ತಾಲ್ಲೂಕಿಗೆ ಸಕರ್ಾರಿ ಇಂಜನಿಯರಿಂಗ್ ಹಾಗೂ ಡಿಪ್ಲೊಮೋ ಕಾಲೇಜುಗಳನ್ನು ಮಂಜೂರು ಮಾಡಲು ಒತ್ತಾಯಿಸಿ ಪ್ರತಿಭಟನೆ
ಚಿಕ್ಕನಾಯಕನಹಳ್ಳಿ,ಡಿ.15 : ತಾಲ್ಲೂಕಿಗೆ ಸಕರ್ಾರಿ ಇಂಜನಿಯರಿಂಗ್ ಹಾಗೂ ಡಿಪ್ಲೊಮೊ ಕಾಲೇಜುಗಳನ್ನು ಸಕರ್ಾರ ಶೀಘ್ರವೇ ಮಂಜೂರು ಮಾಡಬೇಕೆಂದು ಒತ್ತಾಯಿಸಿ ಅಭಾವಿಪ ರಸ್ತೆ ತಡೆ ನೆಡಸಿ ಪ್ರತಿಭಟಿಸಿತು.
ಪಟ್ಟಣದ ಶೆಟ್ಟಿಕೆರೆ ಗೇಟ್ ಬಳಿ ವಿದ್ಯಾಥರ್ಿಗಳು ಹಾಗೂ ಅಭಾವಿಪ ಕಾರ್ಯಕರ್ತರು ಕಾಲೇಜು ಮಂಜೂರು ಬಗ್ಗೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಭಾವಿಪ ತಾಲ್ಲೂಕು ಪ್ರಮುಕ್ ಚೇತನ್ಪ್ರಸಾದ್, ಚಿಕ್ಕನಾಯಕನಹಳ್ಳಿ ತಾಲ್ಲೂಕನ್ನು ಹಳ್ಳಿ ಎಂದೇ ಬಿಂಬಿಸುತ್ತಾ ಬಂದಿರುವ ಸಕರ್ಾರ ಹಾಗೂ ಜನಪ್ರತಿನಿಧಿಗಳು ತಾಲ್ಲೂಕಿನ ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಕಡೆಗಣಿಸಿದ್ದಾರೆ, ಇಲ್ಲಿನ ಸಾವಿರಾರು ವಿದ್ಯಾಥರ್ಿಗಳು ದೂರದ ಊರುಗಳಿಗೆ ಹೋಗಿ ವಿದ್ಯಾಭ್ಯಾಸ ಮಾಡುತ್ತಿರುವುದರಿಂದ ಅವರ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ ಆದ್ದರಿಂದ ಸಕರ್ಾರ ತಾಲ್ಲೂಕಿಗೆ ಇಂಜನಿಯರಿಂಗ್ ಹಾಗೂ ಡಿಪ್ಲೊಮೋ ಕಾಲೇಜುಗಳನ್ನು ಶೀಘ್ರವಾಗಿ ಮಂಜೂರು ಮಾಡಬೇಕು ಇಲ್ಲವಾದರೆ ಈ ಹೋರಾಟವನ್ನು ಅಭಾವಿಪ ಕೈಗೆತ್ತುಕೊಂಡು ಹಂತ ಹಂತವಾಗಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಅಭಾವಿಪ ಸಹ ಕಾರ್ಯದಶರ್ಿ ದಿಲೀಪ್ ಮಾತನಾಡಿ ತಾಲ್ಲೂಕು ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಹಿಂದುಳಿದಿದೆಯಾದ್ದರಿಂದ ಜನಪ್ರತಿನಿಧಿಗಳು ಶಿಕ್ಷಣ ಕ್ಷೇತ್ರದ ಬಗ್ಗೆ ಹೆಚ್ಚು ಒಲವು ತೋರಿಸಿ ತಾಲ್ಲೂಕಿಗೆ ತಾಂತ್ರಿಕ ಕಾಲೇಜನ್ನು ತರಲು ಮುಂದಾಗಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಅಭಾವಿಪ ಕಾರ್ಯಕರ್ತರಾದ ರವಿ, ಗುರು, ನಂದ, ಜಯರಾಜ್, ದರ್ಶನ್, ಹಾಗೂ ವಿದ್ಯಾಥರ್ಿಗಳು ಹಾಜರಿದ್ದರು.
No comments:
Post a Comment