Thursday, May 21, 2015


ಉಚಿತ ಬೇಸಿಗೆ ಶಿಬಿರದಲ್ಲಿ 100ಕ್ಕೂ ಹೆಚ್ಚು ಮಕ್ಕಳು 


ಚಿಕ್ಕನಾಯಕನಹಳ್ಳಿ,ಏ.21 : ಪಟ್ಟಣದ ಸ್ತ್ರೀಶಕ್ತಿ ಭವನದಲ್ಲಿ ನಡೆಯುತ್ತಿರುವ ಉಚಿತ ಬೇಸಿಗೆ ಶಿಬಿರದಲ್ಲಿ 100ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದಾರೆ.
ಬೇಸಿಗೆ ಶಿಬಿರದಲ್ಲಿ ಯೋಗ, ಧ್ಯಾನ, ಡ್ರಾಯಿಂಗ್, ಪೇಪರ್ ಕಟಿಂಗ್, ಪೇಂಟಿಂಗ್, ಸಂಗೀತ, ಭರತನಾಟ್ಯ, ಜೇಡಿಮಣ್ಣಿನಿಂದ ಅಟಿಕೆ ತಯಾರಿಸುವುದು ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಬಾಲವಿಕಾಸ ಅಕಾಡೆಮಿ ಧಾರವಾಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬದುಕು ಎನ್.ಜಿ.ಓ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಬೇಸಿಗೆ ಶಿಬಿರದಲ್ಲಿ ಅಂಗನವಾಡಿ ಶಿಕ್ಷಕಿ ಕವಿತಾ ಮಕ್ಕಳಿಗೆ ಪೇಪರ್ ಕಟ್ಟಿಂಗ್ ಹಾಗೂ ಆಟಿಕೆಗಳನ್ನು ತಯಾರಿಸುವುದು ಹೇಳಿಕೊಡುತ್ತಿದ್ದಾರೆ, ಶಿಕ್ಷಕ ಕುಮಾರ್ ಮಕ್ಕಳಿಗೆ ಯೋಗಾಸನ, ಧ್ಯಾನ, ಡ್ರಾಯಿಂಗ್, ಕಲಿಸುವುದು, ಬಸವರಾಜು ರವರು ಪೇಂಟಿಂಗ್, ಪೇಪರ್ ಕಟ್ಟಿಂಗ್ ಹಾಗೂ ಮಹದೇವಮ್ಮ ನವರು ಸಂಗೀತ, ನೃತ್ಯ ಹಾಡು ಮುಂತಾದ ಕಲೆಗಳನ್ನು ಕಲಿಸುತ್ತಿದ್ದಾರೆ.
ಈ ಶಿಬಿರದಲ್ಲಿ ಮಕ್ಕಳು ಬೆಳಗ್ಗೆ 10 ಗಂಟೆಯಿಂದ ಸಂಜೆ 4ಗಂಟೆಯವರೆಗೆ ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ, ಇದರಿಂದ ಮಕ್ಕಳ ಸರ್ವತೋಮುಖ ಅಭಿವೃದ್ದಿಗೆ ಸಹಕಾರಿಯಾಗಿದೆ. 8 ವರ್ಷದಿಂದ 15 ವರ್ಷದ ವರೆಗಿನ ಮಕ್ಕಳ ಶಿಬಿರದಲ್ಲಿ ಭಾಗವಹಿಸುತ್ತಿರುವುದು ಪೋಷಕರಿಗೆ ತುಂಬ ಖುಷಿ ಕೊಟ್ಟಿದೆ ಎನ್ನುತ್ತಾರೆ ಶಿಬಿರದಲ್ಲಿ ಭಾಗವಹಿಸಿರುವ ಮಕ್ಕಳು. 
ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರತಿನಿತ್ಯ ಮಧ್ಯಾಹ್ನ ಊಟದ ವ್ಯವಸ್ಥೆ ನೀಡಲಾಗುತ್ತಿದೆ. ಲೇಖನಿ ಸಾಮಗ್ರಿಗಳು ಹಾಗೂ ಶಿಬಿರಕ್ಕೆ ಬೇಕಾಗಿರುವ ಪರಿಕರಗಳನ್ನು ಧಾರವಾಡದ ಬಾಲವಿಕಾಸ ಅಕಾಡೆಮಿ ನೀಡುತ್ತಿದ್ದು ಇದರ ಉಸ್ತುವಾರಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಚಿ.ನಾ.ಹಳ್ಳಿ ಶಾಖೆ ನೋಡಿಕೊಳ್ಳುತ್ತಿದೆ.


ಕಾತ್ರಿಕೆಹಾಳ್-ತೀರ್ಥಪುರ ಸಕರ್ಾರಿ ಪದವಿ ಪೂರ್ವ ಕಾಲೇಜಿಗೆ ದ್ವಿತಿಯ ಪಿಯುಸಿ ವಾಷರ್ಿಕ ಪರೀಕ್ಷೆಯಲ್ಲಿ ಶೇ.71.40 ರಷ್ಟು ಫಲಿತಾಂಶ 
ಚಿಕ್ಕನಾಯಕನಹಳ್ಳಿ,ಮೇ.21 : ತಾಲ್ಲೂಕಿನ ಕಾತ್ರಿಕೆಹಾಳ್-ತೀರ್ಥಪುರ ಸಕರ್ಾರಿ ಪದವಿ ಪೂರ್ವ ಕಾಲೇಜಿಗೆ ದ್ವಿತಿಯ ಪಿಯುಸಿ ವಾಷರ್ಿಕ ಪರೀಕ್ಷೆಯಲ್ಲಿ ಶೇ.71.40 ರಷ್ಟು ಫಲಿತಾಂಶ ದೊರಕಿದೆ.
ಕಾಲೇಜಿನ ವಿದ್ಯಾಥರ್ಿ ಷಡಕ್ಷರಿ 512 ಅಂಕಗಳನ್ನು ಪಡೆಯುವ ಮೂಲಕ ಕಾಲೇಜಿಗೆ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾನೆ. ಪ್ರಥಮ ದಜರ್ೆಯಲ್ಲಿ ಎಂಟು ವಿದ್ಯಾಥರ್ಿಗಳು, ದ್ವಿತೀಯ ದಜರ್ೆಯಲ್ಲಿ ಆರು ಮತ್ತು ತೃತೀಯ ದಜರ್ೆಯಲ್ಲಿ ಒಬ್ಬ ವಿದ್ಯಾಥರ್ಿ ತೇರ್ಗಡೆಯಾಗಿದ್ದಾರೆ. ತೇರ್ಗಡೆಯಾದ ಎಲ್ಲಾ ವಿದ್ಯಾಥರ್ಿಗಳನ್ನು ಕಾಲೇಜಿನ ಪ್ರಾಂಶುಪಾಲರಾದ ಎನ್.ಇಂದಿರಮ್ಮ ಹಾಗೂ ಉಪನ್ಯಾಸಕ ವರ್ಗ, ಕಾಲೇಜು ಅಭಿವೃದ್ದಿ ಸಮಿತಿ ಸದಸ್ಯರು ಅಭಿನಂದಿಸಿದ್ದಾರೆ.

No comments:

Post a Comment