Monday, May 30, 2011



ರೈತರ ಏಳಿಗೆಗಾಗಿ ಸಹಾಯ ಧನ : ಟಿ.ಸಿ.ಕಾಂತರಾಜುಚಿಕ್ಕನಾಯಕನಹಳ್ಳಿ,

ಮೇ.30: ಸಣ್ಣ ಮತ್ತು ಅತಿಸಣ್ಣರೈತರ ಏಳಿಗೆಗಾಗಿ ಸುವರ್ಣ ಭೂಮಿ ಯೋಜನೆಯಡಿ ಸಹಾಯ ಧನ ನೀಡುವ ಮೂಲಕ ರೈತರ ಏಳಿಗೆಯನ್ನು ಕಾಣಲು ಸಕರ್ಾರ ಪ್ರಯತ್ನಿಸುತ್ತಿದೆ ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ಹೇಳಿದರು.ಪಟ್ಟಣದ ರೈತ ಸಂಪರ್ಕ ಕೇಂದ್ರದ ಆವರಣದಲ್ಲಿ ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಿ ಮಾತನಾಡಿದ ಅವರು, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಸಾವಯುವ ಕೃಷಿ, ಜೈವಿಕ ಇಂಧನ, ಜೇನುಸಾಕಾಣಿಕೆ ಚಟುವಟಿಕೆಗಳ ಎಲ್ಲಾ ಫಲಾನುಭವಿಗಳು ಆಯ್ಕೆಯಾಗಿದ್ದು ಕೃಷಿ ಕಾರ್ಯಗಳ ಸಹಾಯಧನಕ್ಕೆ ಹೆಚ್ಚು ಅಜರ್ಿ ಸಲ್ಲಸಿದ್ದು ಈ ಚಟುವಟಿಕೆಯ ಫಲಾನುಭವಿಗಳ ಆಯ್ಕೆಗೆ ಮಾತ್ರ ಲಾಟರಿ ಎತ್ತಲಾಗುತ್ತಿದೆ ಎಂದು ತಿಳಿಸಿದರು.ಯೋಜನ ನಿದರ್ೇಶಕ ಆಂಜನಪ್ಪ ಮಾತನಾಡಿ 5ಎಕರೆ ಒಳಪಟ್ಟ ರೈತರಿಗೆ 10ಸಾವಿರವರೆಗೆ ಸಹಾಯ ಧನ ನೀಡಲಿದ್ದು ಆಯ್ಕೆಯಾದ ಅಭ್ಯಥರ್ಿಗಳಿಗೆ ಇರುವ ಜಮೀನಿನ ಆಧಾರದ ಮೇಲೆ ಸಹಾಯ ಧನ ನೀಡಲಾಗುವುದು ಎಂದು ತಿಳಿಸಿದರು. ಸಮಾರಮಭದಲ್ಲಿ ತಾ.ಪಂ.ಸದಸ್ಯೆ ಲತಾ, ಸಿ.ಡಿ.ಪಿ.ಓ ಅನೀಸ್ ಖೈಸರ್, ಇ.ಓ ದಯಾನಂದ್, ಕೃಷಿ ಸಹಾಯಕ ಅಧಿಕಾರಿ ರಂಗಸ್ವಾಮಿ, ರಾಜಸ್ವ ನಿರೀಕ್ಷಕ ಚಿಂತಾಮಣಿ ಉಪಸ್ಥಿತರಿದ್ದರು.
ಯೋಗಾಂಜನೇಯಸ್ವಮಿಗೆ ವಿಶೇಷ ಬೆಣ್ಣೆ ಅಲಂಕಾರಚಿಕ್ಕನಾಯಕನಹಳ್ಳಿ,

ಮೇ.30: ಪಟ್ಟಣದ ಮಹಾಲಕ್ಷ್ಮೀ ಬಡಾವಣೆಯಲ್ಲಿನ ಯೋಗಾಂಜನೇಯಸ್ವಾಮಿ ದೇವಸ್ಥಾನದಲ್ಲಿ ಹನುಮ ಜಯಂತಿ ಪ್ರಯುಕ್ತ ವಿಶೇಷ ಬೆಣ್ಣೆ ಅಲಂಕಾರ ಏರ್ಪಡಿಸಲಾಗಿತ್ತು.ಇಲ್ಲಿನ ಯೋಗಾಂಜನೇಯಸ್ವಾಮಿ ಯೋಗ ಮುದ್ರೆಯನ್ನು ಹೊತ್ತು ಗಂಭೀರವಾಗಿ ಕುಳಿತಿರುವುದು ವಿಶೇಷವಾಗಿದೆ ಮತ್ತು ದೇವಸ್ಥಾನದಲ್ಲಿ ಗಣಪತಿ, ಸುಬ್ರಹ್ಮಣ್ಯಸ್ವಾಮಿ ಮೂತರ್ಿಗಳನ್ನು ಪ್ರತಿಷ್ಠಾಪಿಸಿದ್ದಾರೆ. ಬಡಾವಣೆಯ ಭಕ್ತಾದಿಗಳು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ.ಸಂಘದ ಅಧ್ಯಕ್ಷ ರಾಜಣ್ಣ, ಕೃಷ್ಣೆಗೌಡ, ದಿನರಾಜು, ಗುರುಮೂತರ್ಿ, ಜಯರಾಮಯ್ಯ, ನಾರಾಯಣಪ್ಪ ಮತ್ತು ಸದಸ್ಯರು ಜಯಂತಿಯಂದು ಪಾಲ್ಗೊಂಡಿದ್ದರು.
ರಂಭಾಪುರಿ ಜಗದ್ಗುರುಗಳ ಪುರಪ್ರವೇಶ ಹಾಗೂ ಅಡ್ಡಪಲ್ಲಕ್ಕಿ ಉತ್ಸವ ಚಿಕ್ಕನಾಯಕನಹಳ್ಳಿ,ಮೇ.30: ತಾಲ್ಲೂಕಿನ ಸಾಸಲು ಗ್ರಾಮದಲ್ಲಿ ಬಾಳೆಹೊನ್ನೂರು ಶ್ರೀಮದ್ರಂಭಾಪುರೀ ಜಗದ್ಗುರುಗಳವರ ಪುರಪ್ರವೇಶ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಜನಜಾಗೃತಿ ಧಾಮರ್ಿಕ ಸಮಾರಂಭವನ್ನು ಜೂನ್ 5ರಂದು ಬೆಳಗ್ಗೆ 9ಕ್ಕೆ ಏರ್ಪಡಿಸಲಾಗಿದೆ.ಸಮಾರಂಭವನ್ನು ಸಾಸಲು ಗ್ರಾಮದಲ್ಲಿ ಹಮ್ಮಿಕೊಂಡಿದ್ದು ರಾಜದೇಶೀಕೇಂದ್ರ ಶಿವಚಾರ್ಯ ಭಗವತ್ಪಾದರು ದಿವ್ಯ ಸಾನಿದ್ಯ ವಹಿಸಲಿದ್ದು, ಯತೀಶ್ಚರ ಶಿವಚಾರ್ಯಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ.ಶಾಸಕ ಸಿ.ಬಿ.ಸುರೇಶ್ಬಾಬು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು ಜಲಸಂಪನ್ಮೂಲ ಸಚಿವ ಬಸವರಾಜು ಬೊಮ್ಮಾಯಿ ಉದ್ಘಾಟನೆ ನೆರವೇರಿಸಲಿದ್ದಾರೆ.ವಸತಿ ಸಚಿವ ವಿ.ಸೋಮಣ್ಣ ಉದ್ಯಾನವನ ಶಂಕುಸ್ಥಾಪನೆ ನೆರವೇರಿಸಲಿದ್ದು ಅಬಕಾರಿ ಸಚಿವ ಎಂ.ಪಿ.ರೇಣುಕಾಚಾರ್ಯ ಭಾವಚಿತ್ರ ಅನಾವರಣ ಮಾಡಲಿದ್ದಾರೆ.ಕರಿವೃಷಭ ಶಿವಯೋಗೀಶ್ವರ ಸ್ವಾಮಿ ನಾಂದಿನುಡಿಯನ್ನಾಡಲಿದ್ದು, ಅಭಿನವ ಮಲ್ಲಿಕಾಜರ್ುನಸ್ವಾಮಿ ಬೋದಾಮೃತ, ಸಾಹಿತಿ ಡಾ.ಸಾ.ಶಿ.ಮರುಳಯ್ಯ ಉಪನ್ಯಾಸ ನೀಡಲಿದ್ದಾರೆ.ಶಿವಪ್ರಕಾಶ ಶಿವಚಾರ್ಯಸ್ವಾಮಿ, ರುದ್ರಮುನಿಸ್ವಾಮಿ, ಮಲ್ಲಿಕಾಜರ್ುನ ಶಿವಚಾರ್ಯಸ್ವಾಮಿ ರೇವಣಸಿದ್ದೇಶ್ವರ ಶಿವಚಾರ್ಯಸ್ವಾಮಿ ನುಡಿನಮನಗಳನ್ನಾಡಲಿದ್ದು ಸಿ.ಮೃಂತ್ಯುಂಜಯಸ್ವಾಮಿ ಸನ್ಮಾನಿತರಾಗಿದ್ದಾರೆ.ಮುಖ್ಯ ಅತಿಥಿಗಳಾಗಿ ಸಂಸದ ಜಿ.ಎಸ್.ಬಸವರಾಜು, ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್, ಜಿ.ಪಂ.ಅಧ್ಯಕ್ಷ ಡಾ.ರವಿ, ಮಾಜಿ ಶಾಸಕರಾದ ಎಸ್.ಪಿ.ಗಂಗಾಧರಪ್ಪ, ಕಿರಣ್ಕುಮಾರ್, ಜೆ.ಸಿ.ಮಾಧುಸ್ವಾಮಿ, ಬಿ.ಲಕ್ಕಪ್ಪ, ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಹಳೇಮನೆ ಶಿವನಂಜಪ್ಪ, ಜಿ.ಪಂ.ಸದಸ್ಯ ಪಂಚಾಕ್ಷರಿ, ಪಿ.ಎಲ್.ಡಿ ಬ್ಯಾಂಕ್ ನಿದರ್ೇಶಕ ಬಿ.ಎನ್.ಶಿವಪ್ರಕಾಶ್, ಜೆ.ಸಿ.ಪುರ ಜಗದೀಶ್, ನಟರಾಜ್ ರಂಗಕಮರ್ಿ ನಾಗರಾಜ್ಮೂತರ್ಿ ತಹಶೀಲ್ದಾರ್ ಟಿ.ಸಿ.ಕಾಂತರಾಜು ಉಪಸ್ಥಿತರಿರುವರು.

No comments:

Post a Comment