ಗ್ರಾಮದ ರಸ್ತೆ ಸರಿಯಾಗುವವರೆಗೂ ಚುನಾವಣೆಯಲ್ಲಿ ಮತ ಚಲಾಯಿಸುವುದಿಲ್ಲ : ಗ್ರಾಮಸ್ಥರು
ಚಿಕ್ಕನಾಯಕನಹಳ್ಳಿ,ಮೇ.14 : ಗ್ರಾಮದಲ್ಲಿ ಸಂಚರಿಸಲು ತೊಂದರೆಯಾಗಿರುವ ರಸ್ತೆ ಸರಿಯಾಗುವವರೆಗೂ ಗ್ರಾಮದ ಯಾರೊಬ್ಬರೂ ಕೂಡ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಮತ ಚಲಾಯಿಸುವುದಿಲ್ಲ ಮತ ಬಹಿಷ್ಕರಿಸುತ್ತೇವೆ ಎಂದು ತಾಲ್ಲೂಕಿನ ಮಲ್ಲೇನಹಳ್ಳಿತಾಂಡ್ಯದ ಗ್ರಾಮಸ್ಥರು ರಸ್ತೆಗಿಳಿದು ಪ್ರತಿಭಟಿಸಿದರು.
ತಾಲ್ಲೂಕಿನ ಕುಪ್ಪೂರು ಬೇವಿನಹಳ್ಳಿ ಗೇಟ್ನಿಂದ ಸಮೀಪದ ಗೊಲ್ಲರಹಟ್ಟಿ, ಎ.ಕೆ.ಕಾಲೋನಿ, ಕೋಡಿಹಟ್ಟಿ, ಜೋಗಿಹಟ್ಟಿ, ಬಲ್ಲೇನಹಳ್ಳಿ, ಉಪ್ಪಾರಹಳ್ಳಿ ತಾಂಡ್ಯಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸಂಚರಿಸಲು ಬಹಳ ತೊಂದರೆಯಾಗಿದೆ, ಈ ಬಗ್ಗೆ ಹಲವು ಬಾರಿ ಜನಪ್ರತಿನಿಧಿಗಳಿಗೆ ತಿಳಿಸಿದರೂ ಏನು ಪ್ರಯೋಜನವಾಗಿಲ್ಲ, ಚುನಾವಣೆ ಸಂದರ್ಭದಲ್ಲಿ ಮಾತ್ರ ಓಟನ್ನು ಕೇಳಿಕೊಂಡು ಬರುವವರು ನಂತರ ನಮ್ಮಗಳ ಸಮಸ್ಯೆಯನ್ನೇ ನೋಡುವುದಿಲ್ಲ ಆದ್ದರಿಂದ ಈ ಬಾರಿ ನಡೆಯುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಾವು ಮತ ಚಲಾಯಿಸುವುದಿಲ್ಲ ಎಂದು ಹೇಳಿದ್ದಾರೆ.
ಗ್ರಾಮಸ್ಥ ಸೋಮಶೇಖರ್ ಮಾತನಾಡಿ, ಸುಮಾರು 25 ವರ್ಷಗಳಿಂದಲೂ ಈ ಭಾಗದಲ್ಲಿ ರಸ್ತೆ ಸಂಚಾರದ ಸಮಸ್ಯೆ ಹಾಗೆ ಇದೆ, ಮಳೆ ಬಂದರಂತೂ ಸಂಚರಿಸಲು ಕಷ್ಟಕರವಾಗುತ್ತದೆ, ಶಾಲೆಗೆ ತೆರಳುವ ವಿದ್ಯಾಥರ್ಿಗಳು ಮಳೆ ಬಂದರೆ ಶಾಲೆಗೆ ಹೋಗುವುದಿಲ್ಲ, ಪ್ರತಿನಿತ್ಯ ಕೆಲಸಕ್ಕೆ ತೆಳುವವರು ಪಟ್ಟಣಕ್ಕೆ ತೆರಳಲು ರಸ್ತೆ ಸಂಚಾರ ತೊಂದರೆಯಾಗಿರುವುದರಿಂದ ಈ ಭಾಗದಲ್ಲಿ ರಸ್ತೆ ಸಂಚಾರ ಸರಿಯಾಗುವವರೆಗೂ ಚುನಾವಣೆಯಲ್ಲಿ ಮತ ಚಲಾಯಿಸುವುದಿಲ್ಲ ಎಂದರು.
ಗ್ರಾ.ಪಂ.ಮಾಜಿ ಸದಸ್ಯ ರಘುನಾಥ್ ಮಾತನಾಡಿ, ಗ್ರಾಮ ಪಂಚಾಯಿತಿಯ ಹಾಲಿ ಸದಸ್ಯನಾಗಿದ್ದ ಸಂದರ್ಭದಲ್ಲಿ ರಸ್ತೆ ಸರಿಪಡಿಸಲು ಸುಮಾರು 10 ಬಾರಿ ಆಕ್ಷನ್ ಪ್ಲ್ಯಾನ್ ಮಾಡಿದ್ದೆವು ಆದರೆ ಗ್ರಾ.ಪಂ.ಅಧ್ಯಕ್ಷರು, ಪಿಡಿಓರವರು ಪರ್ಸಂಟೇಜ್ ಕೇಳುತ್ತಾರೆ ಈ ಬಗ್ಗೆ ತಾಲ್ಲೂಕು ಪಂಚಾಯಿತಿ ಸದಸ್ಯರು, ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ಶಾಸಕರು, ಸಂಸದರಿಗೆ ತಿಳಿಸಿದರೂ ಯಾರು ಈ ಬಗ್ಗೆ ಗಮನ ಹರಿಸಿಲ್ಲ ಆದ್ದರಿಂದ ಈ ಬಗ್ಗೆ ಜನಪ್ರತಿನಿಧಿಗಳು ಗಮನ ಹರಿಸಬೇಕೆಂದು ಒತ್ತಾಯಿಸಿದರು.
ಗ್ರಾಮಸ್ಥೆ ಸುಶೀಲಮ್ಮ ಮಾತನಾಡಿ ಮಲ್ಲೇನಹಳ್ಳಿ ತಾಂಡ್ಯದಲ್ಲಿ ಮಳೆ ಬಂದರೆ ಸಂಚರಿಸಲು ಕಷ್ಟಕರವಾಗುತ್ತದೆ, ಶಾಲಾ ವಿದ್ಯಾಥರ್ಿಗಳಿಗಂತು ರಸ್ತೆ ಸಮಸ್ಯೆಯೇ ದೊಡ್ಡದಾಗಿದೆ, ಬೇವಿನಹಳ್ಳಿಯಿಂದ ನಮ್ಮ ಗ್ರಾಮಕ್ಕೆ ಸಂಚರಿಸಲು ಆಟೋ ಚಾಲಕರನ್ನು ಕೇಳಿದರೆ ನಿಮ್ಮ ಗ್ರಾಮದಲ್ಲಿ ರಸ್ತೆ ಸರಿಯಿಲ್ಲ ರಸ್ತೆ ಸರಿಯಾದ ಮೇಲೆ ಬರುತ್ತೇವೆ ಎಂದು ಹೇಳುತ್ತಾರೆ ಆದ್ದರಿಂದ ಈ ಭಾಗದಲ್ಲಿ ರಸ್ತೆ ಸರಿಯಾಗುವವರೆಗೂ ಚುನಾವಣೆಯಲ್ಲಿ ನಾವು ಮತ ಚಲಾಯಿಸುವುದಿಲ್ಲ ಎಂದರು.
ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ರಾಮಾನಾಯ್ಕ, ಗೋಪಾಲನಾಯ್ಕ, ಶೈಲಜ, ಬಲರಾಮನಾಯ್ಕ, ಪುರುಷೋತ್ತಮ್, ದಿಲೀಪ್, ಉಮೇಶ್, ಚಂದ್ರು, ಕುಮಾರ್, ದಯಾನಂದ್, ಸಂತೋಷ್ಕುಮಾರ್, ದೇವರಾಜ್ ಹಾಗೂ ಗ್ರಾಮಸ್ಥರು ಹಾಜರಿದ್ದರು.
ತಾಲ್ಲೂಕಿನ 2014-15ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯ ಪ್ರೌಡಶಾಲೆಗಳ ಪಲಿತಾಂಶ
ಚಿಕ್ಕನಾಯಕನಹಳ್ಳಿ,ಏ.13 : ತಾಲ್ಲೂಕಿನ 2014-15ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸಕರ್ಾರಿ ಪ್ರೌಡಶಾಲೆ, ಅನುದಾನಿತ ಪ್ರೌಡಶಾಲೆ ಹಾಗೂ ಅನುದಾನ ರಹಿತ ಪ್ರೌಡಶಾಲೆಗಳ ಒಟ್ಟು 2665 ವಿದ್ಯಾಥರ್ಿಗಳು ಪರೀಕ್ಷೆಗೆ ಕುಳಿತಿದ್ದು 2235 ವಿದ್ಯಾಥರ್ಿಗಳು ಉತ್ತೀರ್ಣರಾಗಿ ತಾಲ್ಲೂಕಿಗೆ ಶೇ83.86 ರಷ್ಟು ಪಲಿತಾಂಶ ದೊರಕಿದೆ ಎಂದು ಬಿ.ಇ.ಓ ಕೃಷ್ಣಮೂತರ್ಿ ತಿಳಿಸಿದ್ದಾರೆ.
ಕಳೆದ ಬಾರಿಗಿಂತ ಈ ಬಾರಿ ಶೇ.4ರಷ್ಟು ಹೆಚ್ಚು ಫಲಿತಾಂಶ ತಾಲ್ಲೂಕಿಗೆ ದೊರೆತಿದ್ದು ತಾಲ್ಲೂಕಿನಲ್ಲಿ 1294 ವಿದ್ಯಾಥರ್ಿಗಳು, 1371 ವಿದ್ಯಾಥರ್ಿನಿಯರು ಪರೀಕ್ಷೆ ಬರೆದಿದ್ದು 1021ವಿದ್ಯಾಥರ್ಿಗಳು, 1214 ವಿದ್ಯಾಥರ್ಿನಿಯರು ತೇರ್ಗಡೆಯಾಗಿದ್ದು ಈ ಬಾರಿಯೂ ತಾಲ್ಲೂಕಿನಲ್ಲಿ ಗ್ರಾಮೀಣ ಭಾಗದ ವಿದ್ಯಾಥರ್ಿನಿಯರೇ ಮೇಲುಗೈ ಸಾಧಿಸಿದ್ದಾರೆ.
ಶೇ.78.90.ರಷ್ಟು ವಿದ್ಯಾಥರ್ಿಗಳು, ಶೇ.88.25.ರಷ್ಟು ವಿದ್ಯಾಥರ್ಿನಿಯರು ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು ಒಟ್ಟು ಶೇ.83.86.ರಷ್ಟು ಫಲಿತಾಂಶ ತಾಲ್ಲೂಕಿಗೆ ದೊರಕಿದೆ. ಇದರಲ್ಲಿ 60 ವಿದ್ಯಾಥರ್ಿಗಳು ಅತ್ಯುನ್ನತ, 204 ಪ್ರಥಮ, 396 ದ್ವಿತೀಯ, 636 ತೃತೀಯ ಸ್ಥಾನ ಪಡೆದು ಉತ್ತೀರ್ಣರಾಗಿದ್ದಾರೆ.
ತಾಲ್ಲೂಕಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಖಡವಾರು ಫಲಿತಾಂಶ ಪಡೆದ ಶಾಲೆಗಳು
ಅನುದಾನಿತ ಶಾಲೆಗಳು: ಚಿತ್ರಲಿಂಗೇಶ್ವರ ಪ್ರೌಢಶಾಲೆ ಹರೇನಹಳ್ಳಿಗೇಟ್ ಶೇ.100%, ಜಯಭಾರತಿ ಪ.ಪೂ.ಕಾಲೇಜು ಮತಿಘಟ್ಟ ಶೇ.98%, ಬಸವೇಶ್ವರ ಪ್ರೌಢಶಾಲೆ ಅಣೇಕಟ್ಟೆ ಶೇ.96.55, ಟಿ.ಆರ್.ಎಸ್.ಆರ್.ಬಾ. ಪ್ರೌಢಶಾಲೆ ಹುಳಿಯಾರು ಶೇ.96, ಗವಿರಂಗನಾಥ ಪ್ರೌಢಶಾಳೆ ದೊಡ್ಡೆಣ್ಣೆಗೆರೆ ಶೇ.94%, ಜನತಾ.ಪ.ಪೂ.ಕಾಲೇಜು ಶೇ.93.33, ಜಿವಿಪಿ ಬಾಲಿಕಾ ಪ್ರೌಢಶಾಲೆ ಸೀಗೇಬಾಗಿ 93.10, ಶ್ರೀಸ್ವಾಮಿ ವಿವೇಕಾನಂದ ಪ್ರೌಢಶಾಲೆ ಕುಪ್ಪೂರು ಶೇ.92.73, ಕಾಳಿದಾಸ ಪ್ರೌಢಶಾಲೆ ಹಂದನಕೆರೆ ಶೇ.88.10, ದೇವರಾಜೇಅರಸ್ ಪ್ರೌಢಶಾಲೆ ಮಲಗೊಂಡನಹಳ್ಳಿ ಶೇ.88.00, ಶ್ರೀ ಕನಕದಾಸ ಪ್ರೌಢಶಾಲೆ ಹುಳಿಯಾರು ಶೇ.87.88, ಜಿವಿಪಿ ಬಾಲಿಕಾ ಪ್ರೌಢಶಾಲೆ ಹಂದನಕೆರೆ ಶೇ87.10, ವಿಶ್ವಭಾರತಿ ಪ್ರೌಢಶಾಲೆ ಬರಕನಹಾಳ್ ಶೇ.85.71, ಶ್ರೀ ಮಾರುತಿ ಗ್ರಾ.ಪ್ರೌಢಶಾಲೆ ಚಿಕ್ಕಬಿದರೆ ಶೇ.84.44, ಸಾಕ್ಷರತಾ ಮಹಿಳಾ ಮ.ಪ್ರೌ.ಶಾಲೆ ಗುರುವಾಪುರ ಶೇ.84, ಶ್ರೀ ರಂಗನಾಥ ಪ್ರೌಢಶಾಲೆ ಬೆಳಗುಲಿ ಶೇ83.93, ಬಸವೇಶ್ವರ ಪ್ರೌಢಶಾಲೆ ಹುಳಿಯಾರು ಶೇ83.02, ಜ್ಞಾನಪೀಠ ಪ್ರೌಢಶಾಲೆ ಚಿ.ನಾ.ಹಳ್ಳಿ ಶೇ.81.82, ಜಿವಿಪಿ ಕಿರಿಯ ಕಾಲೇಜು ಹಂದನಕೆರೆ ಶೇ.ಶೇ80.00, ಡಿವಿಪಿ ಬಾಲಕಿಯರ ಪ್ರೌಢಶಾಲೆ ಚಿ.ನಾ.ಹಳ್ಳಿ ಶೇ78.57, ಡಾ.ಅಂಬೇಡ್ಕರ್ ಪ್ರೌಢಶಾಲೆ ತೀರ್ಥಪುರ-ಕಾತ್ರಿಕೆಹಾಳ್ ಶೇ.78.38, ಮಾರಮ್ಮದೇವರ ಪ್ರೌಢಶಾಲೆ ದೊಡ್ಡರಾಂಪುರ ಶೇ77.27, ನಿವರ್ಾಣೇಶ್ವರ ಬಾಲಿಕಾ ಪ್ರೌಢಶಾಲೆ ಚಿ.ನಾ.ಹಳ್ಳಿ ಶೇ75.00, ಶಾರದಾ.ಪ.ಪೂ.ಕಾಲೇಜು ತಿಮ್ಮನಹಳ್ಳಿ ಶೇ.75.00, ವಿದ್ಯಾಭಾರತಿ ಪ್ರೌಢಶಾಲೆ ಗಾಣದಾಳು ಶೇ.72.73, ಶ್ರೀ ಲಕ್ಷ್ಮೀನರಸಿಂಹ ಪ್ರೌಢಶಾಲೆ ಬೈಲಪ್ಪನಮಠ ಶೇ.72.00, ಸಿದ್ದಗಂಗಾ ಪ್ರೌಢಶಾಲೆ ಕಂದಿಕೆರೆ ಶೇ.70.45, ವಿದ್ಯಾರಣ್ಯ ಪ್ರೌಢಶಾಲೆ ಬೊಮ್ಮೇನಹಳ್ಳಿ ಶೇ.70.37, ಬಾಪೂಜಿ ಪ್ರೌಢಶಾಲೆ ಬೇವಿನಹಳ್ಳಿ ಶೇ.68.00, ಡಾ.ಅಂಬೇಡ್ಕರ್ ಪ್ರೌಢಶಾಲೆ ಚಿ.ನಾ.ಹಳ್ಳಿ ಶೇ.68.00, ಶ್ರೀ ರಾಮಲಿಂಗೇಶ್ವರ ಪ್ರೌಢಶಾಲೆ ರಾಮನಹಳ್ಳಿ ಶೇ.67.74, ಡಿವಿಪಿ ಬಾಲಕರ ಪ್ರೌಢಶಾಲೆ ಚಿ.ನಾ.ಹಳ್ಳಿ ಶೇ.67.06, ಬೂದೇವಿ ಗ್ರಾಮಾಂತರ ಪ್ರೌಢಶಾಲೆ ಬರಗೀಹಳ್ಳಿ ಶೇ.18.75 ಪಡೆದಿದೆ.
ಅನುದಾನರಹಿತ ಶಾಲೆಗಳು : ರಾಮಾಂಜನೇಯ ಪ್ರೌಢಶಾಲೆ ಗೂಬೆಹಳ್ಳಿ ಶೇ.40.00, ವಾಸವಿ ಆಂಗ್ಲ ಪ್ರೌಡಶಾಲೆ ಹುಳಿಯಾರು ಶೇ.95.83, ರೋಟರಿ ಆಂಗ್ಲ ಪ್ರೌಢಶಾಲೆ ಚಿ.ನಾ.ಹಳ್ಳಿ ಶೇ.100.00, ಶ್ರೀ ಶಾರದವಿದ್ಯಾಪೀಠ ಪ್ರೌಢಶಾಲೆ ಶೇ.92.59, ಇಂದಿರಾಗಾಂಧಿ ಪ್ರೌಢಶಾಲೆ ಮುದ್ದೇನಹಳ್ಳಿ ಶೇ.20.00, ನವೋದಯ ಪ್ರೌಢಶಾಲೆ ಆಂಗ್ಲ ಚಿ.ನಾ.ಹಳ್ಳಿ ಶೇ.97.30, ಜ್ಞಾನಜ್ಯೋತಿ ಪ್ರೌಢಶಾಲೆ ಆಂಗ್ಲ.ಹುಳಿಯಾರು ಶೇ.100.00 ಪಡೆದಿವೆ.
ಸಕರ್ಾರಿ ಶಾಲೆಗಳು : ಸಕರ್ಾರಿ ಪ.ಪೂ.ಕಾಲೇಜು ಗೋಡೆಕೆರೆ ಶೇ.82.26, ಹುಳಿಯಾರು ಕೆಂಕೆರೆ ಕಾಲೇಜು ಶೇ.91.19, ಸ.ಪ.ಪೂ.ಕಾಲೇಜು ಬೋರನಕಣಿವೆ ಶೇ.81.25, ಸಕರ್ಾರಿ ಪ್ರೌಢಶಾಲೆ ಯಳನಡು ಶೇ.84.29, ಸಕರ್ಾರಿ ಪ್ರೌಢಶಾಲೆ ದಸೂಡಿ ಶೇ.69.35, ಸಕರ್ಾರಿ ಪ್ರೌಢಶಾಲೆ ಸಾಸಲು ಶೇ.96.88, ಸಕರ್ಾರಿ ಪ್ರೌಢಶಾಲೆ ಚಿ.ನಾ.ಹಳ್ಳಿ ಶೇ.77.50, ಸಕರ್ಾರಿ ಪ್ರೌಢಶಾಲೆ ಉದರ್ು ಹುಳಿಯಾರು ಶೇ.85.71, ಸಕರ್ಾರಿ ಪ್ರೌಢಶಾಲೆ ಬರಗೂರು ಶೇ.92.50, ಸಕರ್ಾರಿ ಪ್ರೌಢಶಾಲೆ ಬರಶಿಡ್ಲಹಳ್ಳಿ ಶೇ.100.00, ಸಕರ್ಾರಿ ಪ್ರೌಢಶಾಲೆ ದಬ್ಬಗುಂಟೆ ಶೇ.88.25, ಸಕರ್ಾರಿ ಪ್ರೌಢಶಾಲೆ ಜೆ.ಸಿ.ಪುರ ಶೇ.79.59, ಸಕರ್ಾರಿ ಪ್ರೌಢಶಾಲೆ ಕಾಮಲಾಪುರ ಶೇ.90.91, ಸಕರ್ಾರಿ ಪ್ರೌಢಶಾಲೆ ಬಡಕೇಗುಡ್ಲು ಶೇ.77.78, ಸಕರ್ಾರಿ ಪ್ರೌಢಶಾಲೆ ಕೆಂಕೆರೆ ಶೇ.83.33, ಸಕರ್ಾರಿ ಪ್ರೌಢಶಾಲೆ ಗೂಬೆಹಳ್ಳಿ-ನಂದಿಹಳ್ಳಿ ಶೇ.86.67, ಸಕರ್ಾರಿ ಪ್ರೌಢಶಾಲೆ ಹೆಚ್.ತಮ್ಮಡಿಹಳ್ಳಿ ಶೇ.83.33, ಸಕರ್ಾರಿ ಪ್ರೌಢಶಾಲೆ ತೀರ್ಥಪುರ ಶೇ.94.44, ಮೊರಾಜರ್ಿ ದೇಸಾಯಿ ವಸತಿ ಶಾಲೆ ಮೇಲನಹಳ್ಳಿ ಶೇ.100.00, ಯುಪಿಆರ್ಎಮ್ಎಸ್ಎ ಜಿಹೆಚ್ಎಸ್ ಬೆಳ್ಳಾರ ಶೇ.95.65, ಕಿತ್ತೂರು ರಾಣಿ ಚೆನ್ನಮ್ಮ ಶಾಲೆ ಶೇ.100.00 ಫಲಿತಾಂಶ ಪಡೆದಿವೆ.
No comments:
Post a Comment