Tuesday, May 31, 2011

ಚಿಕ್ಕನಾಯಕನಹಳ್ಳಿ ರೋಟರಿ ಶಾಲೆಯ ವಿದ್ಯಾಥರ್ಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪಡೆದಿರುವ ಅಂಕಗಳು






ಉಚಿತ ನೇತ್ರ ತಪಾಸಣೆ ಮತ್ತು ಚಿಕಿತ್ಸಾ ಶಿಬಿರಚಿಕ್ಕನಾಯಕನಹಳ್ಳಿ

,ಮೇ.31: ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರದ ಉದ್ಘಾಟನಾ ಸಮಾರಂಭವನ್ನು ಜೂನ್ 3ರಂದು ಶುಕ್ರವಾರ ಬೆಳಗ್ಗೆ 10.30ಕ್ಕೆ ಏರ್ಪಡಿಸಲಾಗಿದೆ.ತಾ.ಪಂ ಮಾಜಿ ಅಧ್ಯಕ್ಷ ಕೆ.ಟಿ.ಗೋವಿಂದಪ್ಪ, ಡಾ.ಎಂ.ಸಿ ಮೋದಿ ಚಾರಿಟಬಲ್ ಕಣ್ಣಿನ ಆಸ್ಪತ್ರೆ, ಮತ್ತು ಕೆ.ಟಿ.ಗೋವಿಂದಪ್ಪನವರ ಅಭಿಮಾನಿ ಬಳಗದ, ಜಿಲ್ಲಾ ಅಂಧತ್ವ ನಿವಾರಣ ಸಂಸ್ಥೆ, ಸ್ಥಳೀಯ ವೈದ್ಯಾಧಿಕಾರಿಗಳು ಮತ್ತು ನೇತ್ರ ಪರೀಕ್ಷಕರ ಸಂಯುಕ್ತಾಶ್ರಯದಲ್ಲಿ ಕುಪ್ಪೂರು ಗದ್ದಿಗೆ ಮಠದ ಆವರಣದಲ್ಲಿ ಶಿಬಿರವನ್ನು ಹಮ್ಮಿಕೊಂಡಿದ್ದು ಡಾ.ಯತೀಶ್ವರ ಶಿವಾಚಾರ್ಯಸ್ವಾಮಿ, ಡಾ.ಅಭಿನವ ಮಲ್ಲಿಕಾಜರ್ುಸದೇಶೀಕೇಂದ್ರಸ್ವಾಮಿರವರ ದಿವ್ಯ ಸಾನಿದ್ಯದಲ್ಲಿ ತಾ.ಪಂ.ಮಾಜಿ ಅಧ್ಯಕ್ಷ ಕೆ.ಟಿ.ಗೋವಿಂದಪ್ಪರವರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಲಿದ್ದು ಕುಪ್ಪೂರು ಗ್ರಾ.ಪಂ.ಅಧ್ಯಕ್ಷ ಬಿ.ಕೆ.ರಮೇಶ್ ಅಧ್ಯಕ್ಷತೆ ವಹಿಸಲಿದ್ದು ತಹಶೀಲ್ದಾರ್ ಟಿ.ಸಿ.ಕಾಂತರಾಜು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕುಟುಂಬ ಕಲ್ಯಾಣಾಧಿಕಾರಿ ಡಾ.ಚನ್ನಮಲ್ಲಯ್ಯ, ಮೈನ್ಸ್ ಅಸೋಸಿಯೇಶನ್ ಅಧ್ಯಕ್ಷ ಎಸ್.ಎ.ನಭಿ, ಉದಯವಾಣಿ ಜಿಲ್ಲಾ ವರದಿಗಾರ ಚಿ.ನಿ.ಪುರಷೋತ್ತಮ್ರವರಿಗೆ ಸನ್ನಾನಿಸಲಿದ್ದು ಮುಖ್ಯ ಅತಿಥಿಗಳಾಗಿ ಡಾ.ಅಮರನಾಥ ಎಂ.ಮೋದಿ, ಡಾ.ಎಸ್.ಜಿ.ಪರಮೇಶ್ವರಪ್ಪ, ಕೆ.ಜಿ.ಶ್ರೀಧರ್, ಎನ್.ಎಂ.ಶಿವಕುಮಾರ್, ಕೆ.ಆರ್.ಲಕ್ಷ್ಮೀನಾರಾಯಣ್, ಎಸ್.ಎಲ್.ಶಾಂತಕುಮಾರ್, ಡಾ.ಮಹೇಂದ್ರ, ಎನ್.ಎನ್.ಶ್ರೀಧರ್, ಶಶಿಕಿರಣ್, ಸಿ.ಎನ್.ಮರುಳಾರಾಧ್ಯ, ಕೆ.ಜಿ.ರಾಜೀವ್, ಸಿ.ಗುರುಮೂತರ್ಿ ಕೊಟಿಗೆಮನೆ, ವಾಗೀಶ್ ಪಂಡಿತಾರಾಧ್ಯ ಉಪಸ್ಥಿತರಿರುವರು.
.

No comments:

Post a Comment