ಜೆ.ಡಿ.ಎಸ್.ಪಕ್ಷವನ್ನು ಗೆಲ್ಲಿಸಲು ಕಾರ್ಯಕರ್ತರು ಈಗಿನಿಂದಲೇ ಶ್ರಮಿಸಬೇಕು.ಸಿ.ಬಿ.ಎಸ್
ಚಿಕ್ಕನಾಯಕನಹಳ್ಳಿ,ಜ.01 : ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಸದಸ್ಯರುಗಳ ಮೇಲೆ ಮುಂದಿನ ಚುನಾವಣೆಯ ಜವಬ್ದಾರಿ ಇದೆ, ನಿಮ್ಮ ಮುಖಾಂತರ ನಾವು ಚುನಾವಣೆಗೆ ತೆರಳಬೇಕಿದೆ, ಅದಕ್ಕಾಗಿ ಪಕ್ಷ ಸಂಘಟನೆ ಮಾಡಲು ಈ ತಿಂಗಳ 15ನೇ ತಾರೀಖಿನಿಂದ ರೂಪುರೇಶೆ ರಚಿಸಿ, ಕಾರ್ಯಕರ್ತರನ್ನು ಹುರುದುಂಬಿಸಬೇಕು ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಕರೆನೀಡಿದರು.
ಪಟ್ಟಣದ ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರಾಗಿ 2ನೇ ಅವಧಿಗೆ ಆಯ್ಕೆಯಾದವರನ್ನು ಅಭಿನಂದಿಸಿ ಮಾತನಾಡಿದರು.
ಪಕ್ಷ ಸಂಘಟನೆ ಮಾಡುವಾಗ ಎಲ್ಲರೂ ತಮ್ಮಲ್ಲಿರುವ ಲೋಪದೋಷಗಳನ್ನು ಸರಿಪಿಡಿಸಿಕೊಳ್ಳಲು ಮುಂದಾಗಬೇಕು ಆ ಕೆಲಸವನ್ನು ನನ್ನಿಂದಲೇ ಆರಂಭಿಸುವುದಾಗಿ ತಿಳಿಸಿದರಲ್ಲದೆ, ಪಕ್ಷದಲ್ಲೇ ಇದ್ದು ಒಳಗೆ ಪಿತೂರಿ ನಡೆಸುವ ಪಕ್ಷಾಂತರಿಗಳು ಈಗಲೇ ಪಕ್ಷ ಬಿಟ್ಟು ತೆರಳುವುದು ಒಳಿತು ಎಂದರು. ನಮ್ಮ ಪಕ್ಷದಲ್ಲಿ ಜಾತಿ ತಾರತಮ್ಯವಿಲ್ಲ ಎಲ್ಲಾ ವರ್ಗದವರಿಗೂ ಪಕ್ಷ ಅಧ್ಯಕ್ಷ ಉಪಾಧ್ಯಕ್ಷ ಹುದ್ದೆಗಳನ್ನು ನೀಡಿದೆ, ನಮ್ಮನ್ನು ವಿಮರ್ಶ ಮಾಡುವವರು ಆರೋಪಿಸಿರುವಂತೆ ಪುರಸಭೆಯ ಅಧ್ಯಕ್ಷ ಹುದ್ದೆಗೆ ಆರು ತಿಂಗಳಿಗೊಮ್ಮೆ ಅಧ್ಯಕ್ಷ ಹುದ್ದೆ ಬದಲಾಯಿಸುತ್ತಿರುವುದು ಎಲ್ಲಾ ವರ್ಗದವರಿಗೂ ಅವಕಾಶ ದೊರಕಲಿ, ಅಲ್ಪಸಂಖ್ಯಾತ ಜನಾಂಗ ಬೆಳೆಯಲಿ ಎಂಬ ಉದ್ದೇಶದಿಂದ ಮಾಜಿ ಶಾಸಕರಂತೆ ಒಂದು ವರ್ಗಕ್ಕೆ ಮಾತ್ರ ಸೀಮಿತವಾಗುವ ಮನೋಭಾವ ನಮ್ಮಲ್ಲ ಎಂದರು.
ನಮ್ಮ ಪಕ್ಷದಲ್ಲಿ ಎಲ್ಲಾ ಸಮಾಜದವರು ಅಧಿಕಾರ ಹೊಂದಿದ್ದಾರೆ, ಜ್ಯಾತ್ಯಾತೀತ ಭಾವನೆ ಹೊಂದಿರುವ ಪಕ್ಷವು ಎ.ಪಿ.ಎಂ.ಸಿ ಚುನಾವಣೆಯಲ್ಲಿ ಯಾವ ಕಾರಣಕ್ಕೆ ಕಡಿಮೆ ಮತಗಳನ್ನು ಪಡೆಯಿತು ಎಂಬುದರ ಬಗ್ಗೆ ಚಿಂತಿಸುತ್ತಿದೆ, ಪಕ್ಷದಲ್ಲಿ ಸಂಘಟನೆಗಾಗಿ ಈಗಿನಿಂದಲೇ ಎಲ್ಲಾ ಕಾರ್ಯಕರ್ತರು ಸಿದ್ದರಾಗಿ ಎಂದರಲ್ಲದೆ ಪ್ರತಿಯೊಬ್ಬರನ್ನು ಗೌರವವಾಗಿ ಕಾಣುವುದು ನಮ್ಮ ಪಕ್ಷದ ಸಿದ್ದಾಂತವಾಗಿದೆ ಎಂದರು.
ಜೆ.ಡಿ.ಎಸ್. ಪಕ್ಷದಲ್ಲಿ ಸುರೇಶ್ಬಾಬು ಒಬ್ಬ ಕಾರ್ಯಕರ್ತ, ಪಕ್ಷ ಬೆಳೆಯಲು ಸುರೇಶ್ಬಾಬುವಿನಿಂದ ಮಾತ್ರ ಸಾಧ್ಯವಿಲ್ಲ, ಎಲ್ಲಾ ಕಾರ್ಯಕರ್ತರು ಸುರೇಶ್ಬಾಬು ಆಗಿ ಶ್ರಮ ವಹಿಸಿದರೆ ಮಾತ್ರ ಪಕ್ಷ ಅಧಿಕಾರಕ್ಕೆ ಬರುವುದು ಎಂದರಲ್ಲದೆ ಜಿಲ್ಲೆಯಲ್ಲಿ 9ಕ್ಷೇತ್ರಗಳನ್ನಾದರೂ ಜೆಡಿಎಸ್ ಹೊಂದಿದರೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಜನಹಿತ ಕಾರ್ಯಕ್ರಮ ಮಾಡುವುದರಲ್ಲಿ ಅನುಮಾನವಿಲ್ಲ ಎಂದರು.
ಹೆಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿ ಸ್ಥಾನದಲ್ಲಿದ್ದಾಗ ಗ್ರಾಮವಾಸ್ತವ್ಯ, ವೇತನ ಹೆಚ್ಚಳ, ಪ್ರತಿ ಶನಿವಾರ ಜನತಾದರ್ಶನ ಅಲ್ಲದೆ ಇತರ ಉತ್ತಮ ಕಾರ್ಯಕ್ರಮ ನಡೆಸಿ ಪ್ರತಿಯೊಬ್ಬರಿಗೂ ಅನುಕೂಲ ಮಾಡಿಕೊಟ್ಟಿದ್ದರು, ಅವರು ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಬಡವರ್ಗದ ಜನತೆಗೆ ಅನುಕೂಲವಾಗಲಿದೆ, ಎಂದರಲ್ಲದೆ ಫೆಬ್ರವರಿ ತಿಂಗಳಿನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರನ್ನು ತಾಲ್ಲೂಕಿಗೆ ಕರೆಸಿ ಅಂಗವಿಕಲರ, ಮಹಿಳೆಯರ ಸಮಾವೇಶ ಹಾಗೂ ಉದ್ಯೋಗ ಮೇಳವನ್ನು ನಡೆಸಲಾಗುವುದು ಎಂದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪ್ರೇಮಮಹಾಲಿಂಗಪ್ಪ ಮಾತನಾಡಿ ಜೆಡಿಎಸ್ ಪಕ್ಷ ಈ ಬಾರಿ ಅಧಿಕಾರಕ್ಕೆ ಬಂದರೆ ಜಿಲ್ಲೆಗೆ ಮೂರು ಅಥವಾ ನಾಲ್ಕು ಸಚಿವ ಸ್ಥಾನಗಳು ಖಂಡಿತ ದೊರಕುತ್ತವೆ, ಅದಕ್ಕಾಗಿ ಜೆಡಿಎಸ್ ಕಾರ್ಯಕರ್ತರು ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿ, ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಕೂರಿಸಬೇಕು ಎಂದರಲ್ಲದೆ ಶಾಸಕ ಸಿ.ಬಿ.ಸುರೇಶ್ಬಾಬುರವರಿಗೆ ಸಚಿವ ಸ್ಥಾನ ದೊರಕುವಂತೆ ಆಗಲಿ ಎಂದರು. ನಾನು ಜಿ.ಪಂ.ಅಧ್ಯಕ್ಷೆಯಾಗಲು ಕಾರಣ ಶಾಸಕ ಸಿ.ಬಿ.ಸುರೇಶ್ಬಾಬು, ಅವರು ಹೆಚ್.ಡಿ.ಕುಮಾರಸ್ವಾಮಿಯವರೊಂದಿಗೆ ಮಾತನಾಡಿ ಹಿಂದುಳಿದವರಿಗೆ ಅಧಿಕಾರ ನೀಡಿದರೆ ದೇಶ ಅಭಿವೃದ್ದಿಯಾಗುತ್ತದೆ ಎಂಬ ಕಾರಣದಿಂದ ಈ ಹುದ್ದೆ ದೊರಕಿಸಿದ್ದಾರೆ ಎಂದರು.
ಪುರಸಭಾಧ್ಯಕ್ಷ ಸಿ.ಕೆ.ಕೃಷ್ಣಮೂತರ್ಿ ಮಾತನಾಡಿ ಅಲ್ಪಸಂಖ್ಯಾತರ ಬಗ್ಗೆ ಅಭಿಮಾನ ಹೊಂದಿರುವ ಶಾಸಕರು ನನಗೆ ಪುರಸಭಾಧ್ಯಕ್ಷ ಸ್ಥಾನ ನೀಡಿದವರು, ಅವರು ಈ ಬಾರಿ ಶಾಸಕರಾಗಿ ಸಚಿವರಾಗಲು ಎಲ್ಲಾ ಕಾರ್ಯಕರ್ತರು ಚುನಾವಣೆಯಲ್ಲಿ ಸಂಘಟಿತರಾಗಿ ಪಕ್ಷ ಕಟ್ಟಬೇಕು ಎಂದರು.
ಜಿ.ಪಂ.ಸದಸ್ಯೆ ಜಾನಮ್ಮರಾಮಚಂದ್ರಯ್ಯ ಮಾತನಾಡಿ ಕಳೆದ ಬಾರಿ ಗೆಲುವು ಸಾಧಿಸಿದ ಮತಗಳಿಗಿಂತ ಈ ಬಾರಿ ಹೆಚ್ಚು ಮತಗಳಿಂದ ಗೆಲುವು ಸಾಧಿಸಲು ಎಲ್ಲಾ ಕಾರ್ಯಕರ್ತರು ಸಂಘಟಿತರಾಗಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿ.ರಘುನಾಥ್, 28ಗ್ರಾಮ ಪಂಚಾಯಿತಿಗಳಲ್ಲಿ 17ಗ್ರಾಮಪಂಚಾಯಿತಿಗಳಲ್ಲಿ ಜೆ.ಡಿ.ಎಸ್. ಪಕ್ಷದ ಮೇಲುಗೈ ಸಾಧಿಸಿದೆ ಅಧ್ಯಕ್ಷರು ಉಪಾಧ್ಯಕ್ಷರು ತಮ್ಮ ಸ್ವಾರ್ಥಬಿಟ್ಟು ಪಕ್ಷದ ಕಾರ್ಯಕರ್ತರಿಗೆ ಹಾಗೂ ಮತದಾರರಿಗೆ ಸ್ಪಂದಿಸಿ ಎಂದು ಹೇಳಿದರು.
ಸಭೆಯಲ್ಲಿ ಜಿ.ಪಂ. ಸದಸ್ಯರಾದ ಮಂಜುಳಗವಿರಂಗಯ್ಯ, ತಾ.ಪಂ. ಸದಸ್ಯರಾದ ಹೇಮಾವತಿ, ಚೇತನಾಗಂಗಾಧರ್, ಉಮಾದೇವಿ, ಶಿವರಾಜು, ಜೆ.ಡಿ.ಎಸ್.ಪ್ರಧಾನ ಕಾರ್ಯದಶರ್ಿ ಕೆ.ಟಿ.ಗೋವಿಂದಪ್ಪ, ಸಿ.ಪಿ.ಚಂದ್ರಶೇಖರಪ್ಪಶೆಟ್ಟಿ, ಪುರಸಭಾ ಉಪಾಧ್ಯಕ್ಷೆ ಗಾಯಿತ್ರಿಪುಟ್ಟಣ್ಣ, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ರಮೇಶ್, ಪುರಸಭಾ ಸದಸ್ಯರಾದ ಎಂ.ಎನ್.ಸುರೇಶ್, ಜೆ.ಡಿ.ಎಸ್.ವಕ್ತಾರ ಸಿ.ಎಸ್.ನಟರಾಜು, ಮಾಜಿ ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಎಂ.ಬಿ.ನಾಗರಾಜು, ರಂಗಸ್ವಾಮಿ, ರುದ್ರೇಶ್. ರೇವಣ್ಣ ಒಡೆಯರ್, ಗ್ರಾ.ಪಂ. ಮಾಜಿ ಅಧ್ಯಕ್ಷೆ ಕುಶಲ ಮತ್ತಿತರರು ಭಾಗವಹಿಸಿದ್ದರು.
ಸಿ.ಬಿ.ರೇಣುಕಸ್ವಾಮಿ ಸ್ವಾಗತಿಸಿದರೆ, ಸಿ.ಎಸ್.ನಟರಾಜ್ ನಿರೂಪಿಸಿ , ಸಾಲ್ಕಟ್ಟೆ ಶ್ರೀನಿವಾಸ ವಂದಿಸಿದರು.
|
No comments:
Post a Comment