ರಸ್ತೆ ಅಭಿವೃದ್ದಿಗೆ ಅನುಧಾನ ನೀಡುವಲ್ಲಿ ರಾಜ್ಯಕ್ಕೆ ಕೇಂದ್ರ ಸಕರ್ಾರದಿಂದ ಮಲತಾಯಿ ಧೋರಣೆ: ಸಿ.ಎಂ.ಜಗಧೀಶ್ ಶೆಟ್ಟರ್
ಚಿಕ್ಕನಾಯಕನಹಳ್ಳಿ,ಜ.: ಪ್ರಧಾನ ಮಂತ್ರಿಗಳ ಗ್ರಾಮ ಸಡಕ್ ಯೋಜನೆಯಲ್ಲಿ ಅನುಧಾನ ಹಂಚಿಕೆ ಮಾಡುವ ವಿಷಯದಲ್ಲಿ ಕೇಂದ್ರಸಕರ್ಾರ ಮಲತಾಯಿ ಧೋರಣೆ ಅನುಸರಿಸುತ್ತಿದ್ದು, ರಾಜ್ಯಕ್ಕೆ ಇಲ್ಲಿವರೆಗೆ ರಸ್ತೆ ಅಭಿವೃದ್ದಿಗೆ ಅನುಧಾನ ನೀಡಿಲ್ಲವೆಂದು ಮುಖ್ಯಮಂತ್ರಿ ಜಗಧೀಶ್ ಶೆಟ್ಟರ್ ಆರೋಪಿಸಿದರು.
ತಾಲೂಕಿನ ಶೆಟ್ಟೀಕೆರೆಯಲ್ಲಿ ರಾಜ್ಯ ಸಕರ್ಾರ 102 ಕೋಟಿ ರೂಗಳ ಅಂದಾಜಿನಲ್ಲಿ ತಾಲೂಕಿನ 26 ಕೆರೆಗಳಿಗೆ ನೀರು ಹರಿಸುವ ಯೋಜನೆಯ ಶಿಲಾನ್ಯಾಸ ನೆರವೇರಿಸಿದ ನಂತರ ಭಾಜಪ ವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದರು.
ರಾಜ್ಯದ ಪ್ರತಿ ವಿಧಾನ ಸಭೆಯ ಗ್ರಾಮಗಳ ರಸ್ತೆಗಳ ಅಭಿವೃದ್ದಿಗೆ ನಮ್ಮ ಸಕರ್ಾರ ಹೆಚ್ಚಿನ ಒತ್ತು ನೀಡಿ ಈ ಹಿಂದೆ 20 ಕಿ.ಮೀ.ರಸ್ತೆಗಳ ಅಭಿವೃದ್ದಿ ಪಡಿಸಿತ್ತು, ಈಗ ನಮ್ಮ ಸಂಪುಟ ಸಭೆಯ ತೀಮರ್ಾನದಂತೆ ಮತ್ತೆ 30 ಕಿ.ಮೀ.ರಸ್ತೆಗಳ ಅಭಿವೃದ್ದಿಗೆ ಚಾಲನೆ ನೀಡಲಾಗುವುದು ಎಂದರು.
ಕುಡಿಯುವ ನೀರಿಗಾಗಿ ತಾಲೂಕಿಗೆ ಹೇಮಾವತಿ ನೀರು ಹರಿಸಲು ಈಗ ಶಿಲಾನ್ಯಾಸ ನೆರವೇರಿಸುತ್ತಿದ್ದು, ಇಲ್ಲಿನ ಕೆರೆಗಳಿಗೆ ನೀರು ಹರಿಸುವ ಯೋಜನೆಯ ಉದ್ಘಾಟನೆಯನ್ನು ನಾವೇ ಮಾಡುವಂತೆ ಜನತೆ ಆಶೀರ್ವದಿಸಬೇಕೆಂದರಲ್ಲದೆ, ಕೆ.ಎಸ್.ಕಿರಣ್ಕುಮಾರ್ ಈ ಕಾರ್ಯವನ್ನು ಕೈಗೂಡುವಂತೆ ಮಾಡುವಲ್ಲಿ ಸಾಕಷ್ಟು ಶ್ರಮವಹಿಸಿದ್ದು ಅವರಿಗೆ ನೀವು ಹೆಚ್ಚಿನ ಶಕ್ತಿ ಕೊಡಬೇಕು ಎಂದರು.
ನಮ್ಮ ಅಧಿಕಾರ ಅವಧಿ ಮೇ ತಿಂಗಳಿಗೆ ಮುಗಿಯಲಿದ್ದು ಪೂಣರ್ಾವಧಿವರೆಗೆ ಅಧಿಕಾರ ನಡೆಸಲಿದ್ದೇನೆ ಎಂದರಲ್ಲದೆ, ಫೆಬ್ರವರಿಯಲ್ಲಿ ನಾನೇ ರೈತ ಪರ ಬಜೆಟ್ ಮಂಡಿಸಲಿದ್ದು, ಆ ಸಂದರ್ಭದಲ್ಲಿ ತುಮಕೂರು ಜಿಲ್ಲೆಗೆ ಅಗತ್ಯವಿರುವ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಹಣ ಮೀಸಲಿಡುವುದಾಗಿ ತಿಳಿಸಿದರು.
ಬಿ.ಜೆ.ಪಿ. ಸಕರ್ಾರ ರಾಜ್ಯದ ಅಭಿವೃದ್ದಿ ದೃಷ್ಟಿಯಿಂದ ಗ್ರಾಮೀಣ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ, ಸುವರ್ಣಭೂಮಿ ಯೋಜನೆ, ಕೆರೆ ಹೂಳೆತ್ತುವ ಯೋಜನೆ, ಅಶಕ್ತ ಜನರಿಗೆ ವಿವಿಧ ರೀತಿಯ ಮಾಸಿಕ ವೇತನ ಯೋಜನೆಯನ್ನು ಯಶಸ್ವಿಗೆ ಅನುಷ್ಠಾನಗೋಳಿಸಲಾಗಿದೆ ಎಂದರು.
ಸಹಕಾರ ಬ್ಯಾಂಕ್ಗಳಿಂದ ಸಣ್ಣ ರೈತರಿಗೆ ನೀಡಿದ್ದ ಸಾಲ ಮನ್ನಾ ಮಾಡಲು 3600 ಕೋಟಿ ರೂಗಳನ್ನು ಸಹಕಾರ ಇಲಾಖೆಗೆ ನೀಡಿರುವುದಾಗಿ ತಿಳಿಸಿದರಲ್ಲದೆ, ಗ್ರಾಮ ಸಹಾಯಕರಿಗೆ ನೀಡುತ್ತಿದ್ದ ಮಾಸಿಕ ಸಂಬಳವನ್ನು ಮೂರೂವರೆ ಸಾವಿರ ರೂಗಳಿಂದ ಏಳು ಸಾವಿರ ರೂಗಳವರೆಗೆ ಹೆಚ್ಚಿಸಲಾಗಿದೆ ಎಂದರು.
ಸಮಾರಂಭದಲ್ಲಿ ಮಾತನಾಡಿದ ಜಲ ಸಂಪನ್ಮೂಲ ಸಚಿವ ಬಸವರಾಜ್ ಬೊಮ್ಮಾಯಿ, ತಾಲೂಕಿಗೆ ಹೇಮಾವತಿ ನೀರು ಹರಿಸಲು ಸಾಕಷ್ಟು ವಿಘ್ನಗಳು ಬಂದವು ಆದರೆ ಅವ್ಯಾವುಗಳನ್ನು ಲೆಕ್ಕಿಸದೆ, ಈ ತಾಲೂಕಿಗೆ ನೀರು ಕೊಡಲೇ ಬೇಕೆಂಬ ಉದ್ದೇಶದಿಂದ ಹಠ ಬಿಡದ ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ನಮ್ಮ ಕೈಯಲ್ಲಿ ಈ ಕೆಲಸ ಮಾಡಿಸಿದ್ದಾರೆ. ಈ ಕಾರ್ಯಕ್ಕೆ ಮೂವರು ಮುಖ್ಯಮಂತ್ರಿಗಳೂ ಸಹಕರಿಸಿದ್ದು, ಯಡಿಯೂರಪ್ಪನವರು ಯೋಜನೆಯ ಸವರ್ೆಗೆ ಆದೇಶ ಮಾಡಿದರೆ, ಸದಾನಂದ ಗೌಡರವರು ಸಂಪುಟ ಸಭೆಯಲ್ಲಿ ಅನುಷ್ಠಾನಗೊಳಿಸಿದರು, ಜಗದೀಶ್ ಶೆಟ್ಟರ್ರವರು ಶಿಲಾನ್ಯಾಸ ಮಾಡುತ್ತಿದ್ದಾರೆ ಎಂದರು.
ಪಶ್ಚಿಮ ಘಟ್ಟದಿಂದ ಬಯಲು ಸೀಮೆಗೆ ನೀರು ತರುವ ಯೋಜನೆಗೆ ಪರಮಶಿವಯ್ಯನವರ ನೇತೃತ್ವದಲ್ಲಿ ಸಮತಿಯನ್ನು ರಚಿಸಿಸಲಾಗಿದೆ, ಅದೇರೀತಿ ಎತ್ತಿನಹೊಳೆ ಯೋಜನೆಗೂ ಶ್ರಮಿಸಲಾಗುವುದು ಎಂದರು.
ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ರವರು, 2006 ರಿಂದಲೂ ಈ ಕಾರ್ಯವನ್ನು ಕೈಗೆತ್ತಿಕೊಂಡಿದ್ದು ಅಂದಿನಿಂದ ಇದರ ಹಿಂದೆ ಬಿದ್ದು ಹೋರಾಡಿದ ಫಲ ಇಂದು ಸಾರ್ಥಕವಾಗಿದೆ ಎಂದರಲ್ಲದೆ, ಇದಕ್ಕೆ ಸಾಕಷ್ಟು ವಿಘ್ನಗಳು ಬಂದರೂ ಅವುಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಹೋರಾಡಿರುವುದಾಗಿ ತಿಳಿಸಿದರಲ್ಲದೆ, ಯಡಿಯೂರಪ್ಪನವರು 2008ರಲ್ಲಿ ಈ ತಾಲೂಕಿನ ಮತಿಘಟ್ಟದ ಸಮಾರಂಭದಲ್ಲಿ ಕೊಟ್ಟ ಮಾತಿನಮೂಲಕ ಈ ಕಾರ್ಯಕ್ಕೆ ಚಾಲನೆ ಸಿಕ್ಕಿದಂತಾಗಿತ್ತು ಎಂದು ಸ್ಮರಿಸಿಕೊಂಡರಲ್ಲದೆ, ಶೀಘ್ರವಾಗಿ ಈ ಕೆಲಸವನ್ನು ಮುಗಿಸಿ ನಂತರ ತಾಲೂಕಿನ ಬಡಕೆಗುಡ್ಲು, ಹಂದನಕೆರೆ, ತೀರ್ಥಪುರ, ಹಾಗೂ ಗುಬ್ಬಿ ತಾಲೂಕಿನ ಹಾಗಲ್ವಾಡಿ ಮೂಲಕ ಬುಕ್ಕಾಪಟ್ಟಣಕ್ಕೂ ಕುಡಿಯುವ ನೀರು ಕೊಡುವಂತೆ ಒತ್ತಾಯಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಮಂಡಲ ಬಿ.ಜೆ.ಪಿ.ಅಧ್ಯಕ್ಷ ಮಿಲಿಟರಿ ಶಿವಣ್ಣ ವಹಿಸಿದ್ದರು. ಈ ಸಂದರ್ಭದಲ್ಲಿ ತಮ್ಮಡಿಹಳ್ಳಿ ವಿರಕ್ತಮಠದ ಡಾ.ಅಭಿನವ ಮಲ್ಲಿಕಾರ್ಜನ ಸ್ವಾಮಿ, ಕುಪ್ಪೂರು ಗದ್ದಿಗೆಮಠದ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮಿ, ಗೋಡೆಕೆರೆ ಚರಪಟ್ಟಾಧ್ಯಕ್ಷ ಮೃತ್ಯುಂಜಯ ದೇಶಿಕೇಂದ್ರ ಸ್ವಾಮಿ, ವಾಲ್ಮೀಕಿ ಮಹಾಸಂಸ್ಥಾನ ಪೀಠದ ವಾಲ್ಮೀಕ ಸಂಜಯಕುಮಾರ ಸ್ವಾಮಿ ದಿವ್ಯ ಸಾನಿಧ್ಯವಹಿಸಿದ್ದರು.
ಸಮಾರಂಭದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಬೆಳ್ಳುಬ್ಬಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಶಿವಣ್ಣ, ಮುಖ್ಯ ಸಚೇತಕ ಎ.ಎಚ್.ಶಿವಯೋಗಸ್ವಾಮಿ, ಎಂ.ಎಸ್.ಐ.ಎಲ್ ಎಂ.ಬಿ.ನಂದೀಶ್, ಶಾಸಕ ಬಿ.ಸಿ.ನಾಗೇಶ್, ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ ಶಿವಪ್ರಸಾದ್, ತಾ.ಪಂ.ಅಧ್ಯಕ್ಷ ಎಂ.ಎಂ.ಜಗದೀಶ್, ಜಿ.ಪಂ.ಸದಸ್ಯೆ ನಿಂಗಮ್ಮ ರಾಮಯ್ಯ, ತಾ.ಪಂ.ಸದಸ್ಯರಾದ ರಮೇಶ್, ಆರ್.ಪಿ.ವಸಂತಯ್ಯ, ಕೆ.ಎಂ.ನವೀನ್, ಸೀತಾರಾಮಯ್ಯ, ಜಯಲಕ್ಷ್ಮಮ್ಮ, ತಿಮ್ಮರಾಜಮ್ಮ, ನೀರಾವರಿ ಸವರ್ೆಯರು ವೇದಾನಂದಮೂತರ್ಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ವಿದ್ಯಾವಾರಧಿ ಶಾಲೆಯ ಮಕ್ಕಳು ಪ್ರಾಥರ್ಿಸಿದರೆ, ಕವಿತಾ ಕಿರಣ್ಕುಮಾರ್ ನಿರೂಪಿಸಿದರು, ಜಿ.ಪಂ.ಸದಸ್ಯ ಎಚ್.ಬಿ.ಪಂಚಾಕ್ಷರಿ ಸ್ವಾಗತಿಸಿದರು.
ಸುದ್ದಿ:2:
ನಿಗದಿತ ಕಾಲಾವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ತಾಕೀತು: ಸಿ.ಎಂ.ಶೆಟ್ಟರ್
ಚಿಕ್ಕನಾಯಕನಹಳ್ಳಿ.ಜ.11: ಒಂದು ವರ್ಷದೊಳಗೆ ತಾಲೂಕಿನ 26 ಕೆರೆಗಳಿಗೂ ನೀರು ಹರಿಸುವ ಕಾಮಗಾರಿಯನ್ನು ಪೂರ್ಣಗೊಳಿಸುವ ಮೂಲಕ ಈ ಭಾಗದ ಜನ ಶುದ್ದ ನೀರನ್ನು ಕುಡಿಯುವಂತೆ ಮಾಡಲು ಅಧಿಕಾರಿಗಳಾಗಿ ತಾಕೀತು ಮಾಡುವುದಾಗಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರು ತಿಳಿಸಿದರು.
ತಾಲ್ಲೂಕಿನ ಸಾಸಲು ಗ್ರಾಮದಲ್ಲಿ ಕುಡಿಯುವ ನೀರಿನ ಯೋಜನೆ ಹಾಗೂ ವಿಶೇಷ ಘಟಕ ಯೋಜನೆಯಡಿ ವಿವಿಧ 19 ಶಾಲಾ ಕೊಠಡಿಗಳ ಶಂಕುಸ್ಥಾಪನೆ ಮಾಡಿ ಮಾತನಾಡಿ, ಫೆಬ್ರವರಿಯಲ್ಲಿ ನಾನು ಮಂಡಿಸುವ ಬಜೆಟ್ನಲ್ಲಿ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡುವುದಾಗಿ ತಿಳಿಸದರಲ್ಲದೆ, ತುಮಕೂರು ಜಿಲ್ಲೆಯ ಅಭಿವೃದ್ದಿಗೆ ಅಗತ್ಯವಿರುವ ಅನುದಾನವನ್ನು ಮೀಸಲಿಡುವುದಾಗಿ ತಿಳಿಸಿದರು.
ನನಗೆ ಜನರ ಆಶೀವರ್ಾದ ಇರುವವರೆಗೂ ಯಾರಿಗೂ ಅಂಜುವುದಿಲ್ಲವೆಂದ ಅವರು, ಅಧಿಕಾರ ಶಾಶ್ವತವಲ್ಲ, ಜನರ ಆಶಯವನ್ನು ಈಡೇರಿಸುವುದು ಮುಖ್ಯ ಎಂದ ಅವರು, ರಾಜ್ಯದ ಸಿ.ಎಂ.ಗಳು ಹೋಗದ ಊರುಗಳಿಗೆ ನಾನು ಹೋಗಿದ್ದು, ಕಿತ್ತೂರು ಉತ್ಸವ, ಸವದತ್ತಿ, ಚಾಮರಾಜನಗರಕ್ಕೆ ಹೋದ ಮೇಲೆ ನನಗೆ ಹೆಚ್ಚಿನ ಅನುಕೂಲಗಳಾಗಿವೆ ಎಂದ ಅವರು, ಚಿಕ್ಕನಾಯಕನಹಳ್ಳಿಗೆ ಬರುವಾಗಲೂ ಈ ರೀತಿಯ ಮಾತುಗಳು ಕೇಳಿ ಬಂದವೂ ಆದರೆ ನಾನು ಅದನ್ನು ಕಡೆಗಣಿಸಿ ಇಲ್ಲಿಗೆ ಬಂದಿದ್ದೇನೆ ಎಂದರು.
ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ ನೀರು ರೈತರು ದೇಶದ ಸಂಪತ್ತು ಯಾವುದೇ ಪಕ್ಷದ ಸ್ವತ್ತಲ್ಲ ಎಂದರಲ್ಲದೆ. ಬದುಕಿಗೆ ಬೇಕಾದ ಕುಡಿಯುವ ನೀರಿನ ಯೋಜನೆಗೆ ಯಾವುದೇ ಅಡೆ ತಡೆಗಳಿದ್ದರೂ ಇವುಗಳನ್ನು ನಿವಾರಿಸಿಕೊಂಡು ತಾಲ್ಲೂಕಿನ ಬಹುದಿನಗಳ ಬೇಡಿಕೆಯಾದ 26 ಕೆರೆಗಳಿಗೆ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಲಾಗಿದೆ. ನೇತ್ರಾವತಿ ತಿರುವು ಯೋಜನೆ ಹಾಗೂ ಎತ್ತಿನಹೊಳೆ ಯೋಜನೆಯನ್ನು ಕಾರ್ಯಗತ ಗೊಳಿಸಲು ನೀರಾವರಿ ತಜ್ಞ ಪರಮಶಿವಯ್ಯನವರ ನೇತೃತ್ತದಲ್ಲಿ ಸಮಿತಿ ರಚಿಸಲಾಗಿದ್ದರು ಪ್ರಗತಿಯಲ್ಲಿದೆ ಎಂದರು. ಬಿ.ಜೆ.ಪಿ.ಸಕರ್ಾರದ ಅವಧಿಯಲ್ಲಿ ಕಾಮಗಾರಿಗಳು ಪ್ರಾರಂಭಿಸಲು ಶಂಕುಸ್ಥಾಪನೆ ಮಾಡಿ ಟೆಂಡರ್ ಕರೆದು ಕಾಮಗಾರಿ ಪೂರ್ಣಗೊಂಡು ನಾವೇ ಉದ್ಘಾಟನೆ ಮಾಡುತ್ತಿದ್ದೇವೆ ಕುಡಿಯುವ ನೀರಿನ ಯೋಜನೆಗೆ ಅಧಿಕಾರಿಗಳು ಪ್ರಾರಂಬಿಸಿ ಒಂದು ವರ್ಷದಲ್ಲಿ ಪೂರೈಸುವಂತೆ ಆದೇಶ ನೀಡಲಾಗಿದೆ ಎಂದರು.
ಸಂಸದ ಜಿ.ಎಸ್.ಬಸವರಾಜು ತಾಲ್ಲೂಕಿನ 26 ಕೆರೆಗಳಿಗೆ ಕುಡಿಯುವ ನೀರಿ ಯೋಜನೆಗೆ ಚಾಲನೆ ನೀಡಲಾಗಿದ್ದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಕುಡಿಯುವ ನೀರಿನ ಯೋಜನೆ ಜಾರಿಗೆ ತಂದಿದ್ದು, ಬಸವರಾಜು ಬೊಮ್ಮಾಯಿ ಚಾಲನೆ ನೀಡಿದ್ದಾರೆ. ಇದರಿಂದ 137 ಕೋಟಿ ವೆಚ್ಚದಲ್ಲಿ ಈ ಯೋಜನೆ ಜಾರಿಗೆ ಬಂದಿದೆ. ಇದಕ್ಕೆ ಎಲ್ಲಾ ಸಂಘ ಸಂಸ್ಥೆಗಳು, ಮಠಾದೀಶರು ಬಾಗಿಯಾಗಿದ್ದಾರೆ. ನೇತ್ರಾವತಿ 25 ರಿಂದ 30 ಟಿ.ಎಂ.ಸಿ. ನೀರು ತರುವುದರಿಂದ 8 ಜಿಲ್ಲೆಗಳ 46 ತಾಲ್ಲೂಕುಗಳ ಕುಡಿಯುವ ನೀರಿನ ಯೋಜನೆಗೆ ಮುಖ್ಯಮಂತ್ರಿಗಳು ಮಂಜೂರು ಮಾಡುವಂತೆ ತಿಳಿಸಿದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ, ನೀರಾವರಿ ಸಚಿವ ಬಸವರಾಜ ಬೊಮ್ಮಾಯಿಯವರು ಚಾಲನೆ ನೀಡಿದ್ದು, ತಾಲ್ಲೂಕಿನ ಗಡಿ ಬಾಗಗಳಾದ ಹಂದನಕೆರೆ, ಕಂದಿಕೆರೆ , ರಾಮನಹಳ್ಳಿ, ಬುಕ್ಕಾಪಟ್ಟಣ ಹೋಬಳಿ ಭಾಗಗಳಿಗೂ ಕುಡಿಯುವ ನೀರು ಒದಗಿಸಲು ನೀರಾವರಿ ಸಚಿವರು ನೀರು ಹರಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಪಟ್ಟಣದ ತೀ.ನಂ.ಶ್ರೀ ಭವನಕ್ಕೆ ಹೆಚ್ಚು ಅನದಾನ ಬಿಡುಗಡೆ ಮಾಡುವಂತೆ ಸಿ.ಎಂ.ರವರನ್ನು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಕುಪ್ಪೂರು ಗದ್ದಿಗೆ ಮಠದ ಡಾ||ಯತೀಶ್ವರಶಿವಾಚಾರ್ಯಸ್ವಾಮಿಗಳು ಮುಖ್ಯ ಸಚೇತಕ ಡಾ|| ಶಿವಯೋಗಿಸ್ವಾಮಿ, ಸಚಿವರಾದ ಬೆಳ್ಳುಬ್ಬಿ, ಎಸ್.ಶಿವಣ್ಣ, ಜಿ.ಪಂ. ಅಧ್ಯಕ್ಷೆ ಪ್ರೇಮಾ ಮಹಾಲಿಂಗಯ್ಯ, ಶಾಸಕ ಬಿ.ಸಿ.ನಾಗೇಶ್, ಮಾಜಿ ಶಾಸಕ, ಕೆ.ಎಸ್. ಕಿರಣ್ಕುಮಾರ್, ಬಿ. ಲಕ್ಕಪ್ಪ, ಜಿ.ಪಂ.ಸದಸ್ಯ ಪಂಚಾಕ್ಷರಿ ಜೆ.ಸಿ.ಪುರ ಗ್ರಾ.ಪಂ. ಅಧ್ಯಕ್ಷೆ ಲಲಿತಮ್ಮ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
No comments:
Post a Comment