Saturday, October 20, 2012


ಚಿಕ್ಕನಾಯಕನಹಳ್ಳಿ,ಅ.16 : ತಾಲ್ಲೂಕಿನ ಹಂದನಕೆರೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಜಮೀನಿನ ಸಂಬಂಧ ಪ್ರಕರಣದ ನಡೆದಿದ್ದ ಗಲಾಟೆಯಲ್ಲಿ ಕೆಂಪಣ್ಣ ಎಂಬ ವ್ಯಕ್ತಿಗೆ ಇಲ್ಲಿನ ಅಪರ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ವೀಣಾ.ಎನ್ರವರು ಒಂದು ವರ್ಷ ಜೈಲುವಾಸ ಮತ್ತು ಐದುನೂರು ರೂಪಾಯಿ ದಂಡ ವಿಧಿಸಿ ತೀಪರ್ು ನೀಡಿದ್ದಾರೆ.
  2010, ಜೂನ11ರಂದ ದಾಖಲಾಗಿದ್ದ ಪ್ರಕರಣದ ಆರೋಪಿಗಳಾದ ಕೆಂಪಣ್ಣ, ಈತನ ಹೆಂಡತಿ ಸುಶೀಲಮ್ಮ, ಇವರ ಮಗಳು ಗೌರಮ್ಮ, ಹಾಗೂ ಗೌರಮ್ಮನ ಗಂಡ ಕೆಂಪಯ್ಯ ಇವರುಗಳು ಜಮೀನಿನ ದ್ವೇಷದಿಂದ ಸರೋಜಳಮ್ಮನನ್ನು ಹೊಡೆಯಬೇಕೆಂಬ ಉದ್ದೇಶದಿಂದ ಅವ್ಯಾಚ್ಯಾ ಶಬ್ದಗಳಿಂದ ಬೈದು, ಆರೋಪಿ ಕೆಂಪಣ್ಣ ದೊಣ್ಣೆಯಿಂದ ಆಕೆಯ ಬಲಗೈಗೆ ಹೊಡೆದು ಬಲಗೈ ಮುರಿದಿದ್ದು ಸುಶೀಲಮ್ಮ, ಗೌರಮ್ಮ, ಸರೋಜಳಮ್ಮನ ಮೇಲೆ ಆರೋಪಿತರು ಹಲ್ಲೆ ಮಾಡಿ ಸರೋಜಮ್ಮಳಿಗೆ ಪ್ರಾಣ ಬೆದರಿಕೆ ಹಾಕಿದ್ದರ ಮೇರೆಗೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿತರಿಗೆ ಭಾರತೀಯ ದಂಡ ಸಂಹಿತಿ ಕಲಂ 504, 506, 324ರ ಅಡಿಯಲ್ಲಿ ತಲಾ 6ತಿಂಗಳು ಜೈಲುವಾಸ ಇಲ್ಲವೇ 500ರೂ ದಂಡ ವಿಧಿಸಿ ನ್ಯಾಯಾಲಯ ತೀಪರ್ು ನೀಡಿದೆ.
ರಾಜ್ಯ ಸಕರ್ಾರದ ಪರವಾಗಿ ಸಹಾಯಕ ಸಕರ್ಾರಿ ಅಭಿಯೋಜಕರಾದ ಆರ್.ರವಿಚಂದ್ರ ವಾದಿಸಿದ್ದರು.
ತೆಂಗು ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ, ವೈಜ್ಞಾನಿಕ ಬೆಲೆ ನಿಗಧಿಗೆ ಒತ್ತಾಯ: ಸಂಸದ ಜಿ.ಎಸ್.ಬಿ.
ಚಿಕ್ಕನಾಯಕನಹಳ್ಳಿ,ಅ.14 : ತೆಂಗು ಬೆಳೆಯು ದೇಶದಲ್ಲಿ ಶೇ. 47ರಷ್ಟು ಮಾತ್ರ ಉತ್ಪಾನೆಯಾಗುತ್ತಿದೆ, ಉಳಿದ ಶೇ.53ರಷ್ಟು ತೆಂಗನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ ಇದರಿಂದ ಕೊಬ್ಬರಿ ಬೆಲೆಗಿಂತ ಪಾಮಾಯಿಲ್(ತಾಳೆ ಎಣ್ಣೆ)ನ ಬೆಲೆ ಹೆಚ್ಚುತ್ತಿದೆ ಇದನ್ನು ತಡೆಗಟ್ಟಲು ತೆಂಗು ಬೆಳೆಗಾರರು ಒಗ್ಗಟ್ಟಾಗಿ ಬೆಳೆಯನ್ನು ಹೆಚ್ಚಿಸಿ ಕೊಬ್ಬರಿಗೆ ಉತ್ತಮ ಬೆಲೆ ದೊರಕುವಂತೆ ಮಾಡಬೇಕು ಎಂದು ಸಂಸದ ಜಿ.ಎಸ್.ಬಸವರಾಜು ತಿಳಿಸಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ತಾಲ್ಲೂಕು ತೆಂಗು ಬೆಳೆಗಾರರ ಸಂಘ ಹಮ್ಮಿಕೊಂಡಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ತೆಂಗು ಬೆಳೆಗಾರರ ಅಭಿವೃದ್ದಿಗಾಗಿ ಕೇಂದ್ರ ಸಕರ್ಾರ ನೀಡುತ್ತಿರುವ ಸವಲತ್ತನ್ನು ಉತ್ತಮವಾಗಿ ಬಳಸಿಕೊಳ್ಳಬೇಕು ಆದರೆ ಬೆಳೆಗಾರರು ಸವಲತ್ತನ್ನು ಉಪಯೋಗಿಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದರೆ ಎಂದ ಅವರು ಕೇರಳ, ಕನರ್ಾಟಕ, ಆಂದ್ರಪ್ರದೇಶ, ತಮಿಳುನಾಡಿನ ರೈತರಿಗೆ ತೆಂಗು ಬೆಳೆ ಉತ್ಪಾದಿಸಲು ಅಲ್ಲಿನ ಸಕರ್ಾರಗಳು ಉತ್ತಮ ಅವಕಾಶ ಕಲ್ಪಿಸುತ್ತಿವೆ ಎಂದರು.
ಬೆಳೆಗಾರರು ಉತ್ತಮ ತೆಂಗನ್ನು ಬೆಳೆಯಲು  ತಾವು ಮಾಡುವ ಪರಾಂಪರಿಕ ಕೃಷಿಯೊಂದಿಗೆ ಸಾವಯುವ ಕೃಷಿ, ರಾಸಾಯನಿಕಗಳನ್ನು ಬಳಸಿ ಕೃಷಿ ಮಾಡಿದರೆ ಹೆಚ್ಚು ಬೆಳೆ ಬೆಳೆಯಬಹುದು ಎಂದರಲ್ಲದೆ ತೆಂಗಿನ ಬೆಳೆಯಲ್ಲಿ ರಸಸೋರುವ ರೋಗ, ಕೆಂಪುಮೂತಿ ರೋಗವನ್ನು ತಡೆಗಟ್ಟಬೇಕು, ಇಲ್ಲವಾದರೆ ಈ ರೋಗದಿಂದ ಬೆಳೆಗೆ ಹೆಚ್ಚು ತೊಂದರೆಯಾಗುತ್ತದೆ, ರಾಜ್ಯದಲ್ಲಿ ತೆಂಗುಬೆಳೆಯಲ್ಲಿ ರಸಸೋರುವ ರೋಗ ಹೆಚ್ಚಾಗಿ ಕಂಡ ಬರುತ್ತಿದೆ ಆದ್ದರಿಂದ ರೈತರು ಈ ರೋಗ ತಡೆಗಟ್ಟಲು ಕಾಳಜಿವಹಿಸಬೇಕು ಎಂದರು.
 ಹುಳಿಯಾರಿನಲ್ಲಿ ನೆಫೆಡ್ ಕೇಂದ್ರ ಇರುವಂತೆ ಚಿಕ್ಕನಾಯಕನಹಳ್ಳಿಯಲ್ಲಿ ಹಾಗೂ   ಇತರೆಡೆಗಳಲ್ಲೂ  ಕೊಬ್ಬರಿ ನೆಫೆಡ್ ಕೇಂದ್ರ ತೆರೆಯಬೇಕು ಇದರಿಂದ ರೈತರಿಗೆ ಅನುಕೂಲವಾಗುತ್ತದೆ ಇಂತಹ ಕಾರ್ಯಕ್ರಮಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆ ಎಂದರು.
ಈಡೀ ರಾಜ್ಯಾದ್ಯಾಂತ ತೆಂಗು ಬೆಳೆಗಾರರು, ತೆಂಗು ಮಾರಾಟಗಾರರಿಗೆ ಹಲವಾರು ಸ್ಫಧರ್ಿಗಳಿದ್ದಾರೆ ಇಂತಹ ಸಂದರ್ಭದಲ್ಲಿ ಉತ್ಪಾದನೆ, ಮಾರಾಟ ಮಾಡುವಾಗ ಮೋಸ ಮಾಡುವ ವರ್ತಕರಿರುತ್ತಾರೆ ಇದನ್ನು ಗಮನದಲ್ಲಿಟ್ಟುಕೊಂಡು ರೈತರು ವ್ಯವಹಾರ ನಡೆಸಬೇಕು ಎಂದರು.
ಸಮಾರಂಭದಲ್ಲಿ ತಾಲ್ಲೂಕು ತೆಂಗು ಬೆಳೆಗಾರರ ಸಂಘದ ಅಧ್ಯಕ್ಷ ಲಿಂಗರಾಜು, ತೆಂಗು ಬೆಳೆಗಾರರ ಜಿಲ್ಲಾ ಸಂಚಾಲಕ ಎಂ.ಬಿ.ಸಿದ್ದಪ್ಪ, ತಿಪಟೂರು ತೆಂಗು ಬೆಳೆಗಾರರ ಸಂಘದ ಅಧ್ಯಕ್ಷ ಕೆ.ಸ್ವಾಮಿ, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಬಿ.ಎನ್.ಶಿವಪ್ರಕಾಶ್, ರೈತ ಮುಖಂಡ ಸತೀಶ್ಕೆಂಕೆರೆ ಮತ್ತಿತರರು ಉಪಸ್ಥಿತರಿದ್ದರು.


ತಾ.ಪಂ. ಗದ್ದುಗೆಗೆ ಚುನಾವಣೆ: ಬಿ.ಜೆ.ಪಿ.ಯ.ಜಗದೀಶ್ ಅಧ್ಯಕ್ಷ, ಜೆ.ಡಿ.ಯು.ನ.ಲತಾ ಉಪಾಧ್ಯಕ್ಷೆ
ಚಿಕ್ಕನಾಯಕನಹಳ್ಳಿ,ಅ.19: ತಾ.ಪಂ. ಅಧ್ಯಕ್ಷರಾಗಿ ಬಿ.ಜೆ.ಪಿ.ಯ ಜೆ.ಸಿ.ಪುರ ಕ್ಷೇತ್ರದ ಸದಸ್ಯ ಎಂ.ಎಂ.ಜಗದೀಶ್ 12 ಮತಗಳನ್ನು ಪಡೆದು ಆಯ್ಕೆಯಾದರೆ, ತೀರ್ಥಪುರ ಕ್ಷೇತ್ರದ ಎಂ.ಇ.ಲತಾ ಕೇಶವಮೂತರ್ಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಂ.ಶಿಲ್ಪ ತಿಳಿಸಿದರು.
ಒಟ್ಟು 19 ಸದಸ್ಯ ಬಲವಿರುವ ತಾ.ಪಂ.ಸಮಿತಿಯಲ್ಲಿ ಜೆ.ಡಿ.ಎಸ್.ನ 7ಸದಸ್ಯರು  ಬಿ.ಜೆ.ಪಿ.6 ಹಾಗೂ ಜೆ.ಡಿ.ಯು 6 ಸಂಖ್ಯಾಬಲಹೊಂದಿದೆ, ಅಧ್ಯಕ್ಷರ ಹುದ್ದೆಗೆ ಇಬ್ಬರು ಸ್ಪಧರ್ೆಗಿಳಿದಿದ್ದರು, ಸಾಮಾನ್ಯ ಕ್ಷೇತ್ರಕ್ಕೆ ಮೀಸಲಿದ್ದ ಅಧ್ಯಕ್ಷರ ಹುದ್ದೆಗೆ ಬಿ.ಜೆ.ಪಿ.ಯಜಗದೀಶ್ 12 ಮತಗಳನ್ನು ಪಡೆದರೆ, ಜೆ.ಡಿ.ಎಸ್.ನ ಎ.ಜಿ.ಕವಿತ 7 ಮತಗಳಿ ತೃಪ್ತಿ ಪಡೆದುಕೊಳ್ಳಬೇಕಾಯಿತು.
ಹೊಂದಾಣಿಕ ಸೂತ್ರದಂತೆ ಅಧ್ಯಕ್ಷ ಹುದ್ದೆ:  ಪತ್ರಕರ್ತರೊಂದಿಗೆ ಮಾತನಾಡಿದ ಅಧ್ಯಕ್ಷ ಎಂ.ಎಂ.ಜಗದೀಶ್, ಈ ಚುನಾವಣೆಯಲ್ಲಿ ಬಿ.ಜೆ.ಪಿ ಹಾಗೂ ಜೆ.ಡಿ.ಯು ಹೊಂದಾಣಿಕೆ ಮಾಡಿಕೊಂಡಿದ್ದು, ಅದರ ಪ್ರಕಾರ ನಾನು 6 ತಿಂಗಳ ಅವಧಿಗೆ ಅಧ್ಯಕ್ಷನಾಗಿರುವುದಾಗಿ ತಿಳಿಸಿದರಲ್ಲದೆ, ಮುಂದಿನ ಆರು ತಿಂಗಳನಂತರ  ಅಧ್ಯಕ್ಷ ಗಾಧಿಯನ್ನು  ಜೆ.ಡಿ.ಯು.ಗೆ ಬಿಟ್ಟುಕೊಡಲು ಸಿದ್ದ ಎಂದರು.
ಉಪಾಧ್ಯಕ್ಷೆ ಲತಾ ಕೇಶವಮೂತರ್ಿ ಪತ್ರಿಕೆಯೊಂದಿಗೆ ಮಾತನಾಡಿ, ನಮ್ಮ ಮುಖಂಡ ಹಾಗೂ ಡಿ.ಸಿ.ಸಿ.ಬ್ಯಾಂಕ್ನ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ರವರ ಸಹಕಾರದಿಂದ ನಾನು ಈ ಹುದ್ದೆಯನ್ನು ಅಲಂಕರಿಸಲು ಸಾಧ್ಯವಾಯಿತು ಎಂದ ಅವರು, ಈ ಮೂಲಕ ಕಾಡು ಗೊಲ್ಲ ಸಮಾಜದ ಮಹಿಳೆಯೊಬ್ಬಳು ಪ್ರಥಮ ಬಾರಿಗೆ ತಾ.ಪಂ. ಉಪಾಧ್ಯಕ್ಷರ ಹುದ್ದೆ ಅಲಂಕರಿಸಿದಂತಾಗಿದೆ ಎಂದರು.
ರಸ್ತೆಗಿಳಿದ ಜೆ.ಡಿ.ಎಸ್. ಸದಸ್ಯರು: ಬಿ.ಜೆ.ಪಿ. ಸದಸ್ಯರು ಮೋಸ ಮಾಡಿದ್ದಾರೆ, ಕೆ.ಎಸ್.ಕಿರಣ್ಕುಮಾರ್ ವಚನ ಭ್ರಷ್ಟರಾಗಿದ್ದಾರೆ ಎಂಬ ಘೋಷಣೆಗಳ ಮೂಲಕ ರಸ್ತೆಗಿಳಿದ ಜೆ.ಡಿ.ಎಸ್.ನ ಚೇತನ ಗಂಗಾಧರ್, ಲತಾ, ಹೇಮಾವತಿ, ಕವಿತಾ, ಬೀಬಿ ಫಾತೀಮಾ, ಶಿವರಾಜ್ ಸೇರಿದಂತೆ ಅವರ ಬೆಂಬಲಿಗರು ಐ.ಬಿ.ಮುಂಭಾಗದಲ್ಲಿ ರಸ್ತೆಗಿಳಿದು ಪ್ರತಿಭಟಿಸಲು ಮುಂದಾದರು, ಕಳೆದ ಅವಧಿಯಲ್ಲಿ ನಮ್ಮೊಂದಿಗೆ ಅಧಿಕಾರ ಹಂಚಿಕೊಂಡ ಬಿ.ಜೆ.ಪಿ.ಯವರು  ಅಧ್ಯಕ್ಷರಾಗಿ ಮೆರೆದು, ಈಗ ನಮ್ಮ ಕಡೆಯವರು  ಅಧ್ಯಕ್ಷರಾಗುವ ಹಂತದಲ್ಲಿ ನಮ್ಮಿಂದ ದೂರವಾಗಿ ಜೆ.ಡಿ.ಯು ಸದಸ್ಯರೊಂದಿಗೆ ಅಪವಿತ್ರ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ದೂರಿದರು.
ಕೆಲಕಲ ರಸ್ತೆ ಮಧ್ಯೆ ಕುಳಿತುಕೊಂಡರಾದರೂ ಪೊಲೀಸರ ಮಧ್ಯೆ ಪ್ರವೇಶದಿಂದ ಜೆ.ಡಿ.ಎಸ್.ನವರು ರಸ್ತೆಯನ್ನು ತೆರವುಗೊಳಿಸಿ ವಾಹನಗಳು ಓಡಾಡಲು ಅನವು ಮಾಡಿದರು.
ಹಲವು ಕುತೂಹಲಗಳನ್ನಿಟ್ಟುಕೊಂಡಿದ್ದ ಬಿ.ಜೆ.ಪಿ, ಜೆ.ಡಿ.ಎಸ್ ಹಾಗೂ ಜೆ.ಡಿ.ಯು ಪಕ್ಷದ ಬೆಂಬಲಿಗರು, ಭಾರಿ ಸಂಖ್ಯೆಯಲ್ಲಿ ತಾ.ಪಂ.ಯ ಸುತ್ತಾಮುತ್ತಾ ಸೇರಿದ್ದರು. ಹಲವು ಗೊಂದಲಗಳಿಗೆ ಕಾರಣವಾಗಿದ್ದ ಚುನಾವಣೆಯ ಫಲಿತಾಂಶವನ್ನು ತಿಳಿಯಲು ಸೇರಿದ್ದ ಜನರನ್ನು ಸಮರ್ಥರೀತಿಯಲ್ಲಿ ಹತೋಟಿಗೆ ತೆಗೆದುಕೊಂಡಿದ್ದ ಪೊಲೀಸರು,  ಶಾಂತರೀತಿಯಿಂದ ಚುನಾವಣೆ ನಡೆಯುವಂತೆ ನೋಡಿಕೊಂಡರಲ್ಲದೆ, ವಿಜಯೋತ್ಸವದ ಮೇರವಣಿಗೆಯನ್ನು ದಕ್ಷರೀತಿಯಲ್ಲಿ ನಿಭಾಯಿಸಿದರು.   

ಮಾತಿಗೆ ತಪ್ಪಿದ ಬಿ.ಜೆ.ಪಿ.: ಶಾಸಕ ಸಿ.ಬಿ.ಎಸ್. ಆರೋಪ
ಚಿಕ್ಕನಾಯಕನಹಳ್ಳಿ,ಅ.19: ತಾಲೂಕು ಪಂಚಾಯಿತಿ ಚುನಾವಣೆಯ ಅಧಿಕಾರಕ್ಕಾಗಿ ತಾಲೂಕು ಬಿ.ಜೆ.ಪಿ. ಮಾತಿಗೆ ತಪ್ಪಿ, ವಚನ ಭ್ರಷ್ಟತನವನ್ನು ಪ್ರದಶರ್ಿಸುವ ಮೂಲಕ ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ರವರು ಒಂದು ಸಮಾಜಕ್ಕೆ ಸೀಮಿತವೆಂಬುದನ್ನು ಪ್ರದಶರ್ಿಸಿದ್ದಾರೆ ಶಾಸಕ ಸಿ.ಬಿ.ಸುರೇಶ್ ಬಾಬು ಆರೋಪಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಅವಧಿಯ ಅಧ್ಯಕ್ಷರ ಅವಧಿಯಲ್ಲಿ ಜೆ.ಡಿ.ಎಸ್.ನೊಂದಿಗೆ ಒಪ್ಪಂದ ಮಾಡಿಕೊಂಡ ಬಿ.ಜೆ.ಪಿ.ಯವರು ಅವರು ಅಧ್ಯಕ್ಷ ಪದವಿ ಇಟ್ಟುಕೊಂಡು ನಮಗೆ ಉಪಾಧ್ಯಕ್ಷ ಪದವಿಯನ್ನು ಕೊಟ್ಟರು. ಬಿ.ಜೆ.ಪಿಯವರ ಒಪ್ಪಂದಂತೆ ಈ ಅವಧಿಯಲ್ಲಿ ಜೆ.ಡಿ.ಎಸ್.ಗೆ  ಅಧ್ಯಕ್ಷ ಪದ ವಿ ಕೊಡಬೇಕಾಗುತ್ತದೆ ಎಂಬ ಧೋರಣೆಯಿಂದ ಜೆ.ಡಿ.ಯು.ನೊಂದಿಗೆ ಅಪವಿತ್ರ ಮೈತ್ರಿ ಮಾಡಿಕೊಂಡು ಮತ್ತೇ ಬಿ.ಜೆ.ಪಿ.ಯವರು ಅದರಲ್ಲೂ ಅವರ ಸಮಾಜದವರೇ ಅಧ್ಯಕ್ಷರಾಗುವಂತೆ ನೋಡಿಕೊಳ್ಳುವ ಮೂಲಕ ಬಿ.ಜೆ.ಪಿ.ಯವರ ಕೋಮುವಾದಿತನವನ್ನು ಮತ್ತೇ ಪ್ರದಶರ್ಿಸಿದ್ದಾರೆ, ಇದಕ್ಕೆ ಮುಂದಿನ ಚುನಾವಣೆಗಳಲ್ಲಿ ಬಿ.ಜೆ.ಪಿ.ಗೆ ತಕ್ಕ ಪಾಠ ಜನರೇ ಕಲಿಸಲಿದ್ದಾರೆ ಎಂದರು.
ತಾ.ಪಂ.ಚುನಾವಣೆ ಸಂಬಂಧ ಹಿಂದಿನ ಒಪ್ಪಂದದ ಬಗ್ಗೆ ನೆನಪಿಸಲು ನಾನು ದೂರವಾಣಿ ಮೂಲಕ ಸಂಪಕರ್ಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ, ಅವರ ಮೊಬೈಲ್ನ ಸ್ವಿಚ್ ಆಫ್ ಮಾಡಿಕೊಳ್ಳುವ ಮೂಲಕ ತಮ್ಮ ಅಸಹಕಾರವನ್ನು ಪ್ರದಶರ್ಿಸಿದರು ಎಂದರು.
ಇನ್ನು ಮುಂದೆ ಜೆ.ಡಿ.ಎಸ್ ಯಾವುದೇ ಸಂದರ್ಭದಲ್ಲೂ ಬಿ.ಜೆ.ಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲವೆಂದು ಸ್ಪಷ್ಟ ಪಡಿಸಿದ ಅವರು, ಈ ವಿಷಯವನ್ನು ನಮ್ಮ ಕಾರ್ಯಕರ್ತರು ಜನರ ಮುಂದಿಟ್ಟು ಮುಂದಿನ ಚುನಾವಣೆಗಳಿಗೆ ಹೋಗಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜೆ.ಡಿ.ಎಸ್.ನ ತಾ.ಪಂ.ಸದಸ್ಯರುಗಳಾದ ಚೇತನ ಗಂಗಾಧರ್, ಲತಾ, ಹೇಮಾವತಿ, ಕವಿತಾ, ಬೀಬಿ ಫಾತೀಮಾ, ಶಿವರಾಜ್ ಸೇರಿದಂತೆ ಕಲ್ಪವೃಕ್ಷ ಬ್ಯಾಂಕ್ನ ಅಧ್ಯಕ್ಷ ಸಿ.ಎಸ್.ರಮೇಶ್, ಜೆ.ಡಿ.ಎಸ್.ಮುಖಂಡ ರಾಮಚಂದ್ರಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ತಾ.ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಂ.ನರಸಿಂಹಯ್ಯ ನಿಧನ
ಚಿಕ್ಕನಾಯಕನಹಳ್ಳಿ,ಅ.19 : ತಾಲ್ಲೂಕಿನ ನಿವೃತ್ತ ನೌಕರರ ಸಂಘದ ಅಧ್ಯಕ್ಷರಾಗಿ 15ವರ್ಷಗಳ ಕಾಲ ಹಾಗೂ ಕಾರ್ಯದಶರ್ಿಯಾಗಿ 10ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ನಿವೃತ್ತ ಶಿಕ್ಷಕ ಎಂ.ನರಸಿಂಹಯ್ಯನವರು(86) ವಿಧಿವಶರಾಗಿದ್ದಾರೆ.
ಎಂ.ನರಸಿಂಹಯ್ಯನವರು ಬಿ.ಎ.ಪಧವೀದರರಾಗಿದ್ದು, ಇವರು ಶಿಕ್ಷಕ ವೃತ್ತಿಯನ್ನು ತಿಮ್ಮನಹಳ್ಳಿಯಿಂದ ಪ್ರಾರಂಭಿಸಿ, ಚಿಕ್ಕನಾಯಕನಹಳ್ಳಿ, ಕಿಬ್ಬನಹಳ್ಳಿಯಲ್ಲಿ ವೃತ್ತಿ ನಿರ್ವಹಿಸಿ ಚಿಕ್ಕನಾಯಕನಹಳ್ಳಿಯ ಕುರುಬರಶ್ರೇಣಿಯಲ್ಲಿ ನಿವೃತ್ತಿ ಹೊಂದಿರುತ್ತಾರೆ. ನಂತರ ಚಿಕ್ಕನಾಯಕನಹಳ್ಳಿಯ ತಾಲ್ಲೂಕು ನಿವೃತ್ತಿ ಶಿಕ್ಷಕರ ಸಂಘದಲ್ಲಿ ಸೇವೆ ಸಲ್ಲಿಸಿ ಅವರ ಅವಧಿಯಲ್ಲಿ ಸಂಘಕ್ಕೆ ಕೆಳ ಮತ್ತು ಮೊದಲ ಅಂತಸ್ಥಿನ ಕಟ್ಟಡ ನಿಮರ್ಾಣ ಮಾಡಿದ್ದಾರೆ.
ಮೈಸೂರಿನಲ್ಲಿ ರಾಜ್ಯಮಟ್ಟದ ಸಮ್ಮೇಳನದಲ್ಲಿ ಇವರ ಕಾರ್ಯವೈಖರಿಯನ್ನು ಮೆಚ್ಚಿ ಅಭಿನಂದಿಸಲಾಗಿತ್ತು. ಇವರು ಕಳೆದ  ಹದಿನೈದು ದಿನಗಳಿಂದ ಅನಾರೋಗ್ಯ ಪೀಡಿತರಾಗಿದ್ದರು. ಇವರು ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಮಗಳಾದ ವಿಜ್ಞಾನ ಸಂಘದ ಅಧ್ಯಕ್ಷೆ ಹಾಗೂ ತೀರ್ಥಪುರ ಸಕರ್ಾರಿ ಕಾಲೇಜ್ನ ಪ್ರಾಚಾಯರ್ಾರಾದ  ಎನ್.ಇಂದಿರಮ್ಮ ನವರನ್ನು ಅಗಲಿದ್ದಾರೆ. ಇವರ ಅಂತ್ಯಸಂಸ್ಕಾರವನ್ನು ಕಂದಿಕೆರೆಯ ಅವರ ಜಮೀನಿನಲ್ಲಿ ಮಾಡಲಾಯಿತು.
ಪಾಥರ್ೀವ ಶರೀರಕ್ಕೆ ಶಾಸಕ ಸಿ.ಬಿ.ಸುರೇಶ್ ಬಾಬು, ಡಿ.ಸಿ.ಸಿ.ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ಸೇರಿದಂತೆ ಹಲವರು ಅಂತಿಮ ನಮನ ಸಲ್ಲಿಸಿದರು.

ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಅಂಗನವಾಡಿ ನೌಕರರ ಮುಷ್ಕರ
ಚಿಕ್ಕನಾಯಕನಹಳ್ಳಿ,ಅ.19 : ಖಾಯಮಾತಿ, ಕನಿಷ್ಟಕೂಲಿ, ಪಿಂಚಣಿ ಹಾಗೂ ಉಪಧನ(ಗ್ರಾಚ್ಯುಯಿಟಿ) ಮುಂತಾದ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಒತ್ತಾಯಿಸಿ ಇಲ್ಲಿನ ಅಂಗನವಾಡಿ ಕಾರ್ಯಕತರ್ೆಯರು ತಾಲ್ಲೂಕು ಕಛೇರಿಯ ಮುಂದೆ ಪ್ರತಿಭಟನೆ ನಡೆಸಿದರು.
ಪಟ್ಟಣದ ನೆಹರು ಸರ್ಕಲ್ನಿಂದ ತಾಲ್ಲೂಕು ಕಛೇರಿಯವರೆಗೆ ಹೊರಟ ಪ್ರತಿಭಟನಾ ಮೆರವಣಿಯಲ್ಲಿ ಅಂಗನವಾಡಿ ನೌಕರರು ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಶಿರಸ್ತೆದಾರ್ ಬೊಮ್ಮಾಯ್ಯರವರಿಗೆ ಮನವಿ ಪತ್ರ ಸಲ್ಲಿಸಿದರು.
ಮಿನಿ ಅಂಗನವಾಡಿ ಕೇಂದ್ರದಲ್ಲಿರುವ ಕಾರ್ಯಕತರ್ೆಯರಿಗೂ ಮೈನ್ ಅಂಗನವಾಡಿ ಕಾರ್ಯಕತರ್ೆಯರ ಸೌಲಭ್ಯ ನೀಡಬೇಕು, ಗ್ರಾಮ ಪಂಚಾಯಿತಿ ಸದಸ್ಯರುಗಳನ್ನು ಬಾಲವಿಕಾಸ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು, ಅಂಗನವಾಡಿ ಕಾರ್ಯಕತರ್ೆರಿಗೆ ಗ್ರಾಮ ಪಂಚಾಯಿತಿ ಸದಸ್ಯರುಗಲ ಕಿರುಕುಳ ನಿಲ್ಲಬೇಕು. ಗ್ರಾಮ ನೈರ್ಮಲ್ಯ ಸಮಿತಿಯಲ್ಲಿ ಆಶಾ ಕಾರ್ಯಕತರ್ೆ ಇಲ್ಲದ ಗ್ರಾಮದಲ್ಲಿ ಅಂಗನವಾಡಿ ಕಾರ್ಯಕತರ್ೆಯರು ಕಾರ್ಯದಶರ್ಿಯಾಗಿ ಸಮಿತಿ ನಡೆಸುತ್ತಿದ್ದು ಇದರಲ್ಲಿ ಪಂಚಾಯಿತಿಯ ಸದಸ್ಯರು ಅಧ್ಯಕ್ಷರಾಗಿದ್ದು ಇವರು ಇದರಲ್ಲಿ ಪಂಚಾಯಿತಿಯ ಸದಸ್ಯರು ಅಧ್ಯಕ್ಷರಾಗಿದ್ದು ಇವರು ಕಾರ್ಯಕತೆರ್ಯರಿಗೆ ಕಿರುಕುಳ ನೀಡುವುದು ತಪ್ಪಬೇಕು, ಅಂಗನವಾಡಿ ಕಾರ್ಯಕತರ್ೆಯರು ಮತ್ತು ಸಹಾಯಕಿಯರಿಗೆ ಕೊಟ್ಟಿರುವ ಸಮವಸ್ತ್ರ ಸರಿ ಇಲ್ಲದಿರುವುದರಿಂದ ಕ್ಷೇತ್ರ ಮಟ್ಟದ ಸಭೆ ಮತ್ತು ವೃತ್ತ ಮಟ್ಟದ ಸಭೆ ಹಾಕಬಾರೆಂದು ಅನುಮತಿ ನೀಡಬೇಖು, ಅಂಗನವಾಡಿ ಕೇಂದ್ರದಲ್ಲಿ ವಾರದಲ್ಲಿ ಮೂರು ದಿನ ಮಾತ್ರ ಹಾಕಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಮುಖಂಡರಾದ ಮುಜೀಬ್, ಅಧ್ಯಕ್ಷೆ ಪೂರ್ಣಮ್ಮ, ಉಪಾಧ್ಯಕ್ಷೆ ಅನ್ನಪೂರ್ಣ, ಕಾರ್ಯದಶರ್ಿ ಶಾರದ ಕೆ.ಜಿ, ಖಜಾಂಚಿ ಯಶೋಧ, ಸಾವಿತ್ರಮ್ಮ, ಲಕ್ಷ್ಮಮ್ಮ, ಸುನಂದ ಹಾಗೂ ಕಾರ್ಯಕತರ್ೆಯರು ಉಪಸ್ಥಿತರಿದ್ದರು.



No comments:

Post a Comment