Wednesday, December 9, 2015


ಗೋಡೆಕೆರೆಯಲ್ಲಿ ಲಕ್ಷದೀಪೋತ್ಸವದ ಅಂಗವಾಗಿ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿ
ಚಿಕ್ಕನಾಯಕನಹಳ್ಳಿ, : ತಾಲ್ಲೂಕು ಶೆಟ್ಟಿಕೆರೆ ಹೋಬಳಿ ಗೋಡೆಕೆರೆ ಸಿದ್ದರಾಮೇಶ್ವರಸ್ವಾಮಿ ಕಾತರ್ಿಕ ಮಾಸದ ಲಕ್ಷದೀಪೋತ್ಸವದ ಅಂಗವಾಗಿ ನಡೆಯುತ್ತಿರುವ ರಾಜ್ಯಮಟ್ಟದ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿ, ಜಗೋಸಿರಾ ಕಪ್ 2015ರ ಪಂದ್ಯಾವಳಿಗಳು ರೋಚಕ ಘಟ್ಟ ತಲುಪಿತು.
ಕನರ್ಾಟಕ ರಾಜ್ಯ ಅಮೆಚೂರ್ ಕಬಡ್ಡಿ ಸಂಸ್ಥೆಯ ಸಹಯೋಗದೊಂದಿಗೆ ಗೋಡೆಕೆರೆಯ ಶ್ರೀ ಲಾಲ್ಬಹದ್ದೂರ್ ಶಾಸ್ತ್ರಿ ಕ್ರೀಡಾ ಸಂಘ 3ದಿನಗಳ ಕಾಲ ಆಯೋಜಿಸಿರುವ ರಾಜ್ಯ ಮಟ್ಟದ ಪಂದ್ಯಾವಳಿಯಲ್ಲಿ ಒಟ್ಟು 30 ಪುರುಷ ಹಾಗೂ 7 ಮಹಿಳಾ ತಂಡಗಳು ಭಾಗವಹಿಸಿವೆ.
 ಆಡಿದ ಎಲ್ಲಾ ತಂಡಗಳ್ಲಲೂ ಗೆಲುವು ಸಾಧಿಸುವ ಮೂಲಕ 2ನೇ ದಿನದ ಅಂತ್ಯಕ್ಕೆ ಮಂಡ್ಯ ತಂಡ ಫೇವರೇಟ್ ತಂಡವಾಗಿ ಹೊರಹೊಮ್ಮಿತು.
  ಉದ್ಘಾಟನಾ ಪಂದ್ಯದಲ್ಲಿ ಹಿರಿಯೂರು ಸ್ಪೋಟ್ಸ್ ಕ್ಲಬ್ ಹಾಗೂ ಮಂಡ್ಯ ಕಬ್ಬಡ್ಡಿ ಕ್ಲಬ್ ಗೆಲುವಿಗಾಗಿ ಹೋರಾಡಿದವು. ಮಂಡ್ಯ ತಂಡ ಗೆಲವು ಸಾಧಿಸಿತು. 
3ಬಾರಿ  ಸತತವಾಗಿ ಜಗೋಸಿರಾ ಕಪ್ ಗೆದ್ದು ಹ್ಯಾಟ್ರಿಕ್ ಸಾಧಿಸಿದ್ದ ಬೆಂಗಳೂರು ಮಾರುತಿ ಕಬಡ್ಡಿ ಬಾಯ್ಸ್ಗೆ ಬೈಸ್ ಸಿಕ್ಕಿತ್ತು. ಎರಡನೇ ಪಂದ್ಯದಲ್ಲಿ ಹ್ಯಾಟ್ರಿಕ್ ತಂಡವನ್ನು ಮಣಿಸಿ ಮಂಡ್ಯ ತಂಡ ಗೆಲುವಿನ ಓಟವನ್ನು ಮುಂದುವರೆಸಿದೆ.
ದಿನದ ಅಂತ್ಯಕ್ಕೆ ಮಂಡ್ಯ ಕ್ಲಬ್, ಊಡಿ ಸ್ಪೋಟ್ಸ್ ಕ್ಲಬ್, ಕೇಶವ ಸ್ಪೋಟ್ಸ್ ಕ್ಲಬ್ ಬೆಂಗಳೂರು ಹಾಗೂ ವಿಜಯನಗರ ಕ್ಲಬ್ ಬೆಂಗಳೂರು ಸೆಮಿ ಫೈನಲ್ಸ್ ಪ್ರವೇಶಿಸಿವೆ.
ಬುಧವಾರ ಬೆಂಗಳೂರಿನ ಅಮೃತ್ ಹಾಗೂ ಮಂಡ್ಯ ತಂಡಗಳ ನಡುವೆ ರೋಚಕ ಹಣಾಹಣಿ ನಡೆಯಿತು. ಮೊದಲ ಅರ್ಧದಲ್ಲಿ ಎರಡೂ ತಂಡಗಳು ಸಮಬಲ ಕಾಯ್ದುಕೊಂಡವು. ಮಂಡ್ಯ ತಂಡದ ದಾಂಡಿಗರು ಅಮೃತ್ನ ಸ್ಟಾರ್ ರೈಡರ್ ರವೀಂದ್ರ ಅವರನ್ನು ಕ್ಯಾಚ್ ಹಾಕುವ ಮೂಲಕ ಮುನ್ನಡೆ ಸಾಧಿಸಿದರು. ಕಡೆಯ 2 ನಿಮಿಷಗಳ ಆಟ ಇರುವಾಗ ಅಮೃತ್ ತಂಡದ ಚಂದನ್ ಔಟ್ ಆದರು. ಮಂಡ್ಯ ತಂಡದ ನಾಯಕ ರವಿ ಸೂಪರ್ ಟ್ಯಾಕಲ್ನಲ್ಲಿ 2ಅಂಕ ಗಳಿಸಿದರು. 3-6 ಅಂತರದಲ್ಲಿ ಮಂಡ್ಯ ತಂಡ ಜಯಗಳಿಸಿತು.
ಅತಿಥೇಯ ಲಾಲ್ಬಹದ್ದೂರ್ ಶಾಸ್ತ್ರಿ ಕಬಡ್ಡಿ ತಂಡದ ಹುಡಗರು ಬಲಿಷ್ಠ ಕೊಡಗು ತಂಡವನ್ನು ಮಣಿಸಿದರು. 2ನೇ ಅಂಕಣದಲ್ಲಿ ಬಿವೈಎಸ್ ಬೆಂಗಳೂರು ತಂಡ ಜರಗನಹಳ್ಳಿಯ ವೈಎಪ್ಎ ತಂಡವನ್ನು ಸೋಲಿಸಿ ಗೆಲುವು ಸಾಧಿಸಿತು.
ಮಹಿಳೆಯರ ವಿಭಾಗ : ಮಹಿಳೆಯರ ವಿಭಾಗದಲ್ಲಿ ಬೆಂಗಳೂರಿನ ಮಾತಾ ಸ್ಪೋಟ್ಸ್ ಕ್ಲಬ್,ಕ್ಲಾಸಿಕ್ ನ್ಯಾಷಿನಲ್ ಸ್ಪೋಟ್ಸ್ ಕ್ಲಬ್, ವಿಜಯನಗರ ಸ್ಪೋಟ್ಸ್ ಕ್ಲಬ್, ಬಿವೈಎಸ್, ಶಿವಮೊಗ್ಗ, ಮೈಸೂರು ಹಾಗೂ ತುಮಕೂರು ತಂಡಗಳು ಭಾಗವಹಿಸಿವೆ. ಆರಂಭಿಕ ಪಂದ್ಯದಲ್ಲಿ ಶಿವಮೊಗ್ಗ ಅಮೆಚ್ಚೂರ್ ಕಬ್ಬಡ್ಡಿ ತಂಡ ಹಾಗೂ ಬೆಂಗಳೂರು ತಂಡಗಳು ಸೆಣಸಿದವು, ಶಿವಮೊಗ್ಗ ತಂಡ ಜಯದ ಮಾಲೆಯನ್ನು ಕೊರಳಿಗೆ ಹಾಕಿಕೊಂಡಿತು.
ಬೆಳ್ಳಿ ಕಡಗ: ಒಮ್ಮೆಲೆ 4ಅಂಕ ತರುವ ಕ್ರೀಡಾಪಟುಗಳಿಗೆ ಬೆಳ್ಳಿ ಕಡಗದ ಆಕರ್ಷಣೆಯಿದ್ದು ಬೆಂಗಳೂರಿನ ಬಿವೈಎಸ್ ತಂಡದ ಕ್ರೀಡಾಪಟುಗಳಾದ ಲೋಕೇಶ್, ಬಸವರಾಜು, ಬೆಂಗಳೂರು ಮಾರುತಿ ತಂಡದ ಮಹೇಶ್ ಹಾಗೂ ಅತಿಥೇಯ ಗೋಡೆಕೆರೆ ತಂಡದ ಮಹೇಶ್ ಬೆಳ್ಳಿ ಕಡಗಗಳನ್ನು ಪಡೆದುಕೊಂಡರು.
45 ವರ್ಷಗಳಿಂದ ಪಂದ್ಯಾವಳಿ ಆಯೋಜನೆ : ಲಾಲ್ಬಹದ್ದೂರ್ ಶಾಸ್ತ್ರೀ ಕ್ರೀಡಾ ಸಂಘದ ಸದಸ್ಯ ಮರಿಸ್ವಾಮಿ ಮಾತನಾಡಿ, ಗ್ರಾಮೀಣ ಕ್ರೀಡೆ ಕಬಡ್ಡಿಯನ್ನು ಪ್ರಸಿದ್ದಗೊಳಿಸುವ ಹಂಬಲದಿಂದ ಕಳೆದ 45 ವರ್ಷಗಳ ಹಿಂದೆ ಲಾಲ್ಬಹದ್ದೂರ್ ಶಾಸ್ತ್ರೀ ಕ್ರೀಡಾ ಸಂಘವನ್ನು ಸ್ಥಾಪಿಸಿದೆವು, ಅಂದಿನಿಂದ ಇಂದಿನವರೆಗೂ ಪ್ರತೀ ವರ್ಷ ಲಕ್ಷದೀಪೋತ್ಸವದ ಸಂದರ್ಭದಲ್ಲಿ ಕ್ರೀಡೆಯಲ್ಲಿ ಆಯೋಜಿಸಿದ್ದು ಬರುತ್ತಿದ್ದೇವೆ ಎಂದರು.
ರಾಷ್ಟ್ರಮಟ್ಟದ ಆಟಗಾರರನ್ನು ನೀಡಿದ ಕೀತರ್ಿ : ಹಿರಿಯ ಕ್ರೀಡಾಪಟು ಮಲ್ಲಿಕಾಜರ್ುನ್ ಮಾತನಾಡಿ, ಸ್ಥಳೀಯ ಕ್ರೀಡಾಸಕ್ತರ ನೆರವಿನಿಂದ ಪ್ರಾರಂಭವಾದ ಕ್ಲಬ್ ರಾಜ್ಯಮಟ್ಟದಲ್ಲಿ ಹೆಸರು ಮಾಡಿದೆ, ಅಲ್ಲದೇ ಕ್ಲಬ್ನ ಕ್ರೀಡಾಪಟುಗಳಾದ ಸಿದ್ದರಾಮಯ್ಯ(ಟೈಸನ್), ಮಲ್ಲಿಕಾಜರ್ುನಯ್ಯ, ವೇದಮೂತರ್ಿ, ಶಾಂತಕುಮಾರ್, ಮರಿಸ್ವಾಮಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಕಬಡ್ಡಿ ಆಡುವ ಮೂಲಕ ತಾಲ್ಲೂಕಿಗೆ ಹಮ್ಮೆ ತಂದಿದ್ದಾರೆ ಎಂದರು.

ಕಾತರ್ಿಕ ಮಾಸದ ಅಂಗವಾಗಿ ಲಕ್ಷದೀಪೋತ್ಸವ ಕಾರ್ಯಕ್ರಮ 
ಚಿಕ್ಕನಾಯಕನಹಳ್ಳಿ, : ತಾಲ್ಲೂಕಿನ ಗೋಡೆಕೆರೆಯಲ್ಲಿ ಲಿಂಗೈಕ್ಯ ಚಂದ್ರಶೇಖರಾನಂದ ಭಾರತಿ ಸ್ವಾಮೀಜಿಯವರ ಪುಣ್ಯಸ್ಮರಣೆ ನಿಮಿತ್ತ ಮಂಗಳವಾರ ಮುಂಜಾನೆ ಸಾವಿರಾರು ಭಕ್ತರು ಸಂಭ್ರಮದಿಂದ ಲಕ್ಷದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸೋಮವಾರ ಸಂಜೆಯೇ ಸನ್ನಿಧಿಗೆ ಆಗಮಿಸುವ ಭಕ್ತರು ದೀಪ ಹಚ್ಚಲು ತಾಲ್ಲೂಕಿನ ನಾನಾ ಭಾಗಗಳಿಂದ ಆಗಮಿಸಿದ್ದ ಭಕ್ತರು ರಾತ್ರಿ ಇಡೀ ಕಾದುಕುಳಿತುಕೊಳಿತಿದ್ದರು. ಹರಕೆ ಹೊತ್ತ ಭಕ್ತರು ಚಂಡುಹೂ ದಂಡೆ ಕಟ್ಟಿ ದೇವಸ್ಥಾನವನ್ನು ಅಲಂಕರಿಸಿದರು.ಸಿದ್ಧರಾಮೇಶ್ವರ ಮೂತರ್ಿಗೆ ಹಣ್ಣಿನ ಅಲಂಕಾರ ಮಾಡಿದ್ದರು. ಭಕ್ತರು ದೀಪಗಳಿಗೆ ಎಣ್ಣೆ ಬತ್ತಿ ಹಾಕಿ ಅಣಿಗೊಳಿಸುತ್ತಿದ್ದ ದೃಶ್ಯ ಮನಮೋಹಕವಾಗಿತ್ತು.
    ಸಿದ್ದರಾಮೇಶ್ವರ ದೇವರಮೂತರ್ಿಯ ಅಡ್ಡ ಪಲ್ಲಕ್ಕಿ ನಡೆಮುಡಿ ಉತ್ಸವ ವಿಜೃಂಭಣೆಯಿಂದ ನಡೆಯಿತು. ಕೊಂಬು, ಕಹಳೆ, ನಗಾರಿ, ನಂದಿಕೋಲು, ಬಿಂಗಿ ಕುಣಿತ ಮತ್ತು ವೀರಭದ್ರನ ಕುಣಿತ ನಡೆಮುಡಿಗೆ ಮೆರಗು ತಂದವು. ಚರಪಟ್ಟಾಧ್ಯಕ್ಷರಾದ ಮೃತ್ಯುಂಜಯದೇಶೀಕೇಂದ್ರಸ್ವಾಮೀಜಿ ಮೆರವಣಿಗೆಯ ಮುಂದಾಳತ್ವ ವಹಿಸಿದ್ದರು.
ಮುಂಜಾನೆ 4ಗಂಟೆಯ ಮಹಾಮಂಗಳಾರತಿಯೊಟ್ಟಿಗೆ ಸಂಭ್ರಮ ಹಿಮ್ಮಡಿಯಾಯಿತು. ಮತಾಪು, ಬಾಣ ಬಿರುಸು ಆಕಾಶದಲ್ಲಿ ಬೆಳಕಿನ ಚಿತ್ತಾರ ಬರೆದವು. ಪಟಾಕಿ ಸದ್ದು ಕಿವಿ ಗಡುಚಿಕ್ಕಿತು. ಭಕ್ತರು ಮಂಟಪದಲ್ಲಿ ಏರಿಸಿಟ್ಟಿದ್ದ ದೀಪಗಳನ್ನು ಹಚ್ಚಲು ಮುಗಿಬಿದ್ದರು. ಸಂಭ್ರಮ ಬೆಳಗ್ಗೆ ವರೆಗೂ ಮುಂದುವರೆಯಿತು.
ಗೋಡೆಕೆರೆ, ಸುಂಟರಮಳೆ ಮತ್ತು ಯಳನಡು ಭಾಗಗಳಲ್ಲಿ ನೆಲೆಸಿ ತಾಲ್ಲೂಕಿನ ನಾನಾ ಭಾಗಗಳಲ್ಲಿ ಸಿದ್ಧರಾಮೇಶ್ವರ ಸಂಚರಿಸಿ ಕೆರೆ ಕಟ್ಟೆ ನಿಮರ್ಿಸಿದ್ದಾರೆ. ಇದರ ಸ್ಮರಣಾರ್ಥವಾಗಿ 16ನೇ ಶತಮಾನದಿಂದಲೇ ಈ ಭಾಗಗಳಲ್ಲಿ ದೀಪೋತ್ಸವ ಮತ್ತು ತೆಪ್ಪೋತ್ಸವಗಳು ನಡೆದುಕೊಂಡು ಬರುತ್ತಿವೆ.  ಚಂದ್ರಶೇಖರಾನಂದ ಭಾರತಿ ಸ್ವಾಮೀಜಿ ಲಿಂಗೈಕ್ಯರಾದ ಬಳಿಕ ಅವರ ಜ್ಞಾಪಕಾರ್ಥವಾಗಿ ಕಳೆದ 13 ವರ್ಷಗಳಿಂದ ಲಕ್ಷದೀಪೋತ್ಸವವನ್ನು ವ್ಯವಸ್ಥಿತವಾಗಿ ನಡೆಸಿಕೊಂಡು ಬರಲಾಗುತ್ತಿದೆ ಎಂದು ಚರಪಟ್ಟಾಧ್ಯಕ್ಷ ಮೃತ್ಯುಂಜಯ ದೇಶೀಕೇಂದ್ರ ಸ್ವಾಮೀಜಿ ಹೇಳಿದರು.
    ಎಣ್ಣೆ ದೀಪ ತುಂಬಿದ ಕೆರೆಯ ಸಂಕೇತ. ಸೊಡರು ಅರಿವಿನ ಸಂಕೇತ. ಲಕ್ಷದೀಪೋತ್ಸವ ಒಗ್ಗಟ್ಟಿನಿಂದ ಜೀವಜಾಲ ಜಲಮೂಲವನ್ನು ಉಳಿಸೋಣ ಎನ್ನುವ ಸಂದೇಶವನ್ನೂ ಸಾರುತ್ತದೆ. ದೀಪಾರಾಧನೆಯನ್ನು ಬೆಳಗಿನ ಸೂಯರ್ೋದಯದೊಟ್ಟಿಗೆ ನೆರವೇರಿಸುವುದು ತೋಜೋಮಯ ಸೂರ್ಯದೇವನ ಬೆಳಕಿಗೆ ನಮ್ಮ ಅರಿವಿನ ಹಣತೆಯ ಬೆಳಕನ್ನೂ ಸೇರಿಸೋಣ ಎನ್ನುವ ಸಂದೇಶ ಸಾರಲು ಬೆಳಗಿನ ಜಾವವೇ ಲಕ್ಷದೀಪ ಬೆಳಗಿಸಲಾಗುತ್ತದೆ ಎಂದು ಸ್ಥಿರಪಟ್ಟಾಧ್ಯಕ್ಷರಾದ ಸಿದ್ದರಾಮದೇಶೀಕೇಂದ್ರಸ್ವಾಮೀಜಿ ಆಚರಣೆಯ ಹಿನ್ನೆಲೆಯನ್ನು  ವಿವರಿಸಿದರು.
ಕಡೆ ಕಾತರ್ಿಕ ಆಚರಣೆಯ ಅಂಗವಾಗಿ ಹೊನಲು ಬೆಳಕಿನ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿ ಮಂಗಳವಾರ ಆರಂಭವಾದವು. ಪಂದ್ಯಾವಳಿಗೆ 31 ತಂಡಗಳು ಭಾಗವಹಿಸಿವೆ ಎಂದು ಲಾಲ್ಬಹದ್ದೂರ್ ಶಾಸ್ತ್ರಿ ಕ್ರೀಡಾ ಸಂಘದ ಅಧ್ಯಕ್ಷ ನಿರಂಜನಮೂತರ್ಿ ತಿಳಿಸಿದರು.
ಶಿಕ್ಷಕರ ತಾತ್ಕಾಲಿಕ ಜೇಷ್ಠತಾ ಪಟ್ಟಿ ಪ್ರಕಟ
ಚಿಕ್ಕನಾಯಕನಹಳ್ಳಿ,ಡಿ.09 : ಚಿಕ್ಕನಾಯಕನಹಳ್ಳಿ: ಸಕರ್ಾರಿ ಪ್ರಾಥಮಿಕ ಶಾಲಾ ಶಿಕ್ಷಕ ವೃಂದವಾರು ಜೇಷ್ಠತಾ ಪಟ್ಟಿಯನ್ನು ಸಿದ್ದಪಡಿಸಲು ಜಿಲ್ಲಾವಾರು ಹಾಗೂ ವಿಷಯವಾರು ಶಿಕ್ಷಕರ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಲಾಗಿದೆ ಆಕ್ಷೇಪಣೆಯಿದ್ದಲ್ಲಿ ಡಿ.19ರ ಒಳಗೆ ಕಛೇರಿಗೆ ಲಿಖಿತವಾಗಿ ಬರೆದು ತಿಳಿಸುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂತರ್ಿ ತಿಳಿಸಿದ್ದಾರೆ. 
ಮಾನವ ಹಕ್ಕು ದಿನಾಚಾರಣೆ ಕಾನೂನು ಅರಿವು ನೆರವು ಕಾರ್ಯಕ್ರಮ 
ಚಿಕ್ಕನಾಯಕನಹಳ್ಳಿ, : ಮಾನವ ಹಕ್ಕು ದಿನಾಚಾರಣೆ ಅಂಗವಾಗಿ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಇದೇ 10ರ ಗುರುವಾರ ಬೆಳಗ್ಗೆ 10.30ಕ್ಕೆ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದ್ದು ಹಿರಿಯ ಸಿವಿಲ್ ನ್ಯಾಯದೀಶ ಎನ್.ಆರ್.ಲೋಕಪ್ಪ ಕಾರ್ಯಕ್ರಮ ಉದ್ಘಾಟಿಸುವರು. ವಕೀಲರ ಸಂಘದ ಅಧ್ಯಕ್ಷ ಆರ್.ಕರಿಯಣ್ಣ ಅಧ್ಯಕ್ಷತೆ ವಹಿಸುವರು.
ವಕೀಲ ಹೆಚ್.ಟಿ.ಹನುಮಂತಯ್ಯ ಮಾನವ ಹಕ್ಕುಗಳ ಮತ್ತು ಅವುಗಳ ಸಂರಕ್ಷಣೆ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ನ್ಯಾಯಾಧೀಶರುಗಳಾದ ಪ್ರಕಾಶ್ನಾಯಕ್, ಸೋಮನಾಥ್, ಸಕರ್ಾರಿ ಅಭಿಯೋಜಕರಾದ ಆರ್.ರವಿಚಂದ್ರ, ಸಿ.ಬಿ.ಸಂತೋಷ್, ವಕೀಲರ ಸಂಘದ ಉಪಾಧ್ಯಕ್ಷ ಆರ್.ರಾಜಶೇಖರ್, ಕಾರ್ಯದಶರ್ಿ ಜೆ.ಬಿ.ಆದರ್ಶ ಉಪಸ್ಥಿತರಿರುವರು.


No comments:

Post a Comment