ಚಿಕ್ಕನಾಯಕನಹಳ್ಳಿ, : ಚುನಾವಣಾ ಸಮಯದಲ್ಲಿ ಜೆಡಿಎಸ್ ಪಕ್ಷ ಅಭ್ಯಥರ್ಿಗಳನ್ನು ವ್ಯಾಪಾರ ಮಾಡುವಂತಹ ವ್ಯಕ್ತಿಗಳನ್ನು ಹೊರಗಿನಿಂದ ಕರೆತಂದು ಚುನಾವಣೆಗೆ ನಿಲ್ಲಿಸುತ್ತಿದೆ ಇದರಲ್ಲಿ ಚಿಕ್ಕನಾಯಕನಹಳ್ಳಿ ಶಾಸಕರ ಪಾತ್ರ ಹೆಚ್ಚಾಗಿದೆ ಎಂದು ಮಧುಗಿರಿ ಶಾಸಕ ಕೆ.ಎನ್.ರಾಜಣ್ಣ ಹೇಳಿದರು.
ಪಟ್ಟಣದ ಕಾಂಗ್ರೇಸ್ ಮುಖಂಡ ಸಾಸಲು ಸತೀಶ್ರವರ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಈ ಹಿಂದೆ ಲೋಕಸಭಾ ಚುನಾವಣೆಯ ಸಂದರ್ಭದಲ್ಲೂ ಎ.ಕೃಷ್ಣಪ್ಪರವರನ್ನು ನಿಲ್ಲಿಸಿದ್ದರು ಈಗ ಬೆಂಗಳೂರಿನಲ್ಲಿ ವ್ಯವಹಾರ ನಡೆಸುತ್ತಿರುವ ಜೆಡಿಎಸ್ ಪಕ್ಷದ ಅಭ್ಯಥರ್ಿಯನ್ನು ಚುನಾವಣೆಗೆ ನಿಲ್ಲಿಸಿದ್ದಾರೆ, ಜೆಡಿಎಸ್ ಪಕ್ಷದಲ್ಲಿ ಸಮರ್ಥವಾದ ಅಭ್ಯಥರ್ಿಗಳಿಲ್ಲವೇ ಎಂದು ಪ್ರಶ್ನಿಸಿದರು.
ಬಿಜೆಪಿಯಿಂದ ಸ್ಪಧರ್ಿಸಿರುವ ಡಾ.ಹುಲಿನಾಯ್ಕರ್ ಸಭ್ಯ ವ್ಯಕ್ತಿ ಆದರೆ ಅವರು ವಿಧಾನ ಪರಿಷತ್ ಸದಸ್ಯರಾಗಿದ್ದಾಗ ಜಿಲ್ಲೆಯಲ್ಲಿ ಯಾವ ಅಭಿವೃದ್ದಿಯನ್ನೂ ಮಾಡಿಲ್ಲ, ಚುನಾವಣಾ ಸಮಯದಲ್ಲಿ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ತಮ್ಮ ಹಿತಾಸಕ್ತಿಗಾಗಿ ಹಾರುತ್ತಾರೆ ಎಂದರು.
ಜಿಲ್ಲೆಯಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲೂ ಚಿ.ನಾ.ಹಳ್ಳಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಮತ ನೀಡಿ ಎಸ್.ಪಿ.ಮುದ್ದಹನುಮೇಗೌಡರವರನ್ನು ಸಂಸದರನ್ನಾಗಿ ಆಯ್ಕೆ ಮಾಡಿದ್ದಾರೆ, ಇದೇ ರೀತಿ ಈ ಬಾರಿಯೂ ಜನಪ್ರತಿನಿಧಿಗಳು ಹೆಚ್ಚು ಮತ ನೀಡಿ ಆರ್.ರಾಜೇಂದ್ರರವರನ್ನು ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ, ರಾಜೇಂದ್ರ ತಮ್ಮ ಮಗ ಎಂಬ ಕಾರಣದಿಂದ ವಿಧಾನ ಪರಿಷತ್ ಚುನಾವಣೆಗೆ ಟೀಕೆಟ್ ನೀಡಿಲ್ಲ ಅವರು 10 ವರ್ಷಗಳ ಯುವ ಕಾಂಗ್ರೇಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವುದರಿಂದ ಟಿಕೆಟ್ ನೀಡಲಾಗಿದೆ. ತಾಲ್ಲೂಕಿನಲ್ಲಿ ಕಾಂಗ್ರೇಸ್ ಗುಂಪುಗಾರಿಕೆ ಇಲ್ಲ, ಅಲ್ಪಸ್ವಲ್ಪ ಭಿನ್ನಾಭಿಪ್ರಾಯವಿದ್ದರೂ ಎಲ್ಲರೂ ಒಂದಾಗಿ ಪಕ್ಷದ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜೇಂದ್ರರವರನ್ನು ಮತದಾರರು ಬೆಂಬಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಷಫಿ ಅಹಮದ್ ಮಾತನಾಡಿ, ಡಿಸೆಂಬರ್ 24ರಂದು ಹುಳಿಯಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನ ಪರಿಷತ್ ಅಭ್ಯಥರ್ಿ ಆರ್.ರಾಜೇಂದ್ರರವರ ಪರವಾಗಿ ಚುನಾವಣಾ ಪ್ರಚಾರಕ್ಕಾಗಿ ನಡೆಯುವ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದ ಅವರು ಜಿಲ್ಲೆಯಲ್ಲಿ 5976 ಜನ ಪ್ರತಿನಿಧಿಗಳಲ್ಲಿ ಹೆಚ್ಚಿನ ಪ್ರತಿನಿಧಿಗಳು ಕಾಂಗ್ರೇಸ್ ಅಭ್ಯಥರ್ಿ ಆರ್.ರಾಜೇಂದ್ರ ಅವರಗೆ ಮತ ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಿರಾ, ತಿಪಟೂರು, ತುರುವೇಕೆರೆ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರಿನಲ್ಲಿ ನಡೆಯುವ ಸಮಾವೇಶಕ್ಕೆ ಬೇಟಿ ನೀಡಿ ಜನಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸಮಾವೇಶದಲ್ಲಿ ಸಂಸದ ಮುದ್ದೇಹನುಮೇಗೌಡ, ಚಿತ್ರದುರ್ಗ ಸಂಸದ ಚಂದ್ರಯ್ಯ ಹಾಗೂ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ, ಸಚಿವ ಡಾ.ಜಿ.ಪರಮೇಶ್ವರ್ ಹಾಗೂ ಕಾಂಗ್ರೆಸ್ ಶಾಸಕರು ಭಾಗವಹಿಸಲಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ್ ಮಾತನಾಡಿ, ರಾಹುಲ್ಗಾಂಧಿ ಯುವಕರಾಗಿದ್ದು ಯುವಕರಿಗೆ ಆಧ್ಯತೆ ನೀಡಬೇಕೇಂಬ ಕಾರಣದಿಂದ ಆರ್.ರಾಜೇಂದ್ರ ಅವರಿಗೆ ವಿಧಾನ ಪರಿಷತ್ ಚುನಾವಣೆಗೆ ಸ್ಪಧರ್ಿಸಲು ಟಿಕೆಟ್ ನೀಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೇಸ್ ಸಕರ್ಾರವಿರುವುದರಿಂದ ವಿಧಾನ ಪರಿಷತ್ ಚುನಾವಣೆಯಲ್ಲಿ ಆರ್.ರಾಜೇಂದ್ರ ಜಯಗಳಿಸಿದರೆ ಗ್ರಾ.ಪಂ, ಜಿ.ಫಂ, ತಾ.ಪಂ.ಗಳಿಗೆ ಹೆಚ್ಚಿನ ಅನುದಾನ ಬರುವುದರಿಂದ ಹಳ್ಳಿಗಳು ಅಭಿವೃದ್ದಿ ಹೊಂದಲು ಆರ್.ರಾಜೇಂದ್ರ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು.
ಕಾಂಗ್ರೇಸ್ ಮುಖಂಡ ಸಾಸಲು ಸತೀಶ್ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ತಾಲ್ಲೂಕಿನ ಜನತೆ ಕಾಂಗ್ರೆಸ್ ಪರವಾಗಿ ಸ್ಪಧರ್ಿಸಿದ್ದ ಎಸ್.ಪಿ ಮುದ್ದಹನುಮೇಗೌಡರಿಗೆ ಹೆಚ್ಚು ಮತ ನೀಡಿ ಸಂಸದರಾಗಿ ಆಯ್ಕೆ ಮಾಡಿದ್ದಾರೆ ಅದೇ ರೀತಿ ಈ ಬಾರಿಯು ವಿಧಾನ ಪರಿಷತ್ ಚುನಾವಣೆಯಲ್ಲಿ ಹೆಚ್ಚಿನ ಮತ ನೀಡಿ ರಾಜೇಂದ್ರರವರನ್ನು ಗೆಲ್ಲಿಸುತ್ತಾರೆ ಎಂಬ ಭರವಸೆ ಇದೆ ಎಂದರು.
ಮಾಜಿ ಶಾಸಕ ಹೆಚ್.ನಿಂಗಪ್ಪ ಮಾತನಾಡಿ ಆರ್.ರಾಜೇಂದ್ರ ಎರಡು ಬಾರಿ ಯುವ ಕಾಂಗ್ರೇಸ್ ಜಿಲ್ಲಾಧ್ಯಕ್ಷರಾಗಿ ಜಿಲ್ಲೆಯಲ್ಲಿ ಯುವಕರನ್ನು ಸಂಘಟಿಸಿ ಪಕ್ಷದ ಬಲವರ್ದನೆಗೆ ಶ್ರಮಿಸಿದ ಪ್ರಯುಕ್ತ ರಾಜೀವ್ ಗಾಂಧಿಯವರು ರಾಜೇಂದ್ರರವರಿಗೆ ವಿಧಾನ ಪರಿಷತ್ಗೆ ಟಿಕೆಟ್ ನೀಡಿದ್ದಾರೆ, ರಾಜೇಂದ್ರರವರ ಗೆಲುವಿಗೆ ಯುವಕರು ಹೆಚ್ಚಿನದಾಗಿ ಶಕ್ತಿ ಮೀರಿ ಇವರ ಗೆಲುವಿಗೆ ಶ್ರಮಿಸುತ್ತಾರೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಮಾಜಿ ಜಿ.ಪಂ ಅಧ್ಯಕ್ಷ ಜಿ.ರಘುನಾಥ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಬಸವರಾಜು, ಎ.ಪಿ.ಎಂ.ಸಿ.ಅಧ್ಯಕ್ಷ ವೈ.ಸಿ.ಸಿದ್ದರಾಮಯ್ಯ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದಶರ್ಿ ಶೇಷಾನಾಯ್ಕ, ವೆಂಕಟೇಶ್ , ದಸೂಡಿ ರಂಗಸ್ವಾಮಿ, ಅಶೋಕ, ಪುರಸಭಾ ಸದಸ್ಯರಾದ ರೇಣುಕಮ್ಮ. ಸಿ.ಪಿ.ಮಹೇಶ್, ಮುಖಂಡ ಕೆ.ಜಿ.ಕೃಷ್ಣಗೌಡ ಮತ್ತಿತರರು ಉಪಸ್ಥಿತರಿದ್ದರು.
ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿಗಿಂತ ಒಂದು ಸ್ಥಾನ ಹೆಚ್ಚು ಪಡೆದರೆ ರಾಜಕೀಯ ನಿವೃತ್ತಿ : ಕೆ.ಎಸ್.ಈಶ್ವರಪ್ಪ
ಚಿಕ್ಕನಾಯಕನಹಳ್ಳಿ, : ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಒಂದು ಸ್ಥಾನ ಹೆಚ್ಚಿಗೆ ಪಡೆದರೂ ರಾಜಕೀಯ ಸನ್ಯಾಸ ತೆಗೆದುಕೊಳ್ಳುತ್ತೇನೆ, ದೇವರೇ ಅಡ್ಡ ಬಂದರೂ ಡಾ.ಹುಲಿನಾಯ್ಕರ್ ಅವರನ್ನು ಸೋಲಿಸಲು ಸಾಧ್ಯವಿಲ್ಲ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಸವಾಲು ಹಾಕಿದರು.
ಪಟ್ಟಣದ ಬಳಿ ಇರುವ ದಬ್ಬೆಘಟದ ಶ್ರೀ ಮರಳುಸಿದ್ದೇಶ್ವರ ಸಮುದಾಯ ಭವನದಲ್ಲಿ ನಡೆದ ಬಿಜೆಪಿ ವಿಧಾನ ಪರಿಷತ್ ಅಭ್ಯಥರ್ಿ ಡಾ.ಎಂ.ಆರ್.ಹುಲಿನಾಯ್ಕರ್ ಪರ ಪ್ರಚಾರ ಹಾಗೂ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿ ಮತ್ತು ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ರೈತರ ಆತ್ಮಹತ್ಯೆ, ಅತ್ಯಾಚಾರ, ಮರಳುದಂದೆ, ಕೊಲೆಗಳು ನಡೆಯುತ್ತಿದ್ದರೂ ತಲೆ ಕೆಡಸಿಕೊಳ್ಳದ ಕಾಂಗ್ರೇಸ್ ಸಕರ್ಾರ ನಾಚಿಕೆ ಗೇಡಿನ ಆಡಳಿತ ನಡೆಸುತ್ತಿದೆ ಎಂದರು.
ಮೊದಲು ತಲೆ ಕೆಟ್ಟಿತ್ತು: ಮೊದಲು ನಮಗೆ ತಲೆ ಕೆಟ್ಟಿತ್ತು ಹಾಗಾಗಿ ಕೆಜೆಪಿ,ಬಿಜೆಪಿ ಎಂದು ಛಿದ್ರವಾಗಿದ್ದೆವು ಈಗ ಬುದ್ಧಿ ಬಂದಿದೆ ಒಂದಾಗಿದ್ದೇವೆ. ಈಗ ನಡೆಯುತ್ತಿರುವ ವಿಧಾನ ಪರಿಷತ್ ಚುನಾವಣೆ ಮುಂದಿನ ಬಿಜೆಪಿ ಸಕರ್ಾರದ ಅಧಿಕಾರಕ್ಕೆ ಅಡಿಗಲ್ಲು ಆಗಲಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ 20 ಸ್ಥಾನ ಗೆಲ್ಲುವ ಕನಸು ಕಾಣುತ್ತಿದ್ದಾರೆ. ಕಾಂಗ್ರೆಸ್ 10ಕ್ಕಿಂತ ಹೆಚ್ಚು ಸ್ಥಾನ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನೇ ಇಡೀ ವಿಶ್ವವೇ ಕೊಂಡಾಡುತ್ತಿದೆ. ಪಾಕಿಸ್ಥಾನ ಮತ್ತು ಸಿದ್ಧರಾಮಯ್ಯ ಇಬ್ಬರು ಮಾತ್ರ ಟೀಕಿಸುತ್ತಿದ್ದಾರೆ ಎಂದರು.
ಈಗ ಮುಖ್ಯಮಂತ್ರಿ ತಲೆ ಕೆಟ್ಟಿದೆ : ಬರಪೀಡಿತ ಕನರ್ಾಟಕಕ್ಕೆ ಕೇಂದ್ರ ಸಕರ್ಾರ ರೂ.1650 ಕೋಟಿ ಹಣ ಬಿಡುಗಡೆ ಮಾಡಿದೆ. 40 ವರ್ಷ ಆಳ್ವಿಕೆ ಮಾಡಿದ ಕಾಂಗ್ರೆಸ್ ಸಕರ್ಾರ ರೂ.500 ಕೋಟಿಗಿಂತ ಹೆಚ್ಚು ಹಣವನ್ನು ರಾಜ್ಯಕ್ಕೆ ಎಂದೂ ಎಂದು ನೀಡಿಲ್ಲ.ಬಂದಿರುವ ಹಣವನ್ನು ಬಳಸಿಕೊಳ್ಳಲಾಗದ ಕನರ್ಾಟಕ ಸಕರ್ಾರ ಮೋದಿರವರ ಮೇಲೆ ಗೂಬೆ ಕೂರಿಸುತ್ತಿದೆ. ಈಗ ಸಿದ್ಧರಾಮಯ್ಯ ಅವರ ತಲೆ ಕೆಟ್ಟಿದರೆ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಮರಳುದಂಧೆ ವ್ಯಾಪಕವಾಗಿ ನಡೆಯುತ್ತಿದೆ, ಪ್ರಾಮಾಣಿಕ ಅಧಿಕಾರಿಗಳ ಕಗ್ಗೊಲೆಯಾಗುತ್ತಿದೆ ಇದರಿಂದ ಅಧಿಕಾರಿಗಳಲ್ಲಿ ಆತ್ಮಸ್ಥೈರ್ಯ ಕುಗ್ಗುತ್ತಿದೆ. ಕಾಂಗ್ರೆಸ್ ಸಕರ್ಾರದಲ್ಲಿ ಗೂಂಡಾಗಳು, ಸಮಾಜ ಘಾತುಕ ಶಕ್ತಿಗಳು ತಲೆಯುತ್ತುತ್ತಿವೆ ಎಂದು ಆರೋಪಿಸಿದರು.
ಹುಲಿನಾಯ್ಕರ್ ಬಿಜೆಪಿಯ ಕೃಷ್ಣಪರಮಾತ್ಮ : ಶಾಸಕ ಸುರೇಶ್ಗೌಡ ಮಾತನಾಡಿ, ವಿಧಾನ ಪರಿಷತ್ ಚುನಾವಣೆಗೆ ಮಾಜಿ ಶಾಸಕ ಜಿ.ಸಿ.ಮಾಧುಸ್ವಾಮಿಯವರಿಗೆ ಟಿಕೆಟ್ ನೀಡುವುದು ಎಂದು ನಿಧರ್ಾರವಾಗಿತ್ತು. ಜೆಸಿಎಂ ಕಡೆ ಕ್ಷಣದಲ್ಲಿ ಹಿಂದೆ ಸರಿದರು ಇದರಿಂದ ನಮಗೆ ದಿಕ್ಕು ತೋಚದಂತಾಗಿತ್ತು. ಕಷ್ಟದಲ್ಲಿರುವ ಪಾಂಡವರಿಗೆ ಕೃಷ್ಣಪರಮಾತ್ಮ ಆಸರೆ ನೀಡಿದಂತೆ ಡಾ.ಹುಲಿನಾಯ್ಕರ್ ಕಮಲದ ಕೈ ಹಿಡಿದರು. ದುಡ್ಡಿನ ಥೈಲಿ ಇದೆ ಎಂಬ ಕಾರಣಕ್ಕೆ ಜೆಡಿಎಸ್ ಹೊರಗಿನವರಿಗೆ ಮಣೆ ಹಾಕಿದೆ.ಹುಲಿನಾಯ್ಕರ್ ಕೂಡ ಇವರಿಗಿಂತ ಹತ್ತುಪಟ್ಟು ಸ್ಟ್ರಾಂಗ್ ಎಂದರಲ್ಲದೆ ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ, ಗುಬ್ಬಿ, ತುರುವೇಕೆರೆ, ತಿಪಟೂರು, ಚಿಕ್ಕನಾಯಕನಹಳ್ಳಿ ಭಾಗಗಳಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ನಾಲ್ಕು ತಾಲ್ಲೂಕುಗಳಲ್ಲಿ ಜೆಸಿಎಂ ಸಂಚರಿಸಿ, ಅಭ್ಯಥರ್ಿ ಎಂ.ಆರ್.ಹುಲಿನಾಯ್ಕರ್ ಪರ ಮತ ಕ್ರೂಡೀಕರಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲೆ ದುಡ್ಡಿಗೆ ಹಡ : ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಪ್ರತೀ ಚುನಾವಣೆಯಲ್ಲೂ ದೇವೇಗೌಡರು ಹೊರಗಿನವರನ್ನು ಕಣಕ್ಕಿಳಿಸುವ ಮೂಲಕ ತುಮಕೂರು ಜಿಲ್ಲೆಯನ್ನು ದುಡ್ಡಿಗೆ ಹಡವಿಟ್ಟಿದೆ ಎಂದರು.
ಮುಖ್ಯಮಂತ್ರಿ ಸುತ್ತ ಭಟ್ಟಂಗಿಗಳು :ಮಾಜಿ ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೈಗೊಂಡ ಅಭಿವೃದ್ದಿ ಕಾರ್ಯಗಳನ್ನು ನೋಡಿ ಸಹಿಸಲಾರದ ಕಾಂಗ್ರೆಸ್ ಕ್ಷುಲ್ಲಕ ನೆಪವೊಡ್ಡಿ ಸಂಸತ್ ಕಲಾಪ ನಡೆಯದಂತೆ ಗಲಾಟೆ ಎಬ್ಬಿಸುತ್ತಿರುವುದು ವಿಷಾದದ ಸಂಗತಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಸುತ್ತಮುತ್ತ ಕೆಲವು ಭಟ್ಟಂಗಿಗಳನ್ನು ಇಟ್ಟುಕೊಂಡು ಅಧಿಕಾರ ನಡೆಸುತ್ತಿದ್ದಾರೆ ಎಂದರು.
ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಮಾತನಾಡಿ, ತಾಲ್ಲೂಕಿಗೆ ಹೇಮಾವತಿ ನಾಲಾ ಕಾಮಗಾರಿ ಕಳೆದ 2 ವರ್ಷದಿಂದ ನೆನೆಗುದಿಗೆ ಬಿದ್ದಿದೆ ಶಾಸಕರು ಹಾಗೂ ಉಸ್ತುವಾರಿ ಸಚಿವರಿಗೆ ಕಾಮಗಾರಿ ಪೂರ್ಣಗೊಳಿಸುವ ಇಚ್ಚಾಶಕ್ತಿ ಇಲ್ಲ ಎಂದರು.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ಸಿ.ಎಂ.ರಂಗಸ್ವಾಮಯ್ಯ ಹಾಗೂ ಕಂದಿಕೆರೆ ಗ್ರಾ.ಪಂ.ಉಪಾಧ್ಯಕ್ಷ ರಾಜಣ್ಣ ತಮ್ಮ ಬೆಂಬಲಿಗರೊಂದಿಗೆ ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದರು.
ಕಾರ್ಯಕ್ರಮದಲ್ಲಿ ಅಭ್ಯಥರ್ಿ ಡಾ.ಎಂ.ಆರ್.ಹುಲಿನಾಯ್ಕರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ, ರಾಜ್ಯ ಪರಿಶಿಷ್ಠಜಾತಿ ಮೋಚರ್ಾ ರಾಜ್ಯ ಘಟಕದ ಉಪಾಧ್ಯಕ್ಷ ಗಂಗರಾಜು, ಜಿಲ್ಲಾ ಘಟಕದ ಅಧ್ಯಕ್ಷ ರಾಮಾಂಜಿನಯ್ಯ, ಹೆಚ್.ಬಿ.ಪಂಚಾಕ್ಷರಿ, ತಾ.ಪಂ.ಅಧ್ಯಕ್ಷೆ ಜಯಕ್ಷ್ಮಮ್ಮ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಎಂ.ಎಂ.ಜಗದೀಶ್, ತಾ.ಪಂ.ಉಪಾಧ್ಯಕ್ಷ ನಿರಂಜನಮೂತರ್ಿ, ಶ್ರೀನಿವಾಸಮೂತರ್ಿ ಮತ್ತಿತರರು ಉಪಸ್ಥಿತರಿದ್ದರು.
ಕಳಸಾ ಬಂಡೂರಿ ವಿಷಯದ ಬಗ್ಗೆ ಮುಖ್ಯಮಂತ್ರಿಗಳು ಸರ್ವಪಕ್ಷಗಳ ಸಭೆ ಮೂಲಕ ಇತ್ಯರ್ಥಗೊಳಿಸಲಿ : ಕೆ.ಎಸ್.ಈಶ್ವರಪ್ಪ
ಚಿಕ್ಕನಾಯಕನಹಳ್ಳಿ,ಡಿ.16 : ಮಹದಾಯಿ ಕಳಸಾ ಬಂಡೂರಿ ವಿಚಾರವನ್ನು ಕಾಂಗ್ರೆಸ್ ಸಕರ್ಾರ ಪ್ರಚಾರಕ್ಕೆ ಬಳಸಿಕೊಳ್ಳದೆ ನಾಲ್ಕು ರಾಜ್ಯಗಳ ಸರ್ವಪಕ್ಷಗಳ ಸಭೆ ಕರೆದು ಇತ್ಯರ್ಥಗೊಳಿಸಲಿ ಎಂದು ವಿಧಾನ ಪರಿಷತ್ನ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದರು.
ವಿಧಾನ ಪರಿಷತ್ ಬಿಜೆಪಿ ಅಭ್ಯಥರ್ಿ ಡಾ.ಎಂ.ಆರ್.ಹುಲಿನಾಯ್ಕರ್ ಪರ ಚುನಾವಣಾ ಪ್ರಚಾರಕ್ಕೆಂದು ಪಟ್ಟಣಕ್ಕೆ ಆಗಮಿಸಿದ್ದ ವೇಳೆ ಇಟ್ಟಿಗೆ ರಂಗಸ್ವಾಮಯ್ಯನವರ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.
ಕಳಸಾ ಬಂಡೂರಿ ಸಮಸ್ಯೆ ನೆನ್ನೆ ಮೊನ್ನೆದಲ್ಲ 35ವರ್ಷಗಳ ಸಮಸ್ಯೆ ರಾಜ್ಯದಲ್ಲಿ ಜೆ.ಡಿ.ಎಸ್, ಬಿ.ಜೆಪಿ. ಸಮ್ಮಿಶ್ರ ಸಕರ್ಾರವಿದ್ದಾಗ ನಾನು ನೀರಾವರಿ ಸಚಿವನಾಗಿ ಶಂಕುಸ್ಥಾಪನೆ ನೆರವೇರಿಸಿದ್ದೇನೆ, ಕೇಂದ್ರಾಡಳಿತ ಪ್ರದೇಶ ಸೇರಿದಂತೆ 4 ರಾಜ್ಯಗಳಲ್ಲೂ ಕಾಂಗ್ರೆಸ್ ಸಕರ್ಾರವಿದ್ದಾಗಲೂ ಕೂಡ ಕಳಸಾ ಬಂಡೂರಿ ಚಚರ್ೆ ಕೂಡ ಮಾಡಲಿಲ್ಲ, ಯು.ಪಿ.ಎ ಸಕರ್ಾರದ ನಾಯಕಿ ಸೋನಿಯಾ ಗಾಂಧಿ ಚುನಾವಣಾ ಪ್ರಚಾರಕ್ಕಾಗಿ ಕನರ್ಾಟಕದಲ್ಲಿ ಗೋವಾಕ್ಕೆ ಒಂದು ಹನಿ ನೀರು ಬಿಡಲ್ಲ ಅಂತಲೂ ಗೋವಾದಲ್ಲಿ ಕನರ್ಾಟಕಕ್ಕೆ ಒಂದನಿ ನೀರು ಬಿಡುವುದಿಲ್ಲ ಎಂಬ ಒಳಗಡೆ ಒಂದು ರೀತಿ ಹೊರಗಡೆ ಮತ್ತೊಂದು ರೀತಿ ಮಾತುಗಳನ್ನು ಹೇಳುತ್ತಾ ರಾಜಕೀಯ ಮಾಡುತ್ತಿದ್ದಾರೆ, ನಮ್ಮ ಪಾಲಿನ ಮಹದಾಯಿ ನೀರು ಹಂಚಿಕೆ ವಿಚಾರ ಸುಪ್ರಿಂಕೋಟರ್್ ಮೆಟ್ಟಿಲೇರುವಂತೆ ಮಾಡಿದ್ದು ಕಾಂಗ್ರೇಸ್ನವರೇ ಈಗ ನ್ಯಾಯಾಧೀಕರಣದ ಹೊರಗಿಟ್ಟು ಮಾತಾಡೋಣ ಅಂತ ಹೇಳುತ್ತಿರುವವರೂ ಕಾಂಗ್ರೇಸ್ನವರೇ.
ಸರ್ವ ಪಕ್ಷ ಪ್ರಧಾನಿ ಬಳಿ ನಿಯೋಗ ಕೊಂಡೊಯ್ದ ವೇಳೆ ನರೇಂದ್ರ ಮೋದಿಯವರೇ ನ್ಯಾಯಾಧಿಕರಣದಲ್ಲಿದ್ದರು ಈ ವಿಚಾರವಾಗಿ ಹೊರಗಿಟ್ಟು ಮಾತಾಡೋಣ ಅಂತ ಹೇಳಿದ್ದ ಅವರು ಎಲ್ಲಾ ಪಕ್ಷಗಳು ಬಿ.ಜೆ.ಪಿ. ಜೆ.ಡಿ.ಎಸ್ ಕಾಂಗ್ರೆಸ್ ಸೇರಿ ಕುಳಿತು ಬಗೆಹರಿಸಬೇಕಾಗುತ್ತದೆ ಎಂದು ಮೋದಿಯವರ ಮಾತಿಗೆ ಒಪ್ಪಿದ ಸಿ.ಎಂ ಮಾಧ್ಯಮಗಳ ಮುಂದೆ ಬಂದು ಪ್ರಧಾನಿ ಆಸಕ್ತಿ ತೋರುತ್ತಿಲ್ಲ ಅಂತ ಕೀಳು ಮಟ್ಟದ ರಾಜಕೀಯ ಮಾಡುತ್ತಾರೆ, ರಾಜಕೀಯ ಮಾಡೋಕು ಒಂದು ಲಿಮಿಟ್ ಬೇಕು, ನಾವು ಗೋವಾ ಮಹಾರಾಷ್ಟ್ರ ಸಕರ್ಾರಗಳನ್ನು ಕರೆಯುತ್ತೇವೆ ಕಾಂಗ್ರೇಸ್ನವರು ಅ ರಾಜ್ಯಗಳ ವಿರೋಧ ಪಕ್ಷಗಳನ್ನು ಸಹ ಸೇರಿಸಬೇಕು ಎಲ್ಲಾ ಪಕ್ಷಗಳು ಇಚ್ಛಾಶಕ್ತಿ ಹೊಂದಿದ್ದರೆ ಸಮಸ್ಯೆ ಇರುವುದಿಲ್ಲ ಎಂದ ಅವರು ಈಗ ಮುಖ್ಯಮಂತ್ರಿಗಳು ಸಭೆ ಕರೆದು ಗೋವಾ ಮಹಾರಾಷ್ಟ್ರಕ್ಕೆ ಹೋಗೋಣ ಅಂತ ಹೇಳಿದ್ದಾರೆ ಅಲ್ಲಿ ಎಲ್ಲಾ ಪಕ್ಷಗಳು ಕುಳಿತು ಚಚರ್ಿಸಿದ ನಂತರ ಕಳಸಾ ಬಂಡೂರಿ ಸಮಸ್ಯೆ ಬಗೆಹರಿಯುತ್ತದೆ ಎಂಬ ವಿಶ್ವಾಸ ನನಗಿದೆ ಎಂದರು.
ತಾಲ್ಲೂಕಿನ 26ಕೆರೆಗಳಿಗೆ ನೀರು ಹರಿಸುವ ಯೋಜನೆ ಸೇರಿದಂತೆ ಕನರ್ಾಟಕದಲ್ಲಿ ನಾವು ಉಪಮುಖ್ಯಮಂತ್ರಿಯಾಗಿದ್ದಾಗ ಅಡಿಗಲ್ಲು ಹಾಕಿದ ಯಾವುದೇ ನೀರಾವರಿ ಯೋಜನೆಗಳು ಚಾಲನೆಯಾಗುತ್ತಿಲ್ಲ ಎಂದರು.
ತುಮಕೂರು ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ನಿಂದ ಬಂದಂತಹ ಹುಲಿನಾಯ್ಕರ್ರವರಿಗೆ ಟಿಕೆಟ್ ನೀಡಿದ್ದರ ಬಗ್ಗೆ, ಜಿಲ್ಲೆಯಲ್ಲಿ ಬಿಜೆಪಿ ಪಕ್ಷದ ಅಂತಹ ಸಮರ್ಥಕವಾದ ವ್ಯಕ್ತಿ ಇಲ್ಲವೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಈಶ್ವರಪ್ಪನವರು, ರಾಜಕೀಯ ನಿಂತ ನೀರಲ್ಲ, ಮೊದಲು ನಮಗೆ ರಾಜಕೀಯ ಮಾಡಲು ಬರುತ್ತಿರಲಿಲ್ಲ, ಈಗ ರಾಜಕೀಯದಲ್ಲಿ ಪಕ್ಷಕ್ಕೆ ಯಾರು ಅಗತ್ಯ ಪಕ್ಷಕ್ಕೆ ಯಾರನ್ನು ಕರೆಯಬೇಕು, ಯಾರನ್ನು ಸ್ಪಧರ್ೆಗೆ ನಿಲ್ಲಿಸಬೇಕು ಎಂಬುದು ನಮಗೂ ತಿಳಿದಿದೆ, ಬಿಜೆಪಿ ಪಕ್ಷ ಎಲ್ಲಾ ಕಡೆಯಲ್ಲೂ ಗೆಲ್ಲುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಂಸದ ಜಿ.ಎಸ್.ಬಸವರಾಜು, ಶಾಸಕ ಸುರೇಶ್ಗೌಡ, ಮಾಜಿ ಶಾಸಕರಾದ ಜೆ.ಸಿ.ಮಾಧುಸ್ವಾಮಿ, ಕೆ.ಎಸ್.ಕಿರಣ್ಕುಮಾರ್, ವಿಧಾನ ಪರಿಷತ್ ಅಭ್ಯಥರ್ಿ ಡಾ.ಎಂ.ಆರ್.ಹುಲಿನಾಯ್ಕರ್, ಜಿ.ಪಂ.ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ ಮತ್ತಿತರರು ಉಪಸ್ಥಿತರಿದ್ದರು.
ತಾಲ್ಲೂಕಿನಾದ್ಯಂತ ಹೆಚ್ಚುತ್ತಿರುವ ನೀಲಿ ನಾಲಗೆ ರೋಗ
ಚಿಕ್ಕನಾಯಕನಹಳ್ಳಿ,ಡಿ.16 : ನೀಲಿನಾಲಗೆ ರೋಗ ತಾಲ್ಲೂಕಿನಾಧ್ಯಂತ ವ್ಯಾಪಕವಾಗಿ ಹರಡುತ್ತಿದ್ದರೂ,ಪಶು ವೈದ್ಯ ಸಿಬ್ಬಂದಿ ರೊಗನಿಯಂತ್ರಣಕ್ಕೆ ಮುಂದಾಗುತ್ತಿಲ್ಲ. ಸತ್ತ ಕುರಿಗಳನ್ನು ಮರಣೋತ್ತರ ಪರೀಕ್ಷೆ ಮಾಡಿಸಿ ವಿಮೆ ಪಡೆಯಲೂ ವೈದ್ಯರು ಸಿಗುತ್ತಿಲ್ಲ ಎಂದು ತಾಲ್ಲೂಕಿನ ಕುರಿಗಾಹಿಗಳು ಇಲಾಖೆ ಹಾಗೂ ಪಶು ವೈದ್ಯರ ವಿರುದ್ಧ ಕಿಡಿಕಾರಿದ್ದಾರೆ.
ರೇವಣಸಿದ್ಧೇಶ್ವರ ಕುರಿಸಾಕಣೆದಾರರ ಸಂಘದ ಅಧ್ಯಕ್ಷ ಹಂದನಕೆರೆ ಸಿದ್ಧಣ್ಣ ಮಾತನಾಡಿ, ರೋಗವ್ಯಾಪಕವಾಗಿ ಹರಡುತ್ತಿದೆ. ಸಾಲು ಸಾಲಾಗಿ ಕುರಿಗಳು ಸಾಯುತ್ತಿವೆ. ಒದೊಂದು ಹಟ್ಟಿಯಲ್ಲೂ ಪ್ರತಿನಿತ್ಯ ಹತ್ತಾರು ಕುರಿಗಳು ರೊಗಕ್ಕೆ ತುತ್ತಾಗುತ್ತಿವೆ. ಸತ್ತ ಕುರಿಗಳನ್ನು ಒಂದೆಡೆ ಗುಂಡಿ ತೋಡಿ ಸಾಮೂಹಿಕವಾಗಿ ಮಣ್ಣು ಮುಚ್ಚುತ್ತಿದ್ದಾರೆ. ಇದರಿಂದ ರೋಗಾಣುಗಳು ಆರೋಗ್ಯವಂತ ಕುರಿಗಳಿಗೂ ಹರಡುತ್ತಿವೆ. ತಕ್ಷಣ ಇಲಾಖೆ ಕ್ರಮ ಕೈಗೊಳ್ಳಬೇಕು ಈಗಾಗಲೇ ರಾಜ್ಯದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಇದರ ಜೊತೆಯಲ್ಲಿ ಕುರಿಗಾಹಿಗಳು ಸಹ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದರು.
ಕುರಿಗಾಹಿ ಗಂಗಾಭೋವಿ ಮಾತನಾಡಿ, ಸಕರ್ಾರ ಕುರಿಗಳಿಗೆ ನೀಲಿ ನಾಲಿಗೆ ರೋಗಕ್ಕೆ ಔಷಧಿ ಒದಗಿಸಿದ್ದೇವೆ ಎಂದು ಹೇಳುತ್ತಿದೆ, ಆಸ್ಪತ್ರೆಯಲ್ಲಿ ವಿಚಾರಿಸಿದರೆ ಔಷಧಿ ಸರಬರಾಜು ಆಗಿಲ್ಲ ಎಂದು ಹೇಳುತ್ತಾರೆ. ನಾವು ಯಾರನ್ನು ನಂಬುವುದು? ಕುರಿ ಸತ್ತರೆ ಪರಿಹಾರ ನೀಡಲು ಮರಣೋತ್ತರ ಪರೀಕ್ಷೆ ನಡೆಸಬೇಕು ಎನ್ನುತ್ತಾರೆ. ಸತ್ತ ಕುರಿಯ ಭಾವಚಿತ್ರ ಬೇಕು ಎನ್ನುತ್ತಾರೆ. ಆಸ್ಪತ್ರೆ ಬಳಿ ತೆಗೆದುಕೊಂಡು ಹೋದರೆ ವೈದ್ಯರು ಇರುವುದಿಲ್ಲ ಇದರಿಂದ ದಿಕ್ಕು ತೋಚದಂತಾಗಿದೆ ಎಂದು ಅಸಹಾಯಕತೆ ತೊಡಿಕೊಂಡರು.
ಈ ಕುರಿತು ಹೆಸರು ಬಹಿರಂಗಪಡಿಸಲಿಚ್ಚಿಸದ ಪಶುವೈದ್ಯಾಧಿಕಾರಿಯೊಬ್ಬರು ಮಾತನಾಡಿ,ಕಳೆದ ಒಂದೂವರೆ ತಿಂಗಳಿಗೆ ಮುಂಚಿತವಾಗಿಯೇ ತಾಲ್ಲೂಕಿನಲ್ಲಿ ನೀಲಿ ನಾಲಿಗೆ ರೋಗದ ಲಕ್ಷಣ ಕಂಡುಬಂದಿದ್ದು ಸೂಕ್ತ ಔಷಧಿ ಒದಗಿಸುವಂತೆ ಇಲಾಖೆಗೆ ಮನವಿ ಮಾಡಿಕೊಂಡಿದ್ದೆವು. ಪ್ರಾಥಮಿಕ ಹಂತದಲ್ಲೇ ಉನ್ನತ ಅಧಿಕಾರಿಗಳು ಸ್ಪಂದಿಸಿದ್ದರೆ ಸಮಸ್ಯೆ ಇಷ್ಟು ಬಿಗಡಾಯಿಸುತ್ತಿರಲಿಲ್ಲ ಎಂದು ಅಸಮದಾನ ವ್ಯಕ್ತಪಡಿಸಿದರು.
ಪಶು ವೈದ್ಯಾಧಿಕಾರಿ ಕಾಂತರಾಜು ಮಾತನಾಡಿ, ತಾಲ್ಲೂಕಿನಲ್ಲಿ ಸುಮಾರು1.6ಲಕ್ಷ ಕುರಿಗಳಿವೆ.ಶೇ.60ರಷ್ಟು ಕುರಿಗಳಿಗೆ ರೋಗಲಕ್ಷಣ ಕಾಣಿಸಿಕೊಂಡಿದೆ. ಇಲಾಖೆಯಿಂದ ತಾಲ್ಲೂಕಿಗೆ 32 ಸಾವಿರ ಡೋಸ್ ಔಷಧಿ ವಿತರಣೆಯಾಗಿದೆ. ಇದು ಶೇ.20ರಷ್ಟು ಕುರಿಗಳಿಗೂ ಲಸಿಕೆ ಹಾಕಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ರೋಗ ಬಂದಿರುವ ಕುರಿಗಳಿಗೆ ಲಸಿಕೆ ಹಾಕಿದರೆ ಔಷಧಿಗೆ ಸ್ಪಂದಿಸುವುದಿಲ್ಲ. ರೊಗದಿಂದ ಮುಕ್ತವಾಗಿರುವ ಕುರಿಗಳನ್ನು ಬೇರ್ಪಡಿಸಿ ಸಾಮೂಹಿಕವಾಗಿ ರಿಂಗ್ ವ್ಯಾಕ್ಸಿನೇಷನ್ ನೀಡಬೇಕು ಆದರೆ ಕುರಿಗಾಹಿಗಳು ಇದನ್ನು ಒಪ್ಪುತ್ತಿಲ್ಲ. ಈ ಗೊಂದಲದಿಂದಾಗಿ ಲಸಿಕೆ ಪ್ರಾರಂಭಿಸಿಲ್ಲ. ಉನ್ನತ ಮಟ್ಟದ ಅಧಿಕಾರಿಗಳ ಜತೆ ಚಚರ್ಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ತಾಲ್ಲೂಕಿನಲ್ಲಿ ಪಶು ವೈದ್ಯ ಇಲಾಖೆಯಲ್ಲಿರುವ ಸಿಬ್ಬಂದಿ ಕೊರತೆಯಿಂದಾಗಿ ಸಾವನ್ನಪ್ಪುತ್ತಿರುವ ಕುರಿಗಳ ಮರಣೋತ್ತರ ಪರೀಕ್ಷೆ ಹಾಗೂ ದಾಖಲೀಕರಣ ಸವಾಲಾಗಿ ಪರಿಣಮಿಸಿದೆ. ಹುಳಿಯಾರು ಹಾಗೂ ಹಂದನಕೆರೆ ಭಾಗದಲ್ಲಿ ಹೆಚ್ಚು ಕುರಿಗಳಿಗೆ ನೀಲಿ ನಾಲಿಗೆ ರೋಗದ ಲಕ್ಷಣ ಕಂಡುಬಂದಿದೆ, ಆದರೆ ಎಲ್ಲಾ ಕುರಿಗಳು ದಾಖಲೆಗೆ ಸಿಕ್ಕಿಲ್ಲ. ಈ ವರೆಗೆ ಕೇವಲ 183 ಪ್ರಕರಣಗಳು ದಾಖಲಾಗಿವೆ. ಬಹಳಷ್ಟು ಕುರಿಗಾಹಿಗಳು ಸತ್ತಕುರಿಗಳನ್ನು ಮರಣೋತ್ತರಪರೀಕ್ಷೆಗೆ ಒಳಪಡಿಸದೇ ಮಣ್ಣು ಮಾಡುತ್ತಿರುವುದೇ ಇದಕ್ಕೆ ಕಾರಣ ಎಂದರು.
ತಾಲ್ಲೂಕಿನ ಆಲದಕಟ್ಟೆ ಬಳಿ ಕುರಿ ಹಿಂಡಿನೊಂದಿಗೆ ಸಾಗುತ್ತಿದ್ದ ಕುರಿಗಾಹಿ ದಬ್ಬಕುಂಟೆ ಲೋಕೇಶ್ ಮಾತನಾಡಿ, ಪ್ರತೀ ವರ್ಷ ಸುಗ್ಗಿ ಮುಗಿಸಿ ಬೇರೆ ಜಿಲ್ಲೆಗಳಿಗೆ ವಲಸೆ ಹೋಗುತ್ತಿದ್ದು, ಈ ಬಾರಿ ಕುರಿಗಳಿಗೆ ರೋಗ ಬಂದೈತೆ ಅದುಕ್ಕೆ 1ತಿಂಗಳು ಮುಂಚಿತವಾಗೇ ಹಾಸನದ ಕಡೆ ಹೋಗುತ್ತಿದ್ದೇವೆ, ಆಸ್ಪತ್ರೆಯಲ್ಲಿ ವೈದ್ಯರನ್ನು ನಂಬಿಕೊಂಡರೆ ಅಷ್ಟೇ. ಒಂದು ಕುರೀನೂ ಉಳಿಯೋದಿಲ್ಲ. ಔಷಧಿ ಅಂಗಡಿನಲ್ಲಿ ರೂ.4000 ಔಷಧಿ ತೆಗೆದುಕೊಂಡು, ಈಗ ನಮ್ಮಲ್ಲಿರೋ 400 ಕುರಿಗಳಿಗೂ ಇಂಜೆಕ್ಷನ್ ಮಾಡಿಸಿದ್ದೇನೆ ಕುರಿಗೆ ಕಾಯಿಲೆ ಬಂದರೆ ಮುಂಚಿತವಾಗಿಯೇ ಇನ್ನೂ ಎರಡು ಸಾವಿರ ರೂಪಾಯಿಗಳ ಔಷದಿಯನ್ನು ಸಂಗ್ರಹಿಸಿದ್ದೇನೆ ಎಂದು ರೋಗದ ಕಾರಣಕ್ಕಾಗಿ ಅಕಾಲಿಕ ಗುಳೆ ಹೊರಟಿರುವುದನ್ನು ವಿವರಿಸಿದರು.
ಪಶು ವೈದ್ಯಾಧಿಕಾರಿ ಡಾ.ರಘುಪತಿ ಮಾತನಾಡಿ,ಸಾಮಾನ್ಯ ಕುರಿಗಾಹಿಗಳು ಜಂತುನಾಶಕ ಔಷಧಿಗಳೇ ಸರ್ವರೋಗಕ್ಕೂ ಮದ್ದು ಎಂದು ಭಾವಿಸಿದ್ದಾರೆ. ಕಾಯಿಲೆಗೆ ತುತ್ತಾಗಿರುವ ಕುರಿಗಳಿಗೆ ಕುರಿಗಾಹಿಗಳೇ ಸ್ವತಃ ಔಷದಿ ನೀಡುವ ಪರಿಪಾಟ ಇಟ್ಟುಕೊಂಡಿದ್ದಾರೆ. ಇದು ಕೆಲವೊಮ್ಮೆ ಅಡ್ಡಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ವೈದ್ಯರ ಸಲಹೆ ಮೇರಗೇ ಔಷದೋಪಚಾರ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಸಿಬ್ಬಂದಿ ಕೊರತೆ:ತಾಲ್ಲೂಕು ಪಶು ಇಲಾಖೆಯಲ್ಲಿ ಶೇ.38 ಭಾಗ ಸಿಬ್ಬಂದಿ ಕೊರತೆ ಇದೆ. ಒಟ್ಟು 22 ಪಶುಚಿಕಿತ್ಸಾ ಕೇಂದ್ರಗಳಿದ್ದು 82 ಹುದ್ದೆಗಳು ಮುಂಜೂರಾಗಿವೆ. 43ಸಿಬ್ಬಂದಿ ಮಾತ್ರ ಇದ್ದು 39 ಹುದ್ದೆಗಳು ಖಾಲಿ ಇವೆ. 2 ಪಶು ಆಸ್ಪತ್ರೆ, 11ಪಶು ಚಿಕಿತ್ಸಾಲಯಗಳು ಹಾಗೂ 9 ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. 1 ಸಹಾಯಕ ನಿದರ್ೇಶಕರ ಹುದ್ದೆ, 6 ಪಶುವೈದ್ಯಾಧಿಕಾರಿಗಳ ಹುದ್ದೆ, 1 ಪಶು ಪರೀಕ್ಷಕ, 22 ಸಹಾಯಕ ಹುದ್ದೆಗಳು ಖಾಲಿ ಇವೆ.
ಲಸಿಕೆ ಕಾರ್ಯಕ್ರಮ ಆರಂಭ: ಡಿ.16 ರಿಂದ ನೀಲಿ ನಾಲಿಗೆ ರೋಗಕ್ಕೆ ಲಸಿಕಾ ಕಾರ್ಯಕ್ರಮ ಆರಂಭವಾಗುತ್ತಿದೆ. ಲಸಿಕೆ ಕೊಡಿಸುವಾಗ ಕುರಿಗಾಹಿಗಳು ರೋಗಪೀಡಿತ ಕುರಿಗಳನ್ನು ಪ್ರತ್ಯೇಕಿಸಿ ಲಸಿಕೆ ಹಾಕಿಸಬೇಕು .ಇದರಿಂದ ಆರೋಗ್ಯವಂತ ಕುರಿಗಳಿಗೆ ರೋಗ ಹರಡದಂತೆ ಕಾಯ್ದುಕೊಳ್ಳಬಹುದು ಎಂದು ಮನವಿ ಮಾಡಿದ್ದಾರೆ.
ಖಡ್ಡಾಯವಾಗಿ ದಾಖಲಿಸಿ: ಮರಣಹೊಂದಿದ ಕುರಿಗಳನ್ನು ಸಮೀಪವಿರುವ ಪಶು ವೈದ್ಯ ಆಸ್ಪತ್ರೆಯಲ್ಲಿ ಖಡ್ಡಾಯವಾಗಿ ದಾಖಲಿಸಿ .6 ತಿಂಗಳು ಮೇಲ್ಪಟ್ಟ ಕುರಿಗಳಿಗೆ ಸಕರ್ಾರ ರೂ.5000 ಪರಿಹಾರ ಘೋಷಿಸಿದೆ. ಉದಾಸೀನ ಮಾಡದೆ ದಾಖಲಿಸುವುದರಿಂದ ಪರಿಹಾರದ ಮೊತ್ತ ಲಭಿಸಲಿದ್ದು ನಷ್ಟವನ್ನು ಸ್ವಲ್ಪಮಟ್ಟಿಗಾದರೂ ತುಂಬಿಕೊಳ್ಳಬಹುದು ಎಂದು ಪಶು ವೈದ್ಯಾಧೀಕಾರಿ ಕಾಂತರಾಜು ಮನವಿ ಮಾಡಿದ್ದಾರೆ.
ಜಿ.ಪಂ, ತಾ.ಪಂ. ಚುನಾವಣೆ ಬಗ್ಗೆ ಪಂಚಾಯ್ತಿ ಕಟ್ಟೆಗಳಲ್ಲಿ ಮಾತುಕತೆ
ಚಿಕ್ಕನಾಯಕನಹಳ್ಳಿ,ಡಿ.16 : ತಾಲ್ಲೂಕಿನಲ್ಲಿ ಜಿಲ್ಲಾ ಪಂಚಾಯ್ತಿ ಹಾಗೂ ತಾಲ್ಲೂಕು ಪಂಚಾಯ್ತಿ ಚುನಾವಣೆಗೆ ಮೀಸಲಾತಿ ಘೋಷಣೆಯಾಗಿದೆ ಆದರೆ ಇನ್ನು ಅಜರ್ಿ ಸಲ್ಲಿಸಲು ದಿನಾಂಕ ನಿಗಧಿಯಾಗಿಲ್ಲ, ಆದರೂ ಆಕಾಂಕ್ಷಿಗಳ ಬೆಂಬಲಿಗರು ಟೀ ಅಂಗಡಿ, ಹೋಟೆಲ್, ಪಂಚಾಯ್ತಿ ಕಟ್ಟೆ, ಅರಳೀಮರದ ಕಟ್ಟೆಗಳಲ್ಲಿ ಮಾತುಕತೆ ನಡೆಸುವ ಮೂಲಕ ಇಂತಹವರು ಸ್ಪಧರ್ಿಸಿದರೆ ಗೆಲುವು ನಿಶ್ಚಿತ ಎಂಬ ಊಹಾಪೋಹಗಳು ಮಾತುಗಳು ಬರುತ್ತಿವೆ.
ಆಯಾ ಪಕ್ಷದ ತಮ್ಮ ಬೆಂಬಲಿಗರಿಗೆ ಟಿಕೆಟ್ ನೀಡುವಂತೆ ಮೂರು ಪಕ್ಷಗಳಲ್ಲೂ ನಾಯಕರ ಮೇಲೆ ಮುಖಂಡರ ಬೆಂಬಲಿಗರು ಒತ್ತಡ ತರುತ್ತಿದ್ದಾರೆ, ಕೆಲವು ಪಕ್ಷಗಳಲ್ಲಿ ಹೊಸಬರು, ಹಳಬರು ಎಂದು ವಿಂಗಡಿಸಿ ಟಿಕೆಟ್ಗೆ ಲಾಭಿ ನಡೆಸುತ್ತಿದ್ದಾರೆ. ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಹೆಚ್ಚು ಖಚರ್ು ಮಾಡುವ ಅಭ್ಯಥರ್ಿಗಳನ್ನು ಕಣಕ್ಕಿಳಿಸಲು ಪಕ್ಷದ ನಾಯಕರು ಮುಂದಾಗುತ್ತಿದ್ದಾರೆ. ಇದರಿಂದ ಪಕ್ಷಗಳಲ್ಲಿ ನಿಷ್ಠಾವಂತ ಕಾರ್ಯಕರ್ತರು ಚುನಾವಣೆಗೆ ಸ್ಪಧರ್ಿಸಲು ಟಿಕೆಟ್ ಸಿಗದೆ ನಿರಾಸೆಯಿಂದ ಬೇರೆ ಪಕ್ಷಗಳಿಗೆ ಹೋಗಲು ಸಿದ್ದತೆ ನಡೆಸುತ್ತಿದ್ದಾರೆ.
ಕಳೆದ ಬಾರಿ ಜಿಲ್ಲಾ ಪಂಚಾಯಿತಿಗೆ ಇದ್ದ ಮೀಸಲಾತಿ ಈ ಬಾರಿ ಇಲ್ಲದೇ ಇರುವುದರಿಂದ ಚುನಾವಣೆಗೆ ತಯಾರಿ ನಡೆಸಿದ್ದ ಕೆಲವು ಆಕಾಂಕ್ಷಿ ಅಭ್ಯಥರ್ಿಗಳು ಮೀಸಲಾತಿ ಬರದೇ ನಿರಾಸೆಯಾಗಿದ್ದು ಇದರಿಂದ ಮುಂದೆ ನಡೆಯುವ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಜಿಲ್ಲಾ ಪಂಚಾಯಿತಿಯ ಕೆಲವು ಕ್ಷೇತ್ರಗಳಲ್ಲಿ ಹೊಸ ಮೀಸಲಾತಿಯಿಂದ ಎಲ್ಲಾ ಪಕ್ಷಗಳಲ್ಲೂ ಸಮರ್ಥವಾದ ಅಭ್ಯಥರ್ಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಜಿಲ್ಲಾ ಪಂಚಾಯ್ತಿಯಲ್ಲಿ ಹುಳಿಯಾರು ಸಾಮಾನ್ಯ ವರ್ಗ, ಹೊಯ್ಸಳಕಟ್ಟೆ ಅನುಸೂಚಿತ ಜಾತಿ, ಕಂದಿಕೆರೆ ಸಾಮಾನ್ಯ ಮಹಿಳೆ, ಹಂದನಕೆರೆ ಸಾಮಾನ್ಯ, ಶೆಟ್ಟಿಕೆರೆ ಹಿಂದುಳಿದ ಅ ವರ್ಗಕ್ಕೆ ಮೀಸಲಾಗಿದೆ.
ಜಿ.ಪಂ. ಚುನಾವಣೆಯಲ್ಲಿ ಸ್ಪಧರ್ಿಸಲು ಮೂರು ಪಕ್ಷಗಳ ಟಿಕೆಟ್ ಆಕಾಂಕ್ಷಿಗಳು :
ಕಂದಿಕೆರೆ ಜಿ.ಪಂ.ಕ್ಷೇತ್ರ ಸಾಮಾನ್ಯ ಮಹಿಳೆಗೆ ಮೀಸಲಿದ್ದು : ಕಾಂಗ್ರೆಸ್ ಪಕ್ಷದಿಂದ : ಶಶಿಕಲಾಸ್ವಾಮಿನಾಥ್, ಲಕ್ಷ್ಮೀದೇವಮ್ಮಸಣ್ಣಯ್ಯ, ಬಿಜೆಪಿಯಿಂದ : ತಿಮ್ಮನಹಳ್ಳಿ ಗ್ರಾ.ಪಂ.ಮಾಜಿ ಅಧ್ಯಕ್ಷೆ ಮಂಜುಳಮ್ಮ, ತಾ.ಪಂ.ಮಾಜಿ ಅಧ್ಯಕ್ಷೆ ಲತಾಕೇಶವಮೂತರ್ಿ, ಮೀನಾ ಪಾನಿಪುರಿಶ್ರೀನಿವಾಸ್, ಕಮಲಮ್ಮ ರಾಜಕುಮಾರ್, ಜೆಡಿಎಸ್ ಪಕ್ಷದಿಂದ : ಸವಿತಾಸತೀಶ್ ಸಿದ್ದನಕಟ್ಟೆ, ಕನಕಮ್ಮ ಮೋಹನ್ಕುಮಾರ್ ಅಜ್ಜಿಗುಡ್ಡೆ, ಪದ್ಮಮ್ಮಲಿಂಗರಾಜು, ಸುನಿತಾಮಂಜುನಾಥ್ ಆಕಾಂಕ್ಷಿಗಳಾಗಿದ್ದಾರೆ.
ಶೆಟ್ಟಿಕೆರೆ ಹಿಂದುಳಿದ ಅ ವರ್ಗಕ್ಕೆ ಮೀಸಲಿದ್ದು : ಕಾಂಗ್ರೆಸ್ ಪಕ್ಷದಿಂದ : ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಬಸವರಾಜು, ಮಾಜಿ ಶಾಸಕ ಬಿ.ಲಕ್ಕಪ್ಪ, ಬಿಜೆಪಿ ಪಕ್ಷದಿಂದ : ಮಾಜಿ ತಾ.ಪಂ.ಸದಸ್ಯ ಶಿವಣ್ಣ, ತಾ.ಪಂ.ಸದಸ್ಯ ಎ.ಬಿ.ರಮೇಶ್ಕುಮಾರ್, ವಕೀಲ ಶಶಿಧರ, ಜೆಡಿಎಸ್ಪಕ್ಷದಿಂದ ಬಿಜೆಪಿಗೆ ತೆರಳಿ ಆಕಾಂಕ್ಷಿಯಾದ ಸಿ.ಆರ್.ಗಿರೀಶ್, ಜೆಡಿಎಸ್ಪಕ್ಷದಿಂದ : ರಿಯಲ್ ಎಸ್ಟೇಟ್ ವ್ಯವಹಾರದ ಕಲ್ಲೇಶ್, ದಾಸೀಹಳ್ಳಿ ಗಂಗಾಧರಪ್ಪ, ಆಕಾಂಕ್ಷಿಗಳಾಗಿದ್ದಾರೆ.
ಹುಳಿಯಾರು ಸಾಮಾನ್ಯ ವರ್ಗಕ್ಕೆ ಮೀಸಲಿದ್ದು : ಕಾಂಗ್ರೆಸ್ ಪಕ್ಷದಿಂದ : ಎ.ಪಿ.ಎಂ.ಸಿ ಅಧ್ಯಕ್ಷ ವೈ.ಸಿ.ಸಿದ್ದರಾಮಯ್ಯ, ಧನುಷ್ ರಂಗನಾಥ್, ಬಿಜೆಪಿ ಪಕ್ಷ : ದಿಂದ ಮಾಜಿ ತಾ.ಪಂ.ಸದಸ್ಯ ವೈ.ಆರ್.ಮಲ್ಲಿಕಾಜರ್ುನಯ್ಯ, ಬ್ಯಾಂಕ್ ಮರುಳಪ್ಪ, ತಾ.ಪಂ.ಸದಸ್ಯ ಹೊಸಹಳ್ಳಿ ಜಯಣ್ಣ, ವಕೀಲ ರಮೇಶ್ಬಾಬು, ಹನುಮಂತಯ್ಯ, ಕೆಂಕೆರೆ ನವೀನ್, ಜೆಡಿಎಸ್ ಪಕ್ಷದಿಂದ : ಪಟಾಕಿ ಶಿವಣ್ಣ, ಪೆಟ್ರೋಲ್ ಬಂಕ್ ರೇಣುಕಪ್ಪ, ನಂದಿಹಳ್ಳಿ ಶಿವಣ್ಣ, ವಕೀಲ ಬಿ.ಕೆ.ಸದಾಶಿವು, ಜಹೀರ್ಸಾಬ್, ಶಿವನಂಜಪ್ಪ ಆಕಾಂಕ್ಷಿಗಳಾಗಿದ್ದಾರೆ.
ಹೊಯ್ಸಳಕಟ್ಟೆ ಅನುಸೂಚಿತ ಜಾತಿಗೆ ಮೀಸಲಿದ್ದು : ಕಾಂಗ್ರೆಸ್ ಪಕ್ಷದಿಂದ : ಎ.ಪಿ.ಎಂ.ಸಿ ಸದಸ್ಯ ರುದ್ರೇಶ್, ರೇವಾನಾಯ್ಕ್, ದೊಡ್ಡಬಿದರೆ ತಾಂಡ್ಯದ ವೀರಸಿಂಗ್ ಬಿಜೆಪಿಯಿಂದ : ಲಚ್ಚಾನಾಯ್ಕ, ಯರೇಹಳ್ಳಿ ಮೂತರ್ಿನಾಯ್ಕ, ದಬ್ಬಗುಂಟೆ ಗಂಗಣ್ಣ, ರಾಜಶೇಖರನಾಯ್ಕ, ಜೆಡಿಎಸ್ ಪಕ್ಷದಿಂದ : ಮಾಜಿ ಜಿ.ಪಂ.ಸದಸ್ಯ ಈರಣ್ಣ, ದಸೂಡಿ ಮರಿಯಪ್ಪ ಆಕಾಂಕ್ಷಿಗಳಾಗಿದ್ದಾರೆ.
ಹಂದನಕೆರೆ ಸಾಮಾನ್ಯ ವರ್ಗಕ್ಕೆ ಮೀಸಲಿದ್ದು : ಕಾಂಗ್ರೆಸ್ ಪಕ್ಷದಿಂದ : ಮಾಜಿ ಜಿ.ಪಂ.ಅಧ್ಯಕ್ಷ ಜಿ.ರಘುನಾಥ್, ಜೆ.ಡಿ.ಎಸ್ ಪಕ್ಷದಿಂದ : ಜಿ.ಪಂ.ಮಾಜಿ ಉಪಾಧ್ಯಕ್ಷೆ ಜಾನಮ್ಮ ಪತಿ ರಾಮಚಂದ್ರಯ್ಯ, ಬಿಜೆಪಿ ಪಕ್ಷದಿಂದ : ಕೋಡಿಹಳ್ಳಿ ಶಿವಕುಮಾರ್, ಉಪ್ಪಿನಕಟ್ಟೆ ಶಿವಕುಮಾರ್, ಕಾಂಕೆರೆ ಪರಮೇಶ್, ಮೈಸೂರಪ್ಪ, ಬರಗೂರು ಬಸವರಾಜು, ಟಿಎಪಿಸಿಎಂಎಸ್ ಅಧ್ಯಕ್ಷ ವಕೀಲ ಶ್ರೀಧರ್ ಆಕಾಂಕ್ಷಿಗಳಾಗಿದ್ದಾರೆ.
ತಾಲ್ಲೂಕಿನಲ್ಲಿ ಜಿ.ಪಂ.ಟಿಕೆಟ್ ಸಿಗದೇ ಇರುವ ಆಕಾಂಕ್ಷಿಗಳು ಮಾತ್ರ ಪಕ್ಷವನ್ನು ತೊರೆದು ಪಕ್ಷಾಂತರ ತಯಾರಿ ನಡೆಸಿದ್ದು ಇದರಿಂದ ತಾಲ್ಲೂಕಿನಲ್ಲಿ ಪಕ್ಷಾಂತರ ಪರ್ವ ಪ್ರಾರಂಭವಾಗಿದೆ.
No comments:
Post a Comment