕಲಾ ಸಂಘದ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಗೌರವಾಧ್ಯಕ್ಷ ಗುರುಲಿಂಗಯ್ಯ, ಕಲಾವಿದರಾದ ಕೆ.ಪಿ.ಕೃಷ್ಣಪ್ಪ, ಕೃಷ್ಣಾಚಾರ್ ರವರನ್ನು ಸನ್ಮಾನಿಸಲಾಯಿತು.


ಚಿ.ನಾ.ಹಳ್ಳಿ ಜಿ.ಜೆ.ಸಿ.ಯ 2ನೇ ಪಿ.ಯು.ಸಿ.ಯಲ್ಲಿ ಶೇ. 60ರಷ್ಟು ಫಲಿತಾಂಶ
ಚಿಕ್ಕನಾಯಕನಹಳ್ಳಿ,ಮೇ.11: ಇಲ್ಲಿನ ಸಕರ್ಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜ್ನ ಎರಡನೇ ವರ್ಷದ ಪಿ.ಯು.ಸಿ.ಯಲ್ಲಿ ಎಲ್ಲಾ ವಿಭಾಗಗಳಿಂದ ಶೇ. 60 ರಷ್ಟು ಫಲಿತಾಂಶ ಬಂದಿದೆ, ಇದರಲ್ಲಿ ವಾಣಿಜ್ಯ ವಿಭಾಗದಲ್ಲಿ ಶೇ. 78, ಕಲಾ ವಿಭಾಗದಲ್ಲಿ ಶೇ.62, ವಿಜ್ಞಾನ ವಿಭಾಗದಲ್ಲಿ ಶೇ 40ರಷ್ಟು ಫಲಿತಾಂಶ ಬಂದಿದೆ ಎಂದು ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಸಪ್ತಗಿರಿ ಎಂಬ ವಿದ್ಯಾಥರ್ಿ 500 ಅಂಕ ಪಡೆದು ಕಾಲೇಜಿಗೆ ಪ್ರಥಮ ನೆನಿಸಿಕೊಂಡಿದ್ದರೆ, ಪೂಜಾ ಎಸ್.ಆರ್. 487 ಅಂಕಪಡೆದು ಎರಡನೇ ಸ್ಥಾನದಲ್ಲಿದ್ದಾರೆ,
500ಕ್ಕಿಂತ ಹೆಚ್ಚು ಅಂಕ ಪಡೆದವರು, ಪವಿತ್ರ ಎಸ್ 502, ಮೇನಕಮ್ಮ ಬಿ.ಎನ್.504, ವರಧೀಶ ಕೆ. 510, ಲಾವಣ್ಯ ಡಿ.ಸಿ 517, ಪ್ರಿಯಾ ಎಚ್.ವೈ 505, ಶ್ರೀ ದೇವಿ 506, ಸುಪ್ರೀತ ಟಿ.ಎನ್. 512, ಕಾವ್ಯಶ್ರೀ ಬಿ.ಜೆ 530 ಅಂಕಗಳಿಸಿದ್ದಾರೆ.
ಯೋಗಾಂಜನೇಯಸ್ವಾಮಿ ದೇವಾಲಯ ಪ್ರಾರಂಭೋತ್ಸವ
ಚಿಕ್ಕನಾಯಕನಹಳ್ಳಿ,ಮೇ.11 : ಶ್ರೀ ಮಹಾಗಣಪತಿ, ಯೋಗಾಂಜನೇಯಸ್ವಾಮಿ, ಸುಬ್ರಹ್ಮಣ್ಯಸ್ವಾಮಿಯವರ ನೂತನ ದೇವಾಲಯ ಪ್ರಾರಂಭೋತ್ಸವ, ಕಳಸ ಪ್ರತಿಷ್ಠಾಪನಾ ಮತ್ತು ಧಾಮರ್ಿಕ ಸಭೆಯನ್ನು ಇದೇ 12 13 ಮತ್ತು 14ರಂದು ಏರ್ಪಡಿಸಲಾಗಿದೆ.
ಪಟ್ಟಣದ ಮಹಾಲಕ್ಷ್ಮೀ ಬಡಾವಣೆಯಲ್ಲಿರುವ ನೂತನ ದೇವಾಲಯದಲ್ಲಿ 12ರಂದು ಹಳೆಯೂರು ಆಂಜನೇಯಸ್ವಾಮಿಯವರ ಆಗಮನದೊಂದಿಗೆ ಗಂಗಾಪೂಜೆ ದೇವಾಲಯ ಪ್ರವೇಶ, ನವಗ್ರಹ ಪೂಜೆ, 13ರಂದು ಸುದರ್ಶನ ಹೋಮ, ಜಯಾದಿಹೋಮ, ರಾಮತಾರಕಹೋಮ ಸಂಜೆ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ ಹಮ್ಮಿಕೊಂಡಿದ್ದು 14ರಂದು ಮಧ್ಯಾಹ್ನ 12ಕ್ಕೆ ಧಾಮರ್ಿಕ ಸಮಾರಂಭವನ್ನು ಏರ್ಪಡಿಸಿದ್ದು ಕೆರಗೋಡಿ ರಂಗಾಪುರದ ಶ್ರೀ ಗುರುಪರದೇಶಿಕೇಂದ್ರಸ್ವಾಮಿ, ಕಾಗಿನೆಲೆ ಗುರುಪೀಠದ ಈಶ್ವರಾನಂದಪುರಿಸ್ವಾಮಿ, ತಮ್ಮಡಿಹಳ್ಳಿ ಮಠದ ಶ್ರೀ ಅಭಿನವಮಲ್ಲಿಕಾಜರ್ುನಸ್ವಾಮಿ, ಕುಪ್ಪೂರು ಮಠದ ಡಾ.ಯತೀಶ್ವರಶಿವಚಾರ್ಯಸ್ವಾಮಿ, ಗೋಡೆಕೆರೆ ಮಠದ ಮೃಂತ್ಯುಂಜಯಸ್ವಾಮಿ ಉಪಸ್ಥಿತರಿರುವರು.

No comments:

Post a Comment