ಆದರೂ ರೈತರಿಗೆ ಹಾಲಿನ ದರದಲ್ಲಿ ಕಡಿಮೆ ಮಾಡಿರುವುದಿಲ್ಲ : ಹಳೆಮನೆ ಶಿವನಂಜಪ್ಪ
ಚಿಕ್ಕನಾಯಕನಹಳ್ಳಿ,ಡಿ. 16 : ಜಿಲ್ಲೆಯಿಂದ ತುಮಕೂರು ಹಾಲು ಒಕ್ಕೂಟ ಮಹಮಂಡಳಿಗೆ ದಿನಕ್ಕೆ 4 ಲಕ್ಷ ಲೀಟರ್ನಷ್ಟು ಹಾಲು ಸರಬರಾಜಾದರೂ 2ಲಕ್ಷ ಲೀಟರ್ ಮಾರಾಟವಾಗಿ 2 ಲಕ್ಷ ಲೀಟರ್ಹಾಲು ಉಳಿಯುತ್ತಿದೆ, ಆದರೂ ರೈತರಿಗೆ ಹಾಲಿನ ದರದಲ್ಲಿ ಕಡಿಮೆ ಮಾಡಿರುವುದಿಲ್ಲ ಎಂದು ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಹಳೆಮನೆ ಶಿವನಂಜಪ್ಪ ಹೇಳಿದರು.
ಪಟ್ಟಣದ ಕೆ.ಎಂ.ಎಚ್.ಪಿ.ಎಸ್ ಶಾಲಾ ಆವರಣದಲ್ಲಿ ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ ವತಿಯಿಂದ ನಡೆದ ನಂದಿನಿ ಪ್ರತಿಭಾನ್ವೇಷಣೆ ಸ್ಪಧರ್ೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನಂದಿನಿ ಹಾಲಿನ ಗುಣಮಟ್ಟದ ಬಗ್ಗೆ ಜನತೆಗೆ ತಿಳಿಸಲು ಇಂತಹ ಕಾರ್ಯಕ್ರಮವನ್ನು ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಪ್ರಥಮ ಬಾರಿಗೆ ಹಮ್ಮಿಕೊಳ್ಳಲಾಗಿದೆ ಎಂದ ಅವರು ನಾನು ಅಧ್ಯಕ್ಷನಾದ ಮೇಲೆ ತಾಲ್ಲೂಕಿನಲ್ಲಿ ನಂದಿನಿ ಹಾಲು ಒಕ್ಕೂಟದಲ್ಲಿ 92 ಸಂಘ ಹಾಗೂ 22 ಉಪಕೇಂದ್ರಗಳನ್ನಾಗಿ ಹೆಚ್ಚಿಸಿದ್ದೇನೆ ಎಂದರು.
ನಂದಿನಿ ಹಾಲು ಒಕ್ಕೂಟವು 67 ತರಹದ ವ್ಯವಸ್ಥೆ ಹೊಂದಿದ್ದು ಐ.ಎಸ್.ಐ ಗುರುತನ್ನು ಪಡೆದಿದೆ. ನಂದಿನಿಯ ಹಾಲು ಶೇ.100ರಷ್ಟು ಶುದ್ದವಾಗಿದೆ, ಹಾಲನ್ನು ರೈತರುಗಳು ಯಾವುದೇ ಖಾಸಗಿಯವರಿಗೆ ನೀಡದೆ ಒಕ್ಕೂಟಕ್ಕೆ ನೀಡಿ ಹೆಚ್ಚಿನ ಲಾಭ ಪಡೆಯಲು ತಿಳಿಸಿದರು.
ಬಿ.ಇ.ಓ ಸಾ.ಚಿ.ನಾಗೇಶ್ ಮಾತನಾಡಿ ನಂದಿನಿ ಹಾಲು, ತುಪ್ಪ, ಪೇಡ ಬಹಳ ಉತ್ಕೃಷ್ಠ ಹಾಗೂ ಶುದ್ದವಾಗಿರುವುದಲ್ಲದೆ ಗುಣಮಟ್ಟದಲ್ಲಿ ನಂ.1ಸ್ಥಾನ ಪಡೆದಿದೆ, ಈ ಹಾಲಿನ ಬಗ್ಗೆ ಹಳ್ಳಿ, ಹಳ್ಳಿಗೂ ಪ್ರಚಾರವಾಗಬೇಕಿದೆ ಎಂದ ಅವರು ರೈತರುಗಳು ಹಸುಗಳನ್ನು ಸಾಕಿ ಹಾಲಿನ ಉತ್ಪಾದನೆಯಿಂದ ಲಾಭ ಪಡೆದುಕೊಳ್ಳಲು ಕರೆ ನೀಡಿದರು.
ಸಮಾರಂಭದಲ್ಲಿ ತಾ.ಪಂ.ಅಧ್ಯಕ್ಷ ಸೀತಾರಾಮಯ್ಯ, ಪುರಸಭಾಧ್ಯಕ್ಷ ದೊರೆಮುದ್ದಯ್ಯ ಉಪಸ್ಥಿತರಿದ್ದರು.
No comments:
Post a Comment