Monday, December 7, 2015


ರೋಗ ಹೆಚ್ಚಾಗುವ ಮುನ್ನ ತಪಾಸಣೆಗೆ ಒಳಗಾಗಿ : ಡಾ.ಎಸ್.ಜಿ.ಪರಮೇಶ್ವರಪ್ಪ.
ಚಿಕ್ಕನಾಯಕನಹಳ್ಳಿ,: ರೋಗ ಉಲ್ಭಣಿಸುವ ಮುನ್ನ ತಪಾಸಣೆಗೆ ಒಳಗಾಗಿ ರೋಗ ದೂರ ಮಾಡಬೇಕು ಜೊತೆಗೆ ಮನಸ್ಸಿಗೆ ಒತ್ತಡ ಉಂಟಾಗದಂತೆ ಜಾಗೃತಿ ವಹಿಸಿದರೆ ಆರೋಗ್ಯ ವೃದ್ದಿಯಾಗುತ್ತದೆ ಎಂದು ಸಿದ್ದಾರ್ಥ ವೈದ್ಯಕೀಯ ಮಹಾವಿದ್ಯಾಲಯದ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ.ಎಸ್.ಜಿ.ಪರಮೇಶ್ವರಪ್ಪ ತಿಳಿಸಿದರು.
ಪಟ್ಟಣದ ರೋಟರಿ ಶಾಲೆಯಲ್ಲಿ ಬೆಂಗಳೂರಿನ ಫೋಟರ್ಿಸ್ ಆಸ್ಪತ್ರೆ ಹಾಗೂ ತುಮಕೂರು ಸಿದ್ದಾರ್ಥ ಮೆಡಿಕಲ್ ಆಸ್ಪತ್ರೆ, ಔಷಧಿ ಮಾರಾಟಗಾರರ ಸಂಘ, ರೋಟರಿ ಕ್ಲಬ್ ಸಹಯೋಗದೊಂದಿಗೆ ನಡೆದ ಆರೋಗ್ಯ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬೆಂಗಳೂರಿನ ಫೋಟರ್ಿಸ್ ಆಸ್ಪತ್ರೆ ಹಾಗೂ ತುಮಕೂರು ಸಿದ್ದಾರ್ಥ ಮೆಡಿಕಲ್ ಆಸ್ಪತ್ರೆಯ 30ಕ್ಕೂ ಹೆಚ್ಚು ವೈದ್ಯಕೀಯ ತಂಡ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡಿದ್ದು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ, ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಾಗಿದ್ದಲ್ಲಿ ತುಮಕೂರಿನ ಸಿದ್ದಾರ್ಥ ಮೆಡಿಕಲ್ ಕಾಲೇಜಿಗೆ ಕರೆದೊಯ್ದು ಉಚಿತ ಚಿಕಿತ್ಸೆ ನೀಡಲಾಗುವುದು ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಪ್ರಸನ್ನಕುಮಾರ್ ಮಾತನಾಡಿ, ರೋಟರಿ ಶಾಲೆಯಲ್ಲಿ ನಡೆಯುತ್ತಿರುವ ಉಚಿತ ಮೆಘಾ ಆರೋಗ್ಯ ಶಿಬಿರಕ್ಕೆ ಶಾಲಾ ವಿದ್ಯಾಥರ್ಿಗಳು ಹಾಗೂ ಸಿಬ್ಬಂದಿಗಳು ಸ್ವಯಂಪ್ರೇರಿತರಾಗಿ ಭಾಗವಹಿಸಿ ರೋಗಿಗಳ ಚಿಕಿತ್ಸೆಗೆ ನೆರವಾಗುತ್ತಿರುವುದು ಸಂತಸದ ವಿಷಯವಾಗಿದ್ದು ರೋಟರಿ ಕ್ಲಬ್ 40 ವರ್ಷಗಳಿಂದ ಹಲವಾರು ಜನಪರ ಸೇವೆ ಸಲ್ಲಿಸುತ್ತಿದ್ದು ಅದೇ ರೀತಿ ಶಿಬಿರದಲ್ಲಿ ಭಾಗವಹಿಸುವ ರೋಗಿಗಳಿಗೆ ಉಚಿತ ಔಷಧಿಯನ್ನು ನೀಡಲಾಗುತ್ತಿದೆ ಎಂದರು.
ಜಿಲ್ಲಾ ರೋಟರಿ ಕ್ಲಬ್ನ ಕಾರ್ಯದಶರ್ಿ ಸಿ.ಎಸ್.ಪ್ರದೀಪ್ಕುಮಾರ್ ಮಾತನಾಡಿ, ರೋಟರಿ ಸಂಸ್ಥೆಯ ಎಲ್ಲಾ ಸದಸ್ಯರು ಶಿಬಿರದಲ್ಲಿ ಸಕ್ರಿಯವಾಗಿ ಭಾಗವಹಿಸಿ ಶಿಬಿರಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿರುವುದರಿಂದ ರೋಟರಿ ಸಂಸ್ಥೆ ಮುಂದಿನ ದಿನಗಳಲ್ಲಿ ಇನ್ನೂ ಹಲವಾರು ಸಾರ್ವಜನಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ ಎಂದರಲ್ಲದೆ ಕನರ್ಾಟಕ ಔಷಧಿ ಮಾರಾಟಗಾರರ ಸಂಘ ಈ ಶಿಬಿರಕ್ಕೆ 2ಲಕ್ಷದ 35ಸಾವಿರದಷ್ಟು ಉಚಿತವಾಗಿ ಔಷಧಿಗಳನ್ನು ನೀಡುತ್ತಿದೆ ಎಂದರು.
ಜಿಲ್ಲಾ ರೋಟರಿ ಸಂಸ್ಥೆಯ ಬಿಳಿಗೆರೆ ಶಿವಕುಮಾರ್ ಮಾತನಾಡಿ, ರೋಟರಿ ಸಂಸ್ಥೆ ಆರೋಗ್ಯ ಶಿಬಿರ ಹಮ್ಮಿಕೊಂಡಿರುವುದಕ್ಕೆ ಎಲ್ಲರಿಂದ ಉತ್ತಮ ಪ್ರಶಂಸೆ ದೊರಕಿದೆ 17ರಂದು ಪಲ್ಸ್ ಪೋಲಿಯೋ ಕಾರ್ಯಕ್ರಮವಿದ್ದು ಸಂಸ್ಥೆ ಪೋಲಿಯೋ ಕಾರ್ಯಕ್ರಮಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲಿದೆ ಎಂದರು.
ಶಿಬಿರದಲ್ಲಿ ಸ್ತ್ರೀರೋಗ ತಜ್ಞರು, ಹೃದಯರೋಗ ತಜ್ಞರು, ಮೂಳೆ ಹಾಗೂ ಕಣ್ಣಿನ ತಜ್ಞರು, ಮಕ್ಕಳ ತಜ್ಞರು, ಚರ್ಮವ್ಯಾಧಿ, ಎಕೋ, ಇಸಿಜಿ, ರಕ್ತದೊತ್ತಡ, ಮಧುಮೇಹ ಸಂಬಂಧಪಟ್ಟ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ನೀಡಲಾಯಿತು. ಶಿಬಿರದಲ್ಲಿ 750ಕ್ಕೂ ಹೆಚ್ಚು ರೋಗಿಗಳು ನೊಂದಾಯಿಸಿಕೊಂಡು ಶಿಬಿರದ ಪ್ರಯೋಜನ ಪಡೆದರು.
ಈ ಸಂದರ್ಭದಲ್ಲಿ ಪೋಟರ್ಿಸ್ ಆಸ್ಪತ್ರೆಯ ಡಾ.ನವೀನ್ ವೈದ್ಯರುಗಳಾದ ಭಾನುಪ್ರಕಾಶ್, ದ್ವಾರಕಿನಾಥ್, ಶ್ರಿನಿವಾಸ್ಅರ್ವ, ಸುದರ್ಶನ್, ಸಂದೀಪ್, ಲೋಕೇಶ್, ಸತ್ಯ.ಕೆ, ಅಶ್ವಿನ್, ಪ್ರೇಮನಾಗರಾಜ್, ಶಿವಕುಮಾರ್, ಹರೀಶ್, ಮಹೇಶ್, ಗೌರಿ, ಡಾ.ನಾಗರಾಜು, ಗುರುನಾಥ್ ಶಿಬಿರದಲ್ಲಿ ಚಿಕಿತ್ಸೆ ನೀಡಿದರು.  
ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಚಾಂದ್ಪಾಷ, ಎಂ.ಎಲ್.ಮಲ್ಲಿಕಾಜರ್ುನಯ್ಯ, ದೇವರಾಜು, ಅಶ್ವತ್ಥ್ನಾರಾಯಣ್, ಮಿಲ್ಟ್ರಿಶಿವಣ್ಣ, ಡಾ.ನಾಗರಾಜು, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಬಿ.ಪ್ರಕಾಶ್, ಶಾಲಾ ಮುಖ್ಯೋಪಾಧ್ಯಾಯ ಬಿ.ಕೆ.ಮಂಜುನಾಥ್, ಶಾಲಾ ಶಿಕ್ಷಕರುಗಳು, ವಿದ್ಯಾಥರ್ಿಗಳು ಸಿಬ್ಬಂದಿ ಉಪಸ್ಥತರಿದ್ದರು.


 ಆಡಳಿತದ ಅಧಿಕಾರಕ್ಕಾಗಿ ಅಸಹಿಷ್ಣುತೆ ಸೃಷ್ಠಿಯಾಗುತ್ತಿದೆ : ಲೇಖಕಿ ಕಂಪಾರಹಟ್ಟಿ ಶಾಂತ 
ಚಿಕ್ಕನಾಯಕನಹಳ್ಳಿ,ಡಿ.06 : ಜಾತಿ ರಾಜಕಾರಣ ಹಾಗೂ ಅಧಿಕಾರದ ಆಡಳಿತ ಹಿಡಿಯಲು ಕೆಲವರು ದೇಶದಲ್ಲಿ ಅಸಹಿಷ್ಣುತೆ ಸೃಷ್ಠಿಸುತ್ತಿದ್ದಾರೆ ಎಂದು ಲೇಖಕಿ ಕಂಪಾರಹಟ್ಟಿ ಶಾಂತ ವಿಷಾಧಿಸಿದರು.
ಪಟ್ಟಣದ ಡಿವಿಪಿ ಬಾಲಕಿಯರ ಶಾಲೆಯಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಪರಿ ನಿವರ್ಾಣ ದಿನ, ಬೋಧಿವೃಕ್ಷ ಟ್ರಸ್ಟ್ನ ವಾಷರ್ಿಕ ಸಂಭ್ರಮ ದಿನಾಚಾರಣೆಯಲ್ಲಿ ನಡೆದ ಸಮಕಾಲೀನ ಸಮಾಜ ಮತ್ತು ಅಸಹಿಷ್ಣತೆ ಕುರಿತಾದ ಚಚರ್ೆ ಮತ್ತು ಸಂವಾದದಲ್ಲಿ ಮಾತನಾಡಿದ ಅವರು ಯಾವುದನ್ನು ನಮ್ಮಿಂದ ಸಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲವೋ ಅದೇ ಅಸಹಿಷ್ಣುತೆಯಾಗಿದೆ, ದೇಶದಲ್ಲಿ ಸೃಷ್ಠಿಸಲಾಗುತ್ತಿರುವ ಅಸಹಿಷ್ಣುತೆಯಿಂದ ದೇಶ ತಲ್ಲಣವಾಗುತ್ತಿದೆ, ಒಬ್ಬರನ್ನು ವಿರೋಧಿಸಲು ಇನ್ನೊಬ್ಬರ ಬಗ್ಗೆ ಮಾತನಾಡುವುದು, ಅತ್ತೆ ಸೊಸೆಯರಲ್ಲಿ ನಡೆಯುತ್ತಿರುವ ಜಗಳ ಎಲ್ಲವೂ ಕೂಡ ಅಸಹಿಷ್ಣುತೆಗೆ ತಿರುಚಲಾಗುತ್ತಿದ್ದು ಅಸಹಿಷ್ಣುತೆಗೆ ರಾಜಕೀಯ ಪಿತೂರಿಯೇ ಮುಖ್ಯ ಕಾರಣವಾಗಿದೆ, ಬ್ರಹ್ಮನ ಕಾಲಿನಿಂದ ಹುಟ್ಟಿದವರು ಶೂದ್ರರು ಎಂದು, ರಾಮಧಾನ್ಯ ಚರಿತ್ರೆ ಕಥಾಹಂದರದಲ್ಲಿಯೂ ಭತ್ತ, ರಾಗಿಯ ನಡುವೆ ಇತಹಾಸದಿಂದಲೇ ಅಸಹಿಷ್ಣುತೆ ಸೃಷ್ಠಿಸಿದರು, ಅಂದಿನಿಂದ ಇಂದಿನವರೆವಿಗೂ ಧರ್ಮ, ಜಾತಿ, ಜಯಂತಿಗಳ ನಡುವೆ ರಾಜಕೀಯ ಹಿತಾಸಕ್ತಿಗಾಗಿ ಅಸಹಿಷ್ಣುತೆ ಸೃಷ್ಠಿಸಲಾಗುತ್ತಿದೆ ಎಂದರು. ಪುಸ್ತಕಗಳ ನಡುವೆ ಪ್ರಾಣ ತೊರೆದ ಅಂಬೇಡ್ಕರ್ರವರು ಸಮಾನತೆಗಾಗಿ ಹೋರಾಡಿದವರಲ್ಲಿ ಪ್ರಮುಖರು, ಬಡವರಿಗೆ, ನೊಂದವರಿಗೆ, ದೀನ-ದಲಿತರಿಗೆ, ಅಂಗವಿಕಲರಿಗೆ ಅಂಬೇಡ್ಕರ್ರವರು ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಬೋಧಿವೃಕ್ಷ ಟ್ರಸ್ಟ್ನ ನಾರಾಯಣರಾಜು, ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್, ನಾಗಕುಮಾರ್, ಕಂಟಲಗೆರೆ ಗುರುಪ್ರಸಾದ್, ಮಲ್ಲಿಕಾಜರ್ುನ್, ಎಂ.ಎಸ್.ರವಿಕುಮಾರ್, ರವಿಕುಮಾರ್ ಸೇರಿದಂತೆ ಪ್ರಗತಿಪರ ಸಂಘಟನೆಯವರು, ವಿದ್ಯಾಥರ್ಿಗಳು ಭಾಗವಹಿಸಿದ್ದರು.

ಯಡಿಯೂರಿಗೆ ಚಿ.ನಾ.ಹಳ್ಳಿ ಮೂಲಕ ಪಾದಯಾತ್ರೆ ತೆರಳಿದ ದಾರವಾಡ, ಗದಗ. ಭಾಗಲಕೋಟೆ  ಭಕ್ತರು 
 ಚಿಕ್ಕನಾಯಕನಹಳ್ಳಿ : ಕುಣಿಗಲ್ ತಾಲ್ಲೂಕಿನ ಎಡೆಯೂರು ಸಿದ್ದಲಿಂಗೇಶ್ವರಸ್ವಾಮಿ ದೇವಾಲಯದ ಕಾತರ್ೀಕ ಮಾಸದ ಅಂಗವಾಗಿ ನಡೆಯುವ ಲಕ್ಷದೀಪೋತ್ಸವಕ್ಕೆಂದು ದಾರವಾಡ, ಗದಗ. ಭಾಗಲಕೋಟೆ ಜಿಲ್ಲೆಗಳಿಂದ  ಪಾದಯಾತ್ರೆ ಮೂಲಕ ಸಾಗುತ್ತಿದ್ದ 500ಕ್ಕೂ ಹೆಚ್ಚು ಭಕ್ತಾಧಿಗಳಿಗೆ ಪಟ್ಟಣದ ಜೆ.ಡಿ.ಗ್ರಾಫಿಕ್ಸ್ ಮಾಲೀಕ ರಮೇಶ್ ಮತ್ತವರ ತಂಡದಿಂದ ಪ್ರಸಾದ ಮಜ್ಜಿಗೆ ವಿತರಿಸಲಾಯಿತು.
ಈ ಭಕ್ತರು ಕಳೆದ 40ವರ್ಷಗಳಿಂದ ಪಾದಯಾತ್ರೆ ಮೂಲಕವೇ ತೆರಳಿ ತಮ್ಮಲ್ಲಿರುವ ಅಚಲವಾದ ಭಕ್ತಿಯನ್ನು ಪ್ರದಶರ್ಿಸುತ್ತಲೇ ಇರುವ ಭಕ್ತರು ಗದಗ ಜಿಲ್ಲೆಯ ಡಂಬಳ ಸಂಸ್ಥಾನ ಮಠದ ಡಾ|| ಸಿದ್ದಲಿಂಗಸ್ವಾಮೀಜಿ, ಹರಿಹರದ ಶಲವಡಿ ವಿರಕ್ತಮಠದ ಗುರುಶಾಂತಸ್ವಾಮೀಜಿ, ನವಲಗುಂದ ಹಿಂಗಳೆಯ ಶಿವಯೋಗಿ ಮಂದಿರ ಮೂಲದಿಂದ ಎಡೆಯೂರು ಸಿದ್ದಲಿಂಗೇಶ್ವರಸ್ವಾಮಿ ದೇವಾಲಯದವರೆಗೆ ಪಾದಯಾತ್ರೆ ಮಂಡಳಿ ರಚಿಸಿಕೊಂಡಿದ್ದಾರೆ, ಪಾದಯಾತ್ರೆಗೆ ಇಚ್ಛೆಯಿರುವ ಭಕ್ತರನ್ನು ಒಗ್ಗೂಡಿಸಿಕೊಂಡು ನಿತ್ಯ 35ರಿಂದ 40 ಕಿ.ಮೀ ಪಾದಯಾತ್ರೆ ಕೈಗೊಂಡು 15ದಿನಗಳವರೆಗೆ ನಿರಂತರ ಪಾದಯಾತ್ರೆ ಮೂಲಕ ಎಡೆಯೂರು ಕ್ಷೇತ್ರದಲ್ಲಿ ನಡೆಯುವ ಲಕ್ಷದೀಪೋತ್ಸವಕ್ಕೆ ಕಾರ್ಯಕ್ರಮಕ್ಕೆ ತೆರಳುತ್ತಾರೆ.
ಯಡಿಯೂರಿಗೆ ತೆರಳುತ್ತಿರುವ ಭಕ್ತರಿಗೆ ದಣಿವಾರಿಸಿಕೊಳ್ಳಲು ಭಕ್ತರನ್ನು ಬರಮಾಡಿಕೊಂಡು ಅವರಿಗೆ ಕಡ್ಲೆಕಾಳುಉಸ್ಲಿ. ಮಜ್ಜಿಗೆ, ಬಾಳೆಹಣ್ಣು, ಎಲೆ ಅಡಿಕೆ, ನೀಡಿ ಗೌರವಿಸುವ ಸಂಪ್ರಾದಯವನ್ನು ಮಾಡಿಕೊಂಡು ಬಂದಿರುವ ರಮೇಶ್ರವರ ಪ್ರಸಾದ ಸ್ವೀಕರಿಸಿ ಹತ್ತಿರದ ಚೌಕಿಮಠದಲ್ಲಿ ವಿಶ್ರಾಂತಿ ಪಡೆದು ಸಂಜೆಯಾಗುತ್ತಲೇ ಪಾದಯಾತ್ರೆಯನ್ನು ಆರಂಭಿಸಿ ತುರುವೇಕೆರೆ ಮಾರ್ಗವಾಗಿ ಮಾಯಾಸಂದ್ರ ಮೂಲಕ ಎಡೆಯೂರಿನ ಸಿದ್ದಲಿಂಗೇಶ್ವರಸ್ವಾಮಿಗೆ ನಡೆಯುವ ಲಕ್ಷದೀಪೋತ್ಸವ ಕಾರ್ಯಕ್ಕೆ ತಲುಪುವರಿದ್ದಾರೆ.

ಕಾತರ್ಿಕ ಮಾಸದ ಅಂಗವಾಗಿ ದಶಸಹಸ್ತ್ರ ದೀಪೋತ್ಸವ
                            
ಚಿಕ್ಕನಾಯಕನಹಳ್ಳಿ : ಪಟ್ಟಣದ ಹೊಸಬೀದಿಯ ಶ್ರೀ ರಾಮ ಮಂದಿರ ದೇವಾಲಯದಲ್ಲಿ ಕಾತರ್ಿಕ ಮಾಸದ ಅಂಗವಾಗಿ ಭಕ್ತ ಸಮೂಹದಿಂದ ದಶ ಸಹಸ್ರ ದೀಪೋತ್ಸವ ಏರ್ಪಡಿಸಲಾಗಿತ್ತು.
ದಶಸಹಸ್ತ್ರ ದೀಪೋತ್ಸವ ಕಾರ್ಯಕ್ರಮಕ್ಕೆ ಶಾಸಕ ಸಿ.ಬಿ.ಸುರೇಶ್ಬಾಬು ಚಾಲನೆ ನೀಡಿ ಮಾತನಾಡಿದರು. ದೀಪಗಳ ಬೆಳಕು ಜ್ಞಾನದ ಪ್ರತೀಕವಾಗಿದ್ದು, ಅಂದಕಾರವೆಂಬ ಕತ್ತಲೆಯನ್ನು ಸರಿಸಲು ದೀಪಾರಾಧನೆ ಶತ ಶತ ಮಾನಗಳಿಂದ ನಡೆದುಕೊಂಡು ಬರುತ್ತಿದೆ, ಪಟ್ಟಣದಲ್ಲಿ ಕಳೆದ 5ವರ್ಷಗಳಿಂದ ಕಾತರ್ಿಕ ಮಾಸದಲ್ಲಿ ಸುತ್ತಮುತ್ತಲ ನಿವಾಸಿಗಳು ಮಣ್ಣಿನ ದೀಪಗಳನ್ನು ತಂದು ಎಣ್ಣೆ ಬತ್ತಿಗೆ ದೀಪ ಹೆಚ್ಚುವ ಮೂಲಕ ಜ್ಞಾನ ಜ್ಯೋತಿ ಬೆಳಗುವಂತೆ ಮಾಡುತ್ತಿದ್ದಾರೆ  ಇಂತಹ ದಾಮರ್ೀಕ  ಕಾರ್ಯಗಳನ್ನು ಆಚರಿಸುವುದರಿಂದ ಸಮಾಜದಲ್ಲಿ ಗಟ್ಟಿತನ ಮೂಡುತ್ತದೆ ಎಂದರಲ್ಲದೆ ದಶ ಸಹಸ್ರ ದೀಪಗಳನ್ನು ಹಚ್ಚಲು ಶ್ರಮ ವಹಿಸಿದ ಸಕಲ ಭಕ್ತರಿಗೂ ಸಹ ದೀಪ ಬೆಳಗಿಸಿದ ಪ್ರತಿಫಲ ದೊರಕಲಿ ಎಂದು ಆಶಿಸಿದರು.
ಆರ್ಚಕ ರಮೇಶ್ ಮಾತನಾಡಿ ಕಳೆದ 5ವರ್ಷಗಳಿಂದ ದೀಪಗಳನ್ನು ಹಚ್ಚುವ ಮೂಲಕ ಕಾತರ್ಿಕ ಮಾಸಾಚರಣೆ ಮಾಡಿಕೊಂಡು ಬರುತ್ತಿದ್ದೇವೆ ಇಂತಹ ದಾಮರ್ಿಕ ಕಾರ್ಯಕ್ಕೆ ಅನೇಕ ಸಂಘಟನೆಗಳು ಅಡಿಕೆಮರ ತಂದು ಪಟ್ಟಿ ಸಿದ್ದಪಡಿಸಿದ್ದಾರೆ,  ಅನ್ನದಾಸೋಹ ಕಾರ್ಯಕ್ಕೆ ಎಲ್ಲರು ಕೈಜೋಡಿಸಿ ಮುಂದಿನ ದಿನಗಳಲ್ಲಿ ಲಕ್ಷದೀಪೋತ್ಸವ ಆಚರಣೆ ಮಾಡಬೇಕೆಂಬ ಬಯಕೆ ಹೊಂದಿದ್ದಾರೆ ಎಂದರು.
ಈ ಸಂದರ್ಭದಲ್ಲಿ ದಾಮರ್ಿಕ ಕಾರ್ಯಗಳಿಗೆ ಶ್ರಮಿಸಿದ ಭಕ್ತಾಧಿಗಳಿಗೆ ಶಾಸಕರು ನೆನಪಿನ ಕಾಣಿಕೆ ನೀಡಿ ಪ್ರೋತ್ಸಾಹಿಸಿದರು. ದೀಪೋತ್ಸವ ಕಾರ್ಯಕ್ರಮದಲ್ಲಿ  ಮಹಿಳೆಯರು ಹಾಗೂ ಮಕ್ಕಳು ಸೇರಿ ದೀಪ ಬೆಳಗಿಸಿ ಸಂತಸಪಟ್ಟರು. 

ಮೇಲ್ವರ್ಗದ ಸಮುದಾಯಗಳಿಂದ ಅಸಮಾನತೆ ಮೂಲಕ ಅಶಾಂತಿ 
ಚಿಕ್ಕನಾಯಕನಹಳ್ಳಿ,ಡಿ.07  : ಮೆಲ್ವರ್ಗದ  ಸಮುದಾಯಗಳಿಂದ ಅಸಮಾನತೆ ಮೂಡಿಸುವ ಮೂಲಕ ಅಶಾಂತಿ ಉಂಟಾಗುತ್ತಿದೆ ಎಂದು ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ವಿಷಾಧಿಸಿದರು.
ಪಟ್ಟಣದ ಬಿ.ಆರ್ ಅಂಬೇಡ್ಕರ್ ಫ್ರೌಢಶಾಲೆಯಲ್ಲಿ ಬಾಬಾಸಾಹೇಬ್ ಡಾ|| ಬಿ.ಆರ್.ಅಂಬೇಡ್ಕರ್ರ ವರ 59ನೇ ಮಹಾಪರಿನಿವರ್ಾಣ ದಿನ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂವಿಧಾನ ರಚನೆಯ ರೀತಿಯಲ್ಲಿಯೇ ಮೀಸಲಾತಿ ಎಂಬುದು ಯತಾವತ್ ಜಾರಿಯಾಗಿದ್ದರೆ ಅಸಮಾನತೆ ದೂರಾಗಿ ಎಲ್ಲರಿಗೂ ಸಮಪಾಲು, ಸಮಬಾಳು ಸಿಗುತ್ತಿತ್ತು,  ಶಿಕ್ಷಣ, ಆರೋಗ್ಯ, ವ್ಯಾಪಾರೀಕರಣದಿಂದಾಗಿ ಕೆಲವೇ ಮಂದಿ ಅಥರ್ಿಕವಾಗಿ ಬಲಾಡ್ಯರಾಗುತ್ತಿದ್ದಾರೆ ನಮ್ಮನ್ನಾಳುವ ಸಾಮಾಜಿಕ ನ್ಯಾಯ ನೀಡುವ ಸಕರ್ಾರಗಳು ದಲಿತರಿಗೆ ಇನ್ನೂ ಮುಜರಾಯಿ ದೇವಾಲಯಗಳಲ್ಲಿ ಪ್ರವೇಶ ನೀಡದೆ ಅಸಮಾನತೆ ಹುಟ್ಟಿಹಾಕುತ್ತಿವೆ ಎಂದರು.
 ದಲಿತ ಮುಖಂಡ ಸಿ.ಎಸ್.ಲಿಂಗದೇವರು ಮಾತನಾಡಿ, ದೇಶಕ್ಕೆ ಸಂವಿಧಾನ ನೀಡಿದ ಅಂಬೇಡ್ಕರ್ ವಿದ್ಯಾಥರ್ಿ ಜೀವನದುದ್ದಕ್ಕೂ ಅಸೃಶ್ಯತೆಯ ಕರಿನೆಗಳಲ್ಲಿ ಬದುಕಿದವರು, ಇಂದು ಮುಂದುವರಿದ ಸಮಾಜ  ನಮ್ಮ ಆಹಾರ ಪದ್ದತಿ ಕಿತ್ತುಕೊಳ್ಳುವ ಹೊನ್ನಾರ ನಡೆಸುತ್ತಿವೆ, ಸಂವಿಧಾನ ರಚನೆಗೆ ಮುನ್ನ ಕರುಡು ಪ್ರತಿ ರಚನೆಯ ಸಮಿತಿ ಸದಸ್ಯರನ್ನಾಗಿಸುವಲ್ಲಿ ಮೇಲ್ವರ್ಗದವರಿಂದ ಸೋಲಿಸುವ ಮೂಲಕ ಸದಸ್ಯರನ್ನಾಗದಂತೆ ಮಾಡುವಲ್ಲಿ ಪಿತೂರಿ ನಡೆದರೂ ಇವರ ವಿದ್ವತ್ನಿಂದ ಕರಡು ಸಮಿತಿಯ ಸದಸ್ಯರಾಗಿ ಸಂವಿಧಾನವನ್ನು ಈ ದೇಶಕ್ಕೆ ನೀಡುವಂತಾಯಿತು, ಶಿಕ್ಷಕರು ಮಕ್ಕಳಿಗೆ ಗುಣಾತ್ಮಕ ಹಾಗೂ ಕ್ರಿಯಾತ್ಮಕ ಶಿಕ್ಷಣ ನೀಡದರೆ ಗುಣವುಳ್ಳ ಮಕ್ಕಳನ್ನು ಈ ಸಮಾಜಕ್ಕೆ ನೀಡಬಹುದು ಎಂದರು.
ಸಮಾಜ ಪರಿವರ್ತನಾ ಸಮುದಾಯದ ಮುಖಂಡ ನಂಜುಂಡಪ್ಪ ಸನ್ಮಾನ ಸ್ವೀಕರಿಸಿ ಮಾತನಾಡಿ, ಅಂಬೇಡ್ಕರ್ ಕೇವಲ ದಲಿತ ಸಮುದಾಯಕ್ಕೆ ಸೀಮಿತರಲ್ಲ ಅವರಲ್ಲಿದ್ದ ದೂರದೃಷ್ಟಿಯವುಳ್ಳ ಯೋಜನೆಗಳಿಂದ ಸಮಾಜಕ್ಕೆ ಒಳಿತು ಬಯಿಸಿದವರು, ಅಂಬೇಡ್ಕರ್ರವರ ಉದ್ದೇಶಗಳನ್ನು ಈಡೇರಿಸಲು ಶಾಲಾ ಮಕ್ಕಳಿಂದ ಮಾತ್ರ ಸಾಧ್ಯ, ಶಾಲಾ ಮಕ್ಕಳ ಮೊದಲು ಹಿರಿಯರನ್ನು ಗೌರವಿಸುವುದು ಕಲಿಯಬೇಕು, ನಾಡಿನ ಸುತ್ತಮುತ್ತಲಿನ ಪರಿಸರ ಹಾಗೂ ದೇಶದ ಸಂಪತ್ತು ಕಾಪಾಡಲು ಜಾಗೃತಿವಹಿಸಿ ಮುಂದಿನ ಪೀಳಿಗೆ ಉಳಿಯುವಂತೆ ಮಾಡಬೇಕು ನಮ್ಮ ಕುಟುಂಬಗಳ ಸುತ್ತಮುತ್ತ ಮದ್ಯಮಾರಾಟ ತಡೆಯುವಲ್ಲಿ ನಿಯಂತ್ರಿಸಿ ಮದ್ಯ ಕುಡಿಯುವುದು ನಿಲ್ಲಿಸಿ ಸಮಾಜ ಸುಧಾರಿಸಬೇಕು ಎಂದರು.
ಅಂಬೇಡ್ಕರ್ ಶಿಕ್ಷಣ ಸಂಸ್ಥೆ ಕಾರ್ಯದಶರ್ಿ ಗೋ.ನಿ.ವಸಂತಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂಬೇಡ್ಕರ್ ಹುಟ್ಟದಿದ್ದರೆ ದಲಿತ ಸಮಾಜಗಳು ಇನ್ನೂ ಬಹಳಷ್ಟು ಕಷ್ಟ ಅನುಭವಿಸಬೇಕಿತ್ತು, ದಲಿತ ಸಮಾಜಗಳನ್ನು ಹಿಂದುಳಿದ ವರ್ಗಗಳೇ ಅವರ ಸಮಸ್ಯೆಗಳನ್ನು ಹೆಚ್ಚು ಅರಿತಿದ್ದವು. ಅದಕ್ಕೆ 1924ರಲ್ಲಿ ಬರೋಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಸಿದಣ್ಣ ಕಂಬಳಿ ಇವರು ಅಂಬೇಡ್ಕರ್ ಅವರಿಗೆ ಉಪನ್ಯಾಸಕ ವೃತ್ತಿ ನೀಡಿದ್ದರ ಪರಿಣಾಮ ಅವರ ಬದುಕಿನ ವಿವಿದ ಮಜಲು ಅನಾವರಣಗೊಂಡವು ಎಂದರು.
ಸಭೆಯಲ್ಲಿ ರಾಮ್ಕುಮಾರ್, ಮುಖಂಡ ತಿಮ್ಮೆಗೌಡ, ಮುದ್ದರಂಗಪ್ಪ. ಮತ್ತಿತ್ತರರು ಉಪಸ್ಥಿತರಿದ್ದರು.

No comments:

Post a Comment