ವಿಧಿವಶರಾದ ಬಂಗಾರಪ್ಪನವರಿಗೆ ಪುರಸಭೆಯ ವತಿಯಿಂದ ಭಾವಪೂರ್ಣ ಶ್ರದ್ದಾಂಜಲಿ
ಚಿಕ್ಕನಾಯಕನಹಳ್ಳಿ,ಡಿ.27 : ಮಾಜಿ ಸಿ.ಎಂ.ಬಂಗಾರಪ್ಪನವರು ಹಿಂದುಳಿದ ವರ್ಗಗಳ ನಾಯಕರಾಗಿ ಕಡುಬಡವರಿಗೆ ಹಲವು ಯೋಜನೆಗಳನ್ನು ಜಾರಿಗೆ ತರುವ ಮೂಲಕ ದೀನದಲಿತರ ಪರ ಎಂಬುದನ್ನು ತೋರಿಸಿಕೊಂಡ ಧೀಮಂತ ಮುಖ್ಯಮಂತ್ರಿಯಾಗಿದ್ದರು ಎಂದು ಪುರಸಭಾ ಅಧ್ಯಕ್ಷ ದೊರೆಮುದ್ದಯ್ಯ ಹೇಳಿದರು.
ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಬಂಗಾರಪ್ಪನವರಿಗೆ ಭಾವಚಿತ್ರಕ್ಕೆ ಶ್ರದ್ದಾಂಜಲಿ ಅಪರ್ಿಸಿದ ನಂತರ ಪುರಸಭಾ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಮೌನಾಚರಣೆ ಆಚರಿಸಿದರು. ಆಶ್ರಯ ಯೋಜನೆ, ರೈತರಿಗೆ ಉಚಿತ ಪಂಪ್ಸೆಟ್ಗಳನ್ನು ಹಾಗೂ ಗ್ರಾಮೀಣ ಭಾಗದವರಿಗೆ ಅನುಕೂಲವಾಗುವಂತಹ ಹಲವಾರು ಯೋಜನೆಗಳನ್ನು ಜಾರಿಗೆ ತಂದವರು ಎಂದು ಗುಣಗಾನಮಾಡಿದರು.
ಪುರಸಭಾ ಸದಸ್ಯ ಸಿ.ಎಂ.ರಂಗಸ್ವಾಮಿ ಮಾತನಾಡಿ ಬಂಗರಪ್ಪನವರು ಧೀಮಂತ ನಾಯಕ ಅವರು ಎಲ್ಲಾ ಸಮಾಜದ ನೇತಾರರರಾಗಿ ಕಾರ್ಯನಿರ್ವಹಿಸುತ್ತಿದ್ದರು, ಡಿ. ದೇವರಾಜು ಅರಸುರವರನ್ನು ಬಿಟ್ಟರೆ ಎಸ್. ಬಂಗರಪ್ಪನವರು ರೈತರಿಗಾಗಿ ಹೋರಾಡಿದ ವ್ಯಕ್ತಿ ಅವರ ಅಗಲಿಕೆ ರಾಜ್ಯಕ್ಕೆ ನೋವು ತಂದಿದೆ ಎಂದರು.
ಪುರಸಭಾ ಸದಸ್ಯ ಎಂ.ಎನ್.ಸುರೇಶ್ ಮಾತನಾಡಿ ದಲಿತರ ಬಂಧು, ಇವರು ಗ್ರಾಮೀಣ ಕೃಪಾಂಕ ಹಾಗೂ ವಿಶ್ವ ಆರಾಧನ ಕಾರ್ಯಕ್ರಮಗಳನ್ನು ಜಾರಿಗೆ ತಂದು ಯಶಸ್ವಿಯಾದವರು ಎಂದ ಅವರು ಬಂಗಾರಪ್ಪನವರ ಆತ್ಮಕ್ಕೆ ಶಾಂತಿ ಕೋರಿದರು.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ಸಿ.ಪಿ.ಮಹೇಶ್, ಕವಿತಾಚನ್ನಬಸವಯ್ಯ, ಮೈನ್ಸ್ರವಿ, ರಾಜು, ಕೃಷ್ಣಮೂತರ್ಿ, ಮುಖ್ಯಾಧಿಕಾರಿ ವೆಂಕಟೇಶ್ಶೆಟ್ಟಿ ಉಪಸ್ಥಿತರಿದ್ದರು.
ಸುದ್ದಿ: 2
ಚಿಕ್ಕನಾಯಕನಹಳ್ಳಿ,ಡಿ.27: ಪಟ್ಟಣದ ಕಲ್ಪವೃಕ್ಷ ಕೋ ಅಪರೇಟಿವ್ ಬ್ಯಾಂಕ್ನ ಆಡಳಿತ ಮಂಡಳಿ ಬಂಗಾರಪ್ಪನವರಿಗೆ ಭಾವಪೂರ್ಣ ಶ್ರದ್ದಾಂಜಲಿ ಅಪರ್ಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬ್ಯಾಂಕ್ನ ಅಧ್ಯಕ್ಷ ಸಿ.ಎಸ್.ನಟರಾಜ್, 1994ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಬಂಗಾರಪ್ಪನವರು ಚಿ.ನಾ.ಹಳ್ಳಿಗೆ ಬಂದಿದ್ದು, ಬಂಗಾರಪ್ಪನವರು, ಮಾಜಿ ಸಚಿವ ಎನ್.ಬಸವಯ್ಯನವರೊಂದಿಗೆ ಜೊತೆಗೂಡಿ ಚುನಾವಣೆ ನಡೆಸಿದ ಸಂದರ್ಭವನ್ನು ಸ್ಮರಿಸಿಕೊಂಡರು, ಬಡವರ ಬಗ್ಗೆ ಅವರಿಗಿದ್ದ ಕಾಳಜಿ ನಮಗೆಲ್ಲಾ ಆದರ್ಶವಾಗಿದೆ ಎಂದರು.
ಬ್ಯಾಂಕ್ನ ನಿದರ್ೇಶಕರುಗಳಾದ ಸಿ.ಎಂ.ರಂಗಸ್ವಾಮಿ, ರವಿ(ಮೈನ್ಸ್), ಸಿ.ಎಸ್.ರಮೇಶ್, ರಾಜಣ್ಣ, ಕೃಷ್ಣಮೂತರ್ಿ, ದೊಡ್ಡಯ್ಯ,ಶಶಿಕುಮಾರ್ ಮ್ಯಾನೇಜರ್ ಆನಂದ್ ಹಾಜರಿದ್ದರು.
ಶಾಲಾ ವಾಷರ್ಿಕೋತ್ಸವ ಸಮಾರಂಭ
ಚಿಕ್ಕನಾಯಕನಹಳ್ಳಿ,ಡಿ.28 : ಶ್ರೀ ರಾಮಲಿಂಗೇಶ್ವರ ಗ್ರಾಮಾಂತರ ಪ್ರೌಡಶಾಲೆಯ ರಜತ ಮಹೋತ್ಸವ ಆಚರಣಾ ಸಮಾರಂಭ ಮತ್ತು 2011-12ನೇ ಸಾಲಿನ ಶಾಲಾ ವಾಷರ್ಿಕೋತ್ಸವ ಸಮಾರಂಭವನ್ನು ಇದೇ 30ರ ಶುಕ್ರವಾರ ಬೆಳಗ್ಗೆ 10.30ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ತಾಲ್ಲೂಕಿನ ರಾಮನಹಳ್ಳಿ ತೀ.ನಂಶ್ರೀ ಪ್ರೌಡಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದು ಭವತರಿಣೀ ಆಶ್ರಮದ ಅಧ್ಯಕ್ಷರಾದ ಮಾತಾಜಿ ವಿವೇಕಮಯೀ ಆಶೀರ್ವಚನ ನೀಡಲಿದ್ದು ಅರುಣೋದಯ ವಿದ್ಯಾಸಂಸ್ಥೆಯ ಆರ್.ಎಂ.ಸಣ್ಣತಿಮ್ಮಯ್ಯ ಅಧ್ಯಕ್ಷತೆ ವಹಿಸಲಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಕಟ್ಟಡದ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಡಯಟ್ ಪ್ರಾಂಶುಪಾಲ ಈಶ್ವರಯ್ಯ, ವೈದ್ಯ ಡಾ.ಸಿ.ಶರತ್ಕುಮಾರ್, ತಹಶೀಲ್ದಾರ್ ಉಮೇಶ್ಚಂದ್ರ, ಬಿ.ಇ.ಓ ಸಾ.ಚಿ.ನಾಗೇಶ್, ಜಿ.ಪಂ.ಸದಸ್ಯೆ ಲೋಹಿತಾಬಾಯಿರಂಗಸ್ವಾಮಿ, ತಾ.ಪಂ.ಸದಸ್ಯೆ ಲತಾಕೇಶವಮೂತರ್ಿ, ರಾಮನಹಳ್ಳಿ ಗ್ರಾ.ಪಂ.ಅಧ್ಯಕ್ಷೆ ಯಶೋದಮ್ಮಮಹಾದೇವಯ್ಯ ಆಗಮಿಸಲಿದ್ದು ವಿಶೇಷ ಆಹ್ವಾನಿತರಾಗಿ ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್, ಪ್ರೌಡಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಕೃಷ್ಣಯ್ಯ, ಕಾರ್ಯದಶರ್ಿ ಬಿ.ಎಸ್.ಕರಿಸಿದ್ದಪ್ಪ ಉಪಸ್ಥಿತರಿರುವರು.
ತಾಲ್ಲೂಕು ಮಟ್ಟದ ಟಿ.ಎಲ್.ಎಂ.ಮತ್ತು ಮೆಟ್ರಿಕ್ ಮೇಳ
ಚಿಕ್ಕನಾಯಕನಹಳ್ಳಿ,ಡಿ.28: ತಾಲ್ಲೂಕು ಮಟ್ಟದ ಟಿ.ಎಲ್.ಎಂ.ಮತ್ತು ಮೆಟ್ರಿಕ್ ಮೇಳವನ್ನು ಇದೇ 29ರ ಬೆಳಗ್ಗೆ 10.30ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ಸಕರ್ಾರಿ ಪ್ರೌಡಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು ತಾ.ಪಂ.ಅಧ್ಯಕ್ಷ ಜಿ.ಆರ್.ಸೀತಾರಾಮಯ್ಯ ಉದ್ಘಾಟನೆ ನೆರವೇರಿಸಲಿದ್ದು ಪುರಸಭಾಧ್ಯಕ್ಷ ದೊರೆಮುದ್ದಯ್ಯ ಮೆಟ್ರಿಕ್ ಮೇಳ ಹಾಗೂ ಡಯಟ್ ಪ್ರಾಂಶುಪಾಲ ಈಶ್ವರಯ್ಯ ಟಿ.ಎಲ್.ಎಂ.ಮೇಳ ಉದ್ಘಾಟಿಸಲಿದ್ದಾರೆ.
ಬಿ.ಇ.ಓ ಸಾ.ಚಿ.ನಾಗೇಶ್ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದು ಜಿ.ಪಂ.ಸದಸ್ಯರುಗಳಾದ ಮಂಜುಳಗವಿರಂಗಯ್ಯ, ಜಾನಮ್ಮರಾಮಚಂದ್ರಯ್ಯ, ಲೋಹಿತಾಬಾಯಿರಂಗಸ್ವಾಮಿ, ನಿಂಗಮ್ಮರಾಮಯ್ಯ, ಹೆಚ್.ಬಿ.ಪಂಚಾಕ್ಷರಯ್ಯ, ತಾ.ಪಂ.ಉಪಾಧ್ಯಕ್ಷೆ ಬಿಬಿ ಪಾತೀಮ, ಪುರಸಭೆ ಉಪಾಧ್ಯಕ್ಷೆ ಗಾಯಿತ್ರಿಪುಟ್ಟಣ್ಣ ಆಗಮಿಸಲಿದ್ದು ತಹಶೀಲ್ದಾರ್ ಎನ್.ಆರ್.ಉಮೇಶ್ಚಂದ್ರ, ಇ.ಓ ಎನ್.ಎಂ.ದಯಾನಂದ್, ಅಕ್ಷರ ದಾಸೋಹ ಸಹಾಯಕ ನಿದರ್ೇಶಕ ಸಿ.ಆರ್.ತಿಮ್ಮರಾಜು, ಜಿ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ತಾ.ಪ್ರೌ.ಶಾ.ಮು.ಶಿ.ಸಂಘದ ಅಧ್ಯಕ್ಷ ಜಿ.ಕೃಷ್ಣಯ್ಯ, ತಾ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಹೆಚ್.ಎಂ.ಸುರೇಶ್ ಉಪಸ್ಥಿತರಿರುವರು.
No comments:
Post a Comment