ಡಿಸಿಸಿ ಬ್ಯಾಂಕ್ನ ನಾಲ್ಕು ವರ್ಷದ ಅವಧಿಯೊಳಗೆ ತಾಲ್ಲೂಕಿನ ಪ್ರತಿ ಕುಟುಂಬದವರಿಗೂ ಬೆಳೆ ಸಾಲ ವಿತರಣೆ : ಸಿಂಗದಹಳ್ಳಿ ರಾಜ್ಕುಮಾರ್
ಚಿಕ್ಕನಾಯಕನಹಳ್ಳಿ : ತಾಲ್ಲೂಕಿನ ಪ್ರತಿ ಕೃಷಿಕ ಕುಟುಂಬಗಳಿಗೂ ಡಿಸಿಸಿ ಬ್ಯಾಂಕ್ನಿಂದ ಬೆಳೆ ಸಾಲ ವಿತರಿಸುತ್ತೇವೆ ಎಂದು ಜಿಲ್ಲಾ ಡಿಸಿಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ಹೇಳಿದರು.
ತಾಲ್ಲೂಕಿನ ಕುಪ್ಪೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದ ಸಾಲ ವಿತರಣಾ ಸಮಾರಂಭದಲ್ಲಿ ಫಲಾನುಭವಿಗಳಿಗೆ ಸಾಲ ವಿತರಿಸಿ ಮಾತನಾಡಿದ ಅವರು, ಈಗಾಗಲೇ ತಾಲ್ಲೂಕಿನಾದ್ಯಂತ 2015-16ನೇ ಸಾಲಿನಲ್ಲಿ 1262ರೈತರಿಗೆ 2ಕೋಟಿ 46ಲಕ್ಷದ 86ಸಾವಿರದಷ್ಟು ಬೆಳೆ ಸಾಲ ವಿತರಿಸಲಾಗಿದೆ, ಜೂನ್ ನಂತರ ಉಳಿದ ರೈತರಿಗೆ ಬೆಳೆ ಸಾಲವನ್ನು ನೀಡಲಾಗವುದು ಎಂದರು.
ನಮ್ಮ ಅವಧಿಯಲ್ಲಿ ಪಕ್ಷ, ಜಾತಿ-ಬೇದವೆನ್ನದೆ ಪಕ್ಷಾತೀತವಾಗಿ ಪ್ರತಿಯೊಬ್ಬರಿಗೂ ಸಾಲ ಸೌಲಭ್ಯ ನೀಡಿದ್ದೇವೆ, ಕುಪ್ಪೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಈ ಬಾರಿ 171 ಜನ ರೈತರಿಗೆ 29ಲಕ್ಷದ 50ಸಾವಿರದಷ್ಟು ಸಾಲ ವಿತರಿಸಲಾಗಿದೆ, ಸಾಲ ಪಡೆದವರು ಸರಿಯಾಗಿ ಸಾಲವನ್ನು ಮರುಪಾವತಿ ಮಾಡಬೇಕು, ಸೊಸೈಟಿಯಲ್ಲಿ ಅಡಮಾನ ಸಾಲ, ಚಿನ್ನಾಭರಣ ಸಾಲ ನೀಡಿದ್ದೇವೆ ಎಂದರು.
ರೈತರು ತಮ್ಮಲ್ಲಿರುವ ಹಣವನ್ನು ವಾಣಿಜ್ಯ ಬ್ಯಾಂಕ್ಗಳಿಗೆ ಉಳಿತಾಯ ಮಾಡುವ ಬದಲು ಡಿಸಿಸಿ ಬ್ಯಾಂಕ್ಗೆ ಡೆಪಾಸಿಟ್ ಮಾಡಿ ರಾಷ್ಟ್ರೀಕೃತ ಬ್ಯಾಂಕ್ಗಳಿಗಿಂತ ಹೆಚ್ಚಿನ ಬಡ್ಡಿ ಡಿಸಿಸಿ ಬ್ಯಾಂಕ್ ನೀಡುತ್ತಿದೆ, ಬ್ಯಾಂಕ್ನಲ್ಲಿ ಆಭರಣ ಸಾಲ, ವಾಹನ ಸಾಲ ಸೇರಿದಂತೆ ಹಲವು ಸಾಲ ನೀಡಲಾಗುವುದು, ಡಿಸಿಸಿ ಬ್ಯಾಂಕ್ನಲ್ಲಿ ಸಾಲ ಪಡೆದು ನಿಧನರಾದ ರೈತರಿಗೆ 5ಕೋಟಿಗೂ ಹೆಚ್ಚಿನಷ್ಟು ಸಾಲವನ್ನು ಮನ್ನಾ ಮಾಡಲಾಗಿದೆ ಅದೇ ರೀತಿ ಕುಪ್ಪೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಡಿಸಿಸಿ ಬ್ಯಾಂಕ್ ಮೂಲಕ ಸಾಲ ಪಡೆದು ಮರಣವನ್ನಪ್ಪಿರುವ 6ಜನ ರೈತರಿಗೆ 2ಲಕ್ಷದಷ್ಟು ಹಣವನ್ನು ಮನ್ನಾ ಮಾಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕುಪ್ಪೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಅಧ್ಯಕ್ಷ ಯೋಗೀಶ್ , ಉಪಾಧ್ಯಕ್ಷ ಶಿವಕುಮಾರ್, ದರ್ೇಶಕರಾದ ಉಮೇಶ್, ಶಿವಬಸವಣ್ಣ, ಚನ್ನಿಗರಾಯಪ್ಪ, ಈಶ್ವರಮೂತರ್ಿ, ಶೈಲಪ್ರಕಾಶ್, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಎಸ್.ಆರ್.ರಂಗಸ್ವಾಮಿ ಉಪಸ್ಥಿತರಿದ್ದರು.
ಕಾಮರ್ಿಕರ ಹಿತರಕ್ಷಣೆಗೆ ಕಾಮರ್ಿಕರು ಹೋರಾಟ
ಅನಿವಾರ್ಯ

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲ್ಲೂಕು ಸೇವಾ ಸಮಿತಿ, ತಾಲೂಕು ವಕೀಲರ ಸಂಘ ಮತ್ತು ಐ.ಟೆಕ್ಸ್.ಅಪಾರೆಲ್ಸ್ ಸಂಯಕ್ತಾಶ್ರಯದಲ್ಲಿ ಪಟ್ಟಣದ ಐ.ಟೆಕ್ಸ್.ಅಪಾರೆಲ್ಸ್ ಗಾಮರ್ೆಂಟ್ಸ್ ಆವರಣದಲ್ಲಿ ಈಚೆಗೆ ಏರ್ಪಡಿಸಿದ್ದ ಕಾಮರ್ಿಕರ ದಿನಾಚಾರಣೆಯ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪ್ರಪಂಚದ 80 ರಾಷ್ಟ್ರಗಳಲ್ಲಿ ಕಾಮರ್ಿಕರ ದಿನಾಚಾರಣೆಯನ್ನು ಆಚರಿಸಲಾಗುತ್ತಿದೆ ಎಂದರು.
ಅಮೇರಿಕಾದಲ್ಲಿ ಕಾಮರ್ಿಕರು ಪ್ರಪ್ರಥಮವಾಗಿ ದಿನಕ್ಕೆ 8ಗಂಟೆಗಳ ಕಾಲ ಮಾತ್ರ ಕೆಲಸ ಮಾಡವ ವ್ಯೆವಸ್ಥೆಗೆ ಆಗ್ರಹಿಸಿ ಹೋರಾಟ ಪ್ರಾರಂಭಿಸಿದರು. ಅದಾದ ನಂತರ ಭಾರತದಲ್ಲಿ ಅಂತಹ ವ್ಯೆವಸ್ಥೆಯು 1926ರಲ್ಲಿ ಮದ್ರಾಸಿನಲ್ಲಿ ಜಾರಿಗೆ ಬಂತು. ಕೈಗಾರಿಕೆ ಉದ್ಯಮದಲ್ಲಿ ಸಂಬಳದ ಜೊತೆಗೆ ಮೂಲಭೂತ ಸೌಕರ್ಯ ಹಾಗು ಸೌಲಭ್ಯಗಳು ಸಿಗಬೇಕಾದದ್ದು ಕಾಮರ್ಿಕರ ಹಕ್ಕು ಎಂದರು.
ವಕೀಲ ದಿಲೀಪ್ ಉಪನ್ಯಾಸ ನೀಡಿ, ಕಾಮರ್ಿಕರು ಕೆಲಸ ಮಾಡುವ ಕೈಗಾರಿಕೆಯಲ್ಲಿ ಮೂಲಭೂತ ಸೌಕರ್ಯ,ಆರೋಗ್ಯಕರ ವಾತಾವರಣ.ಮಹಿಳಾ ಕಾಮರ್ಿಕರಿಗೆ ಸೂಕ್ತ ರಕ್ಷಣೆ ಒದಗಿಸುವುದು ಕಂಪನಿ ಮಾಲೀಕರ ಕರ್ತವ್ಯ ಎಂದರು.
ಐ.ಟೆಕ್ಸ್.ಅಪಾರೆಲ್ಸ್ ಗಾಮರ್ೆಂಟ್ಸಿನ ಮಾಲೀಕ ರವಿಶಂಕರ್ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಅಭಿಯೋಜಕರಾದ ಆರ್.ರವಿಚಂದ್ರ, ಸಿ.ಬಿ.ಸಂತೋಷ್,ಮಾತನಾಡಿದರು.ವಕೀಲ ಸಂಘದ ಅಧ್ಯಕ್ಷ ಟಿ.ಆರ್.ಸೋಮಶೇಖರಯ್ಯ, ವಕೀಲರಾದ ಶೇಖರ್, ರವೀಂದ್ರ ಕುಮಾರ್, ಕೆ.ಎಂ.ಷಡಕ್ಷರಿ. ರತ್ನರಂಜಿನಿ ಹಾಗೂ ಕಾಮರ್ಿಕರು ಹಾಜರಿದ್ದರು.
No comments:
Post a Comment