Saturday, January 14, 2012


ನೆನಪಿನಂಗಳದಿಂದ ಹೊರಬಂದ
ಗುರುವೇ ನಮಃ
                  ಪಾಂಡುರಂಗ ಜೆ.
                                ಕಾಲಯೇ ತಸ್ಮೈ ನಮಃ ಎಂಬಂತೆ ಕಾಲ ಉರುಳಿದಂತೆ ಜೀವನ ಸಾಗುವುದು, ಜೀವನ ಸಾಗುತ್ತಾ ಕಷ್ಟ-ಸುಖಗಳ ಏರುಪೇರು, ಸಂಭ್ರಮದ ಕಾರುಬಾರು ಕಂಡರೂ ಮನವರಿಕೆಯಾಗುವುದು ಮಾತ್ರ ಜೀವನದ ಕೊನೆ ಘಟ್ಟದಲ್ಲಿ ಎಂಬುದು ಜೀವಿಗಳ ವಿಲಕ್ಷಣ ಆದರೂ, ಕಾಲಕ್ಕೆ ಎಲ್ಲರೂ ತಲೆಬಾಗಬೇಕೆನ್ನುವುದು ಉತ್ತಮ ಗುಣ.
ಕನಸು ಕಾಣುವುದು ಮನುಷ್ಯನ ಸಹಜ ಗುಣ, ಆ ಕನಸನ್ನು ನನಸು ಮಾಡಲು ಇತರರ ಬಾಳಿಗೆ ಮುಳ್ಳಾಗುವುದು ಮೂರ್ಖತನವಾಗಿದೆ. ಕನಸನ್ನು ನನಸು ಮಾಡಬೇಕೆಂಬ ಜಂಜಾಟದಲ್ಲಿ ನಾವು ಏನು ಮಾಡುತ್ತಿದ್ದೇವೆ, ಏನು ಮಾಡಬೇಕೆಂಬದು ನಮ್ಮ ಅರಿವಿಗೆ ಬರದೇ ಇತರರ ಆಸೆಗಳನ್ನು ನುಚ್ಚು ನೂರು ಮಾಡುವುದು ನಮ್ಮ ತಿಳುವಳಿಕೆಗೆ ಬರದು.
ಪ್ರತಿಯೊಂದು ಸಮಯದಲ್ಲೂ ಇತರರಿಗಿಂತ ನಾನು ಮೊದಲಾಗಬೇಕು, ನನ್ನ ಕೈ ಮೊದಲಾಗಬೇಕು, ನಾನು ಅಂದುಕೊಂಡದ್ದು ನಡೆಯಲೇಬೇಕು ಎನ್ನುವ ಸ್ವಾರ್ಥ ಹೆಚ್ಚಾಗಬಾರದು, ಅದು ಹೆಚ್ಚಾದಂತೆ ಇತರರನ್ನು ತುಳಿಯಬೇಕೆಂಬ ದುರಾಸೆ ಉಂಟಾಗುತ್ತದೆ. ಆ ಸಂದರ್ಭದಲ್ಲಿ  ಸಮಸ್ಯೆಗಳು ಉಂಟಾಗುತ್ತದೆ. ಸಮಸ್ಯೆಗಳನ್ನು ಸಮಥರ್ಿಸಿಕೊಳ್ಳಲು ಪ್ರತಿಷ್ಠೆ ತೋರ್ಪಡಿಸುತ್ತಾ ತಮ್ಮ ಗೌರವವನ್ನು ಕೆಡಿಸಿಕೊಂಡು ಭವಿಷ್ಯ ಹಾಳುಮಾಡಿಳ್ಳುವ ಸಂದರ್ಭ ಎದುರಾಗುತ್ತದೆ.
ನಿಮ್ಮ ಭವಿಷ್ಯಕ್ಕೆ ನೀವೇ ಹೊಣೆ, ಎಂಬ  ಸ್ವಾಮಿ ವಿವೇಕಾನಂದರ ಸಂದೇಶ ವಾಣಿ ಸತ್ಯವಾಗಿದೆ, ನಾವು ಏನಾಗಿರುವೆವೋ ಅದಕ್ಕೆ ನಾವೆ ಹೊಣೆ, ನಾವು ಏನಾಗಬೇಕೆಂದು ನಮ್ಮ ಇಚ್ಛೆಯಿರುವುದೋ ಹಾಗಾಗಲು ಶಕ್ತಿಯು ನಮ್ಮಲ್ಲಿಯೇ ಇರುವುದು ಅದಕ್ಕಾಗಿ ಇತರರಿಗೆ ವಂಚಿಸಬಾರದಾಗಿದೆ, ಈಗ ನಾವೇನಾಗಿರುವೆವೋ ಅದು ನಮ್ಮ ಪೂರ್ವಕರ್ಮಗಳ ಫಲವಾಗಿದ್ದಲ್ಲಿ ಮುಂದೆ ನಾವು ಹೇಗಾಗಬೇಕೆಂದು ನಮ್ಮ ಇಚ್ಛೆಯಿರುವುದೋ ಅದು ನಮ್ಮ ವರ್ತಮಾನ ಕರ್ಮದಿಂದಾಗಲು ಸಾಧ್ಯವಾಗುತ್ತದೆ ಆದ್ದರಿಂದ ಕಾರ್ಯ ಮಾಡುವಾಗ ರೀತಿ ನೀತಿಗಳ ಜೊತೆಯಾಗಿ ನಿರ್ವಹಿಸಬೇಕಾಗಿದೆ.
ಹೊಡೆದು ಆಳುವ ನೀತಿಯನ್ನು ಅನುಸರಿಸಿದ ಹಿಟ್ಲರ್ನಂತೆ ಸಮಾಜದಲ್ಲಿ ಜಾತಿಗಳು, ಧಾಮರ್ಿಕ ಭಾವನೆಗಳು, ಸಂಸ್ಕೃತಿ-ಸಾಹಿತ್ಯಗಳನ್ನು ಬಳಸಿಕೊಂಡು ಅವುಗಳಿಂದ ದಾರಿತಪ್ಪಿಸುವ ಮೂಲಕ ಸಮಾಜ ಅಧೋಗತಿಗೆ ಮುಂದಾಗುತ್ತಿದೆ, ಎನ್ನುವುದಕ್ಕಿಂತಲೂ ಅಧೋಗತಿಗೆ ಸಮಾಜವನ್ನು ತಳ್ಳಲ್ಪಡುತ್ತಿದ್ದಾರೆ.
ಪ್ರತಿಯೊಂದು ಸ್ವಾರ್ಥ ಕ್ರಿಯೆಯೂ ನಾವು ಗುರಿಯನ್ನು ಮುಟ್ಟಲು ಅಡ್ಡಿಯುಂಟು ಮಾಡುತ್ತದೆ ಮತ್ತು ಪ್ರತಿಯೊಂದು ನಿಸ್ವಾರ್ಥ ಕ್ರಿಯೆಯೂ ನಮ್ಮನ್ನು ಗುರಿಯಡೆಗೆ ಒಯ್ಯುತ್ತದೆ ಆದ್ದರಿಂದ ನೈತಿಕತೆಯನ್ನು ಬೆಳಸಿಕೊಳ್ಳಬೇಕಾಗುತ್ತದೆ.
ಒಳ್ಳೆಯ ಸಂಸ್ಕಾರಗಳಿದ್ದರೆ ಕೆಟ್ಟ ಆಲೋಚನೆಗಳನೆಲ್ಲಾ ಸಂಸ್ಕಾರ ದೂರ ಮಾಡುವುದು, ಅರಿವೇ ಇಲ್ಲದೆ ಮಾಡುವ ಕೆಲಸ ಮತ್ತು ಆಲೋಚನೆಗಳ ಮೇಲೆ ತಮ್ಮ ಪ್ರಭಾವವನ್ನು ಸಂಸ್ಕಾರ ಬೀರುವುದು. ಹೀನ ಸಂಸ್ಕಾರಗಳು ಇರುವವರೆಗೆ ಕೆಟ್ಟ ಕರ್ಮಗಳನ್ನು ಮಾಡುವುದು,  ಇಂತಹ ಅನೇಕ ಸಂಸ್ಕಾರಗಳು ಮನಸ್ಸಿನಲ್ಲಿದ್ದರೆ ಅವು ಕಲೆತು ಅಭ್ಯಾಸವಾಗಿ ಸಮಾಜ ಅಂಧಪತನಕ್ಕೆ ದೂಡಲ್ಪಡುತ್ತದೆ.  ಈ ರೀತಿಯ ಹಲವು ಸಮಾಜ ಕಂಟಕ ಹಾಗೂ ಇತರರಿಗೆ ಸಮಸ್ಯೆ ನೀಡುವವರಿಗೆ  ಇದು ನೀಡುವ ಸಂದರ್ಭದಲ್ಲಿ ಉತ್ತಮವೆನಿಸಿದರೂ ಅವರ ಜೀವನದ ಕಡೆ ಗಳಿಗೆಯಲ್ಲಿ ನೋವು ಅನುಭವಿಸುವುದು ತಪ್ಪುವುದಿಲ್ಲ, ಠ  ಇಂತಹ ಕೆಟ್ಟ ಅಭ್ಯಾಸವನ್ನು ಅಡಗಿಸಬೇಕಾದರೆ ನನ್ನಿಂದಲೇ ಎಲ್ಲಾ ಎನ್ನುವ (ವಾದ) ಅಹಂಕಾರ,  ಬಿಟ್ಟು ಅದಕ್ಕೆ ವಿರೋಧವಾದ ಒಳ್ಳೆಯ ಅಭ್ಯಾಸದೊಂದಿಗೆ ಪ್ರೀತಿ, ವಿಶ್ವಾಸ, ಸ್ನೇಹದೊಂದಿಗೆ ಸಹಕರಿಸುವ ರೂಢಿಯೊಂದೇ ದಾರಿಯಾಗಿದ್ದು  ಎಲ್ಲಾ ಕೆಟ್ಟ ಅಭ್ಯಾಸವನ್ನು ಒಳ್ಳೆಯ ಅಭ್ಯಾಸದಿಂದ ನಿಗ್ರಹಿಸುತ್ತಾ ಉತ್ತಮರೆನಿಸಬಹುದು ಆದರೆ  ಈ ಸಮಯದಲ್ಲಿ ತಮ್ಮ ಕಾರ್ಯಗಳಿಗೆ ಎದುರಾಗುವ  ಹಲವಾರು ನಿಂದನೆಗಳು, ಟೀಕೆಗಳಿಗೆ ಕಿವಿಗೊಡದೆ ಮುಂದಾಗಿ ತಮ್ಮ ಕಾರ್ಯ ಯಶಸ್ವಿಗೊಳಿಸಬೇಕು, ಏಳಿ ಏದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂಬಂತೆ ಮುಂದಾಗುತ್ತಾ    ಉತ್ತಮ  ಆಲೋಚನೆಗಳನ್ನು ಮೈಗೂಡಿಸಿಕೊಳ್ಳಬೇಕು. 

                                          


No comments:

Post a Comment