ತಾಲೂಕಿಗೆ ಶೀಘ್ರ ಡಿಪ್ಲೋಮ ಕಾಲೇಜ್ ಮಂಜೂರು ಮಾಡಲು ಆಗ್ರಹಿಸಿ ರಸ್ತೆಗಿಳಿದ ವಿದ್ಯಾಥರ್ಿಗಳು
ಚಿಕ್ಕನಾಯಕನಹಳ್ಳಿ,ಜ.13 : ತಾಲ್ಲೂಕಿನ ವಿದ್ಯಾಥರ್ಿಗಳಿಗೆ ತಾಂತ್ರಿಕ ಕೋಸರ್್ಗಳ ಅವಶ್ಯಕತೆ ಹೆಚ್ಚಿದ್ದು ಇದಕ್ಕಾಗಿ ತಾಲ್ಲೂಕಿನ ಎಲ್ಲಾ ಮುಖಂಡರು ಪಕ್ಷಭೇದ ಮರೆತು ಹೋರಾಟ ಮಾಡಬೇಕಾಗಿದೆ ಎಂದು ತಾ. ಭಾಜಪ ಅಧ್ಯಕ್ಷ ಮಿಲ್ಟ್ರಿ ಶಿವಣ್ಣ ಹೇಳಿದರು.
ತಾಲ್ಲೂಕಿಗೆ ತಾಂತ್ರಿಕ ಶಿಕ್ಷಣ ಮತ್ತು ಡಿಪ್ಲೊಮ ಕಾಲೇಜು ಅನಿವಾರ್ಯವಾಗಿದ್ದು ಸಕರ್ಾರ ತಾಲ್ಲೂಕಿಗೆ ತಾಂತ್ರಿಕ ಕಾಲೇಜನ್ನು ಮಂಜೂರು ಮಾಡಬೇಕೆಂದು ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ 2ನೇ ಹಂತದ ಪ್ರತಿಭಟನೆ ನಡೆಸಿತು.
ಪಟ್ಟಣದ ಶೆಟ್ಟಿಕೆರೆ ಗೇಟ್ ಬಳಿ ವಿದ್ಯಾಥರ್ಿಗಳು ರಸ್ತೆ ತಡೆ ನಡೆಸಿದರಲ್ಲದೆ, ಪ್ರತಿಭಟನಾ ಸ್ಥಳಕ್ಕೆ ತಹಶೀಲ್ದಾರ್ ಉಮೇಶ್ಚಂದ್ರರವರನ್ನು ಕರೆಸಿಕೊಂಡು ಪ್ರತಿಭಟನಾ ಸ್ಥಳದಲ್ಲಿ ತಹಶೀಲ್ದಾರ್ರವರಿಗೆ ಮನವಿ ಅಪರ್ಿಸಿದರು.
ಈ ಸಂದರ್ಭದಲ್ಲಿ ಅಭಾವಿಪ ತಾಲ್ಲೂಕು ಪ್ರಮುಖ್ ಚೇತನ್ಪ್ರಸಾದ್, ಸಹಕಾರ್ಯದಶರ್ಿ ದಿಲೀಪ್ ಮಾತನಾಡಿದರು.
ಬಿಜೆಪಿ ಮುಖಂಡ ಶ್ರೀನಿವಾಸಮೂತರ್ಿ, ಅಭಾವಿಪ ಕಾರ್ಯಕರ್ತರುಗಳಾದ ರವಿ, ನಂದೀಶ್, ನಂದನ್, ಗುರುಪ್ರಸಾದ್, ಹಾಗೂ ವಿದ್ಯಾಥರ್ಿಗಳು ಮುಂತಾದವರಿದ್ದರು.
ಗ್ರಾಮೀಣ ಪರಿಸರದಲ್ಲಿರುವ ಪ್ರವಾಸೋದ್ಯಮ ಕೇಂದ್ರಗಳನ್ನು ಅಭಿವೃದ್ದಿ ಪಡಿಸಿ
ಚಿಕ್ಕನಾಯಕನಹಳ್ಳಿ,ಜ.12: ಆಥರ್ಿಕ ಅಭಿವೃದ್ದಿ, ಉದ್ಯೋಗ ಅವಕಾಶಕ್ಕಾಗಿ ಹಾಗೂ ಹೊರಭಾಗದ ಜನರನ್ನು ನಮ್ಮ ಸ್ಥಳಗಳತ್ತ ಆಕಷರ್ಿಸುವ ಉದ್ದೇಶದಿಂದ ಪ್ರವಾಸೋದ್ಯಮ ಅಭಿವೃದ್ದಿ ಪಡಿಸುವುದು ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ಹೇಳಿದರು.
ಪಟ್ಟಣದ ನವೋದಯ ಕಾಲೇಜಿನಲ್ಲಿ ನಡೆದ ಪ್ರವಾಸೋದ್ಯಮ ನೆಲೆಯಾಗಿ ಕನರ್ಾಟಕ- ಸವಾಲುಗಳು ಮತ್ತು ಸಾಧ್ಯತೆಗಳು ಎಂಬ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಐತಿಹಾಸಿಕ ಸ್ಥಳ, ವೈವಿದ್ಯಮಯ ಪರಂಪರೆಗಳನ್ನು ಪರಿಚಯಿಸುವ ಮೂಲಕ ಇತಿಹಾಸ ಪರಂಪರಾ ತಾಣಗಳನ್ನು ಅಭಿವೃದ್ದಿ ಪಡಿಸಬೇಕು, ಈ ಶತಮಾನದ ಅಂಚಿಗೆ ಭಾರತ ಪ್ರವಾಸೋಧ್ಯಮದಲ್ಲಿ 2ನೇ ಸ್ಥಾನಕ್ಕೇರಲಿದೆ ಎಂದ ಅವರು, ದೇಶದಲ್ಲಿ ಪ್ರವಾಸಿ ತಾಣಗಳಿಗೆ ಮೂಲಭೂತ ಸೌಕರ್ಯಗಳ ಕೊರತೆಯೂ ಹಾಗೂ ತಾಣಗಳನ್ನು ಬೆಳಸುವಲ್ಲಿ ವೈಪಲ್ಯವೂ ಹೆಚ್ಚಾಗಿದೆ ಎಂದುರು.
ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ ಗ್ರಾಮೀಣ ಭಾಗದಲ್ಲಿರುವ ಪ್ರೇಕ್ಷಣಿಯ ಸ್ಥಳಗಳನ್ನು ಪ್ರವಾಸೋದ್ಯಮವನ್ನಾಗಿ ಅಭಿವೃದ್ದಿ ಮಾಡಿದಾಗ ಮೈಕ್ರೋ ಟೂರಿಸಂ ಅಭಿವೃದ್ದಿ ಹೊಂದುತ್ತದೆ, ಆಗ ಟೂರಿಂಸ್ನ ನಕ್ಷೆಯಲ್ಲಿರುವ ಪ್ರದೇಶಗಳು ಅಭಿವೃದ್ದಿ ಹೊಂದಿ ಪ್ರೇಕ್ಷಣಿಯ ಸ್ಥಳಗಳ ಮಹಿಮೆ ತಿಳಿಯುತ್ತದೆ ಎಂದರಲ್ಲದೆ, ಒಂದು ತಿಂಗಳು ರಾಜ್ಯಾದ್ಯಂತ ಪ್ರವಾಸ ಮಾಡಿದರೂ ರಾಜ್ಯದ ಪ್ರೇಕ್ಷಣಿಯ ಸ್ಥಳಗಳನ್ನು ಪೂತರ್ಿ ನೋಡಲು ಆಗುವುದಿಲ್ಲ ಆದರೂ ಬೇರೆ ರಾಜ್ಯಗಳಿಗೆ ಪ್ರವಾಸ ಹೋಗುತ್ತಾರೆ, ಇದಕ್ಕೆ ಕಾರಣ ಪ್ರೇಕ್ಷಣಿಯ ಸ್ಥಳಗಳಲ್ಲಿನ ನಿರಾಸಕ್ತಿಯಾಗಿದೆ, ಪ್ರೇಕ್ಷಣೀಯ ಸ್ಥಳಗಳ ಮಹಿಮೆಯನ್ನು ಲಿಖಿತ ಬರಹದ ಮೂಲಕ ನೋಡುಗರಿಗೆ ತಿಳಿಸಿದರೆ ರಾಜ್ಯಕ್ಕೂ ವಿದೇಶಿಗರೂ ಹೆಚ್ಚಿನದಾಗಿ ಬರುತ್ತಾರೆ ಎಂದರು.
ಪ್ರವಾಸದ ಬಗ್ಗೆ ಪ್ರವಾಸೋಧ್ಯಮ ಇಲಾಖೆ ಹೆಚ್ಚುಪ್ರಚಾರ ನೀಡಬೇಕು ಆ ಸ್ಥಳದ ಐತಿಹ್ಯ ಲಿಖಿತ ಬರವಣಿಗೆ ಮೂಲಕ ಇರಬೇಕು ಆಗ ಜನಸಾಮಾನ್ಯರು ಇತಿಹಾಸದ ಬಗ್ಗೆ ಸವಿವರವಾಗಿ ತಿಳಿದು ಪ್ರವಾಸದ ಬಗ್ಗೆ ಇತರರಿಗೂ ತಿಳಿಸುತ್ತಾರೆ ಎಂದರು.
ಬೆಂಗಳೂರು ವಿ.ವಿ.ಯ ಇತಿಹಾಸ ವಿಭಾಗದ ಪ್ರೊ.ಡಾ.ಎಸ್ ಷಡಾಕ್ಷರಿ ಮಾತನಾಡಿ ಸಾಂಸ್ಕೃತಿಕ, ಸಂಪ್ರದಾಯ ಹಬ್ಬಗಳ ಆಚರಣೆಯನ್ನು ಉಳಿಸಿಕೊಂಡು ಆ ಮೂಲಕ ಇತಿಹಾಸ ವೈಭವವನ್ನು ತಿಳಿಸುವಲ್ಲಿ ಕನರ್ಾಟಕ ರಾಜ್ಯ ಮುಂಚೂಣಿಯಲ್ಲಿದೆ, ಕನರ್ಾಟಕ ಶಕ್ತಿ ಸಂಪನ್ಮೂಲಗಳ ಬಳಕೆ ಹೊಂದಿದೆ ಆದರೆ ಅದು ಶಕ್ತವಾಗಿ ಬಳಕೆಯಾಗದೆ ನಶಿಸುತ್ತಿದೆ, ರಾಜ್ಯದ ಪ್ರೇಕ್ಷಣೀಯ ಸ್ಥಳಗಳು, ಇತಿಹಾಸ ದಾಖಲೆ ಹೊಂದಿದ ಸ್ಥಳಗಳಲ್ಲಿ ರಕ್ಷಣೆಯಿಲ್ಲದೆ ಹಾಳಾಗುತ್ತಿದೆ, ಇಲ್ಲಿನ ಸುಂದರ ಶಿಲೆಗಳು, ಗೋಡೆಗಳಲ್ಲಿರುವ ದಾಖಲೆಗಳನ್ನು ವಿರೂಪಗೊಳಿಸುವ ಮೂಲಕ ಇತಿಹಾಸ ದಾಖಲೆಗಳನ್ನು ಹಾಳುಗೆಡುವುತ್ತಿರುವುದು ಉತ್ತಮ ಬೆಳವಣಿಗೆ ಅಲ್ಲ ಇದರ ಬಗ್ಗೆ ಸಕರ್ಾರ ಗಮನಹರಿಸಿ ಸೂಕ್ತ ನಿಧರ್ಾರ ತಾಳಬೇಕು ಎಂದರು.
ಸಮಾರಂಭದಲ್ಲಿ ನವೋದಯ ಎಜುಕೇಷನ್ ಸೊಸೈಟಿಯ ಉಪಾಧ್ಯಕ್ಷ ಪ್ರೊ.ಎಂ.ರೇಣುಕಾರ್ಯ, ಕಾರ್ಯದಶರ್ಿ ಬಿ.ಕೆ.ಚಂದ್ರಶೇಖರ್, ಪ್ರಾಂಶುಪಾಲ ಕೆ.ಸಿ.ಬಸಪ್ಪ, ರಾಮಚಂದ್ರಪ್ಪ, ವೆಂಕಟರಾಮನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಂತರ ಎರಡು ಅಧಿವೇಶನಗಳಲ್ಲಿ ಪ್ರವಾಸೋದ್ಯಮ ಅಭಿವೃದ್ದಿ ಪಡಿಸಲು ಇರುವ ಸಾಧ್ಯತೆಗಳು ಹಾಗೂ ಸಾವಲುಗಳ ಬಗ್ಗೆ ಉಪನ್ಯಾಸ ನಡೆಯಿತು.
ತಮ್ಮಡಿಹಳ್ಳಿ ವಿರಕ್ತ ಮಠದಲ್ಲಿ ಶ್ರೀಸಿದ್ದರಾಮ ಜಯಂತಿಯ ಧ್ವಜಾರೋಹಣ ನಡೆಯಿತು: ಡಾ.ಅಭಿನವ ಮಲ್ಲಿಕಾರ್ಜನಸ್ವಾಮಿ
ಚಿಕ್ಕನಾಯಕನಹಳ್ಳಿ,ಜ.14 : ಪೂಜೆಗೆ ಪವಿತ್ರವಾದ ಮನಸ್ಸು, ಶುದ್ದ ಹೃದಯ ಅಗತ್ಯ, ಭಗವಂತನ ಇಚ್ಛೆಯಂತೆ ಎಲ್ಲರೂ ನಡೆಯಬೇಕಾಗುತ್ತದೆ, ಯಾವ ಕಾರ್ಯ ಎಲ್ಲಿ, ಯಾವಾಗ, ಯಾರಿಂದ ನಡೆಯಬೇಕೆಂಬುದು ಜಗದ ನಿಮರ್ಾಪಕನ ತೀಮರ್ಾ ಅದರಂತೆ ಇಂದು ತಮ್ಮಡಿಹಳ್ಳಿ ಕ್ಷೇತ್ರದಲ್ಲಿ ಸಿದ್ದರಾಮಜಯಂತಿ ಅಂಗವಾಗಿ ಧ್ವಜಾರೋಹಣ ನೆರವೇರಿಸಲಾಗುತ್ತಿದೆ ಎಂದು ತಮ್ಮಡಿಹಳ್ಳಿ ವಿರಕ್ತ ಮಠಾಧ್ಯಕ್ಷರಾದ ಡಾ.ಅಭಿನವ ಮಲ್ಲಿಕಾಜರ್ುನದೇಶೀಕೇಂದ್ರಸ್ವಾಮಿ ನುಡಿದರು.
ಅವರು ಭಕ್ತರ ಕೋರಿಕೆಯಂತೆ ತಮ್ಮಡಿಹಳ್ಳಿ ವಿರಕ್ತಮಠದಲ್ಲಿ ಶ್ರೀ ಗುರುಸಿದ್ದರಾಮೇಶ್ವರ ಜಯಂತಿಯ ಧ್ವಜಾರೋಹಣ ನೆರವೇರಿಸಿ ಆಶೀರ್ವಚನ ನೀಡಿದರು.
ಭಕ್ತರು ಮತ್ತು ಸಮಾಜ ಒಂದೆಡೆ ಸೇರಿ ಭಗವಂತನ, ಸ್ಮರಣೆ ಮಾಡಬೇಕೆಂಬುದು ನಮ್ಮ ಲಿಂಗೈಕ್ಯ ಶ್ರೀಗಳ ಇಚ್ಛೆಯಾಗಿತ್ತು, ಅದರಂತೆ ಈಗ್ಗೆ 38 ವರ್ಷಗಳ ಹಿಂದೆ ಅರಸೀಕೆರೆಯಲ್ಲಿ ಕೆಲವೇ ಭಕ್ತರನ್ನು ಕೂಡಿಕೊಂಡು, ಪ್ರಥಮವಾಗಿ ಸಿದ್ದರಾಮ ಜಯಂತಿಯನ್ನು ಹಿರಿಯ ಶ್ರೀಗಳು ಧ್ವಜಾರೋಹಣ ನೆರವೇರಿಸುವುದರೊಂದಿಗೆ ಆಚರಣೆಗೆ ತರಲಾಯಿತು. ಅದರಂತೆ ಅಂದಿನಿಂದ ಇಂದಿನವರೆಗೂ ಶ್ರೀ ಗುರುಸಿದ್ದರಾಮೇಶ್ವರರ ಜಯಂತಿ ರಾಜ್ಯದಲ್ಲಿ ಎಲ್ಲೇ ನಡೆದರೂ ಅಷ್ಟೇ ಏಕೆ ನೆರೆಯ ಮಹಾರಾಷ್ಟ್ರ ಮತ್ತು ಆಂದ್ರಪ್ರದೇಶಗಳಲ್ಲಿ ಜಯಂತೆ ನಡೆದಾಗಲೂ ಸಹ ಶ್ರೀ ಮಠದ ಗುರುಗಳಿಂದಲೇ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸುವುದು ನಡೆದುಕೊಂಡು ಬಂದ ಪರಂಪರೆಯಾಗಿದೆ.
ಈ ವರ್ಷ ತಿಪಟೂರು ತಾಲೂಕು ಕೆರೆಗೋಡಿ ರಂಗಾಪುರದಲ್ಲಿ ನಡೆಯುತ್ತಿರುವ 39ನೇ ಜಯಂತಿಯಲ್ಲಿ ಈ ಪರಂಪರೆಯನ್ನು ಬದಿಗೊತ್ತಿ ಭಕ್ತರ ಮನಸ್ಸನ್ನು ಘಾಸಿಗೊಳಿಸಲಾಗಿದೆ. ಸಿದ್ದರಾಮರ ಚಿಂತನೆಯನ್ನು ನಮ್ಮ ಶ್ರೀಗಳು ಅವಿಚ್ಛನವಾಗಿ ನಡೆಸಿಕೊಂಡು ಬಂದ ಪರಂಪರೆ ನಿಂತುಹೋಗಬಾರದೆಂಬ ಭಕ್ತರ ಒತ್ತಾಯಕ್ಕೆ ನಾವೆಲ್ಲ ಇಂದು ಇಲ್ಲಿ ಸೇರಿದ್ದೇವೆ, ಮಲ್ಲಯ್ಯನಿರುವಲ್ಲಿ ಸಿದ್ದರಾಮನೆಂಬುವಂತೆ ಮಲ್ಲಿಕಾಜರ್ುನ ಕ್ಷೇತ್ರದಲ್ಲಿ ಪ್ರಥಮವಾಗಿ ಮತ್ತು ವಿದ್ಯುಕ್ತವಾಗಿ ಜಯಂತಿಯನ್ನು ಆಚರಿಸುವುದರೊಂದಿಗೆ ಅಂಕುರಾರ್ಪಣೆ ಮಾಡಿದ್ದೇವೆ, ನಮಗೆ ಜನಜಂಗುಳಿ ಅದ್ದೂರಿ ಮುಖ್ಯವಲ್ಲ ನಾವು ಮಾಡುವ ಕಾರ್ಯ ಮುಖ್ಯ, ಸಿದ್ದರಾಮ ಎಂದು ಕಾಯಕವನ್ನೇ ನಂಬಿ ಬದುಕಿದವನು ನಮ್ಮ ದೇಶದ ಸಂವಿಧಾನ ನಿಮರ್ಾಣಕ್ಕೆ ಅನುಭವ ಮಂಟಪವೇ ಸ್ಪೂತರ್ಿ, ಆದ್ದರಿಂದ ಧರ್ಮದ ನೆಲೆಗಟ್ಟಿನ ಮೇಲೆ ಸಂವಿಧಾನ ನಿಂತಿದೆ, ಮಠಕ್ಕೆ ಭೌತಿಕ ಆಸ್ತಿ ಇಲ್ಲದಿದ್ದರೂ ವಿಚಾರ ಪರಂಪರೆ ನಿಧಿ ಇದೆ, ಮುಂದಿನ ದಿನಗಳಲ್ಲಿ ಜನವರಿ 13 ಹಿರಿಯ ಶ್ರೀಗಳ ಲಿಂಗೈಕ್ಯ ದಿನವನ್ನು ಒಳಗೊಂಡಂತೆ 13 14 15 ಮೂರು ದಿನಗಳ ಕಾಲ ಸಿದ್ದರಾಮ ಜಯಂತಿಯನ್ನು ಅನುಚಾನವಾಗಿ ನಡೆಸಿಕೊಂಡು ಹೋಗುವಂತೆ ಭಕ್ತರ ಮನೋಭಿಲಾಷೆಯನ್ನು ಈಡೇರಿಸಲಾಗುವುದು ಎಂದು ಅವರು ಈ ಸಂದರ್ಭದಲ್ಲಿ ನೆರೆದಿದ್ದ ಭಕ್ತರಿಗೆ ತಿಳಿಸಿದರು.
ನನಗೆ ನೋವಾದರೆ ನಾನು ಸಹಿಸುತ್ತೇನೆ, ಆದರೆ ಭಕ್ತರ ಮನಸ್ಸಿಗೆ ನೋವಾದರ ಸಹಿಸುವುದಿಲ್ಲ, ಮಠದ ಪರಂಪರೆಗೆ ಗಾಸಿಯಾದ ಈ ಸೂತಕದ ಛಾಯೆ ಭಕ್ತರ ಮನಸ್ಸಿಗೆ ನೋವಾಗಿದೆ, ವ್ಯಕ್ತಗಿಂತ ಸಮಾಜ, ಸಮಾಜಕ್ಕಿಂತ ದೇಶ ಮುಖ್ಯ, ಯಾವುದೇ ಮಠ ಮತ್ತು ಸ್ವಾಮಿಗಳು ಪ್ರಸಿದ್ದಿ ಹೊಂದಬೇಕಾದರೆ ಭಕ್ತ ಸಮೂಹದ ಆಶಯ ಮುಖ್ಯ ಎಂದರು.
ಹಿರಿಯ ಶ್ರೀಗಳು ನನಗೆ ಹಣ, ಆಸ್ತಿ ನೀಡಿಲ್ಲ, ಮಲ್ಲಿಕಾಜರ್ುನ ಬೆಟ್ಟದಷ್ಟು ಭಕ್ತ ಸಮೂಹ ನೀಡಿದ್ದಾರೆ. ಈ ಜಯಂತಿ ಆಚರಣೆಗೆ ಯಾರ ವಿರುದ್ದವೂ ಅಲ್ಲ, ಭಕ್ತರ ಅಬಿಷ್ಠೆಯನ್ನು ನೆರವೇರಿಸುವುದಷ್ಟೇ ನಮ್ಮ ಕರ್ತವ್ಯ ಎಂದರು.
ಸಿದ್ದಲಿಂಗಶಾಸ್ತ್ರೀಯವರ ವೇದಘೋಷದೊಂದಿಗೆ ಪ್ರಾರಂಭವಾದ ಧಾಮರ್ಿಕ ಕಾರ್ಯಕ್ರಮದಲ್ಲಿ , ಮೈಸೂರಪ್ಪ, ದಿನೇಶ್, ಶ್ಯಾಮಸುಂದರ್, ಸಿದ್ದರಾಮಣ್ಣ, ಮತ್ತಿಹಳ್ಳಿ ಸಿದ್ದರಾಮಣ್ಣ, ನಿಟ್ಟೂರು ಪ್ರಕಾಶ್, ಕಾಂತರಾಜು, ಮಡೇನೂರು ಚಂದ್ರಣ್ಣ, ಗುಬ್ಬಿ ಉಮೇಶ್ ಮತ್ತಿತರರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಹೀರಲಿಂಗನಗೆರೆ ಮಹಾಲಿಂಗಯ್ಯ ಪ್ರಾಥರ್ಿಸಿದರೆ ಶ್ಯಾಮಸುಂದರ್ ರಾಜಶೇಖರ್ ನಿರೂಪಿಸಿದರು.
ಉಪನ್ಯಾಸಕರ 8ದಿನಗಳ ವೇತನ ಕಡಿತ ಆದೇಶ ರದ್ದು ಪಡಿಸಿ: ವೈ.ಎ.ಎನ್.
ಚಿಕ್ಕನಾಯಕನಹಳ್ಳಿ,ಜ.14 : ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರ ವೇತನ ತಾರತಮ್ಮ ನಿವಾರಿಸಲು ಉಪನ್ಯಾಸಕರು ಹೋರಾಟ ಕೈಗೊಂಡು ಸಂದರ್ಭದಲ್ಲಿ ಮುಷ್ಕರ ನಡೆಸಿದ 8 ದಿನಗಳ ವೇತನ ಕಡಿತ ಮಾಡಿರುವುದು ಸಮಂಜಸವಲ್ಲ, ಇಲಾಖೆ ಹೊರಡಿಸಿರುವ ಸುತ್ತೋಲೆಯನ್ನ ತಕ್ಷಣ ಹಿಂಪಡೆಯಬೇಕು ಎಂದು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಆಗ್ರಹಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತಿಭಟನೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರ ಹಕ್ಕಾಗಿದೆ, ಪ್ರತಿಭಟನೆ ಹತ್ತಿಕ್ಕುವವರಿಗೆ ಮುಖ್ಯಮಂತ್ರಿಗಳು ತಾಕೀತು ಮಾಡಬೇಕು, ಮುಖ್ಯಮಂತ್ರಿಗಳು ಮಧ್ಯ ಪ್ರವೇಶ ಮಾಡಿ ಉಪನ್ಯಾಸಕರ 8 ದಿನಗಳ ವೇತನ ತಕ್ಷಣ ಬಿಡುಗಡೆ ಮಾಡಬೇಕು, ಈ ಬಗ್ಗೆ ಮಾಚರ್್ ಬಜೆಟ್ನಲ್ಲಿ ಅದರ ಬಗ್ಗೆ ಮಂಡಿಸಬೇಕು, ನಾನು ಎಂ.ಎಲ್.ಸಿ ಆದ ಐದು ವರ್ಷದ ಅವಧಿಯಲ್ಲಿ ಹಲವು ವಿಷಯಗಳ ಬಗ್ಗೆ ವಿಧಾನ ಪರಿಷತ್ನಲ್ಲಿ ಹೋರಾಟ ಮಾಡಿ ಸುಮಾರು 4 ಸಾವಿರ ಸಹಶಿಕ್ಷಕರಿಗೆ ಮುಖ್ಯ ಶಿಕ್ಷಕಕರಾಗಿ ಮುಂಬಡ್ತಿ ಪಡೆಯಲು ಸಹಕರಿಸಿರುವುದಲ್ಲದೆ, 529 ಉಪನ್ಯಾಸಕರಿಗೆ ಖಾಯಂಆತಿ ಅದೇಶಕ್ಕೆ ದುಡಿದಿದ್ದೇನೆ, 2500 ಸಾವಿರ ಅರೆಕಾಲಿಕ ಶಿಕ್ಷಕರನ್ನು ಖಾಯಂ, ಹೆಚ್ಚುವರಿ ಶಿಕ್ಷಕರಿಗೆ ವೇತನ ಕೊಡಿಸುವಲ್ಲಿ ಶ್ರಮಿಸಿರುವುದಾಗಿ ಹೇಳಿಕೊಂಡರಲ್ಲದೆ, 1991ರ ತನಕ ಪ್ರಾರಂಭವಾದ ಎಲ್ಲಾ ಖಾಸಗಿ ಶಾಲೆಗಳಿಗೆ ಅನುದಾನ ಕೊಡಿಸುವಲ್ಲಿ, 94-95ರ ಸಂದರ್ಭದಲ್ಲಿ ಪ್ರಾರಂಭವಾದ ಶಾಲೆಗಳಿಗೆ ಸಕರ್ಾರ ಅನುದಾನ ಕೊಡಿಸುವುದನ್ನು ಮಾಚರ್್ ತಿಂಗಳಲ್ಲಿ ಘೋಷಣೆ ಮಾಡುವಂತೆ ಒತ್ತಾಯಿಸಿರುವುದಾಗಿಯೂ ತಿಳಿಸಿದರು.
ಈ ಸಂದರ್ಭದಲ್ಲಿ ತಾ.ಭಾ.ಜ.ಪ ಅಧ್ಯಕ್ಷ ಶಿವಣ್ಣ ಮಿಲ್ಟ್ರಿ, ಮುಖಂಡ ಶ್ರೀನಿವಾಸ ಮೂತರ್ಿ, ಸಿ.ಎಂ.ಗಂಗಾಧರ್, ಎಂ.ಎಲ್.ಮಲ್ಲಿಕಾರ್ಜನಯ್ಯ, ಅರುಣ್ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಚಿಕ್ಕನಾಯಕನಹಳ್ಳಿ,ಜ.14 : ಗ್ರಾಮೀಣ ಪ್ರದೇಶದಲ್ಲಿ ಶ್ರೀ ಶಾರದ ವಿದ್ಯಾಪೀಠ ಸಂಸ್ಥೆ ಉತ್ತಮವಾಗಿ ಬಡಮಕ್ಕಳಿಗೆ ಶಿಕ್ಷಣ ನೀಡುತ್ತಿದೆ, ಈ ಸಂಸ್ಥೆಯ ಸೇವೆಯನ್ನು ಮೆಚ್ಚಿ ಸಂಸ್ಥೆಗೆ ಸಭಾಂಗಣ ನಿಮರ್ಿಸಲು ತಮ್ಮ ಅನುದಾನದಲ್ಲಿ 1.5 ಲಕ್ಷವನ್ನು ನೀಡುವುದಾಗಿ ಜಿ.ಪಂ.ಸದಸ್ಯೆ ಲೋಹಿತಾಬಾಯಿ ತಿಳಿಸಿದರು.
ತಾಲ್ಲೂಕಿನ ತಿಮ್ಮನಹಳ್ಳಿಯ ಶ್ರೀ ಶಾರದಾ ವಿದ್ಯಾಪೀಠ ಹಿರಿಯ ಪ್ರಾಥಮಿಕ ಮತ್ತು ಆಂಗ್ಲ ಪ್ರೌಡಶಾಲೆ, ಪದವಿ ಪೂರ್ವ ಕಾಲೇಜುಗಳ 2011-12ನೇ ಸಾಲಿನ ವಿದ್ಯಾಥರ್ಿ ಸಂಘದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಾಂಶುಪಾಲ ಎ.ಎನ್.ವಿಶ್ವೇಶ್ವರಯ್ಯ ಮಾತನಾಡಿ ಮಕ್ಕಳಿಗೆ ಸತತ ಪ್ರಯತ್ನ, ದೃಡನಿಧರ್ಾರಗಳ ಮುಖಾಂತರ ಏಳಿಗೆ ಕಾಣಬಹುದು ಎಂದರು.
ಸಮಾರಂಭದಲ್ಲಿ ಸಂಸ್ಥೆಯ ಗೌರವ ಕಾರ್ಯದಶರ್ಿಗಳು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರುಗಳು ಬಹುಮಾನ ವಿತರಣೆ ಮಾಡಿದರು.
ಕಾರ್ಯಕ್ರಮದಲ್ಲಿ ಕಣ್ಣಯ್ಯ ಸ್ವಾಗತಿಸಿದರೆ, ಪರಮೇಶ್ವರಪ್ಪ ವಂದಿಸಿದರು.
No comments:
Post a Comment