Saturday, January 21, 2012


ಫೆಬ್ರವರಿ 10ರೊಳಗೆ ತಮ್ಮ ಗುರುತಿನ ಚೀಟಿ ನೀಡಿ, ಸಂಪೂರ್ಣ ಸುರಕ್ಷಾ ಯೋಜನೆಯ  ಸೌಲಭ್ಯ ಪಡೆಯಿರಿ
ಚಿಕ್ಕನಾಯಕನಹಳ್ಳಿ,ಜ.21 : ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಹಮ್ಮಿಕೊಂಡಿರುವ ಸಂಪೂರ್ಣ ಸುರಕ್ಷಾ ಯೋಜನೆಯ  ಸೌಲಭ್ಯ ಪಡೆಯಲು ಯೋಜನಾ ಸದಸ್ಯರು ಫೆಬ್ರವರಿ 10ರೊಳಗೆ ತಮ್ಮ ಗುರುತಿನ ಚೀಟಿ ನೀಡಿ ಸೌಲಭ್ಯದ ನೊಂದಣಿ ಮಾಡಿಕೊಳ್ಳಬೇಕು, ಗುರುತಿನ ಚೀಟಿ ಇಲ್ಲದವರು ಯೋಜನೆ ವತಿಯಿಂದ ನೀಡುವ ಗುರುತಿನ ಚೀಟಿ ಪಡೆದು ನೊಂದಣಿ ಮಾಡಿಕೊಳ್ಳಬೇಕೆಂದು  ಶಿರಾ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾಧಿಕಾರಿ ದಿನೇಶ್.ಡಿ ಹೇಳಿದರು.
ತಾಲ್ಲೂಕಿನ ಮತಿಘಟ್ಟ ಪ್ರೌಡಶಾಲಾ ಆವರಣದಲ್ಲಿ ನಡೆದ ಮತಿಘಟ್ಟ ಗ್ರಾಮ ಪಂಚಾಯತ್ ವ್ಯಾಪ್ತಿಯ  ಪ್ರಗತಿ ಬಂಧು ಹಾಗೂ ಸ್ವಸಹಾಯ ಸಂಘಗಳ ನೂತನ ಒಕ್ಕೂಟಗಳ ಉದ್ಘಾಟನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಸಂಪೂರ್ಣ ಸುರಕ್ಷಾ ಯೋಜನೆಯು ಆರೋಗ್ಯದ ಅನುಕೂಲಕ್ಕಾಗಿ ಇರುವ ಯೋಜನೆ ಇದರಲ್ಲಿ ಯೋಜನೆಯ ಸದಸ್ಯರು, ಅವರ ಕುಟಂಬದವರು ನೊಂದಣಿ ಮಾಡಿಸಬಹುದಾಗಿದ್ದು 10ರಿಂದ 50 ಸಾವಿರದ ವರೆವಿಗೂ ಆಸ್ಪತ್ರೆಯ ಖಚರ್ಿನ ವೆಚ್ಚವನ್ನು ಈ ಯೋಜನೆಯಿಂದ ಭರಿಸಬಹುದಾಗಿದೆ, ಮುಂದಿನ ದಿನಗಳಲ್ಲಿ ಜೀವನ್ಮತ ಎಂಬ ಕಾರ್ಯಕ್ರಮ ಜಿಲ್ಲೆಯಲ್ಲಿ ಆರಂಭವಾಗಲಿದ್ದು ಜೀವ ವಿಮಾ ಪಾಲಿಸಿಯಂತೆ ಯೋಜನೆ ಜಾರಿಗೆ ತರಲಾಗುವುದು ಎಂದ ಅವರು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಈಗಾಗಲೇ 21 ಕಾರ್ಯಕ್ರಮಗಳ ಅನುಷ್ಠಾನವಾಗಿದ್ದು ಈ ಕಾರ್ಯಕ್ರಮಗಳ ಯಶಸ್ವಿಗೆ ಒಕ್ಕೂಟದ ಪದಾಧಿಕಾರಿಗಳೊಂದಿಗೆ ಊರಿನ ಜನರು ಒಗ್ಗಟ್ಟಾಗಿ ಒಬ್ಬರ ಕೆಲಸವನ್ನು ಇನ್ನೊಬರು ಸಹಕಾರದಿಂದ ನೆರವೇರಿಸಿದರೆ ಊರಿನ ಅಭಿವೃದ್ದಿ ಹಾಗೂ ಸಂಘಶಕ್ತಿ ಬೆಳೆಯುತ್ತದೆ ಎಂದರು.
ನೂತನ ಒಕ್ಕೂಟಗಳ ಉದ್ಘಾಟನೆಯೊಂದಿಗೆ ಅಧ್ಯಕ್ಷ ಉಪಾಧ್ಯಕ್ಷ ಹಾಗೂ ಪದಾಧಿಕಾರಿಗಳನ್ನು ನೇಮಿಸಿದ್ದು ಇವರ ಅಧಿಕಾರಾವಧಿ 2ವರ್ಷಗಳಿದ್ದು ಇವರು ಗ್ರಾಮಗಳಲ್ಲಿ ಸಾಮಾಜಿಕ ಕೆಲಸಗಳು, ಶ್ರಮದಾನ ಕಾರ್ಯಗಳು, ತರಬೇತಿಗಳ ಆಯೋಜನೆಯನ್ನು ಏರ್ಪಡಿಸಿ ಗ್ರಾಮದ ಅಭಿವೃದ್ದಿ ಮಾಡಬೇಕಾಗಿದೆ ಎಂದರು.
ತಮ್ಮಡಿಹಳ್ಳಿ ಮಠದ ಡಾ.ಅಭಿನವ ಮಲ್ಲಿಕಾಜರ್ುನದೇಶೀಕೇಂದ್ರಸ್ವಾಮಿ ಮಾತನಾಡಿ 3 ಬಾರಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸಂಘಗಳ ನೂತನ ಒಕ್ಕೂಟಗಳ ಉದ್ಘಾಟನ ಕಾರ್ಯಕ್ರಮಗಳಿಗೆ ಭಾಗವಹಿಸಿ ಯೋಜನೆಯ ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮಗಳ ಬಗ್ಗೆ ತಿಳಿದಿದ್ದೇನೆ, ಕಾರ್ಯಕ್ರಮಗಳ ತರಬೇತಿ, ಶ್ರಮದಾನ ಶಿಬಿರ ಹಾಗೂ ಇನ್ನಿತರ ಉಪಯೋಗ ಕಾರ್ಯಕ್ರಮಗಳಿಂದ  ಗ್ರಾಮಗಳ ಅಭಿವೃದ್ದಿ ಹಾಗೂ ಜನರ ಸಂಘಟನೆಯಾಗುತ್ತಿರುವುದು ಸಂತೋಷಕರ ವಿಷಯ ಎಂದರು. 
ತಾ.ಪಂ.ಸದಸ್ಯ ನಿರಂಜನಮೂತರ್ಿ ಮಾತನಾಡಿ ಆಥರ್ಿಕವಾಗಿ ಹಿಂದುಳಿದವರಿಗೆ ಸಂಸ್ಥೆ ಸಾಲ ನೀಡುವ ಮೂಲಕ ಜನಸಹಕಾರಿ ಕಾರ್ಯ ಮಾಡುತ್ತಿದೆ ಇದರಿಂದ ಗ್ರಾಮೀಣರ ಬದುಕು ಉತ್ತಮವಾಗುತ್ತದೆ, ಇಂತಹ ಸಂಸ್ಥೆಗಳ ಜೊತೆಗೆ ಸಕರ್ಾರ ಕೈಜೋಡಿಸಲು ಮುಂದೆ ಬಂದರೆ  ಜನರ ಭಾತೃತ್ವ ಭಾವನೆ ಉತ್ತಮವಾಗಿ ಗ್ರಾಮಗಳ ಅಭಿವೃದ್ದಿಯಾಗುತ್ತದೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮತಿಘಟ್ಟ ಒಕ್ಕೂಟದ ಅಧ್ಯಕ್ಷ ಬಿ.ಆರ್.ರಾಜು ಮಾತನಾಡಿ ಈ ಯೋಜನೆಯಿಂದ ಸಂಘಟನೆಯ ಬೆಳವಣಿಗೆಯಾಗುತ್ತದೆ, ಒಬ್ಬರು ಇನ್ನೊಬ್ಬರ ಸಹಾಯಕ್ಕೆ, ಇನ್ನೊಬ್ಬರಿಗೆ ಮತ್ತೊಬ್ಬರು ಸಹಾಯ ಮಾಡುವ ಉತ್ತಮ ಯೋಜನೆಯು ಒಕ್ಕೂಟದಲ್ಲಿದೆ ಹಾಗೂ ಯೋಜನೆಯಿಂದ ಸದಸ್ಯರಿಗೆ ಹಲವಾರು ಸೌಲಭ್ಯಗಳು ದೊರಕುತ್ತಿವೆ ಈ ಯೋಜನೆಯು ಇನ್ನಷ್ಟು ಉತ್ತಮವಾಗಲು ಪದಾಧಿಕಾರಿಗಳೊಂದಿಗೆ ಗ್ರಾಮದ ಜನತೆ ಸಹಕಾರ ನೀಡಬೇಕು ಎಂದರು.
ಸಮಾರಂಭದಲ್ಲಿ ಮತಿಘಟ್ಟ ಹಾಗೂ ಮಾದಾಪುರ ಒಕ್ಕೂಟದ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಲಾಯಿತು.
ಸಮಾರಂಭದಲ್ಲಿ ಜಿ.ಪಂ.ಸದಸ್ಯೆ ಜಾನಮ್ಮರಾಮಚಂದ್ರಯ್ಯ,  ಗ್ರಾ.ಪಂ.ಅಧ್ಯಕ್ಷ ಎಂ.ಎಸ್.ಮಹೇಶ್, ಮುಖ್ಯಶಿಕ್ಷಕ ಷಣ್ಮುಕಸ್ವಾಮಿ ಶಿಕ್ಷಕ ಶ್ಯಾಮಸುಂದರ್ ಹಾಜರಿದ್ದರು.

No comments:

Post a Comment