Sunday, April 4, 2010

ಜನರ ವಿಶ್ವಾಸ,ನಂಬಿಕೆ ಉಳಿಸಿಕೊಂಡವರಿಗೆ ಗೆಲುವು ನಿಶ್ಚಿತ


ಚಿಕ್ಕನಾಯಕನಹಳ್ಳಿ,ಏ.03: ಸಹಕಾರ ಸಂಸ್ಥೆಗಳಲ್ಲಿ ರೈತರಿಗೆ ಸಾಲ ನೀಡುವಾಗ ಪಕ್ಷ ಹಾಗೂ ಜಾತಿಯನ್ನು ಕೇಳಬೇಡಿ, ಸಾಲ ಪಡೆಯುವವನಿಗೆ ನಿಜವಾಗಿ ಸಾಲದ ಅಗತ್ಯವಿದೆ ಎನಿಸಿದರೆ ಸಾಲ ಕೊಡಿಸಿ ಎಂದು ಎಂದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಕರೆನೀಡಿದರು.

ಪಟ್ಟಣದ ನವೋದಯ ಕಾಲೇಜಿನ ಬಳಿ ತಮ್ಮ ಗುಂಪಿನಿಂದ ಗೆಲುವು ಸಾಧಿಸಲು ನೆರವಾದ ಸಹಕಾರಿ ಬಂಧುಗಳ ಅಭಿನಂದಾನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿಮಾತನಾಡಿದರು, ಜನರಲ್ಲಿ ವಿಶ್ವಾಸ ಮತ್ತು ನಂಬಿಕೆ, ಉಳಿಸಿಕೊಂಡವರಿಗೆ ಗೆಲುವು ನಿಶ್ಚಿತವಾಗಿದ್ದು, ತಾಲೂಕಿನಲ್ಲಿನ 21 ಸಹಕಾರಿ ಸಂಸ್ಥೆಗಳ ಪೈಕಿ 16 ರಿಂದ 18 ಸಂಸ್ಥೆಗಳು ಪೂರ್ಣ ಪ್ರಮಾಣದಲ್ಲಿ ನಮ್ಮವರು ಅಸ್ತಿತ್ವಕ್ಕೆ ಬಂದಿದೆ ಎಂದ ಅವರು, ಸಮಾಜದಲ್ಲಿ ಯಾರೂ ವ್ಯಕ್ತಿಯನ್ನು ಬೆಳೆಸಬಾರದು ವ್ಯವಸ್ಥೆಯನ್ನು ಬೆಳಸಬೇಕು ಎಂದರು.

ಚುನಾವಣೆಗಳಲ್ಲಿ ಜನರ ಬಳಿ ಹೋಗಿ ಕಾಡಿ ಬೇಡಿ ತಿರುಕಂಡು ತಿನ್ನವ ರೂಪದಲ್ಲಿ ಗೆದ್ದುಬಂದವರು ನಂತರ ಎಂಜ್ಜಲು ಕಾಸಿನಾಸಿಗೆ ತಮ್ಮ ತನವನ್ನು ಮಾರಿಕೊಂಡು ಅಪ್ರಮಾಣಿಕರಾಗಬಾರದು ಮುಂದಿನ ಚುನಾವಣೆಗಳಲ್ಲಿ ಗೆಲ್ಲುವ ಯೋಜನೆಯನ್ನು ಇಟ್ಟು ಕೊಂಡು ಪ್ರಾಮಾಣಿಕತೆಯಿಂದ ತಮ್ಮ ಸೇವೆಗೆ ತೊಡಗಿಸಿಕೊಳ್ಳಬೇಕೆಂದರು, ಈಗ ಜಯಗಳಿಸಿರುವ ಸಹಕಾರಿ ಪ್ರತಿನಿಧಿಗಳು ಕನಿಷ್ಟ ಪಕ್ಷ ತಮ್ಮ ಸಂಸ್ಥೆಗಳ ಜಮಾ-ಖಚರ್ಿನ್ನು ಅರ್ಥ ಮಾಡಿಕೊಂಡು ಪ್ರಶ್ನೆ ಮಾಡುವ ಮನೋಭಾವವನ್ನು ಬೆಳಸಿಕೊಳ್ಳಿ ಎಂದು ಸಹಕಾರಿ ಧುರೀಣರಿಗೆ ಕಿವಿ ಮಾತು ಹೇಳಿದರು.

ಇತ್ತೀಚಿನ ಚುನಾವಣೆಗಳು ಹಣವನ್ನು ಆಧರಿಸಿ ನಡೆಯುತ್ತಿವೆ ಆಗಾಗದೆ, ಕೆಲಸವನ್ನು ಆಧರಿಸಿ ಜನ ಪ್ರತಿನಿಧಿಗಳನ್ನು ಆರಿಸುವಂತಾಗಬೇಕು ಎಂದ ಅವರು, ಇಲ್ಲಿನ ಶಾಸಕರು ಬಸವೇಶ್ವರ ನಗರವನ್ನೇ ತಮ್ಮ ಮತಕ್ಷೇತ್ರವೆಂದು ತಿಳಿದುಕೊಂಡಂತಿದೆ ಎಂದರಲ್ಲದೆ, ನನಗೆ ಮುಂದಿನ ಚುನಾವಣೆಗಳಲ್ಲಿ ಸುರೇಶ್ ಬಾಬು ಬಗ್ಗೆಯಾಗಲಿ, ಕಿರಣ್ಕುಮಾರ್ ಬಗ್ಗೆಯಾಗಲಿ ಆತಂಕವಿಲ್ಲ ಎಲ್ಲಿ ಈ ಕ್ಷೇತ್ರಕ್ಕೂ ಗಣಿರೆಡ್ಡಿಗಳು, ಆನಂದ ಸಿಂಗ್ನಂತಹ ಗಣಿಗಾರಿಕೆಯವರು ಬರುತ್ತಾರೋ ಎಂಬ ಭಯವಿದೆ ಎಂದರು.

ನಾನು ಶಾಸಕನಾಗಿದ್ದಾಗ ಗಣಿಗಾರಿಕೆಯಲ್ಲಿ ಟನ್ಗೆ 15ರೂ ನಂತೆ ಸಂಗ್ರಹಿಸಿ ನೀರಾವರಿ ಯೋಜನೆಯ ಗುರಿಯನ್ನಿಟ್ಟು ಕೊಂಡು ಕೋಟಿ ಗಟ್ಟಲೆ ಸಂಗ್ರಹಿಸಿ

ಇಟ್ಟ ಹಣದಲ್ಲಿ ಅಧಿಕಾರಿಗಳು ಐಷರಾಮಿ ಕಾರುಗಳನ್ನು ಕೊಂಡು ಅದರಲ್ಲಿ ಓಡಾಡುವುದನ್ನು ನೋಡಿದರೆ, ಇವರೆಲ್ಲಾ ಲಾಗ್ ಬುಕ್ ಹೇಗೆ ನಿರ್ವಹಿಸುತ್ತಿದ್ದಾರೆ ಎಂಬ ಕೌತಕ ಒಂದಡೆಯಾದರೆ, ನೀರಾವರಿಗೆಂದು ಕೂಡಿಟ್ಟ ಹಣ ಈ ರೀತಿ ಪೋಲಾಗುತ್ತಿದೆಯೆಲ್ಲಾ ಎಂಬ ಕೊರಗು ಇದೆ ಎಂದರು.

ಜಿಲ್ಲಾ ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಮಾತನಾಡಿ ರೈತರಿಗೆ ಸಾಲ ಕೊಡಿಸುವಾಗ ಇರುವ ಮುತುವಜರ್ಿ ಅವರ ಸಾಲವನ್ನು ತೀರಿಸುವಾಗಲೂ ಇರಬೇಕು, ಆಗಿದ್ದರೆ ಮಾತ್ರ ಸಹಕಾರಿ ಸಂಸ್ಥೆಗಳು ಉಳಿಯುತ್ತವೆ ಹಾಗೂ ಸಾಲಕೊಡಿಸಿದವರಿಗೂ ಒಂದು ಬೆಲೆ ಬರುತ್ತದೆ ಎಂದರಲ್ಲದೆ, ಜೆ.ಸಿ.ಮಾಧುಸ್ವಾಮಿಯವರು ಶಿಫಾರಸ್ಸು ಮಾಡಿದವರನ್ನು ವಿಶೇಷವಾಗಿ ಪರಿಗಣಿಸುವುದಾಗಿ ಹೇಳಿದ ಅವರು, ರೈತರ ಯಾವುದೇ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಮುಂದಾಗುತ್ತೇನೆ ಎಂದರಲ್ಲದೆ, ಇತ್ತೀಚಿಗೆ ಸಕರ್ಾರದ ಮಟ್ಟದಲ್ಲಿರುವ ಅಧಿಕಾರಸ್ಥರ ಹಂತದಲ್ಲಿ ಭ್ರಷ್ಟರು ಹೆಚ್ಚುತ್ತಿದ್ದಾರೆ ಇದನ್ನು ತಡೆಯಬೇಕು ಎಂದರು.

ಇನ್ನೊಂದು ತಿಂಗಳಲ್ಲಿ ಗ್ರಾ.ಪಂ. ಚುನಾವಣೆಗಳು ನಡೆಯುವ ಸಾಧ್ಯತೆ ಇದೆ, ಡಿಸೆಂಬರ್ ತಿಂಗಳಲ್ಲಿ ತಾ.ಪಂ. ಹಾಗೂ ಜಿ.ಪಂ. ಚುನಾವಣೆಗಳು ನಡೆಯುತ್ತವೆ ಅವೆಲ್ಲಾಕ್ಕೂ ಈಗಿನಿಂದಲೇ ಸಿದ್ದರಾಗಬೇಕು ಎಂದರು.

ಕೆಂಚಮಾರಯ್ಯ ಮಾತನಾಡಿ ದೂರದೃಷ್ಟಿಯಿರುವಂತಹ ಜೆ.ಸಿ.ಮಾಧುಸ್ವಾಮಿ ಶಾಸಕರಾದರೆ ವಿಧಾನ ಸಭೆಯಲ್ಲಿ ನ್ಯಾಯಯುತ ಬೇಡಿಕೆಗಾಗಿ ಧ್ವನಿ ಎತ್ತುತ್ತಾರೆಂದರು.

ಡಿ.ಸಿ.ಸಿ.ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ಮಾತನಾಡಿ ನಮ್ಮ ಪಕ್ಷದಲ್ಲಿ ಇರುವ ಸಣ್ಣ ಸಣ್ಣ ಒಡಕುಗಳನ್ನು ದೊಡ್ಡದನ್ನಾಗಿ ಮಾಡದೆ ಜೆ.ಸಿ.ಮಾಧುಸ್ವಾಮಿ ಬೆಂಬಲಿತರನ್ನು ಎಲ್ಲಾ ಚುನಾವಣೆಗಳ ಗೆಲ್ಲಿಸುವುದರ ಮೂಲಕ ಮುಂದಿನ ಚುನಾವಣೆಗೆ ತಯಾರಿ ನಡೆಸಬೇಕು ಎಂದರು.

ಈ ಸಂದರ್ಭದಲ್ಲಿ ತಾಲೂಕಿನ ವಿವಿಧ ಭಾಗದ ಸಹಕಾರಿ ಸಂಸ್ಥೆಗಳ ಪ್ರತಿನಿಧಿಗಳು ಮಾತನಾಡಿದರು.

ಸಮಾರಂಭದಲ್ಲಿ ಸಿ.ಡಿ.ಚಂದ್ರಶೇಖರ್, ಎಚ್.ಎಂ.ಸುರೇಂದಯ್ಯ, ಶಶಿಧರ್, ನಾಗರಾಜ್, ಕಾನಕೆರೆ ಪರಮೇಶ್, ಶಂಕರಲಿಂಗಯ್ಯ, ತಾ.ಪಂ.ಸದಸ್ಯರುಗಳಾದ ಸಿ.ಶಿವಣ್ಣ, ಎಸ್.ಸಿ.ದಿನೇಶ್ ಉಪಸ್ಥಿತರಿದ್ದರು.



No comments:

Post a Comment