ವಾಚ್ ವಿಷಯವನ್ನೇ ದೊಡ್ಡ ಹಗರವನ್ನಾಗಿ ಪರಿವತರ್ಿಸುತ್ತಿರುವ ವಿರೋಧ ಪಕ್ಷಗಳು : ಸಿದ್ದರಾಮಯ್ಯನವರ ಅಭಿಮಾನಿಗಳು ಕಿಡಿ
ಚಿಕ್ಕನಾಯಕನಹಳ್ಳಿ, : ಬಡವರ ಪರ, ಜನಪ್ರಿಯ ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ಎಲ್ಲಾ ವರ್ಗಗಳ ಏಳಿಗೆ ಬಯಸುತ್ತಿರುವ ಸಿದ್ದರಾಮಯ್ಯನವರ ಜನಪ್ರಿಯತೆ ಸಹಿಸಲಾಗದ ವಿರೋಧ ಪಕ್ಷದ ನಾಯಕರು ವಾಚ್ ಹಗರಣವನ್ನೇ ಮುಂದಿಟ್ಟುಕೊಂಡು ಮುಖ್ಯಮಂತ್ರಿಗಳ ವಿರುದ್ದ ನಡೆಸುತ್ತಿರುವ ಅಪಪ್ರಚಾರ, ಷಡ್ಯಂತ್ರವನ್ನು ಖಂಡಿಸಿ ಚಿ.ನಾ.ಹಳ್ಳಿ ಸಿದ್ದರಾಮಯ್ಯನವರ ಅಭಿಮಾನಿ ಬಳಗ ಪ್ರತಿಭಟನೆ ನಡೆಸಿತು.
ಪಟ್ಟಣದ ನೆಹರು ಸರ್ಕಲ್ನಲ್ಲಿ ಸೇರಿದ್ದ ಸಿದ್ದರಾಮಯ್ಯನವರ ಅಭಿಮಾನಿ ಬಳಗ ವಿರೋಧ ಪಕ್ಷದ ಮುಖಂಡರ ವಿರುದ್ದ ಧಿಕ್ಕಾರ ಕೂಗಿ ಪ್ರತಿಭಟಿಸಿ ಮಾತನಾಡಿದ ಪ್ರತಿಭಟನಾಕಾರರು, ಕೆಳಜಾತಿ, ಅಹಿಂದ ವರ್ಗದ ನಾಯಕರಾಗಿ ಬೆಳೆದಿರುವ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿರುವುದನ್ನೇ ಸಹಿಸದ ವಿರೋಧ ಪಕ್ಷದ ನಾಯಕರು ಅವರ ವಿರುದ್ದ ಷಡ್ಯಂತ್ರ ರೂಪಿಸುತ್ತಿದ್ದಾರೆ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಲ್ಲಸಲ್ಲದ ಆರೋಪಗಳನ್ನು ಮಾಡುವುದರ ಮೂಲಕ ಅವರ ವ್ಯಕ್ತಿತ್ವಕ್ಕೆ ಕಳಂಕ ಹಚ್ಚುವ ಪ್ರಯತ್ನ ಮಾಡುತ್ತಾ ಅಪಪ್ರಚಾರ ನಡೆಸುತ್ತಿದ್ದಾರೆ, ಕಳೆದ 30 ವರ್ಷಗಳ ರಾಜಕೀಯ ಬದುಕಿನಲ್ಲಿ ಯಾವುದೇ ಕಳಂಕ ಹಾಗೂ ಹಗರಣ ರಹಿತ ರಾಜಕೀಯ ಬದುಕನ್ನು ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಎಲ್ಲಾ ವರ್ಗಗಳ ಬಡವರು ಬೆಂಬಲವನ್ನು ವ್ಯಕ್ತಪಡಿಸುತ್ತಿದ್ದೇವೆ ಎಂದರು.
ಪ್ರತಿಭಟನೆ ನಡೆಯುತ್ತಿದ್ದ ಸ್ಥಳವಾದ ನೆಹರು ಸರ್ಕಲ್ ಬಳಿ ಬಂದ ಗ್ರೇಡ್-2 ತಹಶೀಲ್ದಾರ್ ಚಂದ್ರಕುಮಾರ್ ಮನವಿ ಪತ್ರವನ್ನು ಸ್ವೀಕರಿಸಿದರು.
ಪ್ರತಿಭಟನೆಯಲ್ಲಿ ಸಿದ್ದರಾಮಯ್ಯನವರ ಅಭಿಮಾನಿ ಬಳಗದವರಾದ ಪುರಸಭಾ ಸದಸ್ಯ ಸಿ.ಪಿ.ಮಹೇಶ್, ರಾಮದಾಸ್, ಹಂದನಕೆರೆ ಸಿದ್ದಣ್ಣ, ಪ್ರಸನ್ನಕುಮಾರ್, ರಂಗನಾಥ್, ಚಿದಾನಂದ್, ಮಹದೇವಣ್ಣ, ಶ್ರೀಧರ ಮತ್ತಿತರರು ಉಪಸ್ಥಿತರಿದ್ದರು.
ವಿವಾಹಿತೆ ನೆಣಿಗೆ ಶರಣು
ಚಿಕ್ಕನಾಯಕನಹಳ್ಳಿ03: ಪಟ್ಟಣದ ಹೊರವಲಯದ ಹೊಸಹಳ್ಳಿ ಗ್ರಾಮದ ಸುಮಾರು 23 ವರ್ಷದ ವಿವಾಹಿತೆ ನೆಣು ಹಾಕಿಕೊಂಡು ಸಾವನ್ನಪ್ಪಿರುವ ಘಟನೆ ಚಿಕ್ಕನಾಯಕನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹೊಸಹಳ್ಳಿ ಗ್ರಾಮದ ಆಟೋ ಚಾಲಕ ರಘು ಎಂಬುವರ ಪತ್ನಿ ರಾಧ (22) ಮೃತ ಮಹಿಳೆ, ತಮ್ಮ ವಾಸದ ಮನೆಯಲ್ಲಿ ನೇಣು ಹಾಕಿಕೊಂಡಿದ್ದು, ಇವರು ವಿವಾಹವಾಗಿ ಸುಮಾರು ಒಂದುವರೆ ವರ್ಷ ಆಗಿದ್ದು ಮಕ್ಕಳಿರುವುದಿಲ್ಲ, ಸಂಬಂಧಿಕರ ಮನೆಯ ನಿಶ್ಚಿತಾರ್ಥಗೆ ಕರೆದುಕೊಂಡು ಹೋಗಲಿಲ್ಲವೆಂಬ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಪ್ರಕರಣ ಠಾಣೆಯಲ್ಲಿ ದಾಖಲಾಗಿದೆ.
No comments:
Post a Comment