Wednesday, December 23, 2015


ರಸ್ತೆ ಗುಂಡಿ ಮುಚ್ಚುತ್ತಿರುವುದು ಕಳಪೆಯಾಗಿದೆ ಸಾರ್ವಜನಿಕರ ಆಕ್ರೋಶ
ಚಿಕ್ಕನಾಯಕನಹಳ್ಳಿ, : ತಾಲ್ಲೂಕಿನ ಹುಳಿಯಾರಿಗೆ ಚುನಾವಣಾ ಪ್ರಚಾರಕ್ಕಾಗಿ ಡಿ.24ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಗಮಿಸುತ್ತಿರುವ ಹಿನ್ನಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಕುಂಭಕರ್ಣ ನಿದ್ದೆಯಿಂದ ಎಚ್ಚೆತ್ತು ತರಾತುರಿಯಲ್ಲಿ ಪಟ್ಟಣದಲ್ಲಿನ ಮುಖ್ಯರಸ್ತೆಯ ಗುಂಡಿಗಳನ್ನು ಮುಚ್ಚುತ್ತಿದ್ದು ಕಾಮಗಾರಿ ಕಳಪೆಯಿಂದ ಕೂಡಿದೆ ಎಂದು  ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಾಮರಾಜನಗರದಿಂದ ಕೆ.ಬಿ.ಕ್ರಾಸ್, ಚಿಕ್ಕನಾಯಕನಹಳ್ಳಿ, ಹುಳಿಯಾರು ಮಾರ್ಗವಾಗಿ ಬೀದರ್ಗೆ ತೆರಳುವ ರಾಷ್ಟ್ರೀಯ ಹೆದ್ದಾರಿ 150ಎ ರಸ್ತೆಯಲ್ಲಿ ಬರುವ ಚಿಕ್ಕನಾಯಕನಹಳ್ಳಿ ಪಟ್ಟಣದ ಮುಖ್ಯ ರಸ್ತೆ ಗುಂಡಿ ಬಿದ್ದಿದ್ದು ಕಳೆದ ತಿಂಗಳು ಡಾಂಬರು ಹಾಕಿ ಗುಂಡಿಗಳನ್ನು ಮುಚ್ಚಲಾಗಿತ್ತು ಕಳಪೆ ಕಾಮಗಾರಿಯಿಂದ ಡಾಂಬರು ಕಿತ್ತು ಹೋಗಿ ರಸ್ತೆ ಪ್ರಯಾಣಕ್ಕೆ ತೊಂದರೆಯಾಗಿತ್ತು, ಗುತ್ತಿಗೆದಾರರು ರಸ್ತೆಗೆ ಜೆಲ್ಲಿಕಲ್ಲು ಹಾಕಿ ಹದಿನೈದು ದಿನಗಳ ಹಿಂದೆ ಮುಚ್ಚಿದ್ದರು ವಾಹನ ದಟ್ಟಣೆಯಿಂದ ಜೆಲ್ಲಿಕಲ್ಲುಗಳು ಚೆಲ್ಲಾಪಿಲ್ಲಿಯಾಗಿತ್ತು,  ಪುನಹ ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆ, ಜೆಲ್ಲಿಕಲ್ಲುಗಳು ರಸ್ತೆ ತುಂಬೆಲ್ಲಾ ಬಿದ್ದಿರುವುದರಿಂದ ಸಾರ್ವಜನಿಕರಿಗೆ, ದ್ವಿಚಕ್ರ ವಾಹನ, ಭಾರಿ ವಾಹನ ಹೋಗುವಾಗ ಕಲ್ಲುಗಳು ಟೈರಿಗಳಿಗೆ ಸಿಲುಕಿ ಚಿಮ್ಮುವುದರಿಂದ ಕೆಲವರಿಗೆ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ, ಈಗ ಮುಖ್ಯಮಂತ್ರಿ ಆಗಮನ ಹಿನ್ನಲೆಯಲ್ಲಿ ರಾಜ್ಯ ಸಚಿವರು ಚಿಕ್ಕನಾಯಕನಹಳ್ಳಿ ಮೂಲಕ ಹುಳಿಯಾರಿಗೆ ತೆರಳುವುದರಿಂದ ಗುತ್ತಿಗೆದಾರರು ನಾಮಕಾವಸ್ತೆ ಡಾಂಬರು ಹಾಕಿ ರಸ್ತೆ ಗುಂಡಿಗಳನ್ನು ಮುಚ್ಚುತ್ತಿದ್ದಾರೆ ಈ ಬಗ್ಗೆ ಸಾರ್ವಜನಿಕರು ಗುತ್ತಿಗೆದಾರರನ್ನು ಪ್ರಶ್ನಿಸಿದರೆ ತಮಗೆ ಇಷ್ಟ ಬಂದಂತೆ ಗುಂಡಿಗಳನ್ನು ಮುಚ್ಚುತ್ತೇವೆ ಇದರ ಬಗ್ಗೆ ಕೇಳಲು ನಿಮಗೆ ಸಂಬಂದವೇನು ಎಂದು ಗುತ್ತಿಗೆದಾರರು ವಿಚಾರಣೆ ಮಾಡಿದ ನಾಗರೀಕರಿಗೆ ಧಮಕಿ ಹಾಕುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ಪಟ್ಟಣದ ಮುಖ್ಯರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುವ ಕಾಮಗಾರಿ ಹಗಲು ಸಮಯದಲ್ಲಿ ಮಾಡದೆ ರಾತ್ರಿ ವೇಳೆಯಲ್ಲಿ ಕಾಮಗಾರಿ ಮಾಡುತ್ತಿರುವುದರಿಂದ ಕಾಮಗಾರಿಯ ಬಗ್ಗೆ ಶಂಕೆಯಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ, ಅಧಿಕಾರಿಗಳು ಮಾತ್ರ ಡಾಂಬರೀಕರಣ ಮಾಡುವ ಸ್ಥಳಕ್ಕೆ ಬಾರದೆ ತುಮಕೂರಿನಲ್ಲಿ ಕುಳಿತೇ ದೂರವಾಣಿ ಮೂಲಕ ಗುತ್ತಿಗೆದಾರರಿಗೆ ಸೂಚನೆಗಳನ್ನು ನೀಡುತ್ತಿರುವುದು ಸಾರ್ವಜನಿಕರನ್ನು ಕೆರಳಿಸಿದೆ.


ರೈತರ ಆತ್ಮಹತ್ಯೆ ತಡೆಯುವ ಸಲುವಾಗ ಜಾಗೃತಿ ಕಾರ್ಯಕ್ರಮ 
ಚಿಕ್ಕನಾಯಕನಹಳ್ಳಿ,: ರೈತರ ಆತ್ಮಹತ್ಯೆ ತಡೆ ಜಾಗೃತಿ ಅಂಗವಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸ್ಥಬ್ಧಚಿತ್ರ ಮುಖಾಂತರ ರೈತರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಸಹಾಯಕ ಕೃಷಿ ನಿದರ್ೇಶಕ ಹೊನ್ನದಾಸೇಗೌಡ ತಿಳಿಸಿದರು.
ಪಟ್ಟಣದ ಕೃಷಿ ಇಲಾಖೆಯ ಸಂಭಾಗಣದಲ್ಲಿ ನಡೆದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ತಾಲ್ಲೂಕಿನಲ್ಲಿ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು ಅವರ ಕುಟುಂಬದವರಿಗೆ ಪರಿಹಾರ ನೀಡಿದ್ದೇವೆ ಹಾಗೂ ಎರಡು ಸಾವಿರ ಮಾಶಾಸನ ನೀಡಲು ಸಕರ್ಾರ ಆದೇಶಿಸಿದೆ ಎಂದರು.  
ರಾಜ್ಯ ರೈತ ಸಂಘದ ಕೆಂಕೆರೆ ಸತೀಶ್ ಮಾತನಾಡಿ, ರೈತರು ಕೃಷಿ ಮಾಡಿ ಒಳ್ಳೆಯ ಬೆಳೆ ಬಂದಾಗ ಖುಷಿ ಪಡುತ್ತಾರೆ ಆದರೆ ಮಾರುಕಟ್ಟೆಗೆ ತಮ್ಮ ಬೆಳೆ ಮಾರಲು ಹೋದಾಗ ತಾವು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ರೈತರ ಕಣ್ಣಿನಲ್ಲಿ ನೀರು ಬರುತ್ತದೆ ಎಂದು ವಿಷಾದಿಸಿದರು. 
ರೈತ ಸಂಘದ ಜಿಲ್ಲಾ ಕಾರ್ಯದಶರ್ಿ ತಿಮ್ಲಾಪುರ ಶಂಕರಪ್ಪ ಮಾತನಾಡಿ ರೈತರಲ್ಲಿ ಇಚ್ಛಾಶಕ್ತಿ ಕೊರತೆಯಿಂದಲೇ ಸಕರ್ಾರಗಳು ರೈತರ ಬಗ್ಗೆ ಕಾಳಜಿ ತೋರುತ್ತಿಲ್ಲ, ಸಕರ್ಾರ ಹಾಗೂ ರಾಜಕಾರಣಿಗಳು ರೈತ ದೇಶದ ಬೆನ್ನೆಲುಬು ಎಂದು ಹೇಳುತ್ತಾರೆಯೇ ಹೊರತು ರೈತರ ಅಭಿವೃದ್ದಿಗೆ ಯಾವುದೇ ಸೌಲಭ್ಯಗಳನ್ನು ನೀಡುತ್ತಿಲ್ಲ ಎಂದರಲ್ಲದೆ ತಾಲ್ಲೂಕಿನ ಹೇಮಾವತಿ ನಾಲೆಯಿಂದ 26 ಕೆರೆಗಳಿಗೆ ನೀರು ಹರಿಸುವ ಯೋಜನೆಗೆ ಹಣ ಬಿಡುಗಡೆ ಮಾಡಿದ್ದರೂ ಸಹ ಕಾಮಗಾರಿ ಕುಂಟುತ್ತ ಸಾಗಿ ಸ್ಥಗಿತಗೊಂಡಿದೆ ಆದರೆ ರಾಜಕಾರಣಿಗಳು ಮಾತ್ರ ಕಾಮಗಾರಿ ನಡೆಯುತ್ತಿದೆ ಎಂದು ಸುಳ್ಳು ಹೇಳಿ ವಂಚಿಸುತ್ತಿದ್ದಾರೆ ಎಂದರು.
ಕಾಖರ್ಾನೆಗಳು ತಯಾರಿಸಿದ ಪದಾರ್ಥಗಳಿಗೆ ತಾವೇ ಬೆಲೆ ಕಟ್ಟುತ್ತಾರೆ ಆದರೆ ರೈತರು ತಾವು ಬೆಳೆದ ಬೆಳೆಗಳಿಗೆ ಬೆಲೆ ಕಟ್ಟಲಾಗದೆ ಸಕರ್ಾರಗಳು ನಿಗದಿ ಪಡಿಸಿದ ಬೆಲೆಗಳಿಗೆ ಮಾರಬೇಕಾಗಿದೆ ಎಂದು ವಿಷಾಧಿಸಿದ ಅವರು ಸ್ವಾತಂತ್ರ್ಯ ಬಂದು 60ವರ್ಷ ಕಳೆದರು ಕೇಂದ್ರ ಹಾಗೂ ರಾಜ್ಯ ಸಕರ್ಾರಗಳು ರೈತರಿಗೆ ಬೆಂಬಲ ಬೆಲೆ ನಿಗದಿ ಪಡಿಸದೇ ಅನ್ಯಾಯ ಮಾಡುತ್ತಿವೆ ಇದರಿಂದ ರೈತರು ಪಟ್ಟಣಗಳಿಗೆ ವಲಸೇ ಹೋಗುತ್ತಿದ್ದಾರೆ ಇದನ್ನು ತಡೆಗಟ್ಟಲು ಸಕರ್ಾರಗಳು ಮುಂದಾದರೇ ಮಾತ್ರ  ಗುಳೇ ಹೋಗುವುದು ತಪ್ಪಿಸಬಹುದು ಎಂದರು. 
ರೈತರು ದೇಶದ ಮಾಲೀಕರು ಅನ್ನದಾತ ಎಂದೆಲ್ಲಾ ಹೊಗಳುತ್ತಾರೆ ರೈತರಿಗೆ ಯಾವುದೇ ಸವಲತ್ತು ನೀಡುತ್ತಿಲ್ಲ ಇದರಿಂದ ರೈತರು ಸಾಲಗಾರರಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ರೈತರ ದಿನಾಚಾರಣೆಯನ್ನು ತಾಲ್ಲೂಕು ಮಟ್ಟದಲ್ಲಿ ಮಾಡದೇ ಹಳ್ಳಿ ಹಳ್ಳಿಗಳಲ್ಲೂ ಮಾಡುವ ಮೂಲಕ ರೈತರಲ್ಲಿ ಆತ್ಮಸ್ಥೈರ್ಯ ತುಂಬಿ ಜಾಗೃತಿ ಮೂಡಿಸುವಂತೆ ಸಲಹೆ ನೀಡಿದರೆ ರೈತರು ಸಹಕಾರ ನೀಡುತ್ತಾರೆ ಎಂದರು.
ಕೃಷಿಕ ಸಮಾಜದ ಕಾರ್ಯದಶರ್ಿ ಶಂಕರಪ್ಪ ಮಾತನಾಡಿ, ರಾಜಕಾರಣಿಗಳು ಚುನಾವಣೆಗಳು ಬಂದಾಗ ರೈತರ ಮನೆಗೆ ಬಂದು ಹೋಗುತ್ತಾರೆಯೇ ವಿನಹ ಗೆದ್ದ ನಂತರ ಹಳ್ಳಿಗಳ ಕಡೆ ತಿರುಗಿಯೂ ನೋಡುವುದಿಲ್ಲ, ರೈತರು, ಗೆದ್ದ ಪ್ರತಿನಿಧಿಗಳನ್ನು ಹುಡುಕಿಕೊಂಡು ಹೋಗುವ ಬದಲು ಅವರೇ ರೈತರನ್ನು ಹುಡುಕಿಕೊಂಡು ಬರುವಂತೆ ಮಾಡಿದರೆ ರೈತರಿಗೆ ಬೆಲೆ ಬರುತ್ತದೆ, ತಾಲ್ಲೂಕು ಕೃಷಿಕ ಸಮಾಜಕ್ಕೆ ಹದಿನೆಂಟು ಸಕರ್ಾರಿ ಇಲಾಖೆಗಳನ್ನು ಪ್ರಶ್ನಿಸುವ ಹಕ್ಕಿದೆ ಆದರೆ ರೈತರಿಗೆ ಅಧಿಕಾರ ಚಲಾಯಿಸಲು ಬರುತ್ತಿಲ್ಲ ಎಲ್ಲಾ ರೈತರು ಒಗ್ಗಟ್ಟಾದರೆ ಮಾತ್ರ ಅಧಿಕಾರಿಗಳನ್ನು ಪ್ರಶ್ನಿಸಬಹುದು ಎಂದರು.
ತಾಲ್ಲೂಕು ರೈತ ಸಂಘದ ಅಧ್ಯಕ್ಷ ಲೋಕೇಶಪ್ಪ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ನಮ್ಮದು ರೈತರ ಸಕರ್ಾರ, ಗ್ರಾಮೀಣ ಜನರ ಪರ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ನಂತರ ರೈತರ ಮೇಲೆ ಪ್ರಮಾಣವಚನ ಸ್ವೀಕರಿಸುತ್ತಾರೆ ಆದರೆ ರಾಜಕಾರಣಿಗಳು ಅಧಿಕಾರ ಬಂದ ತಕ್ಷಣ ರೈತರನ್ನು ಕಡೆಗಣಿಸುತ್ತಾರೆ, ಈ ವರ್ಷ ಮಳೆ ಹೆಚ್ಚಾಗಿ ರೈತರು ಬೆಳೆದ ರಾಗಿ, ನವಣೆ, ಸಾವೆ ಬೆಳೆಗಳು ಮಣ್ಣು ಪಾಲಾಗಿದ್ದು ಇದರ ಬಗ್ಗೆ ಅಧಿಕಾರಿಗಳು ಸರಿಯಾದ ಮಾಹಿತಿ ನೀಡಿ ರೈತರಿಗೆ ಬೆಳೆ ವಿಮೆ ಬರುವಂತೆ ನೋಡಿಕೊಳ್ಳಬೇಕು ಎಂದರಲ್ಲದೆ ರೈತ ಸಂಘದ ಮೂಲಕ ತಾಲ್ಲೂಕು ಕಛೇರಿ ಬಳಿ ಹನ್ನೊಂದು ದಿನಗಳ ಕಾಲ ಅಹೋರಾತ್ರಿ ಧರಣಿ ನಡೆಸಿ ತಾಲ್ಲೂಕಿಗೆ ಹೇಮಾವತಿ ನಾಲೆಯಿಂದ ನೀರು ಹರಿಸುವ ಕಾಮಗಾರಿ ಪ್ರಾರಂಭಿಸಲು ಒತ್ತಾಯಿಸಿದರೂ ಸಾವಿರಾರು ಸಂಖ್ಯೆಯಲ್ಲಿ ಬರಬೇಕಾದ ರೈತರು ಕೇವಲ ಬೆರಳಣಿಕಯಷ್ಟೇ ಬಂದರು ಈಗಾದರೇ ರೈತರಿಗೆ ನ್ಯಾಯ ದೊರಕುವುದೇ ಎಂದು ಪ್ರಶ್ನಿಸಿದರು.
ಕಾರ್ಯಕ್ರಮದಲ್ಲಿ ರೈತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.




No comments:

Post a Comment