Monday, February 29, 2016


ಖಾಸಗಿ ಕಂಪನಿಗಳ ಒತ್ತಡಕ್ಕಾಗಿ ಫಲಪುಷ್ಪ ಪ್ರದರ್ಶನ ಮಾಡಲು ಲಕ್ಷಾಂತರ ರೂಪಾಯಿ ಖಚರ್ು ಮಾಡುತ್ತಿರುವುದನ್ನು ತೆಂಗು ಬೆಳೆಗಾರರ ಸಂಘದ ಸಂಚಾಲಕ ಅಣೆಕಟ್ಟೆ ವಿಶ್ವನಾಥ್ ಖಂಡನೆ.
ಚಿಕ್ಕನಾಯಕನಹಳ್ಳಿ:  ಕಲ್ಪತರು ನಾಡು ಎಂದು ಕರೆಸಿಕೊಳ್ಳುವ ಈ ಜಿಲ್ಲೆಯಲ್ಲಿ ತೆಂಗು ಬೆಳೆಗಾರರ ಅತ್ಯಧಿಕವಾಗಿದ್ದಾರೆ, ಅವರ ಸ್ಥಿತಿ ಇಂದು  ಚಿಂತಾಜನಕವಾಗಿದೆ,  ಇಂತಹ ಸ್ಥಿತಿಯಲ್ಲಿ ಜಿಲ್ಲಾಡಳಿತ ಖಾಸಗಿ ಕಂಪನಿಗಳ ಒತ್ತಡಕ್ಕೆ ಮಣಿದು ಜಿಲ್ಲಾ ಕೇಂದ್ರದಲ್ಲಿ ಫಲ ಪುಷ್ಪ ಪ್ರದರ್ಶನಕ್ಕಾಗಿ ಲಕ್ಷಾಂತರ ರೂಪಾಯಿಗಳನ್ನು ಖಚರ್ು ಮಾಡುತ್ತಿರುವುದನ್ನು ಖಂಡಿಸುತ್ತಿದ್ದೇವೆ  ಎಂದು ಕನರ್ಾಟಕ ತೆಂಗು ಉತ್ಪಾದಕರ ಕಂಪನಿಗಳ ಸಮನ್ವಯ ಸಮಿತಿಯ ರಾಜ್ಯ ಸಂಚಾಲಕ ಅಣೆಕಟ್ಟೆ ವಿಶ್ವನಾಥ್  ಹೇಳಿದ್ದಾರೆ.
ತೆಂಗು ಬೆಳೆಗಾರರ ಸ್ಥಿತಿ ಇಂದು ಚಿಂತಾಜನಕವಾಗಿದೆ. ಇಪ್ಪತ್ತು ಸಾವಿರ ಗಡಿ ದಾಟಿದ್ದ ಕೊಬ್ಬರಿ ಬೆಲೆ 8 ಸಾವಿರ ತಲುಪಿದೆ. ತಿಪಟೂರಿನಲ್ಲಿ ಪ್ರಾರಂಭವಾದ ಆನ್ ಲೈನ್ ಮಾರುಕಟ್ಟೆ ವ್ಯವಸ್ಥೆಯು ಮಧ್ಯವತರ್ಿಗಳ ಲಾಬಿಯಿಂದ ನಿಂತು ಹೋಯಿತು. ರೈತರ ಉತ್ಪನ್ನಗಳಿಗೆ ಬೆಲೆ ತಂದುಕೊಡಲು ಜಿಲ್ಲೆಯಲ್ಲಿ ಪ್ರಾರಂಭವಾಗಿರುವ ತೆಂಗು ಉತ್ಪಾದಕರ ಕಂಪನಿ ಮತ್ತು ಒಕ್ಕೂಟಗಳು ಸಕರ್ಾರದ ಬೆಂಬಲವಿಲ್ಲದೆ ಸೊರಗುತ್ತಿವೆ. ತೆಂಗು ಬೆಳೆಯುವ ಅನೇಕ ಮಳೆ ಆಶ್ರಿತ ಪ್ರದೇಶದಲ್ಲಿ ಬೋರುಗಳಲ್ಲಿ ನೀರು ಬರುತ್ತಿಲ್ಲ. ಇತ್ಯಾದಿ ಇನ್ನೂ ಅನೇಕ ಸಮಸ್ಯೆಗಳ ಕಾರಣದಿಂದಲೇ ರೈತರು ಆತ್ಮಹತ್ಯೆಯ ಹಂತ ತಲುಪಿದ್ದಾನೆ.
ಇಂತಹ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆ ತುಮಕೂರು. ಜಿಲ್ಲಾ ಕೇಂದ್ರದಲ್ಲಿ ಫಲ ಪುಷ್ಪ ಪ್ರದರ್ಶನಕ್ಕಾಗಿ ಲಕ್ಷಾಂತರ ರೂಪಾಯಿಗಳನ್ನು ಖಚರ್ು ಮಾಡುತ್ತಿರುವುದನ್ನು ಖಂಡಿಸುತ್ತಿದ್ದೇವೆ    ಕಾರಣವಿಷ್ಟೆ,  ಹೊಟ್ಟೆಗೆ ಹಿಟ್ಟಿಲ್ಲದಿರುವಾಗ ಜುಟ್ಟಿಗೆ ಮಲ್ಲಿಗೆ ಹೂವಿನಂತೆ , ಈ ಫಲ ಪುಷ್ಟ ಪ್ರದರ್ಶನ ನಡೆಯುತ್ತಿದೆ. ಫಲ ಪುಷ್ಟ ಪ್ರದರ್ಶನವು ನಮ್ಮ ಜಿಲ್ಲೆಗೆ ಒಂದು ಅನಾವಶ್ಯಕ ಕಾರ್ಯಕ್ರಮ.  ತುಮಕೂರು ಜಿಲ್ಲೆಯು ಇಡೀ ಭಾರತದಲ್ಲಿಯೇ ಹೆಚ್ಚು ತೆಂಗು ಬೆಳೆಯುತ್ತಿರುವ ಜಿಲ್ಲೆ. ಕನರ್ಾಟಕ ರಾಜ್ಯದ ಶೇ. 25ರಷ್ಟು ತೆಂಗು ತುಮಕೂರು ಜಿಲ್ಲೆಯಲ್ಲೇ ಬೆಳೆಯಲಾಗುತ್ತಿದೆ. ಇಲ್ಲಿ ಯಾವುದೇ ಹಣ್ಣಿನ ಮತ್ತು ಪುಷ್ಟಗಳ ಬೆಳೆ ಬೆಳೆಯುತ್ತಿಲ್ಲ. ಇಲ್ಲಿನ ತೆಂಗು ಬೆಳೆಗಾರರಿಗೆ ಅನುಕೂಲವಾಗಲಿ ಎಂಬ ದೃಷ್ಠಿಯಿಂದ ಇಲ್ಲಿ ತೆಂಗಿನ ಮೇಳವನ್ನು, ಕೊಬ್ಬರಿ ಮೇಳವನ್ನು, ಮಿಠಾಯಿ ಮೇಳವನ್ನು, ಎಳನೀರು ಮೇಳವನ್ನು ಹಮ್ಮಿಕೊಳ್ಳಬೇಕು.
ಅಷ್ಟಕ್ಕೂ ಫಲಪುಷ್ಟ ಪ್ರದರ್ಶನವು ದುಡ್ಡಿರುವವರು ನೋಡಲಿಕ್ಕಾಗಿ ನಡೆಸುವ ಫಲ ಪುಷ್ಪ ಮಾರಾಟ ಮಾಡುವ ಬೃಹತ್ ಖಾಸಗಿ ಕಂಪನಿಗಳ ಲಾಬಿ. ಇದರಿಂದ ರೈತರಿಗೆ ಯಾವುದೇ ಅನುಕೂಲಗಳಿಲ್ಲ. ರೈತರ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಹಣವನ್ನು ಪೋಲು ಮಾಡಲಾಗುತ್ತಿದೆ. ವಿಶ್ವ ತೆಂಗು ದಿನಾಚರಣೆಯಂತಹ ತೆಂಗಿನ ಮಹತ್ವ ಸಾರುವ ಆ ಮೂಲಕ ರೈತರ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಕಾರ್ಯಕ್ರಮಗಳಲ್ಲಿ ತೋಟಗಾರಿಕೆ ಭಾಗವಹಿಸಲೇ ಇಲ್ಲ. ಇದು ಇಲಾಖೆಯ ಅನುಮಾನ ಹುಟ್ಟಿಸುವ ನಡೆಯಾಗಿದೆ,   ತೋಟಗಾರಿಕಾ ಇಲಾಖೆಯು ರೈತಪರವಾಗಿ ನಿಲ್ಲದೇ ಹೋದರೆ ಹೋರಾಟ ಮುಂದುವರೆಯುತ್ತದೆ. ಎಂದು ವಿಶ್ವನಾಥ್ ಕಿಡಿಕಾರಿದ್ದಾರೆ.




No comments:

Post a Comment