ಚಿ.ನಾ.ಹಳ್ಳಿ ತಾಲೂಕಿನ ಮೂರು ಹೋಬಳಿಯ 26 ಕೆರೆಗಳ ಒಡಲ ತಣಿಸಲಿರುವ ಹೇಮೆ.
(ಸಿ.ಗುರುಮೂತರ್ಿ ಕೊಟಿಗೆಮನೆ)
aPÀÌ£ÁAiÀÄPÀ£ÀºÀ½î vÁ®ÆQ£À°è ºÉêÉÄ ºÀjAiÀÄĪÀ 26
PÉgÉUÀ¼À ªÀiÁUÀðzÀ £ÀPÉë
|
ಚಿಕ್ಕನಾಯಕನಹಳ್ಳಿ,ಜ.8: ತಾಲೂಕಿನ ಜನತೆಯ ಬಹುದಿನಗಳ ಕನಸು, ಹಲವು ವರ್ಷಗಳ ಹೋರಾಟದ ಫಲ, ಸಾವಿರಾರು ಜನರ ಬಾಯಾರಿಕೆಯನ್ನು ನೀಗಿಸಲು ಹೇಮೆಯನ್ನು ತಾಲೂಕಿಗೆ ಹರಿಸಲು ಸಿದ್ದತೆ ನಡೆಯುತ್ತಿದೆ.
ಕೆರೆಗಳ ಒಡಲು ಬರಿದಾಗಿ ಬಾಯಿತೆರೆದುಕೊಂಡಿದ್ದ ಕೆರೆಯ ಅಂಗಳಗಳು ಇನ್ನು ಮುಂದಾದರೂ ನೀರು ಕಾಣುತ್ತಾವಲ್ಲವೆಂಬ ಸಂತೋಷ, ಜೊತೆಗೆ ಜನ ಜಾನುವಾರುಗಳು ಕುಡಿಯಲು ನೀರಿಲ್ಲದೆ, ಪ್ಲೋರೈಡ್ ನೀರನ್ನೇ ಕುಡಿದು ಹಲವು ರೋಗಳಿಗೆ ತುತ್ತಾಗುತ್ತಿದ್ದ ಜನಕ್ಕೆ ರೋಗಗಳಿಂದ ದೂರ ಉಳಿಯಬಹುದೆಂಬ ಸ್ವಲ್ಪಮಟ್ಟಿನ ನಿಟ್ಟುಸಿರು ಬಿಡುವ ಕಾಲ ಸನ್ನಿಹಿತವಾಗುತ್ತಿದೆ.
ಚಿಕ್ಕನಾಯಕನಹಳ್ಳಿ ತಾಲೂಕಿನ 26 ಕೆರೆಗಳಿಗೆ ನೀರು ಬಿಡಲು ಜಲ ಸಂಪನ್ಮೂಲ ಇಲಾಖೆಯು ಕಾವೇರಿ ನೀರಾವರಿ ನಿಗಮ ಮೂಲಕ 0.4 ಟಿ.ಎಂ.ಸಿ. ನೀರನ್ನು ಹಂಚಿಕೆ ಮಾಡಿದ್ದು, ಈ ನೀರು ತಾಲೂಕಿನಲ್ಲಿ ಮೂರು ರಿಂದ ಐದು ತಿಂಗಳ ವರೆಗೆ ಹರಿಯುತ್ತದೆ, ತಾಲೂಕಿನ 26 ಕೆರೆಗಳು ತುಂಬಲು ಕನಿಷ್ಟ ಪಕ್ಷ ಮುನ್ನೂರು ಕ್ಯೂಸಿಕ್ಸ್ ನೀರಾದರೂ ಅಗತ್ಯವಿದ್ದು, ಈ ಮಟ್ಟದ ನೀರು ನಮ್ಮ ತಾಲೂಕಿಗೆ ಸಿಗುತ್ತದೆ ಎಂಬುದೇ ಹರ್ಷದ ಸಂಗತಿ, ಈ ನೀರಿನಿಂದಾಗಿ ಹೇಮೆ ಹರಿಯುವ 26 ಕೆರೆಗಳ ಭಾಗದಲ್ಲಿನ ಜನ ಶುದ್ದ ನೀರನ್ನು ಕುಡಿಯುವುದರ ಜೊತೆಗೆ ತಮ್ಮ ಭಾಗದ ಬೋರ್ವೆಲ್ಗಳ ಅಂತರ್ಜಲವನ್ನು ಅಭಿವೃದ್ದಿ ಪಡಿಸಿಕೊಳ್ಳುತ್ತಾರೆ.
ತಾಲೂಕಿಗೆ ಹೇಮೆ ಹರಿಯುವ ದಾರಿ: ಹೇಮಾವತಿ ಮುಖ್ಯ ನಾಲೆಯಿಂದ ನೀರು ಬರುವ ದ್ವಾರವೆಂದರೆ ಕೆ.ಬಿ.ಕ್ರಾಸ್-ಬಿಳಿಗೆರೆ ಬಳಿ ಇರುವ ಗಡಬನಹಳ್ಳಿಯ ಬಳಿಯಿಂದ, ಗುರುತ್ವಾಕರ್ಷಣ ಬಲದಿಂದ ತಾಲೂಕಿನೊಳಕ್ಕೆ ಬರುವ ಹೇಮೆ ಪೆಮ್ಮಲದೇವರಹಳ್ಳಿ ಮಾರು ದೂರವಿದೆ ಎನ್ನುವ ಸ್ಥಳದಿಂದ ಎರಡು ಮಾರ್ಗಗಳಾಗಿ ವಿಂಗಡಣೆಗೊಂಡು ಒಂದು ಶಾಖಾನಾಲೆ ಚಿಕ್ಕನಾಯಕನಹಳ್ಳಿ ಕಡೆಗೆ ಹರಿದರೆ, ಮತ್ತೊಂದು ಶಾಖಾನಾಲೆ ಹಾಲ್ಕುರಿಕೆಯ ಕಡೆಗೆ ಹರಿಯುತ್ತದೆ. ಈ ಎರಡೂ ಶಾಖಾನಾಲೆಗಳಿಂದ ನೈಸಗರ್ಿಕ ಹಳ್ಳಕೊಳ್ಳಗಳಿಂದ 22 ಕೆರೆಗಳು ತುಂಬಿಕೊಂಡರೆ, 4 ಕೆರೆಗಳು ಲಿಫ್ಟ್ ಮೂಲಕ ಒಟ್ಟು 26 ಕೆರೆಗಳು, ಹತ್ತಾರು ಕಟ್ಟೆಗಳು ತುಂಬಿಕೊಂಡು 50ಕ್ಕೂ ಹೆಚ್ಚು ಗ್ರಾಮಗಳ ಜನರು ಉಪಯೋಗವನ್ನು ಪಡೆದುಕೊಳ್ಳುತ್ತಾರೆ.
ಗುರುತ್ವಾಕರ್ಷಣ ಬಲದಿಂದ ನೀರು ಹರಿದಾಗ ತುಂಬವ ಕೆರೆಗಳೆಂದರೆ ಪೆರಮಲದೇವರಹಳ್ಳಿ, ಸಾಸಲು, ಪಟ್ಟದೇವರಕೆರೆ, ಶೆಟ್ಟೀಕೆರೆ, ತಿಮ್ಲಾಪುರ, ಹುಳಿಯಾರು, ಅಜ್ಜೇನಹಳ್ಳಿ, ಹೊಸೂರು, ಮಂಚಸಂದ್ರ, ಕೊಡ್ಲಾಗರ, ಚುಂಗನಹಳ್ಳಿ, ದಬ್ಬೇಗಟ್ಟ, ಮೇಲನಹಳ್ಳಿ, ಮಾರಸಂದ್ರ, ಚಿಕ್ಕನಾಯಕನಹಳ್ಳಿ, ಕಂದಿಕೆರೆ, ತಮ್ಮಡಿಹಳ್ಳಿ, ದಾಸೀಹಳ್ಳಿ, ಕುಪ್ಪೂರು ಇವಷ್ಟೇ ಅಲ್ಲದೆ, ಈ ಮಾರ್ಗವಾಗಿ ಹರಿಯುವ ಕಟ್ಟೆಗಳು, ಹಳ್ಳ-ಕೊಳ್ಳಗಳು ತುಂಬಿ ಈ ಭಾಗದಲ್ಲಿ ಬರುವ ಲಕ್ಷಾಂತರ ಗಿಡ ಮರಗಳು ಹಸಿರಿನಿಂದ ನಳನಳಿಹಿಸುತ್ತವೆ.
ಲಿಫ್ಟ್ ಮೂಲಕ ನೀರು ಪಡೆಯುವ ಕೆರೆಗಳು: ಹೇಮಾವತಿ ನೀರು ಗುರುತ್ವಾಕರ್ಷಣೆ ಅಲ್ಲದೆ, ನಾಲ್ಕು ಕೆರೆಗಳಿಗೆ ಲಿಫ್ಟ್ ಮೂಲಕ ನೀರು ಹರಿಸಬೇಕಾಗುತ್ತದೆ, ಅವುಗಳೆಂದರೆ ನಾಗೇನಹಳ್ಳಿ, ಬ್ಯಾಡರಹಳ್ಳಿ, ಜೆ.ಸಿ.ಪುರ, ನಡುವನಹಳ್ಳಿ ಕೆರೆಗಳೂ ನೀರನ್ನು ಪಡೆಯುತ್ತವೆ.
ಈ ಯೋಜನೆಗೆ ಸಕರ್ಾರ ಈಗಾಗಲೇ 102 ಕೋಟಿ ರೂಗಳನ್ನು ಬಜೆಟ್ನಲ್ಲಿ ಹಂಚಿಕೆ ಮಾಡಿದ್ದು ಹಣಕ್ಕೇನು ತೊಂದರೆ ಇಲ್ಲ, ಈ ಯೋಜನೆಯ ಕಾಮಗಾರಿಯನ್ನು ಹೈದ್ರಾಬಾದ್ ಮೂಲದ ಎಂ.ಇ.ಐ ಎಂಬ ಸಂಸ್ಥೆಗೆ ಸಕರ್ಾರ ಗುತ್ತಿಗೆ ನೀಡಿದೆ. ಈ ಕಾರ್ಯವನ್ನು ಪೂರೈಸಲು ಸಕರ್ಾರ ಒಂದು ವರ್ಷದೊಳಗೆ ಕಾಲಾವಕಾಶವನ್ನು ನೀಡಿದೆ, ಈ ಕಾರ್ಯಕ್ಕೆ ಶಿಲಾನ್ಯಾಸ ಮಾಡಲು ರಾಜ್ಯದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ರವರು ಇದೇ ತಿಂಗಳ 11ಕ್ಕೆ ತಾಲೂಕಿಗೆ ಬರಲಿದ್ದಾರೆ ಅವರ ಜೊತೆ ಜಲಸಂಪನ್ಮೂಲ ಸಚಿವ ಬಸವರಾಜ್ ಬೊಮ್ಮಾಯಿಯವರು ಬರುವವರಿದ್ದು ಅವರನ್ನೇಲ್ಲಾ ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಗೌರವಿಸಲಿದ್ದಾರೆ. ಇಲಾಖೆ ಅಂದುಕೊಂಡ ವೇಗದಲ್ಲಿ ಕೆಲಸವಾದರೆ ಈ ಭಾಗದ ಜನ ಒಂದರಿಂದ ಎರಡು ವರ್ಷಗಳೊಳಗೆ ಹೇಮಾವತಿ ನೀರು ಕುಡಿಯುತ್ತಾರೆ, ಇಷ್ಟೊ ಅಷ್ಟೊ ಬೋರ್ವೆಲ್ಗಳಿಂದ ನೀರು ಪಡೆದು ತಮ್ಮ ಮರಗಿಡಗಳನ್ನು ಉಳಿಸಿಕೊಳ್ಳಬಹದು ಎಂಬುದು ದೂರದ ಆಶಯ. ಆದರೆ ಅಂದುಕೊಂಡಂತೆ ಆಗುತ್ತದೆಯೇ. . . . . !?
ಹೈದ್ರಾಬಾದ್ ಮುಸ್ಲಿಂ ಶಾಸಕನ ವಿರುದ್ದ ಶಿಸ್ತು ಕ್ರಮಕ್ಕೆ ಆಗ್ರಹಿಸಿ ಒತ್ತಾಯ
ಚಿಕ್ಕನಾಯಕನಹಳ್ಳಿ,: ಹೈದ್ರಾಬಾದ್ ಮುಸ್ಲಿಂ ಶಾಸಕ ಸಾರ್ವಜನಿಕ ಸಭೆಯಲ್ಲಿ ಹಿಂದೂಗಳ ಭಾವೈಕೆತೆಗೆ ದಕ್ಕೆ ತರುವಂತಹ ಹೇಳಿಕೆ ನೀಡಿದನ್ನು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ನಗರದಲ್ಲಿ ಬೈಕ್ ರ್ಯಾಲಿ ನೆಡೆಸಿ ಖಂಡಿಸಿದ್ದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕಾರ್ಯಕರ್ತರು ಆ ಶಾಸಕನ ವಿರುದ್ದ ಘೋಷಣೆ ಕೂಗುತ್ತ ತಾಲ್ಲೂಕು ಕಛೇರಿಗೆ ತೆರಳಿ ಮನವಿ ಪತ್ರವನ್ನು ತಹಶಿಲ್ದಾರರಿಗೆ ಸಲ್ಲಿಸಿದ್ದರು.
ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆಯ ತಾಲ್ಲೂಕು ಸಂಚಾಲಕ ಜಯಸಿಂಹ ಮಾತನಾಡಿ ಈ ದೇಶದ ಮುಸ್ಲಿಂ ಸಮುದಾಯದ ಮಾನಸಿಕತೆ ಏನೂ ಎಂಬುದು ತಿಳಿಯುತ್ತದೆ, ನಮ್ಮ ದೇಶದಲ್ಲಿ ಇಂತಹ ಮುಸ್ಲಿಂ ಜನಾಂಗದವರು ಹಿಂದೂಗಳು ಒಂದಾಗಿ ದೇಶದ ರಕ್ಷಣೆ ಮಾಡಬೇಕು ಎಂದರು.
ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ನ ತಾಲ್ಲೂಕು ಪ್ರಮುಖ್ ಚೇತನ್ ಪ್ರಸಾದ್ ಮಾತನಾಡಿ ಕೀಳು ಮಟ್ಟದ ರಾಜಕಾರಣ ಮಾಡುವ ಉದ್ದೇಶದಿಂದ ಈ ಮುಸ್ಲಿಂ ಶಾಸಕ ಈ ಹೇಳಿಕೆ ನೀಡಿದ್ದರೆ, ನಮ್ಮ ದೇಶ ಸಂಸ್ಕೃತಿಯ ತವರು ಭೂಮಿ ಎಲ್ಲಾ ಧರ್ಮದವರನ್ನು ಪ್ರೀತಿಸುವ ಸಮುದಾಯ, ಯಾರೋ ಒಬ್ಬ ಇಂತಹ ನೀಚ ಬುದ್ದಿಯವನಿಂದ ಹಿಂದೂ ಮುಸ್ಲಿಂ ಜನಾಂಗದವರ ನಡುವೇ ದ್ವೇಶ ಉಂಟುಮಾಡುತ್ತಿದ್ದರೆ ಇಂತವರನ್ನು ಜೈಲಿಗೆ ತಳ್ಳಬೇಕು ಎಂದು ಆಗ್ರಹಿಸಿದ್ದರು.
ತಾಲ್ಲೂಕು ಬಿ.ಜೆ.ಪಿ ಅಧ್ಯಕ್ಷ ಮಿಲ್ಟ್ರಿ ಶಿವಣ್ಣ ಮಾತನಾಡಿ ನಮ್ಮ ದೇಶದ ರಾಜಕಾರಣಿಗಳು ಅಲ್ಪ ಸಂಖ್ಯಾತರನ್ನು ಓಟು ಬ್ಯಾಂಕಿಗೊಸ್ಕರ ಅವರನ್ನು ಎತ್ತಿ ಮೆರೆಸಿದ ಪರಿಣಾಮ ಈ ಹೇಳಿಕೆಗಳು ಬರುತ್ತಿವೆ ಆಗಾಗಿ ಎಲ್ಲಾ ಹಿಂದೂ ರಾಜಕಾರಣಿಗಳು ಜಾಗೃತರಾಗಬೇಕು ಎಂದರು
ಈ ಸಂದರ್ಭದಲ್ಲಿ ಹಳೇಮನೆ ಸುರೇಶ್, ಮಲ್ಲಿಕಾಜರ್ುನ ಮಾತನಾಡಿದ್ದರು. ತಾಲ್ಲೂಕು ಕ.ರ.ವೇ ಅಧ್ಯಕ್ಷ ಸಿ.ಟಿ ಗುರುಮೂತರ್ಿ, ದಿಲೀಪ, ಜಗದೀಶ್ ಸ್ವಾಮಿ ಪ್ರತಿಭಟನೆಯಲ್ಲಿ ಭಾಗವಯಿಸಿದ್ದರು.

ಜ.13ರಂದು ತಮ್ಮಡಿಹಳ್ಳಿ ಹಿರಿಯ ಶ್ರೀಗಳ 4ನೇ ಪುಣ್ಯಗುರು ಸಂಸ್ಮರಣೋತ್ಸವ
ಚಿಕ್ಕನಾಯಕನಹಳ್ಳಿ,ಜ.09: ಲಿಂಗೈಕ್ಯ ಶ್ರೀ ಮಲ್ಲಿಕಾಜರ್ುನದೇಶೀಕೇಂದ್ರಸ್ವಾಮಿಗಳವರ ಕತರ್ೃಗದ್ದಿಗೆ ಹಾಗೂ ಶ್ರೀಮಠದ ಅಭಿವೃದ್ದಿಗೆ ಮೂರು ಕೋಟಿ ರೂಗಳಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಹಿರಿಯ ಶ್ರೀಗಳ ನಾಲ್ಕನೇ ಪುಣ್ಯಗುರು ಸಂಸ್ಮರಣೋತ್ಸವ ಹಾಗೂ ಧಾಮರ್ಿಕ ಸಮಾರಂಭವನ್ನು ಇದೇ 13ರ ಭಾನುವಾರ ಬೆಳಗ್ಗೆ11ಕ್ಕೆ ತಮ್ಮಡಿಹಳ್ಳಿಯ ವಿರಕ್ತ ಸಂಸ್ಥಾನಮಠದಲ್ಲಿ ಏರ್ಪಡಿಸಲಾಗಿದೆ ಎಂದು ಮಠದ ಪೀಠಾಧ್ಯಕ್ಷ ಡಾ.ಅಭಿನವ ಮಲ್ಲಿಕಾಜರ್ುನಸ್ವಾಮಿ ತಿಳಿಸಿದರು.
ಭಾನುವಾರದಂದು ಬೆಳಗ್ಗೆ 8ಗಂಟೆಗೆ ಮಲ್ಲಿಕಾಜರ್ುನಸ್ವಾಮಿಯವರ ಪಲ್ಲಕ್ಕಿ ಉತ್ಸವವು ವಿವಿಧ ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಆರಂಭವಾಗಲಿದ್ದು 10.30ಕ್ಕೆ ಧ್ವಜಾರೋಹಣ ನೆರವೇರಲಿದೆ. 11ಕ್ಕೆ ಏರ್ಪಡಿಸಿದ್ದು ಗೋಡೆಕೆರೆ ಸ್ಥಿರಪಟ್ಟಾಧ್ಯಕ್ಷರಾದ ಸಿದ್ದರಾಮದೇಶಿಕೇಂದ್ರಸ್ವಾಮಿ, ಷಡಕ್ಷರಮಠದ ರುದ್ರಮುನಿಸ್ವಾಮಿಗಳು ದಿವ್ಯಸಾನಿದ್ಯ ವಹಿಸಲಿದ್ದಾರೆ. ತಮ್ಮಡಿಹಳ್ಳಿ ಮಠದ ಡಾ.ಅಭಿನವಮಲ್ಲಿಕಾಜರ್ುನಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದು ಕುಪ್ಪೂರು ಗದ್ದಿಗೆ ಮಠದ ಡಾ.ಯತೀಶ್ವರ ಶಿವಾಚಾರ್ಯಸ್ವಾಮಿ ಉಪಸ್ಥಿತರಿರುವರು. ಸಂಸದ ಜಿ.ಎಸ್.ಬಸವರಾಜು ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶಾಸಕ ಸಿ.ಬಿ.ಸುರೇಶ್ಬಾಬು, ಮಾಜಿ ಶಾಸಕರಾದ ಜೆ.ಸಿ.ಮಾಧುಸ್ವಾಮಿ, ಕೆ.ಎಸ್.ಕಿರಣ್ಕುಮಾರ್, ತು.ಹಾ.ಉ.ಒಕ್ಕೂಟದ ಅಧ್ಯಕ್ಷ ಹಳೆಮನೆ ಶಿವನಂಜಪ್ಪ, ಮಾಜಿ ಶಾಸಕರಾದ ಬಿ.ನಂಜಾಮರಿ, ಕೆ.ಷಡಾಕ್ಷರಿ, ಜಿ.ಪಂ.ಸದಸ್ಯ ಪಂಚಾಕ್ಷರಿ, ಜಿ.ಪಂ.ಸದಸ್ಯೆ ಜಾನಮ್ಮರಾಮಚಂದ್ರಯ್ಯ, ಕೆ.ಜೆ.ಪಿ ಮುಖಂಡರಾದ ಲೊಕೇಶ್ವರ್, ಮಸಾಲೆಜಯರಾಮ್, ತಾ.ಪಂ.ಅಧ್ಯಕ್ಷ ಜಗದೀಶ್, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಶಿವಪ್ರಕಾಶ್, ಮಾಜಿ ಜಿ.ಪಂ.ಸದಸ್ಯ ಸುರೇಂದ್ರಯ್ಯ ಆಗಮಿಸಲಿದ್ದು ಎ.ಪಿ.ಎಂ.ಸಿ ಸದಸ್ಯ ಶಿವರಾಜ್, ಎಸ್.ಎಂ.ಎಸ್ ವಿದ್ಯಾಸಂಸ್ಥೆ ಎಂ.ಬಿ.ಶಿವಣ್ಣ ಉಪಸ್ಥಿತರಿರುವರು.
No comments:
Post a Comment