Thursday, July 7, 2011



ತಾಲೂಕಿನ ಆಸ್ಪತ್ರೆಗಳ ಕಾರ್ಯವೈಖರಿಯ ಬಗ್ಗೆ ತಾ.ಪಂ.ಅಧ್ಯಕ್ಷರ ಅಸಮಾಧಾನ
ಚಿಕ್ಕನಾಯಕನಹಳ್ಳಿ,ಜು.07 : ತಾಲೂಕಿನ ಯಾವುದೇ ಆಸ್ಪತ್ರ್ರೆಗೆ ಹೋದರು ವೈದ್ಯರು ಸಾರ್ವಜನಿಕರಿಗೆ ಸಿಗುವುದಿಲ್ಲ, ಆಸ್ಪತ್ರೆಯಲ್ಲಿ ವೈದ್ಯರು ಇದ್ದರೂ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ ಎಂದು ಗ್ರಾಮಸ್ಥರು ನಮ್ಮ ಬಳಿ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ ಎಂದು ತಾ.ಪಂ. ಅಧ್ಯಕ್ಷ ಜಿ.ಆರ್.ಸೀತರಾಮಯ್ಯ ಆರೋಪಿಸಿದರು.
ತಾ.ಪಂ.ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅಧಿಕಾರಿಗಳೊಂದಿಗೆ ಮಾತನಾಡುತ್ತಿದ್ದ ಅವರು, ರಾತ್ರಿ ಸಮಯದಲ್ಲಿ ತಾಲ್ಲೂಕಿನ ಕೆಲವು ಆಸ್ಪತ್ರೆಗಳ ವೈದ್ಯರು ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ನೀಡದೆ, ವೈದ್ಯರು ಆಸ್ಪತ್ರೆಯಿಂದ ದೂರವೇ ಇರುತ್ತಾರೆ ಅಲ್ಲದೆ ಕೆಲವು ಆಸ್ಪತ್ರೆಗಳು ದನಗಳ ಕೊಟ್ಟಗೆಯಂತಾಗಿದೆ ಎಂದರು, ಈ ಸಂದರ್ಭದಲ್ಲಿ ಧ್ವನಿಗೂಡಿಸಿದ ತಾ.ಪಂ.ಸದಸ್ಯೆ ಚೇತನ್ಗಂಗಾಧರ್ ಗೂಬೆಹಳ್ಳಿ ಆಸ್ಪತ್ರೆಯಲ್ಲಿ ಮಾತ್ರೆ ಹಾಗೂ ಇಜೆಕ್ಷನ್ಗೆ ಜನರಿಂದ ಹಣ ತೆಗೆದು ಕೊಳ್ಳುತ್ತಿದ್ದಾರೆ ಎಂದರಲ್ಲದೆ, ಹಣ ನೀಡದಿದ್ದರೆ ಆರೋಗ್ಯ ತಪಸಣೆ ಮಾಡುವುದಿಲ್ಲವೆನ್ನುತ್ತಾರೆ ಎಂದು ಆ ಭಾಗದ ಜನರು ದೂರು ನೀಡಿದ್ದಾರೆ ಎಂದರು ಈ ಎಲ್ಲಾ ದೂರುಗಳ ಬಗ್ಗೆ ಆರೋಗ್ಯಾಧಿಕಾರಿ ಗಮನ ಹರಿಸಬೇಕು ಎಂದರು.
ಬೆಸ್ಕಾಂ ಇಲಾಖೆಯಲ್ಲಿನ ಕೆಲವು ನೌಕರರ ಬೇಜವಬ್ದಾರಿಯಿಂದ ರೈತರಿಗೆ ವಿದ್ಯುತ್ ಸಂಪರ್ಕ ಸಮರ್ಪಕ ನೀಡುತ್ತಿಲ್ಲ ಎಂದು ದೂರಿದ ಅವರು, ಗಂಗಾಕಲ್ಯಾಣ ಯೋಜನೆಯಲ್ಲಿ ಬೋರ್ ಕೊರಿಸಿದವರು ಕಳೆದಎರಡು ವರ್ಷ ವಿದ್ಯುತ್ ಸಂಪರ್ಕವಿಲ್ಲದೆ ಪರಿತಪಿಸುತ್ತಿದ್ದಾರೆ. ಕಂಟ್ರಾಕ್ಟರ್ಗಳು ಅಧಿಕಾರಿಗಳಿಗೆ ಕೊಡಬೇಕೆಂದು ಎರಡರಿಂದ ಐದು ಸಾವಿರವರೆಗೆ ಲಂಚಕೇಳುತ್ತಿದ್ದಾರೆ ಎಂಬ ದೂರಿದೆ ಎಂದರು.
ಕೆ.ಇ.ಬಿ. ಅಧಿಕಾರಿ ಮಾತನಾಡಿ ಗಂಗಾ ಕಲ್ಯಾಣ ಯೋಜನೆಯ ಯಾರಾದರು ಲಂಚತೆಗೆದುಕೊಂಡಿರುವ ಬಗ್ಗೆ ಅಜರ್ಿಯ ಮುಖಾಂತರ ಕೂಡಲೆ ಕ್ರಮತೆಗೆದುಕೊಳ್ಳತ್ತಾರೆ.ಸಭೆಯಲ್ಲಿ ತಾಲ್ಲೂಕು ಪಂಚಾಯ್ತಿಯ ಕಾರ್ಯನಿವರ್ಾಹಣಾಧಿಕಾರಿ ಎನ್.ಎಂ.ದಯಾನಂದ್, ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷೆ ಬಿ.ಬಿ.ಫಾತಿಮಾ ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭ
ಚಿಕ್ಕನಾಯಕನಹಳ್ಳಿ,ಜು.07 : ಆತ್ಮ ಯೋಜನೆಯಡಿ ಒಂದು ದಿನದ ಹೈನುಗಾರಿಕೆ ತರಬೇತಿ ಶಿಬಿರ ಹಾಗೂ ಕೃಷಿ, ತೋಟಗಾರಿಕೆ ಇಲಾಖೆ ಮತ್ತು ವಿವಿಧ ಸಕರ್ಾರೇತರ ಸಂಸ್ಥೆಗಳ ಯೋಜನೆಯ ಸಮಾರೋಪ ಸಮಾರಂಭವನ್ನು ಇದೇ 8ಂದು ಏರ್ಪಡಿಸಲಾಗಿದೆ.
ತರಬೇನಹಳ್ಳಿಯ ಷಡಕ್ಷರಿ ಇವರ ತೋಟದಲ್ಲಿ ಸಮಾರಂಭ ಹಮ್ಮಿಕೊಂಡಿದ್ದು ಕೃಷಿಕ ಷಡಕ್ಷರಿ ತರಬೇನಹಳ್ಳಿ ಅಧ್ಯಕ್ಷತೆ ವಹಿಸಲಿದ್ದು ರರೈತ ಸಂಘದ ಜಿಲ್ಲಾ ಸಂಚಾಲಕ ಶಂಕರಣ್ಣ ಸಮಾರೊಪ ಭಾಷಣ ಮಾಡಲಿದ್ದಾರೆ. ವಿಶೇಷ ಆಹ್ವಾನಿತಾಗಿ ತಾ.ಪಂ.ಸದಸ್ಯ ಹೆಚ್.ಆರ್.ಶಶಿಧರ್, ಗ್ರಾ.ಪಂ.ಅಧ್ಯಕ್ಷೆ ಜಿ.ಎಸ್.ಕುಶಲ, ಸದಸ್ಯ ಜಿ.ಪಿ.ಪರಮಶಿವಯ್ಯ, ರಾಜ್ಯ ರೈತ ಸಂಘದ ಅಧ್ಯಕ್ಷ ಮಲ್ಲೇಶಪ್ಪ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಎಂ.ಬಿ.ನಾಗರಾಜ್, ಸಾಹಿತಿ ಕೃಷ್ಣಮೂತರ್ಿ ಬಿಳಿಗೆರೆ, ಜಲಸಿರಿ ಸಂಪಾದಕ ಮಲ್ಲಿಕಾಜರ್ುನ ಹೊಸಪಾಳ್ಯ, ಪ್ರಜಾವಾಣಿ ಶ್ರೀಕಂಠ ಗಾಣದಾಳು, ಸುವರ್ಣಮುಖಿ ಸಮೂಹ ಮಾಧ್ಯಮ ಕೇಂದ್ರದ ಗುರುಮೂತರ್ಿ ಕೊಟಿಗೆಮನೆ, ಜಿ.ಕೃಷ್ಣಪ್ರಸಾದ್, ವಿಶ್ವನರ್ಾ ಅಣೇಕಟ್ಟೆ, ಕ್ಯಾಪ್ಟನ್ ಸೋಮಶೇಖರ್ ಉಪಸ್ಥಿತರಿರುವರು.
ಶಿಕ್ಷಕರ ಜಿಲ್ಲಾ ಮಟ್ಟದ ಸಮ್ಮೇಳನ
ಚಿಕ್ಕನಾಯಕನಹಳ್ಳಿ,ಜು.07 : ಗುಣಾತ್ಮಕ ಶಿಕ್ಷಣ ಬಲಪಡಿಸುವ, ಶಿಕ್ಷಕರ ವಿವಿಧ ಬೇಡಿಕೆಗಳಿಗೆ ಸಕರ್ಾರದ ಗಮನ ಸೆಳೆಯಲು ಜಿಲ್ಲಾ ಮಟ್ಟದ ಶೈಕ್ಷಣಿಕ ಸಮ್ಮೇಳನವನ್ನು ಇದೇ 8ರಂದು ಏರ್ಪಡಿಸಿದ್ದು ತಾಲ್ಲೂಕಿನ ಸಮಸ್ತ ಶಿಕ್ಷಕರು ಸಮ್ಮೇಳನದಲ್ಲಿ ಭಾಗವಹಿಸುವಂತೆ ತಾ.ಪ್ರಾ.ಶಾ.ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಎಂ.ಸುರೆಶ್ ತಿಳಿಸಿದ್ದಾರೆ.
ತುಮಕೂರಿನ ಸಿದ್ದಗಂಗಾ ಮಠದ ಸುಕ್ಷೇತ್ರದಲ್ಲಿ ಬೆಳಗ್ಗೆ 10 ಗಂಟೆಗೆ ಡಾ.ಶ್ರೀ ಶಿವಕುಮಾರಸ್ವಾಮೀಜಿಯವರ ದಿವ್ಯಸಾನಿದ್ಯದಲ್ಲಿ ಹಮ್ಮಿಕೊಂಡಿದ್ದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಂಘಟನೆಯ ಹಿತದೃಷ್ಠಿಯಿಂದಲೂ ಸಮ್ಮೇಳನವನ್ನು ಆಯೋಜಿಸಲಾಗಿದ್ದು ಸಮ್ಮೇಳನಕ್ಕೆ ಸಚಿವರುಗಳು, ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಶಾಸಕರು, ವಿಧಾನ ಪರಿಷತ್ ಸದಸ್ಯರುಗಳು, ಲೋಕಸಬಾ ಸದಸ್ಯರು, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು, ಜಿಲ್ಲಾ ಹಾಗೂ ತಾಲ್ಲೂಕಿನ ಸಾ.ಶಿ.ಇಲಾಖಾ ಅಧಿಕಾರಿಗಳು ಹಾಗೂ ರಾಜ್ಯದ ಎಲ್ಲಾ ಜಿಲ್ಲೆಗಳ ಅಧ್ಯಕ್ಷರು, ಕಾರ್ಯದಶರ್ಿಗಳು ಹಾಗೂ ಪಧಾಧಿಕಾರಿಗಳು ಭಾಗವಹಿಸಲಿದ್ದು ಶಿಕ್ಷಕರುಗಳು ಸಮ್ಮೇಳನಕ್ಕೆ ಭಾಗವಹಿಸಿ ಸಮ್ಮೇಳನ ಯಶಸ್ವಿಗೊಳಿಸಲು ಪತ್ರಿಕಾ ಪ್ರಕಟಣೆಯ ಮೂಲಕ ಕೋರಿದ್ದಾರೆ.

No comments:

Post a Comment