ಮಕ್ಕಳ ಶೈಕ್ಷಣಿಕ ಅಭಿವೃದ್ದಿಯಲ್ಲಿ ಪೋಷಕ,ಶಿಕ್ಷಕರಿದಷ್ಟೇ ಜವಬ್ದಾರಿ ಜನಪ್ರತಿನಿಧಿಗಳಿಗೂ ಇರಬೇಕು: ಶಾಸಕ ಸಿ.ಬಿ.ಎಸ್.
ಚಿಕ್ಕನಾಯಕನಹಳ್ಳಿ,ಡಿ.29 : ಮಕ್ಕಳ ಶೈಕ್ಷಣಿಕ ಅಭಿವೃದ್ದಿಯಲ್ಲಿ ಪೋಷಕರು, ಶಿಕ್ಷಕರ ಷ್ಟೇ ಜವಬ್ದಾರಿ ಜನಪ್ರತಿನಿಧಿಗಳಿಗೂ ಇದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ಪಟ್ಟಣದ ಸಕರ್ಾರಿ ಪ್ರೌಡಶಾಲಾ ಆವರಣದಲ್ಲಿ ನಡೆದ ತಾಲ್ಲೂಕು ಮಟ್ಟದ ಟಿ.ಎಲ್.ಎಂ ಹಾಗೂ ಮೆಟ್ರಿಕ್ ಮೇಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭವಿಷ್ಯದಲ್ಲಿ ಮಕ್ಕಳು ಮಾರುಕಟ್ಟೆ ವ್ಯವಸ್ಥೆ ಹಾಗೂ ಅದರಲ್ಲಿ ನಡೆಯುವ ವ್ಯವಹಾರಗಳ ಬಗ್ಗೆ ತಿಳಿಯಲು ಸಂತೆಮೇಳ ಪೂರಕವಾಗಿದೆ ಎಂದರಲ್ಲದೆ, ಟಿ.ಎಲ್.ಎಂ ಮೇಳ, ಮೆಟ್ರಿಕ್ಮೇಳ ವಿದ್ಯಾಥರ್ಿ ಜೀವನದ ಪ್ರಮುಖ ಘಟ್ಟ, ಇಂತಹ ಸ್ಪಧರ್ೆಗಳಲ್ಲಿ ಮಕ್ಕಳು ಭಾಗವಹಿಸುವ ಮೂಲಕ ಸಮಾಜದಲ್ಲಿನ ವ್ಯಾಪಾರ ಗುಣಲಕ್ಷಣಗಳನ್ನು ಅರಿಯಬೇಕು ಅದಕ್ಕಾಗಿ ತಂದೆ ತಾಯಿಯರ ಪ್ರೋತ್ಸಾಹ, ಶಿಕ್ಷಕರ ಬೆಂಬಲದೊಂದಿಗೆ ಜನಪ್ರತಿನಿಧಿಗಳು ಪ್ರತಿಭಾನ್ವಿತ ಮಕ್ಕಳನ್ನು ಹೊರಜಗತ್ತಿಗೆ ತರಬೇಕು ಎಂದರು. ಕೇಂದ್ರ ಮತ್ತು ರಾಜ್ಯ ಸಕರ್ಾರಗಳು ಸಕರ್ಾರಿ ಶಾಲೆಗಳಲ್ಲಿನ ವಿದ್ಯಾಥರ್ಿಗಳಿಗೆ ವಿದ್ಯಾರ್ಜನೆಯೊಂದಿಗೆ ಹಲವಾರು ಮೂಲಭೂತ ಸೌಲಭ್ಯ ನೀಡುತ್ತಿದೆ ಆದರೂ ಪೋಷಕರು ಸಕರ್ಾರಿ ಶಾಲೆಗಳ ಬಗ್ಗೆ ಹೊಂದಿರುವ ನಿರ್ಲಕ್ಷತೆ ಬಗ್ಗೆ ವಿಷಾದ ವ್ಯಕ್ತಪಡಿಸಿದರಲ್ಲದೆ ಸಕರ್ಾರಿ ಶಾಲೆಗಳಲ್ಲಿ ವಿದ್ಯಾರ್ಜನೆ ಮಾಡಲು ತಿಳಿಸಿದರು.
ಜಿಲ್ಲಾ ಪಂಚಾಯತ್ ಸದಸ್ಯೆ ಲೋಹಿತಾಬಾಯಿರಂಗಸ್ವಾಮಿ ಮಾತನಾಡಿ ಭೋದನೆ ಮೊದಲ ಶಿಕ್ಷಣವಾದರೆ, ಭೋದನಾ ಸಾಮಗ್ರಿಗಳು ಎರಡನೇಯ ಶಿಕ್ಷಕರಿದ್ದಂತೆ, ಈ ಭೋದನಾ ಸಾಮಗ್ರಿಗಳಿಂದ ಮಕ್ಕಳಿಗೆ ಸಾಮಗ್ರಿಯ ವಸ್ತುಸ್ಥಿತಿಯನ್ನು ಅರಿತು ಹೆಚ್ಚು ಜ್ಞಾನ ಪಡೆಯುತ್ತಾರೆ ಅಲ್ಲದೆ ಇದು ಮಕ್ಕಳ ಉತ್ತಮ ವಿದ್ಯಾಭ್ಯಾಸಕ್ಕೆ ಪ್ರಭಾವ ಬೀರಲಿದೆ ಎಂದರು.
ಸಮಾರಂಭದಲ್ಲಿ ಡಯಟ್ ಪ್ರಾಂಶುಪಾಲ ಈಶ್ವರಯ್ಯ ಮಾತನಾಡಿ ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮವನ್ನು ನಮ್ಮ ಸಂಸ್ಥೆ ಸಂಘಟಿಸಲಿದ್ದು, ಇಲ್ಲಿ ಜಯಗಳಿಸಿದ ವಿದ್ಯಾಥರ್ಿಗಳು ನಾವು ಸಂಘಟಿಸುವ ಕಾರ್ಯಕ್ರಮಕ್ಕೆ ಬರಲಿದ್ದಾರೆ ಎಂದರು.
ಬಿ.ಇ.ಓ ಸಾ.ಚಿ.ನಾಗೇಶ್ ಮಾತನಾಡಿ ಶಿಕ್ಷಕರು ಕಡಿಮೆ ಅವಧಿಯಲ್ಲಿ ಮಕ್ಕಳಿಗೆ ಪರಿಣಾಮಕಾರಿ ಬೋಧನೆ ಮಾಡುವ ಮೂಲಕ ಮಕ್ಕಳ ಭವಿಷ್ಯಕ್ಕೆ ದಾರಿಯಾಗುವಂತಹ ಕಾರ್ಯಕ್ರಮಗಳನ್ನು ಏರ್ಪಡಿಸಿ ಅವರ ಅಕ್ಷರಜ್ಞಾನದೊಂದಿಗೆ ವ್ಯವಹಾರಿಕ ಜ್ಞಾನ ತಿಳಿಸಬೇಕು, ಚಿಕ್ಕವಯಸ್ಸಿನಲ್ಲೇ ಇಂತಹ ಸ್ಪಧರ್ೆಗಳಲ್ಲಿ ಭಾಗವಹಿಸಿ ತಮಗೆ ಎದುರಾಗುವ ವ್ಯಾಪಾರಿ ಸಮಸ್ಯೆಗಳನ್ನು ಪರಿಹರಿಸುವ ಮಾರ್ಗ ತಿಳಿದುಕೊಳ್ಳಬೇಕು ಎಂದರು. ಕ್ಲಸ್ಟರ್ ಮಟ್ಟದಲ್ಲಿ ನಡೆದ ಮೇಳದಲ್ಲಿ ತಾಲ್ಲೂಕು ಮಟ್ಟದಲ್ಲಿ ಆಯ್ಕೆಯಾಗಿದ್ದು, ತಾಲ್ಲೂಕು ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ಒಂದು ತಂಡವನ್ನು ಆಯ್ಕೆ ಮಾಡಲಾಗುತ್ತದೆ ಎಂದರು.
ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಿ, ಪುರಸಭಾಧ್ಯಕ್ಷ ದೊರೆಮುದ್ದಯ್ಯ, ಉಪಾಧ್ಯಕ್ಷೆ ಗಾಯಿತ್ರಿಪುಟ್ಟಣ್ಣ, ತಾ.ಪಂ.ಉಪಾಧ್ಯಕ್ಷೆ ಬಿ.ಬಿ.ಪಾತೀಮ, ತಾ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಹೆಚ್.ಎಂ.ಸುರೇಶ್ ಮಾತನಾಡಿದರು.
ಸಮಾರಂಭದಲ್ಲಿ ತಾ.ಪ್ರೌ.ಶಾ.ಮು.ಶಿ.ಸಂಘದ ಅಧ್ಯಕ್ಷ ಜಿ.ಕೃಷ್ಣಯ್ಯ, ಪುರಸಭಾ ಸದಸ್ಯ ಕೃಷ್ಣಮೂತರ್ಿ ಉಪಸ್ಥಿತರಿದ್ದರು.
No comments:
Post a Comment