ೆಎಸ್.ಎಸ್.ಎಲ್.ಸಿಯಲ್ಲಿ ಜಿಲ್ಲೆಗೆ ಪ್ರಥಮ ಚಿಕ್ಕನಾಯಕನಹಳ್ಳಿ ವಿದ್ಯಾಥರ್ಿನಿ ಎಂ.ಆರ್.ಧೃವಿಕ
ಚಿತ್ರ ಶೀಷರ್ಿಕೆ :
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮೊರಾಜರ್ಿ ಶಾಲೆಯ ವಿದ್ಯಾಥರ್ಿನಿ ಎಂ.ಆರ್.ಧೃವಿಕ 619 ಅಂಕಗಳಿಸಿ ಜಿಲ್ಲೆಗೆ ಪ್ರಥಮರೆನಿಸಿದ್ದಾರೆ. ಚಿತ್ರದಲ್ಲಿ ವಿದ್ಯಾಥರ್ಿನಿ ತಾಯಿ ನಾಗಮಣಿ, ಶಾಲೆಯ ಪ್ರಾಂಶುಪಾಲ ಸತೀಶ್ ಇದ್ದಾರೆ.
ಚಿಕ್ಕನಾಯಕನಹಳ್ಳಿ, : ತಾಲ್ಲೂಕಿನ ಮೊರಾಜರ್ಿ ದೇಸಾಯಿ ವಸತಿ ನಿಲಯದ ವಿದ್ಯಾಥರ್ಿನಿ ಎಂ.ಆರ್.ಧೃವಿಕ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 619 ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಎಂ.ಆರ್.ಧೃವಿಕ ಎಸ್.ಎಸ್ಎಲ್ಸಿ ಪರೀಕ್ಷೆಯ ಕನ್ನಡ ಮಾಧ್ಯಮದಲ್ಲಿ 124, ಇಂಗ್ಲೀಷ್ 98, ಹಿಂದಿ 99, ಗಣಿತ 100, ವಿಜ್ಞಾನ 99, ಸಮಾಜವಿಜ್ಞಾನ 99 ಅಂಕಗಳನ್ನು ಪಡೆದು ಎ+ ಗ್ರೇಡ್ನಲ್ಲಿ ಉತ್ತೀರ್ಣರಾಗಿದ್ದಾರೆ. ಎಂ.ಆರ್.ಧೃವಿಕ ಕೃಷಿ ಕುಟುಂಬದ ತಂದೆ ಎಚ್.ರಂಗನಾಥಸ್ವಾಮಿ, ತಾಯಿ ನಾಗಮಣಿ ಮಗಳಾಗಿದ್ದಾರೆ. ವಿದ್ಯಾಥರ್ಿನಿ ಎಂ.ಆರ್.ಧೃವಿಕ ಪಠ್ಯಪುಸ್ತಕ ಶಾಲೆಯಲ್ಲಿ ಶಿಕ್ಷಕರು ಪಾಠ ಮಾಡುವಾಗ ಶ್ರದ್ದೆಯಿಂದ ಕಲಿತಿದ್ದು ಓಸ್ವಾಲ್ ಪ್ರಶ್ನೆಪುಸ್ತಕವನ್ನು ನಿತ್ಯ ನೋಡುವ ಅಭ್ಯಾಸ ಮಾಡಿಕೊಂಡಿದ್ದೆ, ಶಾಲೆಯಲ್ಲಿ ನೀಡುವ ಪ್ರಶ್ನೆಪತ್ರಿಕೆಯನ್ನು ಚಾಚೂ ತಪ್ಪದೆ ಬರೆಯುತ್ತಿದ್ದೆ ಎಂದರಲ್ಲದೆ ಮುಂದೆ ಐ.ಎ.ಎಸ್ ಮಾಡುವ ಬಯಕೆಯಿದೆ ಎಂದರು.
ಪ್ರಾಂಶುಪಾಲ ಸತೀಶ್ ಮಾತನಾಡಿ, ಎಂ.ಆರ್.ಧೃವಿಕ ಪ್ರತಿಭಾನ್ವಿತ ವಿದ್ಯಾಥರ್ಿನಿಯಾಗಿದ್ದರು. ಶಾಲೆಯಲ್ಲಿ ಉತ್ತಮ ಶಿಕ್ಷಕರಿದ್ದು ಶಿಕ್ಷಕರು ವಿದ್ಯಾಥರ್ಿಗಳಿಗೆ ಮೂರು ತಿಂಗಳ ಮುಂಚೆಯೇ ಪರೀಕ್ಷೆಯ ಬಗ್ಗೆ ಯಾವ ರೀತಿ ಸಿದ್ದತೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ವಿದ್ಯಾಥರ್ಿಗಳಿಗೆ ತಯಾರಿ ನಡೆಸಿದ್ದರು ಹಾಗೂ ಪರೀಕ್ಷೆಯಲ್ಲಿ ಬರೆಯಲು ವಿದ್ಯಾಥರ್ಿಗಳಲ್ಲಿ ಆತ್ಮವಿಶ್ವಾಸ ತುಂಬುತ್ತಿದ್ದರು. ಈ ಕಾರಣದಿಂದಲೇ ಧೃವಿಕ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕ ಪಡೆಯಲು ಕಾರಣ ಹಾಗೂ ಶಾಲೆಯ ಎಲ್ಲಾ ವಿದ್ಯಾಥರ್ಿಗಳು ತೇರ್ಗಡೆಯಾಗುವುದರ ಮೂಲಕ ಶಾಲೆಗೆ ಶೇ.100 ರಷ್ಟು ಫಲಿತಾಂಶ ಬರಲು ಸಾಧ್ಯವಾಯಿತು ಎಂದರು.
ಮೊರಾಜರ್ಿ ದೇಸಾಯಿ ಶಾಲೆಯಿಂದ 47 ವಿದ್ಯಾಥರ್ಿಗಳು ಪರೀಕ್ಷೆಗೆ ಕುಳಿತಿದ್ದು ಎಂ.ಎಆರ್.ಧೃವಿಕ 619, ಪ್ರೀತಿ 600, ಕಾವ್ಯ 576, ಮಧುಶ್ರೀ 574, ಭಾಸ್ಕರ್ ಡಿ.ಎಸ್.569, ಸುಕ್ಷಿತ್ 563, ಅಂಕ ಹಾಗೂ 10 ಮಕ್ಕಳು ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ, 26 ಮಕ್ಕಳು ಪ್ರಥಮ ದಜರ್ೆಯಲ್ಲಿ, 5 ಮಕ್ಕಳು ದ್ವಿತಿಯ ದಜರ್ೆಯಲ್ಲಿ ಪಾಸಾಗುವ ಮೂಲಕ ಶಾಲೆಗೆ ಶೇ.100ರಷ್ಟು ಫಲಿತಾಂಶ ಬಂದಿದೆ ಎಂದರು.
ರೋಟರಿ ಶಾಲೆಯ ವಿದ್ಯಾಥರ್ಿನಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 617 ಅಂಕ
ಚಿಕ್ಕನಾಯಕನಹಳ್ಳಿ,ಮೇ.13 : ನಿರೀಕ್ಷಯಂತೆ ಅಂಕ ಬಂದಿರುವುದು ಸಂತಸ ತಂದಿದೆ, ಈ ನಿಟ್ಟಿನಲ್ಲೇ ಮುಂದೆ ಡಾಕ್ಟರ್ ಆಗುವ ನಿರೀಕ್ಷೆಯಿದೆ ಎಂದು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 611 ಅಂಕ ಪಡೆದಿರುವ ಸಿ.ವಿ.ದಶರ್ಿನಿ ಹೇಳಿದರು.
ಪಟ್ಟಣದ ರೋಟರಿ ಶಾಲೆಯ ವಿದ್ಯಾಥರ್ಿನಿ ಸಿ.ವಿ.ದಶರ್ಿನಿ ಮಾತನಾಡಿ, ತಂದೆ ತಾಯಿಯ ಕನಸು ನನಸು ಮಾಡುವುದು ನನ್ನ ಧ್ಯೇಯ, ತಂದೆ ವಕೀಲರಾದ ವೆಂಕಟೇಶ್, ತಾಯಿ ಲಕ್ಷ್ಮೀಲತಾ ಇವರು ಕೃಷಿ ಕುಟುಂಬದಿಂದ ಬಂದವರಾಗಿದ್ದು ಮಗಳ ಯಶಸ್ಸಿಗೆ ಸಂತಸ ಹಂಚಿಕೊಂಡರು.
ಗಣಿತದಲ್ಲಿ 100ಕ್ಕೆ 100 ಅಂಕಗಳಿಸಿದರೆ, ಕನ್ನಡದಲ್ಲಿ 122, ಇಂಗ್ಲೀಷ್ 97, ಹಿಂದಿ 98, ವಿಜ್ಞಾನ 97, ಸಮಾಜ 97, ಪಡೆದು ಒಟ್ಟು 611 ಅಂಕ ಪಡೆದು ಶೇ.97ರಷ್ಟು ಅಂಕ ಪಡೆದಿದ್ದಾರೆ.
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರೋಟರಿ ಶಾಲೆಗೆ 100% ಫಲಿತಾಂಶ
ಚಿಕ್ಕನಾಯಕನಹಳ್ಳಿ,ಮೇ.13 : ಪಟ್ಟಣದ ರೋಟರಿ ಆಂಗ್ಲ ಪ್ರೌಢಶಾಲೆಯ ವಿದ್ಯಾಥರ್ಿ ಮೋಹಿತ್.ಎಸ್. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 619 ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ರೋಟರಿ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಗೆ 55 ವಿದ್ಯಾಥರ್ಿಗಳು ಪರೀಕ್ಷೆ ಬರೆದಿದ್ದು ಅತ್ಯುನ್ನತ ಶ್ರೇಣಿಯಲ್ಲಿ 15 ವಿದ್ಯಾಥರ್ಿಗಳು, ಪ್ರಥಮ ದಜರ್ೆಯಲ್ಲಿ 40 ವಿದ್ಯಾಥರ್ಿಗಳು ಪಾಸಾಗಿದ್ದಾರೆ, ಶೇ.100 ರಷ್ಟು ಫಲಿತಾಂಶ ಬಂದಿದೆ.
1) ಎಸ್.ಮೋಹಿತ್ 619.(ಶೇ.99.4,) 2) ದಶರ್ಿನಿ 611.(97.11), ಜಿ.ಕೆ.ಸಂದೀಪ್606(96.96), ಬಿಂದುರಾಜಶೇಖರ್ 597(95.52), ದೊರೈರಾಜ್588(94.08), ಬಿ.ಎಸ್.ಚೇತನ 577(92.32), ಸಹನ ಸಿ.ಎಸ್(577(92.32), ಪಾವನಗಂಗ 576(92.16), ಕೆ.ಆರ್.ಶ್ರೀಲಕ್ಷ್ಮೀ 573(91.68), ಹೆಚ್.ಬಿ.ಯಶವಂತ್573(91.68), ಟಿ.ವಿನಯ್568(90.88), ಆಶಾ.ಕೆ.ಎಸ್567(90.72), ಸಹನ.ಕೆ.566(90.56), ಮಧು.ಬಿ.ಎನ್.565(90.40), ಸುಪ್ರಿತ.ಸಿ.565(90.40) ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
(1ರಿಂದ 15ರವರೆಗಿನ ಪೋಟೋಗಳು).
ಚಿಕ್ಕನಾಯಕನಹಳ್ಳಿ ರೋಟರಿ ಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾಥರ್ಿಗಳು ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿರುವುದು.
No comments:
Post a Comment