Friday, July 12, 2013

ಗ್ರಾಮೀಣ ಭಾಗದ ಸಕರ್ಾರಿ ಶಾಲೆಗಳು ಗುಣಾತ್ಮಕವಾಗಿವೆ ಮುಂದಿವೆ.
ಚಿಕ್ಕನಾಯಕನಹಳ್ಳಿ,ಜು.12 : ಸಕರ್ಾರಿ ಶಾಲೆಗಳಲ್ಲೂ ಶಿಕ್ಷಣ, ಆರೋಗ್ಯ, ಕ್ರೀಡೆ ಮೂಲಭೂತ ಸೌಕರ್ಯಗಳಿಗೆ ಹೆಚ್ಚು ಒತ್ತು ನೀಡಿ, ಶಾಲೆಗಳನ್ನು ವಿದ್ಯಾಥರ್ಿ ಕೇಂದ್ರಿತವಾಗಿಸುತ್ತಿರುವ ಶಿಕ್ಷಣ ಇಲಾಖೆ  ಸಕರ್ಾರಿ ಶಾಲೆಗಳು ಕಾನ್ವೆಂಟ್ ಶಾಲೆಗಳಿಗಿಂತ ಹೆಚ್ಚು ಗುಣಾತ್ಮಕಗೊಳ್ಳುತ್ತಿವೆ ಎಂಬುದನ್ನು ಇತ್ತೀಚಿನ ಪಬ್ಲಿಕ್ ಪರೀಕ್ಷೆಗಳು ನಿರೂಪಿಸುತ್ತಿವೆ ಎಂದು ಲೇಖಕ ಹಾಗೂ ಪತ್ರಕರ್ತ ಸಿ.ಗುರುಮೂತರ್ಿ ಕೊಟಿಗೆಮನೆ ತಿಳಿಸಿದರು.
ಪಟ್ಟಣದ ಶ್ರೀ ರೇವಣ ಸಿದ್ದೇಶ್ವರಸ್ವಾಮಿ ಮಠದ ಸಕರ್ಾರಿ ಪ್ರಾಥಮಿಕ ಪಾಠಶಾಲೆಯಲ್ಲಿ ಸ್ಪಂದನ ಜನಸೇವಾ ಪ್ರಗತಿಪರ ಒಕ್ಕೂಟದ ವತಿಯಿಂದ ವಿದ್ಯಾಥರ್ಿಗಳಿಗೆ ಉಚಿತ ನೋಟ್ಪುಸ್ತಕ ವಿತರಣೆಯ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಶಿಕ್ಷಣ ಇಲಾಖೆ ವಿದ್ಯಾಥರ್ಿಗಳ ಅಭ್ಯುದಯಕ್ಕಾಗಿ ಆರ್.ಟಿ.ಇ,  ಸಿ.ಸಿ.ಇ ಕಾಯ್ದೆ ಯೋಜನೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ, ಸಕರ್ಾರಿ ಶಾಲೆಗಳ ಬಡ ವಿದ್ಯಾಥರ್ಿಗಳ ಆಥರ್ಿಕ ನೆರವಿಗಾಗಿ ಹಲವು ಸಂಘ ಸಂಸ್ಥೆಗಳು ಉಚಿತ ನೋಟ್ಬುಕ್, ತಟ್ಟೆಲೋಟ, ವಿದ್ಯಾಥರ್ಿ ವೇತನ ಸೇರಿದಂತೆ ಹಲವು ಸೌಲಭ್ಯ ಒದಗಿಸುತ್ತಿದ್ದು ಇದರಿಂದ ವಿದ್ಯಾಥರ್ಿಗಳು ತಮ್ಮ ಹೆಚ್ಚಿನ ಸಮಯವನ್ನು ಶಿಕ್ಷಣದ ಕಡೆ ಗಮನ ಹರಿಸುವಂತೆ ಸಲಹೆ ನೀಡಿದರು.
ಸಕರ್ಾರಿ ಶಾಲಾ ವಿದ್ಯಾಥರ್ಿಗಳಿಗಾಗಿ ಬಿಸಿಯೂಟ, ಉಚಿತ ಸೈಕಲ್ ಹಾಗೂ ನೂತನವಾಗಿ ವಿದ್ಯಾಥರ್ಿಗಳಿಗೆ ಹಾಲು ವಿತರಣೆ ಸೇರಿದಂತೆ ಬಡ ಮಕ್ಕಳಿಗೆ  ಶೂ ನೀಡುವ  ಯೋಜನೆಯ ಬಗ್ಗೆಯೂ ಚಿಂತನೆ ನಡೆದಿದೆ ಎಂದರು. 
ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ಮಾತನಾಡಿ ಸಕರ್ಾರಿ ಶಾಲೆಗಳಲ್ಲಿ ಓದಿದಂತಹ ವಿದ್ಯಾಥರ್ಿಗಳೇ  ಇಂಜನಿಯರಿಂಗ್, ವೈದ್ಯಕೀಯ ಪದವೀಧರರಾಗಿದ್ದಾರೆ, ಈ   ರೇವಣ ಸಿದ್ದೇಶ್ವರ ಶಾಲೆಯಲ್ಲಿ ಓದಿದಂತಹ ವಿದ್ಯಾಥರ್ಿಗಳು ಹೊರದೇಶದಲ್ಲೂ ಸೇವೆ ಸಲ್ಲಿಸಿ ಸೈ ಎನಿಸಿಕೊಂಡಿದ್ದಾರೆ ಎಂದರು. ಈ ಶಾಲೆಯು ಮೊದಲು ಬಾಡಿಗೆ ಕಟ್ಟಡದಲ್ಲಿ ವಿದ್ಯಾಥರ್ಿಗಳಿಗೆ ಶಿಕ್ಷಣ ನೀಡುತ್ತಿತ್ತು, ಈಗ ಸಿ.ಕೆ.ಪರುಶುರಾಮಯ್ಯನವರಿಂದ ಕೊಡುಗೆಯಾಗಿ ಬಂದಂತಹ ಜಮೀನಿನಲ್ಲಿ ಕಟ್ಟಡವಾಗಿದೆ ಎಂದರಲ್ಲದೆ ಬಾಡಿಗೆಯಲ್ಲಿದ್ದಾಗಿನ ಹಣವನ್ನು  ಶಿಕ್ಷಣ ಇಲಾಖೆ ಇನ್ನೂ ನೀಡಿಲ್ಲ ಎಂದರು. ಈ ಬಗ್ಗೆ ಶೀಘ್ರ ತೀಮರ್ಾನವಾಗದಿದ್ದರೆ ಹೋರಾಟ ಮಾಡುವುದಾಗಿ ತಿಳಿಸಿದರು. 
ಸ್ಪಂದನ ಪ್ರಗತಿಪರ ಒಕ್ಕೂಟದ ಕಾಯರ್ಾಧ್ಯಕ್ಷ ಸಿ.ಬಿ.ಲೋಕೇಶ್ ಮಾತನಾಡಿ ಸ್ಪಂದನ ಒಕ್ಕೂಟ ಆರಂಭವಾಗಿ 2ವರ್ಷವಾಗಿದೆ, ಆಗಿನಿಂದಲೂ ಒಕ್ಕೂಟ ಹಲವಾರು ಹೋರಾಟ, ಜನರಿಗೆ ಸ್ಪಂದನೆ ನೀಡುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಗಿದೆ ಎಂದರಲ್ಲದೆ ಸ್ಪಂದನ ಒಕ್ಕೂಟ ಬಡವಿದ್ಯಾಥರ್ಿಗಳನ್ನು ಹುಡುಕಿ ನೋಟ್ಬುಕ್ ನೀಡುತ್ತಿದ್ದು ಇದರ ಸದುಪಯೋಗವಾಗಬೇಕೆಂದರು.
ಸಿ.ಆರ್.ಪಿ. ದುರ್ಗಯ್ಯ ಮಾತನಾಡಿ ನಾವು ವಿದ್ಯಾಥರ್ಿಗಳಾಗಿದ್ದ ಸಂದರ್ಭದಲ್ಲಿ ನಮಗೆ ಯಾವುದೇ ರೀತಿಯ ಸೌಕರ್ಯ ದೊರಕುತ್ತಿರಲಿಲ್ಲ ಆದರೆ ಈಗಿನ ವಿದ್ಯಾಥರ್ಿಗಳಿಗೆ ಸಕರ್ಾರ ಹಾಗೂ ಸಂಘ ಸಂಸ್ಥೆಗಳು ಅವರ ಆಥರ್ಿಕ ಪರಿಸ್ಥಿತಿ ಬದಲಾಯಿಸಲು ಮಾಡುತ್ತಿರುವ ಕಾರ್ಯಕ್ರಮಗಳು ಶ್ಲಾಘನೀಯವಾದುದು ಎಂದರು.
ಕಾರ್ಯಕ್ರಮದಲ್ಲಿ  ಸ್ಪಂದನ ಒಕ್ಕೂಟದ ತ್ಯಾಗರಾಜು, ಎಸ್.ಡಿ.ಎಂ.ಸಿ ಅಧ್ಯಕ್ಷ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾಥರ್ಿಗಳು ಪ್ರಾಥರ್ಿಸಿದರೆ, ಶಾಲೆಯ ಮು.ಶಿ. ತಿಲೋತ್ತಮೆ ಸ್ವಾಗತಿಸಿ ಬಸವರಾಜು ನಿರೂಪಿಸಿದರೆ ಚಂದ್ರಮತಿ ವಂದಿಸಿದರು.

ಜು.14ರಂದು ರೋಟರಿ ಪದವಿ ಸ್ವೀಕಾರ ಸಮಾರಂಭ
ಚಿಕ್ಕನಾಯಕನಹಳ್ಳಿ,ಜು.12  ;  2013-14ನೇ ರೋಟರಿ ಇಂಟರಾಕ್ಟ್-ಕಿಂಡರಾಕ್ಟರ್ ನೂತನ ಪದಾಧಿಕಾರಿಗಳ 38ನೇ ಪದವಿ ಸ್ವೀಕಾರ ಸಮಾರಂಭವನ್ನು ಇದೇ 14ರ ಭಾನುವಾರ ಏರ್ಪಡಿಸಲಾಗಿದೆ.
ಸಮಾರಂಭವನ್ನು ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ ಸಪ್ತತಿ ಸಭಾಂಗಣದಲ್ಲಿ ಸಂಜೆ 5.30ಕ್ಕೆ ಹಮ್ಮಿಕೊಂಡಿದ್ದು ಕಲ್ಪತರು ಕಾಲೇಜು ಅತಿಥಿ ಉಪನ್ಯಾಸಕ ದಿಲೀಪ್ಕುಮಾರ್ ಷಾ ಉದ್ಘಾಟನೆ ನೆರವೇರಿಸಲಿದ್ದಾರೆ. ಡಿಸ್ಟ್ರಿಕ್ಟ್ 3190 ಗವರ್ನರ್ ನಾಮಿನಿ ರೊ.ಕೆ.ಪಿ.ನಾಗೇಶ್ ಪದವಿ ಪ್ರಧಾನ, ಹೊಸ ಸದಸ್ಯರ ಸೇರ್ಪಡೆ, ಸನ್ಮಾನ ಮಾಡಲಿದ್ದು ಅಸಿಸ್ಟೆಂಟ್ ಗವರ್ನರ್ ರೊ.ಜಯರಾಂ ಇಂಟರಾಕ್ಟ್ ಮತ್ತು ಕಿಂಡರಾಕ್ಟ್ ಪದವಿ ಪ್ರಧಾನ ಮಾಡಲಿದ್ದಾರೆ. ಬೆಂಗಳೂರು ರೋಟರಿ ಅಸಿಸ್ಟೆಂಟ್ ಗವರ್ನರ್ ರೊ.ಎಚ್.ಆರ್.ಶ್ರೀನಾಥ್ಬಾಬು ರೋಟರಿ ಪತ್ರಿಕೆ ನಾಯಕ ಮತ್ತು ನೂತನ ಕ್ಲಬ್ ವೆಬ್ಸೈಟ್ ಬಿಡುಗಡೆ ಮಾಡಲಿದ್ದಾರೆ. ಕವಿ-ಲೇಖಕ ವಿದ್ಯಾವಾಚಸ್ಪತಿ ಕವಿತಾಕೃಷ್ಣ ರೋಟರಿಯಲ್ಲಿ ತೊಡಗಿಸಿಕೊಳ್ಳಿ-ಜೀವನವನ್ನು ಉತ್ತಮಗೊಳಿಸಿ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಇದೇ ಸಂದರ್ಭದ್ಲಲಿ ಕನ್ನಡದ ಕೋಟ್ಯಾಧಿಪತಿ ಭಾಗವಹಿಸಿದ್ದ  ಸಿ.ಎಸ್.ಬೀರಪ್ಪ, ಪ್ರತಿಭಾನ್ವಿತ ಕ್ರೀಡಾಪಟು ಅನುಷಾ ಎಸ್.ಶೆಟ್ಟಿ, ಪ್ರತಿಭಾನ್ವಿತ ವಿದ್ಯಾಥರ್ಿ ಟಿ.ಎನ್.ಪಲ್ಲವಿ, ಆರ್.ಮಧುಸೂದನ್ರವರಿಗೆ ಸನ್ಮಾನಿಸಲಾಗುವುದು. 

ಜು.15ರಂದು ಪೂರ್ಣಚಂದ್ರ ತೇಜಸ್ವಿ ಸಾಹಿತ್ಯ ಕುರಿತ ರಾಜ್ಯ ಮಟ್ಟದ ವಿಚಾರ ಸಂಕಿರಣ


ಚಿಕ್ಕನಾಯಕನಹಳ್ಳಿ,ಜು.12 ;ನವೋದಯ ಪ್ರಥಮ ದಜರ್ೆ ಕಾಲೇಜ್ನ ಕನ್ನಡ ವಿಭಾಗ ಹೊಸ ಪೀಳಿಗೆಗಾಗಿ ಪೂರ್ಣಚಂದ್ರ ತೇಜಸ್ವಿ ಸಾಹಿತ್ಯ ಎಂಬ ವಿಷಯವಾಗಿ  ರಾಜ್ಯ ಮಟ್ಟದ ವಿಚಾರ ಸಂಕಿರಣ ಇದೇ15ರ ಸೋಮಾವಾರ ಏರ್ಪಡಿಸಲಾಗಿದೆ ಎಂದು ಪ್ರಾಂಶುಪಾಲ ಬಿ.ಎಸ್.ಬಸವಲಿಂಗಯ್ಯ ತಿಳಿಸಿದರು.
ಪಟ್ಟಣದ ಎನ್.ಎಫ್.ಜಿ.ಸಿ.ಕಾಲೇಜಿನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನವೋದಯ ಕಾಲೇಜು ಯುಜಿಸಿ ಅನುದಾನಕ್ಕೆ ಒಳಪಟ್ಟು ಪ್ರಗತಿ ಪಥದಲ್ಲಿ ಸಾಗುತ್ತಿದೆ. ಪಠ್ಯ ಚಟುವಟಿಕೆಗಳಲ್ಲದೆ ವ್ಯಕ್ತಿತ್ವ ವಿಕಸನಕ್ಕೆ ಇಂಬು ನೀಡುವಂತಹ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ವಿಚಾರ ಸಂಕಿರಣಗಳ, ವಚನ ಕಮ್ಮಟ, ಪ್ರತಿಭೆಯ ಅನಾವರಣಕ್ಕಾಗಿ ಪೂರಕವಾದ ಚಟುವಟಿಕೆಗಳಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ, ನಮ್ಮ  ಸಂಸ್ಥೆ ಯುಜಿಸಿ ಪ್ರಾಯೋಜಿಕತ್ವದಲ್ಲಿ ರಾಜ್ಯ ಮಟ್ಟದ ವಿಚಾರ ಸಂಕಿರಣ ಹಮ್ಮಿಕೊಂಡಿದೆ. 15ರ ಸೋಮಾವರ ಬೆಳಗ್ಗೆ 10ಕ್ಕೆ ನಡೆಯುವ ವಿಚಾರ ಸಂಕಿರಣದ ಉದ್ಘಾಟನೆಯನ್ನು ನವೋದಯ ಸಂಸ್ಥೆಯ ಅಧ್ಯಕ್ಷರಾದ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ ಕಾರ್ಯದಶರ್ಿ ಬಿ.ಕೆ.ಚಂದ್ರಶೇಖರ್ ಉದ್ಘಾಟನೆ ನೆರವೇರಿಸಲಿದ್ದು ಅಂತರ ರಾಷ್ಟ್ರೀಯ ಕಲಾವಿದ ಡಾ.ಕೆ.ಟಿ.ಶಿವಪ್ರಸಾದ್ ಆಶಯ ಭಾಷಣ ಮಾಡಲಿದ್ದಾರೆ. ಸಂಸ್ಥೆಯ ಉಪಾಧ್ಯಕ್ಷ ಪ್ರೊ.ಎಂ.ರೇಣುಕಾರ್ಯ ಅತಿಥಿಗಳಾಗಿ ಭಾಗವಹಿಸುವರು.
ವಿಚಾರ ಸಂಕಿರಣದಲ್ಲಿ ಬೆಳಗ್ಗೆ 11ಕ್ಕೆ ಮೊದಲ  ಗೋಷ್ಠಿ ನಡೆಯಲಿದ್ದು ಆಹಾರ ತಜ್ಞ ಮತ್ತು ಕೃಷಿ ಚಿಂತಕ ಡಾ.ಕೆ.ಸಿ.ರಘು, ಅನ್ನ ಮತ್ತು ಬೇಸಾಯ ಪೂರ್ಣಚಂದ್ರ ಪೂರ್ಣಚಂದ್ರ ತೇಜಸ್ವಿ ನಿಲುವುಗಳು ಎಂಬ ವಿಷಯವಾಗಿ ಮಾತನಾಡಿಲಿದ್ದಾರೆ,  ಲೇಖಕ ಮತ್ತು ಸಂಸ್ಕೃತಿ ಚಿಂತಕ ಡಾ.ಎಸ್.ನಟರಾಜ ಬೂದಾಳು ತೇಜಸ್ವಿ ಸಾಹಿತ್ಯದ ಮೀಮಾಂಸ ನಿಲುವುಗಳು ಎಂಬ ವಿಷಯವಾಗಿ ಹಾಗೂ ಲೇಖಕ ಡಾ.ಚಂದ್ರಶೇಖರ ನಂಗಲಿ ತೇಜಸ್ವಿ ನಿಸರ್ಗದ ಅನುಸಂಧಾನ ವಿಷಯದ ಬಗ್ಗೆ ಮಾತನಾಡಲಿದ್ದಾರೆ. 
ಎರಡನೇ ಗೋಷ್ಠಿಯಲ್ಲಿ ಕವಿಯಿತ್ರಿ ಮತ್ತು ವಿಮರ್ಶಕರಾದ ಡಾ.ತಾರಿಣಿ ಶುಭದಾಯಿನಿ ತೇಜಸ್ವಿ ಸಾಹಿತ್ಯ ವರ್ತಮಾನದ ಪ್ರಸ್ತುತತೆ ವಿಷಯದ ಬಗ್ಗೆ ಹಾಗೂ  ಲೇಖಕ ಮತ್ತು ವಿಮರ್ಶಕ ಡಾ.ಬಂಜಗೆರೆ ಜಯಪ್ರಕಾಶ್ ತೇಜಸ್ವಿ ಸಾಹಿತ್ಯದಲ್ಲಿ ವಿಜ್ಞಾನದ ಅನುಸಂಧಾನ ವಿಷಯದ ಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ. 
ಗೋಷ್ಠಿ ಮಧ್ಯಾಹ್ನ 3ಕ್ಕೆ ಪ್ರತಿನಿಧಿಗಳಿಂದ ತೇಜಸ್ವಿಯವರ ಕಾದಂಬರಿಗಳು-ವರ್ತಮಾನದ ಅನುಸಂಧಾನ, ತೇಜಸ್ವಿಯವರ ವಿಜ್ಞಾನದ ಬರವಣಿಗೆಗಳು ಹೊಸ ದೃಷ್ಠಿಕೋನ. ತೇಜಸ್ವಿ ಸಣ್ಣ ಕತೆಗಳು-ಪ್ರಸ್ತುತ ಕನ್ನಡ ಸಂದರ್ಭ ವಿಷಯದ ಬಗ್ಗೆ ಪ್ರಬಂಧ ಮಂಡನೆ ಹಾಗೂ ಸಮಾರೋಪ ನಡೆಯಲಿದ್ದು ಅಧ್ಯಕ್ಷತೆಯನ್ನು ಪ್ರಾಧ್ಯಾಪಕ ಡಾ.ಜಿ.ಎಸ್.ರಮೇಶ್ ವಹಿಸಲಿದ್ದಾರೆ.
ವಿಚಾರ ಸಂಕಿರಣದ ಉಪಯೋಗವನ್ನು ಎಲ್ಲಾ ಕನ್ನಡ ಮನಸ್ಸುಗಳು ಬಳಸಿಕೊಳ್ಳುವಂತೆ ತಿಳಿಸಿದರಲ್ಲದೆ, ಭಾಗವಹಿಸುವ ಉಪನ್ಯಾಸಕರುಗಳಿಗೆ ಕಾಲೇಜು ಶಿಕ್ಷಣ ಇಲಾಖೆ ಹಾಗೂ ಹೈಸ್ಕೂಲ್ ಮತ್ತು ಪ್ರಾಥಮಿಕ ಶಾಲೆಯ ಕನ್ನಡ ಶಿಕ್ಷಕರಿಗೆ ಓ.ಓ.ಡಿ ಸೌಲಭ್ಯವಿದೆ ಎಂದು  ಪ್ರೊ.ಬಸವಲಿಂಗಯ್ಯ ತಿಳಿಸಿದರು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಶಿವಯೋಗಿಸ್ವಾಮಿ, ಸಿ.ರವಿಕುಮಾರ್ ಉಪಸ್ಥಿತರಿದ್ದರು.