Friday, July 8, 2011



ಹೇಮಾವತಿ ಹರಿಯುವುದು ತಾಲ್ಲೂಕಿಗೆ ಸಂತೋಷದಾಯಕ ಸಂಗತಿ
ಚಿಕ್ಕನಾಯಕನಹಳ್ಳಿ,ಜು.08: ಬಹುದಿನಗಳಿಂದ ಈ ತಾಲ್ಲೂಕಿನ ರೈತರ ಬೇಡಿಕೆಯಾಗಿದ್ದ ಹೇಮಾವತಿಯ ನೀರು 2011ನೇ ಇಸವಿಯಲ್ಲಿ ಈಡೇರಿಸಿರುವುದು ಸಂತೋಷದಾಯವಾದ ಸಂಗತಿ ಎಂದು ತಾ.ಬಿಜೆಪಿ ಮಾಜಿ ಅಧ್ಯಕ್ಷ ಶ್ರೀನಿವಾಸಮೂತರ್ಿ ಹರ್ಷ ವ್ಯಕ್ತಪಡಿಸಿದ್ದಾರೆ.
ಹೇಮಾವತಿಯ ನೀರು ಹರಿಯಲು ಬಹಳಷ್ಟು ಜನರ ಶ್ರಮವಿದ್ದು, ಮೊದಲಿಗೆ ಅಜ್ಜನಹಳ್ಳಿಯ ಶರತ್ಕುಮಾರ್ ಆಗಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರವರಿಗೆ ಮನವಿ ಸಲ್ಲಿಸಿ ಇದಕ್ಕೆ ಚಾಲನೆ ನೀಡಿದರು, ಆದರೆ ಅದಕ್ಕೆ ಸರಿಯಾದ ಬೆಂಬಲ ದೊರೆಯದೆ ನೆನೆಗುದಿಗೆ ಬಿತ್ತು.
ಶೆಟ್ಟಿಕೆರೆ ಸುತ್ತಮುತ್ತಲಿನ ಗ್ರಾಮಸ್ಥರು ಯುವಕರು ದೃಢ ಮನಸ್ಸು ಮಾಡಿ ಸ್ವಮತ ಖುಚರ್ಿನಿಂದ ವಿಧಾನಸೌಧದ ಮೆಟ್ಟಿಲೇರಿಳಿದರು. ಕಳ್ಳಂಬೆಳ್ಳದ ಅಂದಿನ ಶಾಸಕರಾಗಿದ್ದ ಕೆ.ಎಸ್.ಕಿರಣ್ಕುಮಾರ್ ನೇತೃತ್ವದಲ್ಲಿ ತಂಡ ಅಂದಿನ ಜಲಸಂಪನ್ಮೂಲ ಮಂತ್ರಿಗಳಾಗಿದ್ದ ಕೆ.ಎಸ್.ಈಶ್ವರಪ್ಪನವರನ್ನು ಕಂಡು ಸವರ್ೆಗೆ ಚಾಲನೆ ದೊರಕಿಸಿಕೊಂಡರು.
ಹುಳಿಯಾರಿನ ರೈತ ಸಂಘ ಉಪವಾಸ ಸತ್ಯಾಗ್ರಹ, ಬೈಕ್ ರ್ಯಾಲಿ ಗೋಡೆಕೆರೆಯ ಮಹಿಳಾ ಬಿ.ಜೆ.ಪಿ. ತಂಡ, ಈ ತಾಲ್ಲೂಕಿನ ಎಲ್ಲಾ ಮಠಾಧಿಪತಿಗಳು ಪೂಜ್ಯ ಸಿದ್ದಗಂಗಾ ಮಠಾಧೀಶರು ವಿವಿಧ ಸಂಘ ಸಂಸ್ಥೆಯವರು ಮುಖ್ಯಮಂತ್ರಿಗಳಿಗೆ ಜಲಸಂಪನ್ಮೂಲ ಮಂತ್ರಿಗಳಿಗೆ ಒತ್ತಾಯ ಮಾಡುತ್ತಲೆ ಒಂದು ಸಮಸ್ಯೆ ಜೀವಂತವಾಗಿರುವಂತೆ ಎಚ್ಚರಿಕೆ ವಹಿಸಿದವು ಬಾಚಿಹಳ್ಳಿಯ ಸವರ್ೆಯರ್ ವೇದಾಂತ ಮೂತರ್ಿಯ ಕಾರ್ಯವೂ ಶ್ಲಾಘನೀಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮಾನ್ಯ ಯಡಿಯೂರಪ್ಪ ಮತಿಘಟ್ಟ ಸಾರ್ವಜನಿಕ ಸಮಾರಂಭದಲ್ಲಿ ಶೆಟ್ಟಕೆರೆ ಭಾಗಕ್ಕೆ ನೀರು ಹರಿಸುವ ಭರವಸೆ ನೀಡಿದ್ದರು.ಮುಖ್ಯ ಮಂತ್ರಿಗಳಾದ ಮೇಲೆ ತಿಪಟೂರಿನ ಸಾರ್ವಜನಿಕ ಸಮಾರಂಭದಲ್ಲಿ ಚಿ.ನಾ.ಹಳ್ಳಿಗೆ ನೀರು ಹರಿಸುವ ಭರವಸೆ ನೀಡಿದ್ದರು, ಆದರೆ ನಮ್ಮ ಶಾಸಕರು ಸಕರ್ಾರ ತಾರತಮ್ಯ ಮಾಡುತ್ತಿದೆ ಎಂದು ಟೀಕಿಸಿದರು. ಆ ಭಾವನೆ ಇದ್ದರೆ ವಿರೋಧ ಪಕ್ಷದ ಶಾಸಕರಿರುವ ಈ ಕ್ಷೇತ್ರಕ್ಕೆ ನೀರು ಬರಲು ಸಾಧ್ಯವಿತ್ತೆ? ಮತ್ತೊಬ್ಬ ಮಾಜಿ ಶಾಸಕರು, ಅವರು ಶಾಸಕರಿದ್ದ ಅವಧಿಯಲ್ಲಿ ಶೆಟ್ಟಿಕೆರೆ ಸಾರ್ವಜನಿಕ ಸಮಾರಂಭದಲ್ಲಿ ಈಭಾಗಕ್ಕೆ ನೀರು ಬರಲು ಸಾಧ್ಯವೇ ಇಲ್ಲ ಎಂದು ಯಾವ ಸಂಕೊಚವಿಲ್ಲದೆ ಘೊಷಿಸಿದ್ದರು. ಶೆಟ್ಟಿಕೆರೆ ತಂಡ ಭೇಟಿ ಮಾಡಿದಾಗ. ಈಗ ಮಂತ್ರಿಗಳ ಭೇಟಿ ಸಾಧ್ಯವಿಲ್ಲ ಯಾವುದಾದರೊಂದು ಸಿನಿಮಾ ನೋಡಿಕೊಂಡು ಹೋಗಿ ಎಂದು ತಾತ್ಯರವಾಗಿ ನುಡಿದರು. ಇಷ್ಟೆಲ್ಲಾ ಅಡೆ ತಡೆಯ ನಡುವೆ ಸಂಸದರಾದ ಜಿ.ಎಸ್. ಬಸವರಾಜು, ಮಾಜಿ ಶಾಸಕರಾದ ಕೆ.ಎಸ್. ಕಿರಣ್ ಕುಮಾರ್ರವರು ತಮ್ಮ ರಾಜಕೀಯ ಪ್ರಭಾವ ಬೀರಿ26 ಕೆರೆಗಳಿಗೆ 102.6ಕೋಟಿ ಬಿಡುಗಡೆಯಾಗಿದ್ದು. ಇನ್ನು 2 ತಿಂಗಳೊಳಗೆ ಟೆಂಟರ್ ಪ್ರಕ್ರಿಯೆ ನಡೆಯುವುದು ಎಂದು ಇದೇ ಮಾಹೆ 5 ರಂದು ಭೇಟಿಯಾದ ಚಿ.ನಾ.ಹಳ್ಳಿ ತಾಲ್ಲೂಕು ತಂಡಕ್ಕೆ ತಿಳಿಸಿದ್ದಾರೆ.
ಈ ಭಾಗದ ರೈತರು ತಮ್ಮ ಸ್ವಂತಿಗೆ ಸ್ವಲ್ಪ ಧಕ್ಕೆಯಾದರೂ ಸಾರ್ವಜನಿಕರಿಗೆ ಅನುಕೂಲವಾಗುವ ಈ ಮಹತ್ತರ ಕಾರ್ಯಕ್ಕೆ ಸಕರ್ಾರದೊಟ್ಟಗೆ ಕೈ ಜೋಡಿಸಬೇಕು. ಆಗಾದರೆ ಇನ್ನೆರಡು ವರ್ಷದೊಳಗೆ ಹೆಮೆ ಹರಿದು ಬರಡಾದ ಈ ಭೂಮಿ ನಂದನವನವಾಗುವ ಕಾಲ ದೂರ ಇಲ್ಲ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಾತ್ರೆಯಲ್ಲಿ ಸಾಧಕರಿಗೆ ಸನ್ಮಾನ
ಚಿಕ್ಕನಾಯಕನಹಳ್ಳಿ,ಜು.08; ಶ್ರೀ ಹಳೆಯೂರು ಆಂಜನೇಯಸ್ವಾಮಿಯವರ ಏಕಾದಶಿ ಜಾತೆಯ ಅಂಗವಾಗಿ ನವದಂಪತಿಗಳ ಸ್ಪದರ್ೆಯ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಇದೇ 13ರ ಬುಧವಾರ ರಾತ್ರಿ 8ಕ್ಕೆ ಏರ್ಪಡಿಸಲಾಗಿದೆ.
ದಿವ್ಯಜ್ಯೋತಿ ಹವ್ಯಾಸಿ ಕಲಾಸಂಘದ ವತಿಯಿಂದ ಕೋ-ಆಪರೇಟಿವ್ ಬ್ಯಾಂಕ್ ಸಪ್ತತಿ ಸಭಾಂಗಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸಮಾರಂಭದಲ್ಲಿ ಸಾಧಕರಾದ ಕೆಂಕೆರೆ ಚಂದ್ರಕಲಾ ಸತೀಶ್, ಪತ್ರಕರ್ತ ಉಗಮ ಶ್ರೀನಿವಾಸ್, ವೃತ್ತ ನಿರೀಕ್ಷಕ ರವಿಪ್ರಸಾದ್, ವರದಕ್ಷಿಣೆ ವಿರೋದಿ ವೇದಿಕೆ ಸಂಚಾಲಕ ಸಾ.ಚಿ.ರಾಜಕುಮಾರ್, ಆರ್ಚಕ ಶ್ರೀನಿವಾಸರಾಜರವರಿಗೆ ಸಮಾರಂಭದಲ್ಲಿ ಸನ್ಮಾನಿಸಲಾಗುವುದು.

ಕಾಲೇಜಿನ ಕೊರತೆಗೆ ಶೀಘ್ರ ಸ್ಪಂದನೆ ವಿ.ಎಸ್.ಆಚಾರ್ಯ
ಚಿಕ್ಕನಾಯಕನಹಳ್ಳಿ,ಜು.08 : ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಮೂಲಭೂತ ಸೌಕರ್ಯಗಳ ಕೊರತೆಯನ್ನು ನೀಗಿಸಬೇಕೆಂದು ಗೃಹ ಸಚಿವ ವಿ.ಎಸ್.ಆಚಾರ್ಯರವರಿಗೆ ಕಾಲೇಜಿನ ಕೊರತೆ ನೀಗಿಸಬೇಕೆಂದು ನೀಡಿದ ಮನವಿಗೆ ಸಚಿವರು ಸ್ಪಂದಿಸಿದ್ದಾರೆಂದು ಮಾಜಿ ಶಾಸಕ ಬಿ.ಲಕ್ಕಪ್ಪ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಕಾಲೇಜಿನ ಉಪನ್ಯಾಸಕರ ಕೊರತೆ, ಕೊಠಡಿಗಳ ಕೊರತೆ, ವಿಜ್ಞಾನ ವಿಭಾಗದ ಕೊರತೆಗಳನ್ನು ನೀಗಿಸಲು ಜೊತೆ ಸಚಿವರ ಕಛೇರಿಗೆ ಹೋಗಿ ಮನವಿ ಅಪರ್ಿಸಿರುವುದಾಗಿ ತಿಳಿಸಿದರು.
ಎಚ್.ಬಿ.ಎಸ್.ನಾರಾಯಣಗೌಡ ಮಾತನಾಡಿ ನಂಜುಂಡಪ್ಪ ವರದಿಯಂತೆ ತಾಲ್ಲೂಕು ಹಿಂದುಳಿದ್ದು ತಾಲ್ಲೂಕು ಅಭಿವೃದ್ದಿ ಪಡಿಸಲು ಸಹಕರಿಸಿ ಎಂಬ ನಮ್ಮ ಮನವಿಗೆ ಶೀಘ್ರವೇ ಇದರ ಬಗ್ಗೆ ಸ್ಪಂದನೆ ನೀಡುವುದಾಗಿ ತಿಳಿಸಿದರ.
ತಾ.ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ, ಸ್ವಾತಂತ್ರ ಹೋರಾಟಗಾರ ಎಸ್.ಮುರುಡಯ್ಯ, ಗುರುಸಿದ್ದಯ್ಯ, ಕೆ.ಜಿ.ಕೃಷ್ಣೆಗೌಡ ಉಪಸ್ಥಿತರಿದ್ದರು.
ಒಂದೇ ಸಂಘದಲ್ಲಿದ್ದು ಸಂಘವನ್ನು ಬೆಳಸಿ
ಚಿಕ್ಕನಾಯಕನಹಳ್ಳಿ,ಜು.07 :- ಮಹಿಳೆಯರು 4-5 ಸಂಘಗಳಿಗೆ ಸೇರಿ ಆ ಸಂಘದಿಂದ ಸಾಲತೆಗೆದುಕೊಂಡು ಸಾಲದ ಹಣವನ್ನು ಖಚರ್ು ಮಾಡಿ, ಸಾಲದ ಬಡ್ಡಿ ಹೆಚ್ಚುತ್ತಾ ಸಾಲವನ್ನು ಕಟ್ಟುವುದಕ್ಕೆ ಆಗದೆ ಇದ್ದಾಗ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ, ಈ ರೀತಿಯ ವ್ಯವಸ್ಥೆ ತಪ್ಪಬೇಕು ಮಹಿಳೆಯರು ಒಂದೇ ಸಂಘದಲ್ಲಿ ಇದ್ದು ಸಂಘವನ್ನು ಬಲಪಡಿಸಬೇಕು ಎಂದು ಸಿ.ಡಿ.ಪಿ.ಓ ಅನೀಸ್ಖೈಸರ್ ಹೇಳಿದರು.
ಪಟ್ಟಣದ ಎಂ.ಪಿ.ಜಿ.ಎಸ್. ಶಾಲೆಯಲ್ಲಿ ಶಿಶು ಅಭಿವೃದ್ಧಿ ಇಲಾಖೆ ಹಮ್ಮಿಕೊಂಡಿದ್ದ ಗೊಂಚ್ಚಲು ಬ್ಲಾಕ್ ಸೊಸೈಟಿಗಳ ಬಲವಾರ್ಧನೆಗಾಗಿ ಗುಂಪಿನ ಸದಸ್ಯರಿಗೆ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಬ್ಯಾಂಕ್ಗಳಿಗೆ ಮತ್ತು ಶಿಶು ಅಭಿವೃದ್ದಿ ಇಲಾಖೆಗೆ ಸ್ತ್ರೀ ಶಕ್ತಿ ಸಂಘಗಳ ಬಗ್ಗೆ ನಂಬಿಕೆ ಇರುವುದರಿಂದಲೇ ಸಾಲವನ್ನು ನೀಡುತ್ತಾರೆ. ಸಾಲ ಪಡೆದವರು ಬ್ಯಾಂಕ್ಗೆ ಮರಳಿ ನೀಡಿ ಪುನಹ ಸಾಲ ಪಡೆಯಲು ತಿಳಿಸಿದ ಅವರು ಸ್ತೀ ಶಕ್ತಿ ಸಂಘಗಳಿಗೆ ಮಹಿಳೆಯರೇ ಮುಂದಾಗಿ ಸಂಘವನ್ನು ಬಲಪಡಿಸಿ ಹಣವನ್ನು ಉಳಿತಾಯ ಮಾಡುವುದರಲ್ಲಿ ಮುಂದಾಬೇಕು. ಹೆಣ್ಣು ಮಕ್ಕಳ ಬ್ರೂಣ ಹತ್ಯೆ ಮಾಡುವುದನ್ನು ನಿಲ್ಲಿಸಬೇಕು ಎಂದು ತಿಳಿಸಿದರು.
ಶಿಶು ಅಭಿವೃದ್ದಿ ಯೋಜನಾಧಿಕಾರಿ ಪರಮೇಶ್ವರಪ್ಪ ಮಾತನಾಡಿ ಮಹಿಳೆಯರು ಸಂಘದಲ್ಲಿರುವ ಲೋಪದೋಷಗಳನ್ನು ಬಲಪಡಿಸುತ್ತಾ ಸಂಘವನ್ನು ಒಗ್ಗಟ್ಟಿನ ಕಡೆ ಕರೆದೊಯ್ಯಬೇಕು, ಸಂಘ ಕಟ್ಟುವುದು ಬಹಳ ಕಷ್ಠಕರವಾದ ಕೆಲಸವಾಗಿದ್ದು ಸಂಘ ಕಟ್ಟುವವರಿಗೆ ಪ್ರೋತ್ಸಾಹ ನೀಡಬೇಕಾಗಿದೆ ಇದಕ್ಕಾಗಿ ಸಕರ್ಾರ ಸ್ತ್ರೀ ಶಕ್ತಿ ಸಂಘಗಳಿಗೆ ಸಹಕಾರ ನೀಡುತ್ತಿದೆ ಎಂದರು.
ಸಮಾರಂಭದಲ್ಲಿ ಮೇಲ್ವಿಚಾರಕರಾದ ನಾಗರತ್ನಮ್ಮ, ಅನುಸೂಯಮ್ಮ, ಮಹದೇವಮ್ಮ ಮುಂತಾದವರಿದ್ದರು.

No comments:

Post a Comment