Tuesday, December 29, 2015


ಓದು, ಬರಹ ಅಭಿವ್ಯಕ್ತಿಗೆ ಪೂರಕವಾದ ವಾತಾವರಣ ಅಗತ್ಯ : ಬಿಇಓ ಕೃಷ್ಣಮೂತರ್ಿ 
ಚಿಕ್ಕನಾಯಕನಹಳ್ಳಿ,ಡಿ.29 : :ಶಾಲಾ ಕಲಿಕೆ ಓದು, ಬರಹ ಹಾಗೂ ಅಭಿವ್ಯಕ್ತಿಗೆ ಪೂರಕವಾದ ವಾತಾವರಣವನ್ನು ಶಾಲೆಯಲ್ಲಿ ಕಲ್ಪಿಸಲು ಶಿಕ್ಷಕರು ಸೃಜನಾತ್ಮಕವಾಗಿ ಚಿಂತಿಸುವ ಅಗತ್ಯ ಇದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂತರ್ಿ ತಿಳಿಸಿದರು.
ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯ ಬಿಆರ್ಸಿ ಸಭಾಂಗಣದಲ್ಲಿ ನಡೆದ ಓದು ಬರಹ ಮತ್ತು ಅಭಿವ್ಯಕ್ತಿ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಮಾಹಿತಿ ತುಂಬುವುದಕ್ಕಿಂತ ಭಾವನಾತ್ಮಕ ವಾತಾವರಣ ನಿಮರ್ಿಸಿವುದು ಮುಖ್ಯ, ಚಿಕ್ಕಂದಿನಲ್ಲೇ ಭಾವನೆಗಳನ್ನು ಸಂಭಾಳಿಸುವ ಕಲೆ ಕರಗತ ಮಾಡಿಕೊಂಡ ಮಕ್ಕಳು ಉನ್ನತ ವ್ಯಕ್ತಿಗಳಾಗಿ ರೂಪಗೊಳ್ಳುತ್ತಾರೆ ಎಂದರು.
ಸಕರ್ಾರ ಜಾರಿಗೆ ತಂದಿರುವ ನಲಿ-ಕಲಿ ಪದ್ದತಿ ಮಕ್ಕಳ ಸೃಜನಾತ್ಮಕ ಅಭಿವ್ಯಕ್ತಿಗೆ ಒತ್ತು ಕೊಡಲು ರೂಪಿಸಿರುವ ಪದ್ದತಿ, ಪ್ರಾಥಮಿಕ ಹಂತದಲ್ಲಿ ಕಲಿಸುವ ಜವಾಬ್ಧಾರಿ ಹೊತ್ತಿರುವ ಶಿಕ್ಷಕರು ಇದನ್ನು ಅರಿತು ಕಾರ್ಯನಿರ್ವಹಿಸಬೇಕು ಎಂದರು. 
     ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಎಸ್.ಪ್ರಕಾಶ್, ಸಕರ್ಾರಿ ನೌಕರರ ಸಂಘದ ಅಧ್ಯಕ್ಷ ಪರಶಿವಮೂತರ್ಿ ಮತ್ತಿತರರು ಉಪಸ್ಥಿತರಿದ್ದರು.


ರೈತ ಅನುವುಗಾರರ ಸಮಸ್ಯೆ ಬಗೆಹರಿಸಲು ಮುಖ್ಯಮಂತ್ರಿಗಳಿಗೆ ಮನವಿ
ಚಿಕ್ಕನಾಯಕನಹಳ್ಳಿ,ಡಿ.29 : ಕೃಷಿ ಇಲಾಖೆ ಮತ್ತು ರೈತರ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿರುವ ರೈತ ಅನುವುಗಾರರ ಜೀವನ ಮತ್ತು ಅವರ ಕುಟುಂಬಗಳ ಪರಿಸ್ಥಿತಿ ಅತಂತ್ರವಾಗಿದೆ ಎಂದು ರೈತ ಅನುವುಗಾರರ ಸಂಘದ ಜಿಲ್ಲಾ ಕಾರ್ಯದಶರ್ಿ ಗಂಗಪ್ಪ ಹೇಳಿದರು.
ಇತ್ತೀಚೆಗೆ ತಾಲ್ಲೂಕಿನ ಹುಳಿಯಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭೇಟಿ ನೀಡಿದ್ದ ಸಂದರ್ಭದಲ್ಲಿ ರೈತ ಅನುವಾಗರರ ಸಂಘ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದ್ದರು. 
ಈ ಸಂದರ್ಭದಲ್ಲಿ ರಾಜ್ಯ ಸಮಿತಿಯ ಸದಸ್ಯ ಪುಟ್ಟರಾಜು ಮಾತನಾಡಿ ರಾಜ್ಯದಲ್ಲಿ 9617 ರೈತ ಅನುವುಗಾರರಿದ್ದು ಇಲಾಖೆಯ ಯೋಜನೆಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸಿ ರೈತರಿಗೆ ಅರಿವು ಮೂಡಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಾ ಬರುತ್ತಿದ್ದಾರೆ ಆದರೆ ಸದ್ಯ ಕಾರ್ಯನಿರ್ವಹಿಸುತ್ತಿರುವ ಅನುವುಗಾರರನ್ನು ತೆಗೆದುಹಾಕಿ ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ಮುಂದಾಗಿರುವ ಸಕರ್ಾರದ ಕ್ರಮದಿಂದ ರೈತ ಅನುವುಗಾರರ ಸ್ಥಿತಿ ಅತಂತ್ರಗೊಂಡಿದೆ ಆದ್ದರಿಂದ ಮುಖ್ಯಮಂತ್ರಿಗಳು ಕೂಡಲೇ ಇತ್ತ ಗಮನ ಹರಿಸಿ ಅನುವುಗಾರರ ಸಮಸ್ಯೆಯನ್ನು ಬಗೆಹರಿಸುವಂತೆ ಮನವಿ ಸಲ್ಲಿಸಿದರು.
ಅನುವುಗಾರರ ಸಂಘದ ತಾಲ್ಲೂಕು ಅಧ್ಯಕ್ಷ ವಿ.ಸಿ.ನಾಗರಾಜು, ಕಾರ್ಯದಶರ್ಿ ಶ್ರೀನಿವಾಸ್, ಖಜಾಂಚಿ ಜಯಣ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.

ಗುರುಸ್ಪಂದನ ಕಾರ್ಯಕ್ರಮ ಜನವರಿ 2
ಚಿಕ್ಕನಾಯಕನಹಳ್ಳಿ,ಡಿ.29 : ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಬಿಆರ್ಸಿ ಸಭಾಂಗಣದಲ್ಲಿ ಜನವರಿ,2 ಶನಿವಾರ ಮಧ್ಯಾಹ್ನ 12ರಿಂದ ಸಂಜೆ 5ರವರೆಗೆ ಗುರುಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂತರ್ಿ ತಿಳಿಸಿದ್ದಾರೆ.
  ತಾಲ್ಲೂಕಿನ ಕಂದಿಕೆರೆ, ತೀರ್ಥಪುರ, ಬರಗೂರು ಹಾಗೂ ಮತಿಘಟ್ಟ ಕ್ಲಸ್ಟರ್ಗಳ ವ್ಯಾಪ್ತಿಯ ಶಿಕ್ಷಕ-ಶಿಕ್ಷಕಿಯರು ಗುರುಸ್ಪಂದನ ಕಾರ್ಯಕ್ರಮಕ್ಕೆ ಹಾಜರಾಗಿ ತಮ್ಮ ಅಹವಾಲುಗಳನ್ನು ಸಂಬಂಧಿಸಿದ ಕಾರ್ಯನಿವರ್ಾಕರಿಗೆ ಸಲ್ಲಿಸಲು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವೀರಶೈವ ಧರ್ಮದಲ್ಲಿನ ವೈಚಾರಿಕತೆ ಪಾಲಿಸುತ್ತಿರುವ ಪಂಚಪೀಠಗಳು
ಚಿಕ್ಕನಾಯಕನಹಳ್ಳಿ,ಡಿ.29 : ಪಂಚಪೀಠಗಳಾದ ಬಾಳೆ ಹೊನ್ನೂರು ಮಠ, ಶ್ರೀಶೈಲ ಮಠ, ಕಾಶಿ ಮಠ, ಉಜ್ಜಯನಿ ಮಠ ಹಾಗೂ ಕೇದಾರ ಮಠಗಳು ವೀರಶೈವ ಧರ್ಮದಲ್ಲಿನ ವೈಚಾರಿಕತೆಯನ್ನು ಪಾಲಿಸುತ್ತಾ ಬರುತ್ತಿವೆ ಎಂದು ಹಿಮಾಚಲ ಪ್ರದೇಶದ ಕೇದಾರ ಪೀಠದ ಹಿಮವಂತ್ ರಾವಲ್ ಭೀಮಾಶಂಕರ ಸ್ವಾಮೀಜಿ ಹೇಳಿದರು.
ತಾಲೂಕಿನ ಕುಪ್ಪೂರು ಗದ್ದಿಗೆ ಸಂಸ್ಥಾನ ಮಠದಲ್ಲಿ ಈಚೆಗೆ ನಡೆದ ವಿಶೇಷ ಇಷ್ಟಲಿಂಗ ಪೂಜೆಯನ್ನು ನೆರವೇರಿಸಿ ಮಾತನಾಡಿ, ಸಕಲ ಜೀವ ರಾಶಿಗಳಲ್ಲೇ ಮನಷ್ಯನ ಮೇಲೆಯೆ ಶಿವನ ಒಲುಮೆಯು ಹೆಚ್ಚಾಗಿದೆ, ಗಂಡಾಗಲಿ ಹೆಣ್ಣಾಗಲಿ ಬಾಳಿನಲ್ಲಿ ಸುಖ ಶಾಂತಿಯನ್ನು ಪಡೆಯಲು ಹಣ, ಅಧಿಕಾರದಿಂದ ಸಾದ್ಯವಾಗುವುದಿಲ್ಲ ಎಂದ ಅವರು ಇಷ್ಟಲಿಂಗ ಪೂಜೆ ಪಂಚಾಚಾರ್ಯ ಪರಂಪರೆ ಅಡಿಪಾಯ, ಪಂಚಾಚಾರ್ಯ ಪರಂಪರೆ ರಕ್ಷಣಾ ಸಮಿತಿ ರಚಿಸುವ ಮೂಲಕ ಶರಣ ತತ್ವವನ್ನು ಪಸರಿಸುವ ಕೆಲಸ ಆಗಬೇಕು ಎಂದರು. 
ವಿಭೂತಿಪುರ ಮಠಾಧ್ಯಕ್ಷ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಧರ್ಮವಿರುವವರೆಗೂ ದೇಶ ಮೃತ್ಯುಂಜಯವಾಗಿರುತ್ತದೆ, ಧರ್ಮವನ್ನು ಬಿಟ್ಟ ದೇಶ ನಾಶವಾಗುತ್ತದೆ ಎಂದರು.
  ಕುಪ್ಪೂರು ಗದ್ದಿಗೆಯ ಮಠಾಧ್ಯಕ್ಷರಾದ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿ, ಮಾದಿಹಳ್ಳಿ ಮಠಾಧ್ಯಕ್ಷ ಚನ್ನ ಮಲ್ಲಿಕಾಜರ್ುನ ಶಿವಾಚಾರ್ಯಸ್ವಾಮೀಜಿ, ಹೊನ್ನವಳ್ಳಿ ಮಠಾಧ್ಯಕ್ಷ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿದ್ದರು.