ಉಮೇಶ್ಕತ್ತಿ ರಾಜೀನಾಮೆಗೆ ಆಗ್ರಹ
ಚಿಕ್ಕನಾಯಕನಹಳ್ಳಿ,ಅ.22 : ಸಚಿವ ಉಮೇಶ್ಕತ್ತಿ ರಾಜ್ಯವನ್ನು ಇಬ್ಭಾಗ ಮಾಡುವ ಹೇಳಿಕೆ ಖಂಡನೀಯ, ಇವರು ಕೂಡಲೇ ರಾಜೀನಾಮೆ ನೀಡಬೇಕೆಂದು ತಾಲ್ಲೂಕು ಕನ್ನಡಪರ ಸಂಘಟನೆಗಳು ಒತ್ತಾಯಿಸಿದವು.
ಪಟ್ಟಣದ ನೆಹರು ಸರ್ಕಲ್ ಬಳಿ ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಸಂಘ, ಕನರ್ಾಟಕ ರಕ್ಷಣಾ ವೇದಿಕೆ ವತಿಯಿಂದ ಸಚಿವ ಉಮೇಶ್ಕತ್ತಿ ನೀಡಿರುವ ಕನರ್ಾಟಕ ಇಬ್ಬಾಗ ಹೇಳಿಕೆಯನ್ನು ಖಂಡಿಸಿ ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎಸ್.ರವಿಕುಮಾರ್ ಮಾತನಾಡಿ ರಾಜ್ಯದ ಏಕೀಕರಣಕ್ಕಾಗಿ ಲಕ್ಷಾಂತರ ಜನ ಶ್ರಮಿಸಿ, ಕನರ್ಾಟಕ ರಾಜ್ಯ ರಚಿಸಿ ರಾಜ್ಯದ ಏಕತೆ, ಐಕ್ಯತೆಯನ್ನು ಎತ್ತಿ ಹಿಡಿದಿರುವ ಸಂದರ್ಭದಲ್ಲಿ ಉತ್ತರ ಕನರ್ಾಟಕ ಪ್ರತ್ಯೇಕ ರಾಜ್ಯ ಮಾಡಬೇಕೆಂಬ ಸಚಿವ ಉಮೇಶ್ ಕತ್ತಿ ಹೇಳಿಕೆ ಖಂಡನೀಯವಾದುದು, ಆಲೂರು ವೆಂಕಟರಾಯರು, ಗಂಗಾಧರ್ರಾವ್ ದೇಶಪಾಂಡೆಯಂತಹ ಹಲವರು ರಾಜ್ಯದ ಏಕೀಕರಣಕ್ಕಾಗಿ ದುಡಿದು ಅಖಂಡ ಕನರ್ಾಟಕ ಸೃಷ್ಠಿಸಿದ್ದಾರೆ, ಆದರೆ ಸಚಿವರಾಗಿ ರಾಜ್ಯವನ್ನು ಇಬ್ಬಾಗ ಮಾಡುವ ಹೇಳಿಕೆ ಸರಿಯಲ್ಲ ಅವರ ಸಚಿವ ಸ್ಥಾನದ ರಾಜೀನಾಮೆ ಪಡೆಯಬೇಕೆಂದು ತಿಳಿಸಿದರು.
ಕನ್ನಡ ಸಂಘದ ಕಾರ್ಯದಶರ್ಿ ಸಿ.ಬಿ.ರೇಣುಕಸ್ವಾಮಿ ಮಾತನಾಡಿ ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿ ರಾಜ್ಯದ ಘನತೆಯನ್ನು ಎತ್ತಿ ಹಿಡಿದು ರಾಜ್ಯಕ್ಕೆ ಉತ್ತಮ ಆಡಳಿತ ನೀಡುತ್ತೇನೆಂದು ತಿಳಿಸಿ ಈಗ ಪ್ರತ್ಯೇಕ ರಾಜ್ಯದ ಕೂಗು ಹರಿಸಿರುವುದು ಅವರ ಮೂರ್ಖತನದ ಪರಮಾವಧಿ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಕನರ್ಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಸಿ.ಟಿ.ಗುರುಮೂತರ್ಿ , ತಾ.ಅಭಾವಿಪ ಪ್ರಮುಖ್ ಚೇತನ್ಪ್ರಸಾದ್, ಕರವೇಯ ವಾಸು, ಎಸ್.ಬಿ.ಕುಮಾರ್, ಶಿವಣ್ಣ ಮುಂತಾದವರಿದ್ದರು.
No comments:
Post a Comment