Wednesday, March 2, 2016


ಕಂದಾಯ ಇಲಾಖೆ ನೌಕರರಿಂದ ಕಪ್ಪುಪಟ್ಟಿ ಧರಸಿ ಪ್ರತಿಭಟನೆ.
ಚಿಕ್ಕನಾಯಕನಹಳ್ಳಿ,ಮಾ.02 : ಗ್ರಾಮೀಣ ಅಭಿವೃದ್ದಿ ಇಲಾಖೆ ಅಧಿಕಾರಿಗಳನ್ನು ಕಂದಾಯ ಇಲಾಖೆಗೆ ಖಾಯಂ ಆಗಿ ವಿಲೀನಗೊಳಿಸುವ ಪ್ರಕ್ರಿಯೆಯನ್ನು ನಿಲ್ಲಿಸಿ, ಇಲಾಖೆಯಲ್ಲಿಯೇ 20-25 ವರ್ಷಗಳ ಕಾಲ ಪದೋನ್ನತಿ ಹೊಂದದೇ ಇರುವ ಮೂಲ ಕಂದಾಯ ಇಲಾಖೆಯ ನೌಕರರಿಗೆ ಪದೋನ್ನತಿಯ ಅವಕಾಶಗಳನ್ನು ನೀಡುವಂತೆ ಒತ್ತಾಯಿಸಿ ತಾಲ್ಲೂಕು ಕಂದಾಯ ಇಲಾಖೆ ನೌಕರರು ಉಪವಿಭಾಗಾಧಿಕಾರಿ ಪ್ರಜ್ಞಾಅಮ್ಮೆಂಬಳ್ಳಾ ರವರಿಗೆ ಮನವಿ ಪತ್ರ ಸಲ್ಲಿಸಿದರು.
ತಾಲ್ಲೂಕಿನ ಕಂದಾಯ ಇಲಾಖೆ ನೌಕರರು ಗ್ರಾಮೀಣ ಇಲಾಖೆಯ ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳನಸ್ನು ಕಂದಾಯ ಇಲಾಖೆಯ ಶಿರಸ್ತೆದಾರ್/ಉಪತಹಶೀಲ್ದಾರ್ ವೃಂದದಲ್ಲಿ ವಿಲೀನಗೊಳಿಸುವ ಪ್ರಕ್ರಿಯೆಯನ್ನು ನಿಲ್ಲಿಸಲು ಆಗ್ರಹಿಸಿ ಕಪ್ಪುಪಟ್ಟಿ ಧರಿಸಿ ಮುಷ್ಕರ ನಡೆಸಿ ಕರ್ತವ್ಯದಲ್ಲಿ ಪಾಲ್ಗೊಂಡಿದ್ದರು.
ಗ್ರಾಮೀಣಾಭಿವೃದ್ದಿ ಇಲಾಖೆಯ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳನ್ನು 1977ರ ನಿಯಮ 16ರ ಅಡಿ ಖಾಯಂ ಆಗಿ ಕಂದಾಯ ಇಲಾಖೆಯಲ್ಲಿ ವಿಲೀನಗೊಳಿಸಿ ಆದೇಶ ಹೊರಡಿಸಲಾಗಿದೆ, ಈ ಪ್ರಕ್ರಿಯೆಯಿಂದಾಗಿ ಕಂದಾಯ ಇಲಾಖೆಯ ಮೂಲ ನೌಕರರಿಗೆ ಅನ್ಯಾಯವಾಗುತ್ತಿದೆ, ಇದರಿಂದಾಗಿ ಕಂದಾಯ ಇಲಾಖೆಯ ನೌಕರರಿಗೆ ಪದೋನ್ನತಿ ಹೊಂದುವ ಅವಕಾಶಗಳು ಕೈತಪ್ಪುವ ಸಾಧ್ಯತೆ ಇದೆ ಹಾಗೂ ಗ್ರಾಮೀಣಾಭಿವೃದ್ದಿ ಇಲಾಖೆಯಲ್ಲಿ ಪ್ರತಿ ಪಂಚಾಯಿತಿಗೆ ಒಂದರಂತೆ ಪಂಚಾಯತ್ ಅಭಿವೃದ್ದಿ ಅಧಿಕಾರಿ ಹುದ್ದೆಗಳನ್ನು ಸೃಜಿಸಲಾಗಿದ್ದು ಇದರಿಂದಾಗಿ ರಾಜ್ಯದಲ್ಲಿ 5629 ಪಂಚಾಯತ್ ಅಭಿವೃದ್ದಿ ಅಧಿಕಾರಿಗಳ ಹುದ್ದೆ ಇವೆ, ಈ  ಪೈಕಿ 1048 ಹುದ್ದೆಗಳು ಖಾಲಿಯಿವೆ ಮತ್ತು ಗ್ರಾಮೀಣಾಭಿವೃದ್ದಿ ಇಲಾಖೆಯಲ್ಲಿ ಸಾಕಷ್ಟು ಪಿಡಿಓ ಖಾಲಿ ಹುದ್ದೆಗಳು ಇದ್ದರೂ ಸಹ ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳು ಕಂದಾಯ ಇಲಾಖೆಯಲ್ಲಿ ವಿಲೀನಗೊಂಡಲ್ಲಿ ಕಡಿಮೆ ಸಂಖ್ಯೆಯಲ್ಲಿರುವ ಕಂದಾಯ ಇಲಾಖೆಯ ಸಿಬ್ಬಂದಿಗಳು ಪದೋನ್ನತಿ ಅವಕಾಶಗಳಿಂದ ವಂಚಿತರಾಗುವುದರ ಜೊತಗೆ ಮಾನಸಿಕವಾಗಿಯೂ ಕುಗ್ಗಲಿದ್ದಾರೆ ಆದ್ದರಿಂದ ವಿಲೀನಗೊಳಿಸುವ ಪ್ರಕ್ರಿಯೆಯನ್ನು ನಿಲ್ಲಿಸುವಂತೆ ತಮ್ಮ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ತಾಲ್ಲೂಕು ಶಿರಸ್ತೆದಾರ್ ನಾಗೇಂದ್ರಪ್ಪ, ನೌಕರರಾದ ವನಜಾಕ್ಷಿ, ಅಂಬುಜಾಕ್ಷಿ, ಗಂಗಾಧರ್, ರವಿಕುಮಾರ್, ಈರಣ್ಣ, ಅಜಯ್, ರಮೇಶ್, ಪ್ರತಾಪ್, ಮಧು, ಡಿ.ನಾಗರಾಜು, ಎಂ.ಎಸ್.ರಾಜಶೇಖರ್, ಈಶ್ವರಾಚಾರ್ ಮತ್ತಿತರರು ಉಪಸ್ಥಿತರಿದ್ದರು.

ಅಂಗನವಾಡಿ ನೌಕರರ ಪ್ರತಿಭಟನೆ
ಚಿಕ್ಕನಾಯಕನಹಳ್ಳಿ,ಮಾ.02 :   ಬಜೆಟ್ನಲ್ಲಿ ಅಂಗನವಾಡಿ ನೌಕರರಿಗೆ ಕನಿಷ್ಠ ಕೂಲಿ ಮತ್ತು ಅನುದಾನದಲ್ಲಿ ಯಾವುದೇ ಹೆಚ್ಚಳ ಮಾಡದಿರುವುದನ್ನು ವಿರೋಧಿಸಿ ಕಸಬಾ ಹೋಬಳಿಯ ಅಂಗನವಾಡಿ ಕಾರ್ಯಕತರ್ೆಯರು  ಪ್ರತಿಭಟನೆ ನಡೆಸಿದರು.
ಪಟ್ಟಣದ ತಾಲ್ಲೂಕು ಕಛೇರಿಯ ಮುಂಭಾಗದಲ್ಲಿ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹಾಗೂ ಕೇಂಧ್ರ ಬಜೆಟ್ನಲ್ಲಿ ಅಂಗನವಾಡಿ ಕಾರ್ಯಕತರ್ೆಯರ ಸೇವಾ ಭದ್ರತೆ ಅಥವಾ ಸಂಬಳದ ಬಗ್ಗೆ  ಗಮನ ಹರಿಸಿಲ್ಲ ಎಂದು ಆಗ್ರಹಿಸಿ ಪ್ರತಿಭಟಿಸಿದರು.
ಅಂಗನವಾಡಿ ಕಾರ್ಯಕತರ್ೆ ರಾಜಮ್ಮ ಮಾತನಾಡಿ 1975ರಲ್ಲಿ ಪ್ರಾರಂಭವಾದ ಐಸಿಡಿಎಸ್, ಮಕ್ಕಳ ಹಾಗೂ ಮಹಿಳೆಯರ ಸಮಗ್ರ ಅಭಿವೃದ್ದಿಗಾಗಿ ಶ್ರಮಿಸುತ್ತಿದ್ದು ಕೇಂದ್ರ ಸಕರ್ಾರ 50% ಅನುದಾನ ಕಡಿತ ಮಾಡಿದೆ, ರಾಜ್ಯಕ್ಕೆ 137 ಕೋಟಿ 54 ಲಕ್ಷ 86ಸಾವಿರದಲ್ಲಿ ಸುಮಾರು 700 ಕೋಟಿ ಹಣ ಕಡಿತವಾಗಿದೆ, ಇದರಿಂದ  ಯೋಜನೆಯ ಮೇಲೆ ಈಗಾಗಲೇ ಕರಿನೆರಳು ಬೀರಲು ಪ್ರಾರಂಭವಾಗುತ್ತಿದೆ ಎಂದರಲ್ಲದೆ,  ಇದೊಂದು ಪ್ರತ್ಯೇಕ ಇಲಾಖೆ ಅಲ್ಲದ್ದರಿಂದ ಹಲವಾರು ಆಡಳಿತಾತ್ಮಕ ಸಮಸ್ಯೆಗಳಿಂದ ಬಳಲುತ್ತಿದೆ ಅನುದಾನ ಕಡಿತವೂ ಮತ್ತೋಂದು ಗಂಭೀರ ಸಮಸ್ಯೆಗೆ ಕಾರಣವಾಗುತ್ತಿದೆ ಎಂದರು.  ರಾಜ್ಯದಲ್ಲಿ ಸುಮಾರು 58 ಲಕ್ಷ ಫಲಾನುಭವಿಗಳಿದ್ದಾರೆ ಅವರಲ್ಲಿ 23.35% ಅಪೌಷ್ಠಿಕತೆ ಇರುವ ಮಕ್ಕಳು 914 ರಿಂದ 917 ಲಿಂಗ ತಾರತಮ್ಯವಿದೆ ದೊಡ್ಡ ಪ್ರಮಾಣದ ಮಹಿಳೆಯರ ಅಪೌಷ್ಠಿಕತೆಯೂ ಇದೆ ಇಂತಹ ಸಮಸ್ಯೆಗಳನ್ನೊಳಗೊಂಡಿರುವ ಇಲಾಖೆಯ ಕಾರ್ಯಕತರ್ೆಯರಿಗೆ ಯಾವುದೇ ಸವವಲತ್ತುಗಳನ್ನು ನೀಡದೇ ಇರುವುದು ಖಂಡನೀಯವಾಗಿದೆ ಅದ್ದರಿಂದ ರಾಜ್ಯ ಸಕರ್ಾರವಾದರೂ ನಮಗೆ ಅಗತ್ಯವಿರುವಂತಹ ಕನಿಷ್ಠ ಕೂಲಿ ಹಾಗೂ ಅನುದಾನ ಹೆಚ್ಚಳ ಮಾಡಬೇಕೆಂದು ತಿಳಿಸಿದರು.
ಅಂಗನವಾಡಿ ಕಾರ್ಯಕತರ್ೆ ಸಿ.ಆರ್.ತುಳಸಿ ಮಾತನಾಡಿ, ಐಸಿಡಿಎಸ್ ಯೋಜನೆಯ ಭಾಗವಾಗಿ ಅಂಗನವಾಡಿ ನೌಕರರ ಪರಿಸ್ಥಿತಿಯನ್ನು ಪರಿಗಣಿಸಿ ಕೇಂದ್ರ ಸಕರ್ಾರ 1500 ರಿಂದ 3000ರೂಗಳಿಗೆ ಅಂಗನವಾಡಿ ನೌಕರರನ್ನು ದುಡಿಸುತ್ತಿದೆ, ಇದರೊಂದಿಗೆ ಯಾವುದೇ ಸವಲತ್ತುಗಳನ್ನು ನೀಡುತ್ತಿಲ್ಲ ರಾಜ್ಯಸಕರ್ಾರದ ಮೇಲೆ ಜವಾಬ್ದಾರಿಯನ್ನು ಹೊರಿಸಿದ್ದು 40 ವರ್ಷಗಳ ಸೇವೆಯನ್ನು ಪೂರೈಸಿದ್ದರು ಯಾವುದೇ ನಿವೃತ್ತಿ ಸೌಲಭ್ಯವನ್ನು ನೀಡಿಲ್ಲ, 2011 ರಿಂದ ಗೌರವ ಧನವನ್ನು ಹೆಚ್ಚಳ ಮಾಡಿಲ್ಲ ಅಂಗನವಾಡಿ ಕಾರ್ಯಕತರ್ೆಯರ ಆರೋಗ್ಯದ ಬಗ್ಗೆ ಯಾವುದೇ ಯೋಜನೆಯನ್ನು ರೂಪಿಸಿಲ್ಲ ಈ ಬಗ್ಗೆ ಫೆ.15ರಂದು ಹೋರಾಟ ನಡೆಸಿ ಹಣಕಾಸು ಸಚಿವರಿಗೆ ಮನವಿಯನ್ನು ಸಹ ನೀಡಿದೆ ಆದರೂ ಈ ಬಜೆಟ್ನಲ್ಲಿ  ಕನಿಷ್ಠ ಕೂಲಿ ಮತ್ತು ಅನುದಾನವನ್ನು ಹೆಚ್ಚಳ ಮಾಡಿಲ್ಲ ಅದ್ದರಿಂದ ಸಕರ್ಾರಗಳು ಈ ಬಗ್ಗೆ ಗಮನ ಹರಿಸಿ ಸೌಲಭ್ಯಗಳನ್ನು ನೀಡುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಅಂಗನವಾಡಿ ಕಾರ್ಯಕತರ್ೆಯರಾದ ವೀಣಾ, ಜಯಮ್ಮ, ಸಿ.ಕೆ.ನಾಗಮ್ಮ, ಸಾವಿತ್ರಮ್ಮ, ಮೆಹಬೂಬಿ ಬಾನು, ನಾಗರತ್ನಮ್ಮ, ಬಿ.ಎಲ್.ಮಾಲತಿ, ಹೆಚ್.ಎನ್.ಜಯಲಕ್ಷ್ಮಮ್ಮ, ವರಲಕ್ಷ್ಮಿ, ಅಂಬಿಕಾ, ಲಕ್ಷ್ಮೀದೇವಮ್ಮ ಸೇರಿದಂತೆ ಹಲವಾರು ಕಾರ್ಯಕತರ್ೆಯರು ಭಾಗವಹಿಸಿದ್ದರು. ಗ್ರೇಡ್-2 ತಹಸೀಲ್ದಾರ್ ಚಂಧ್ರಕುಮಾರ್ ಮನವಿಯನ್ನು ಸ್ವಿಕರಿಸಿದರು
.
ನವೋದಯ ಶಾಲಾ ವಿದ್ಯಾಥರ್ಿನಿಗೆ ಸರ್.ಸಿ.ವಿ.ರಾಮನ್ 


                                       
ಪ್ರಶಸ್ತಿ

ಚಿಕ್ಕನಾಯಕನಹಳ್ಳಿ,ಮಾ.02 : ತಾಲ್ಲೂಕಿನ ಬೋರನ ಕಣಿವೆ ಪ್ರೌಢಶಾಲೆಯಲ್ಲಿ ಇತ್ತಿಚೇಗೆ ನಡೆದ ವಿಜ್ಞಾನ ರಸಪ್ರೇಶ್ನೆ ಸ್ಫಧರ್ೇಯಲ್ಲಿ ಭಾಗವಹಿಸಿ 2015-16ನೇ ಸಾಲಿನ ಸರ್.ಸಿ.ವಿ.ರಾಮನ್ ಪ್ರಶಸ್ತಿಯನ್ನು  ಪಟ್ಟಣದ ನವೋದಯ ಪ್ರೌಢಶಾಲೆಯ 9ನೇ ತರಗತಿಯ ಪೂಜಾ ಎಸ್. ಆರ್. ಇವರು ಪಡೆದು ಶಾಲೆಗೆ ಕೀತರ್ಿ ತಂದಿದ್ದು ಶಾಲೆ ಆಡಳಿತ ಮಂಡಳಿ ಅಧ್ಯಕ್ಷ ಜೆ.ಸಿ.ಮಾಧುಸ್ವಾಮಿ, ಮುಖ್ಯೋಪಾದ್ಯಾಯಿನಿ ಸುಧಾ ಸೇರಿಂದತೆ ಶಿಕ್ಷಕರು ಹಾಗೂ ಶಾಲೆಯ ಸಿಬ್ಬಂದಿ ಇವರಿಗೆ ಶುಭ ಕೋರಿದ್ದಾರೆ.
.

ಎನ್.ಆರ್.ಸಿಮೆಂಟ್ ಕಾಖರ್ಾನೆಯ ಮುಂದೆ ಸುತ್ತಮುತ್ತಲಿನ ಗ್ರಾಮಸ್ಥರ ಪ್ರತಿಭಟನೆ
ಚಿಕ್ಕನಾಯಕನಹಳ್ಳಿ,ಮಾ.02: ತಾಲ್ಲೂಕಿನ ಮುದ್ದೇನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಇರುವ ಬಿ.ಹೆಚ್.ರಸ್ತೆಯ ಕನಕನಗರದ ಎನ್.ಆರ್ ಸಿಮೆಂಟ್ ಕಾಖರ್ಾನೆಯಿಂದ ಬರುವ ಧೂಳಿನಿಂದ ಪರಿಸರ ಹಾಗೂ ವಾಸಿಸುವ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು  ಮುದ್ದೇನಹಳ್ಳಿ ವ್ಯಾಪ್ತಿಯಲ್ಲಿ ಬರುವ ಗ್ರಾಮಸ್ಥರು ಕಾಖರ್ಾನೆ ಮುಂಭಾಗ  ಪ್ರತಿಭಟನೆ ನಡೆಸಿದರು.
ಮುದ್ದೇನಹಳ್ಳಿ ಗ್ರಾಮಸ್ಥರು ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಎನ್.ಆರ್.ಸಿಮೆಂಟ್ ಕಾಖರ್ಾನೆ ಎದುರು ಪ್ರತಿಭಟನೆ ನಡೆಸಿ ಕಾಖರ್ಾನೆ ವಿರುದ್ದ ದಿಕ್ಕಾರ ಕೂಗಿ ಪ್ರತಿಭಟಿಸಿದರು. 
ಎನ್.ಆರ್.ಸಿಮೆಂಟ್ ಕಾಖರ್ಾನೆ 20ವರ್ಷಗಳಿಂದಲೂ ಕಾರ್ಯನಿರ್ವಹಿಸುತ್ತಿದ್ದು ಇತ್ತೀಚೆಗೆ ಸಿಮೆಂಟಿನ ಬೇಡಿಕೆ ಹೆಚ್ಚಾಗಿದ್ದು ಇದರಿಂದ ಉತ್ಪಾದನೆ ಹೆಚ್ಚಾಗಿರುವುದರಿಂದ ಕಾಖರ್ಾನೆಯಿಂದ ಬರುವ ಸಿಮೆಂಟಿನ ಧೂಳು ಗಿಡಮರಗಳ ಹಾಗೂ ಮನೆಗಳ ಮೇಲೆ ಹರಡಿ ಪರಿಸರ ಹಾಗೂ ಮನುಷ್ಯರ ಆರೋಗ್ಯ ಹಾಳಾಗುತ್ತಿದೆ,  ಇದರಿಂದ ಕುಡಿಯುವ ನೀರು, ಆಹಾರದ ಮೇಲೆ ದುಷ್ಪರಿಣಾಮ ಬೀರುತ್ತಾ ಗ್ರಾಮಸ್ಥರು ದಿನನಿತ್ಯ ಆಸ್ಪತ್ರೆಗೆ ಅಲೆಯುವಂತಾಗಿದೆ ಎಂದು ದೂರಿದರು.     
ಗ್ರಾಮಸ್ಥ ಸ್ವಾಮಿ ಮಾತನಾಡಿ ಕಾಖರ್ಾನೆಯಿಂದ ಬರುವ ಧೂಳಿನಿಂದ ಸುತ್ತಮುತ್ತಲ ವಾತಾವರಣ ಕಲುಷಿತಗೊಂಡಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ, ಇದರಿಂದ ಕುಡಿಯುವ ನೀರು, ಆಹಾರ, ಧವಸಧಾನ್ಯಗಳ ಮೇಲೆ ಧೂಳು ಕುಳಿತು ಪರಿಸರ ಹಾಳಾಗುತ್ತಿದೆ, ಈ ಬಗ್ಗೆ ಕಾಖರ್ಾನೆಯ ಮುಖ್ಯಸ್ಥರನ್ನು ಪ್ರಶ್ನಿಸಿದರೆ ಪೋಲಿಸರಿಗೆ ದೂರು ನೀಡುತ್ತೇವೆ ಎಂದು  ಧಮಕಿ ಹಾಕುತ್ತಾರೆ,  ಜನಪ್ರತಿನಿಧಿಗಳು ನಮ್ಮ ಸಮಸ್ಯಗೆ ಸ್ಪಂದಿಸುತ್ತಿಲ್ಲ ಎಂದು ದೂರಿದರು.
  ರೈತ ಮಹಿಳೆ ಶಾರದಮ್ಮ ಮಾತನಾಡಿ, ಎನ್.ಆರ್.ಸಿಮೆಂಟಿನ ಕಾಖರ್ಾನೆ ಪ್ರಾರಂಭವಾದರೆ ಈ ಭಾಗ ಧೂಳುಮಯವಾಗಿ ಬಿ.ಹೆಚ್.ರಸ್ತೆಯಲ್ಲಿ ಓಡಾಡುವ ವಾಹನಗಳು ಧೂಳಿನಿಂದ ಎದುರುಗಡೆ ಬರುವ ವಾಹನಗಳು ಕಾಣಿಸುವುದಿಲ್ಲ ಹಾಗೂ ಕುಡಿಯುವ ನೀರು ಸೇರಿದಂತೆ ಮನೆಯ ತುಂಬಾ ಧೂಳು ತುಂಬಿಕೊಳ್ಳುತ್ತಿದೆ, ಇದರಿಂದ ಈ ಭಾಗದಲ್ಲಿ ವಾಸಿಸುವ. ಅಸ್ತಮಾ, ಕ್ಯಾನ್ಸರ್ನಂತಹ ಮಾರಕ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ, ಜಾನುವಾರುಗಳು ಇಲ್ಲಿನ ಧೂಳು ಮಿಶ್ರಿತ ಹುಲ್ಲನ್ನು ತಿಂದು ಹಸುಕರುಗಳು ಅನ್ಯಾರೋಗ್ಯಕ್ಕೆ ಒಳಗಾಗುತ್ತಿವೆ ಎಂದರು.
  ಕಾಮರ್ಿಕ ಮಂಜುನಾಥ್ ಮಾತನಾಡಿ ಈ ಕಾಖರ್ಾನೆಯಲ್ಲಿ ಕಾಮರ್ಿಕರಿಗೆ ಯಾವುದೇ ರೀತಿಯ ಸೇವಾ ಭದ್ರತೆ, ಆರೋಗ್ಯ ಭದ್ರತೆ ಹಾಗೂ ಮೂಲಭೂತ ಸೌಕರ್ಯಗಳ ಬಗ್ಗೆ ಕಾಖರ್ಾನೆ ಮಾಲೀಕರು ಗಮನ ಹರಿಸುತ್ತಿಲ್ಲ ಎಂದು ದೂರಿದರು.
    ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಶಶಿಕಲಾ ಮಂಜುನಾಥ್, ಶಿವಣ್ಣ, ನಾಯಕ್, ನಾಗರಾಜು, ಮಹೇಶ್ ಶಾರದಮ್ಮ, ಸರೋಜಮ್ಮ, ನರಸಿಂಹಯ್ಯ, ಸಿದ್ದಮ್ಮ ಸೇರಿದಂತೆ ನೂರಕ್ಕೂ ಹೆಚ್ಚು ಗ್ರಾಮಸ್ಥರು  ಹಾಜರಿದ್ದರು.

No comments:

Post a Comment