ಚಿಕ್ಕನಾಯಕನಹಳ್ಳಿ ಗ್ರಾಮ ಪಂಚಾಯಿತಿಯ ಎಣಿಕೆಯ ವಿಶೇಷಣೆಗಳು
ಚಿಕ್ಕನಾಯಕನಹಳ್ಳಿ,ಜೂ.5: ಗಂಡ ಹೆಂಡತಿ ಇಬ್ಬರೂ ಜಯಗಳಿಸುವ ಮೂಲಕ ಜನರಲ್ಲಿ ಹುಬ್ಬೇರಿಸುವಂತೆ ಮಾಡಿದರೆ, ಮೂರು ಮತ ಕ್ಷೇತ್ರಗಳಲ್ಲಿ ಲಾಟರಿ ಮೂಲಕ ಅದೃಷ್ಟ ಲಕ್ಷ್ಮಿಯನ್ನು ತಮ್ಮದಾಗಿಸಿಕೊಂಡದ್ದೂ ನಡೆಯಿತು, ಎಣಿಕೆಯ ಟೇಬಲ್ಗೆ ಕುಂಕುಮ, ಒಣಗಿದ ಹೂವಿರುವ ಪೊಟ್ಟಣ ಇಟ್ಟಿರುವುದು ಪಟ್ಟಣದಲ್ಲಿ ನಡೆದ ಎಣಿಕೆ ಕೇಂದ್ರದಲ್ಲಿ ಸಿಕ್ಕ ವಿಶೇಷ ಘಟನೆಗಳು.
ಚಿಕ್ಕನಾಯಕನಹಳ್ಳಿಯ ಸಕರ್ಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜ್ನಲ್ಲಿ ನಡೆದ ಮತ ಎಣಿಕೆಯು ಬೆಳಗ್ಗೆ 8.30 ರಿಂದ ಆರಂಭವಾಯಿತು, ಮೊದಲ ಸುತ್ತಿನ ಎಣಿಕೆಯಲ್ಲಿ, ತಾಲೂಕಿನ ಹೊನ್ನೇಬಾಗಿ ಗ್ರಾ.ಪಂ.ಯ ಹೊನ್ನೆಬಾಗಿ ಕ್ಷೇತ್ರದಿಂದ ಮೋಹನ್ ಕುಮಾರ್ ಜಯಗಳಿಸಿದರೆ ಅದೇ ಗ್ರಾ.ಪಂ.ಯ ಬುಳ್ಳೇನಹಳ್ಳಿ ಕ್ಷೇತ್ರದಿಂದ ಮೋಹನ್ ಪತ್ನಿ ಬಿ.ತೇಜಸ್ವಿನಿ ಜಯಗಳಿಸುವ ಮೂಲಕ ಗಂಡ ಹೆಂಡತಿ ಇಬ್ಬರೂ ಜಯಭೇರಿ ಬಾರಿಸಿದರು.
ಲಾಟರಿ ಮೂಲಕ ಜಯಗಳಿಸಿದವರು: ಬರಗೂರು ಗ್ರಾ.ಪಂ.ಯ ರಂಗೇನಹಳ್ಳಿ ಕ್ಷೇತ್ರದಿಂದ ಮಹದೇವಮ್ಮ ಹಾಗೂ ಲತಾ ತಲಾ 252 ಮತ ಪಡೆದರು, ನಂತರ ಲಾಟರಿ ಮೂಲಕ ಮಹದೇವಮ್ಮನವರು ಜಯಗಳಿಸಿದ್ದಾರೆ ಎಂದು ಘೋಷಿಸಲಾಯಿತು. ಇದೇ ಪಂಚಾಂಯ್ತಿಯ ಉಪ್ಪಾರಹಳ್ಳಿ ಮತ ಕ್ಷೇತ್ರದಲ್ಲಿ ಹನುಮಂತಯ್ಯ ಕೆ ಹಾಗೂ ಬಿ.ಯಶವಂತ ತಲಾ 257 ಮತ ಪಡೆದರು ನಂತರ ನಡೆದ ಲಾಟರಿ ಪರೀಕ್ಷೆಯಲ್ಲಿ ಹನುಮಂತಯ್ಯನಿಗೆ ಅದೃಷ್ಟ ಲಕ್ಷ್ಮಿ ಕೈಹಿಡಿದಳು.
ಚೌಳಕಟ್ಟೆ ಗ್ರಾ.ಪಂ.ಯ ಸೋರಲಮಾವು ಕ್ಷೇತ್ರದಲ್ಲಿ ರಂಗಸ್ವಾಮಿ ಹಾಗೂ ವಿಶ್ವನಾಥ್ ತಲಾ 410 ಸಮ ಮತ ಪಡೆದರು ಕೊನೆಯಲ್ಲಿ ಅದೃಷ್ಟ ಪರೀಕ್ಷೆಯಲ್ಲಿ ರಂಗಸ್ವಾಮಿ ಜಯಗಳಿಸಿದರು.
ಒಂದು ಮತ ಅಂತರದಲ್ಲಿ ಜಯಗಳಿಸಿದವರು: ಹೊಯ್ಸಳಕಟ್ಟೆ ಗ್ರಾ.ಪಂ.ಯ 13ನೇ ಬ್ಲಾಕ್ ಕಲ್ಲೇನಹಳ್ಳಿ ಕ್ಷೇತ್ರದಲ್ಲಿ ಆಶಾ ಕೆ.ಎನ್.349 ಮತಗಳನ್ನು ಪಡೆದು ಜಯಗಳಿಸಿದರೆ, ಕವಿತ ಕೆ 348 ಮತಗಳನ್ನು ಪಡೆದು ಒಂದು ಮತಗಳ ಅಂತರದಲ್ಲಿ ಸೋಲುಂಡರು.
ಅದೇ ರೀತಿ ಬೆಳಗುಲಿ ಗ್ರಾ.ಪಂ.ಯ ನಿರುವಗಲ್ ಕ್ಷೇತ್ರದಲ್ಲಿ ಎಂ ನಾಗರಾಜ್ 268 ಮತಗಳನ್ನು ಪಡೆದು ಜಯಶೀಲರಾದರೆ ಎಂ.ಕೆ.ಮಧು 267 ಮತಗಳನ್ನು ಪಡೆದು ಸೋಲು ಅನುಭವಿಸಿದರು.
ಗಲಾಟೆಯಿಂದ ಲಾಭ ಪಡೆದ ಕಾಂಗ್ರೆಸ್: ಜೆ.ಸಿ.ಪುರ ಗ್ರಾ.ಪಂ.ಯ ಸಾಸಲು ಹಾಗೂ ಸಾಸಲು ಗೊಲ್ಲರಹಟ್ಟಿಯ 205 ಮತ್ತು 206 ಮತಗಟ್ಟೆಯಲ್ಲಿ ಮತದಾನದಂದು ಕಾಂಗ್ರೆಸ್ ಕಾರ್ಯಕರ್ತನೊಬ್ಬನ ಮೇಲೆ ನಡೆದ ಹಲ್ಲೆಯಿಂದ ಉಂಟಾದ ಅನುಕಂಪದಿಂದಾಗಿ ಈ ಮತಗಟ್ಟೆಗಳ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಬ್ಯಾಥರ್ಿಗಳಾದ ಉಮೇಶ್, ಸಿ.ಕೆ.ಮಂಜುಳ, ಜಯಲಕ್ಷ್ಮಿ, ಶಿವಗಂಗಾ ಜಯಗಳಿಸಿದ್ದಾರೆ.
ಈ ಸಂಬಂಧ ಮಾಧ್ಯಮದವರೊಂದಿಗೆ ಮಾತನಾಡಿದ ಕಾಂಗ್ರೆಸ್ ಮುಖಂಡ ಸಾಸಲು ಸತೀಶ್ ಸತ್ಯಕ್ಕೆ ಎಂದಿಗೂ ಜಯ ದೊರೆಯುತ್ತದೆ ಎಂಬುದಕ್ಕೆ ಈ ಚುನಾವಣೆಯೇ ಸಾಕ್ಷಿ ಎಂದ ಅವರು, ಕಾಂಗ್ರೆಸ್ ಪಕ್ಷ ಚಿಕ್ಕನಾಯಕನಹಳ್ಳಿ ವಿಧಾನ ಸಭಾ ಕ್ಷೇತ್ರದ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಶೇಕಡ 50 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಬ್ಯಾಥರ್ಿಗಳು ಜಯಗಳಿಸಿರುವುದು ನಮ್ಮ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಹುರುಪನ್ನು ತುಂಬುತ್ತಿದೆ ಎಂದರು.
ಶಾಸಕ ಸಿ.ಬಿ.ಸುರೇಶ್ ಬಾಬು ಮಾಧ್ಯಮದವರೊಂದಿಗೆ ಮಾತನಾಡಿ ನಮ್ಮ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಯಗಳಿಸಿದ್ದು ಇವರೆಲ್ಲಾ ಮುಂದಿನ ದಿನಗಳಲ್ಲಿ ಗ್ರಾಮಗಳ ಅಭಿವೃದ್ದಿಗೆ ಹೆಚ್ಚಿನ ಕಾಳಜಿವಹಿಸಬೇಕೆಂದು ತಮ್ಮನ್ನು ಅಭಿನಂದಿಸಲು ಬಂದಿದ್ದ ವಿಜೇತರಿಗೆ ತಿಳಿ ಹೇಳಿದರು.
ಆಯ್ಕೆಯಾದ ಅಭ್ಯಥರ್ಿಗಳು : ಬರಗೂರು ಗ್ರಾಮ ಪಂಚಾಯಿತಿ ಓಟಿಕೆರೆ ತಿಮ್ಲಾಪುರ ಗೋಪಾಲನಾಯ್ಕ, ಓಟಿಕೆರೆ ಕಾಂತರಾಜು, ದುಗಡಿಹಳ್ಳಿ ಗ್ರಾ.ಪಂ. ಸಿದ್ದರಾಮನಗರ ರಮ್ಯ, ಡಿ.ಬಿ.ಅಶ್ವಿನ್, ತೀರ್ಥಪುರ ಗ್ರಾ.ಪಂ.ಯರೇಕಟ್ಟೆ ನಾಗಯ್ಯ, ಕೋರಗೆರೆ ಗ್ರಾ.ಪಂ.ಕೋರಗೆರೆ ದುರ್ಗಮ್ಮ, ಮೋಟಿಹಳ್ಳಿಯಿಂದ ಹನುಮಂತಪ್ಪ ಕೆ.ಕೆ. ಧರಣೀಶ್, ಕೆ.ಎಮ್.ಮಂಜಣ್ಣ, ಉಪ್ಪಾರಹಳ್ಳಿ ರಂಗಸ್ವಾಮಿ, ಮರಳಯ್ಯ, ಚಿಕ್ಕಬಿದರೆ ಗ್ರಾ.ಪಂ. ಈಶ್ವರಯ್ಯ, ರಂಗತಾಯಮ್ಮ, ಬರಕನಹಾಳ್ ಗ್ರಾ.ಪಂ. ಬ್ಯಾಡರಹಳ್ಳಿ ಮಹದೇವಯ್ಯ, ಬಿ.ಟಿ.ಗೋವಿಂದರಾಜು, ಬೆಳಗುಲಿ ಗ್ರಾ.ಪಂ. ಪಾಪನಕೊಣ ಸುನಿತ, ಮತಿಘಟ್ಟ ಗ್ರಾ.ಪಂ.ಗಾಂಧಿನಗರ ಲತಾ, ತಿಮ್ಮನಹಳ್ಳಿ ಗ್ರಾ.ಪಂ.ಸಿದ್ದನಕಟ್ಟೆ ರಾಮಯ್ಯ, ದೊಡ್ಡೇಣ್ಣೆಗೆರೆ ಗ್ರಾ.ಪಂ. ಚಂದ್ರಮ್ಮ, ಡಿ.ಎಲ್.ಚಂದ್ರಶೇಖರ್, ದೊಡ್ಡ ಎಣ್ಣೆಗೆರೆ-3 ಉಪ್ಪಿನಕಟ್ಟೆ ಸಿ.ಎಮ್.ಪರಮೇಶ್ವರಪ್ಪ, ಎಸ್.ಗೀತಾ ಶಿವಕುಮಾರ್, ಬರಗೂರು ಗ್ರಾ.ಪಂ.ಸಿದ್ದರಾಮಯ್ಯ, ಪ್ರೇಮಾ.ಬಿ.ಎಸ್, ಹೊಯ್ಸಳಕಟ್ಟೆ ಗ್ರಾ.ಪಂ. ರಘುವೀರ್, ಶೈಲ, ಹೊಯ್ಸಳಕಟ್ಟೆ-2 ಮಲ್ಲೇಶ್, ನರಸಿಂಹರಾಜು, ಗ್ರಾಮ ಪಂಚಾಯಿತಗೆ ಆಯ್ಕೆಯಾಗಿದ್ದಾರೆ.
ಹುಳಿಯಾರು ಗ್ರಾ.ಪಂ. ಬ್ಲಾಕ್-2 ಜಬೀವುಲ್ಲಾ, ಸಿದ್ದಗಂಗಮ್ಮ, ಬ್ಲಾಕ್-4 ಶಂಕರ್, ರಂಗನಾಥ್, ಮುದ್ದೇನಹಳ್ಳಿ ಗ್ರಾ.ಪಂ. ಕ್ಯಾತನಾಯಕನಹಳ್ಳಿ ರಂಗಸ್ವಾಮಿ(296), ಮಂಜುನಾಥ್(290), ದುಗಡಿಹಳ್ಳಿ ಗ್ರಾ.ಪಂ. ಚುಂಗನಹಳ್ಳಿ ಗಂಗಮ್ಮ(188), ಸಿ.ಹೆಚ್.ದಯಾನಂದ್(260), ಕುಪ್ಪೂರು ಗ್ರಾ.ಪಂ.-1 ಕೆ.ಬಿ.ಶಿವಕುಮಾರ್(394),
ಕುಪ್ಪೂರು-2 ಕಮಲಮ್ಮ(368), ಮಂಜುಳಮ್ಮ(373), ಮಲ್ಲಿಗೆರೆ ಗ್ರಾ.ಪಂ. ದಾವನದಹೊಸಹಳ್ಳಿ ಕ್ಷೇತ್ರ ಆರ್.ವಸಂತ್ಕುಮಾರ್(349), ಸೌಭಾಗ್ಯಮ್ಮ(323) ಕಂದಿಕೆರೆ ಗ್ರಾ.ಪಂ.ಬ್ಲಾಕ್-1 ಲಲಿತಮ್ಮ, ಗೀತಾ, ಮಂಜುನಾಥ್(ಕೋಳಿ) ಮತ ಪಡೆದು ಗೆಲುವು ಸಾಧಿಸಿದ್ದಾರೆ..
No comments:
Post a Comment