Wednesday, April 9, 2014



ಶ್ರೀ ರಾಮನವಮಿ ಅಂಗವಾಗಿ ಏಳು ದಿನಗಳ ಕಾಲ ಭಜನಾ ಕಾರ್ಯಕ್ರಮ 
ಚಿಕ್ಕನಾಯಕನಹಳ್ಳಿ,ಏ.09 : ಪಟ್ಟಣದ ಬನಶಂಕರಿ ದೇವಾಲಯದಲ್ಲಿ ರಾಮನವಮಿಯ ಅಂಗವಾಗಿ ಶ್ರೀ ರಾಮನ ಛಾಯಾಚಿತ್ರ ಪ್ರತಿಷ್ಠಾಪಿಸಿ, ಪೂಜೆ, ನವಗ್ರಹ ಸ್ಥಾಪನೆ, ಹೋಮ, ಹವನದೊಂದಿಗೆ ಪ್ರತಿದಿನ ವಿಶೇಷ ಪೂಜೆ ಹಾಗೂ ಏಳು ದಿನಗಳ ಕಾಲ ಅಖಂಡ ಶ್ರೀ ರಾಮ ಭಜನೆ ನಡೆಯಲಿದೆ.
ಶ್ರೀ ರಾಮ ಸಪ್ತಾಹ ಸಮಿತಿ ವತಿಯಿಂದ ಪ್ರತಿ ವರ್ಷ ಶ್ರೀ ರಾಮನವಮಿಯಂದು ಆರಂಭವಾಗುವ ಶ್ರೀ ರಾಮ ಭಜನೆ ಏಳುದಿನಗಳ ಕಾಲ ನಡೆಯುತ್ತಿದೆ, ಆರಂಭ ದಿನದಂದು ಪಾನಕ, ಫಲಹಾರ ನೀಡಲಾಯಿತು. ಭಜನೆಯು ಏಪ್ರಿಲ್ 14ರವರೆಗೆ ನಡೆಯಲಿದ್ದು, ಬನಶಂಕರಿ ದೇವಾಲಯದ ಮುಂಭಾಗದಲ್ಲಿ ಹಾಕಿರುವ ವಿದ್ಯುದ್ದೀಪ ಮತ್ತು ಅಲಂಕೃತವಾದ ಭವ್ಯ ಚಪ್ಪರ ಹಾಕಲಾಗಿದ್ದು ಅಖಂಡ ಭಜನೆ ಮಾಡುವ ಭಕ್ತರಿಗೆ ಪ್ರತಿನಿತ್ಯ ಅನ್ನಸಂತರ್ಪಣೆ ಸೇವೆ ನಡೆಯುತ್ತದೆ.
ಭಜನಾ ಕಾರ್ಯಕ್ರಮದ ಭಕ್ತರಾದ ಸಿ.ಜಿ.ದಯಾನಂದ್ ಮಾತನಾಡಿ 1944ರಿಂದಲೂ ಶ್ರೀ ರಾಮನವಮಿ ಆಚರಿಸಿಕೊಂಡು ಬರುತ್ತಿದ್ದು 70ವರ್ಷಗಳಿಂದಲೂ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರುತ್ತಿದೆ,  ಭಜನೆಯಲ್ಲಿ ನಿತ್ಯ ಐವತ್ತಕ್ಕೂ ಹೆಚ್ಚು ಜನ ಶ್ರೀ ರಾಮನ ಭಜನೆ ಪಾಲ್ಗೊಳ್ಳುತ್ತಿದ್ದಾರೆ. ಈ  ಏಳು ದಿನಗಳ ಭಜನಾ ಕಾರ್ಯಕ್ರಮದ ನಂತರ ಶ್ರೀರಾಮ ದೇವರ ಮತ್ತು ಚೌಡೇಶ್ವರಿ ಹಾಗೂ ಬನಶಂಕರಿ ಅಮ್ಮನವರ ಉತ್ಸವದೊಂದಿಗೆ ಓಕುಳಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದೇವಾಂಗ ಸಂಘದ ನಿದರ್ೇಶಕ ಸಿ.ವಿ.ಪ್ರಕಾಶ್, ಶಿಕ್ಷಕ ಚಿ.ನಿ.ಪುರುಷೋತ್ತಮ್, ಶ್ರೀ ರಾಮ ಸಪ್ತಾಯ ಸಮಿತಿ ಕಾರ್ಯಕಾರಿ ಮಂಡಳಿಯ ಕೆ.ಎಂ.ಕುಮಾರ್, ರಂಗನಾಥ್, ಮಲ್ಲಿಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪಟ್ಟಣದ ಧಮರ್ಾವರ ಬೀದಿಯ ಶ್ರೀ ರಾಮ ಮಂದಿರ ದೇವಾಲಯ ಹಾಗೂ ಹಳೆಯೂರು ಆಂಜನೇಯಸ್ವಾಮಿ ದೇವಸ್ಥಾನ, ಹಳ್ಳಿಕಾರರ ಬೀದಿಯ ಶ್ರೀ ರಾಮ ಭಜನಾ ಮಂದಿರ, ಮಹಾಲಕ್ಷ್ಮಿ ಬಡಾವಣೆಯ ಶ್ರೀ ಆಂಜನೇಯಸ್ವಾಮಿ, ಜೋಗಿಹಳ್ಳಿ ಶ್ರೀ ಆದಿ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ಶ್ರೀ ರಾಮನವಮಿ ಅಂಗವಾಗಿ ಪಾನಕ ಫಲಹಾರ ವಿತರಿಸಲಾಯಿತು.



ಮತ ಚಲಾಯಿಸುವುದು ಪ್ರತಿಯೊಬ್ಬರ ಹಕ್ಕು ಹಾಗೂ ಕರ್ತವ್ಯ
ಚಿಕ್ಕನಾಯಕನಹಳ್ಳಿ : ಮತ ಚಲಾಯಿಸುವುದು ಪ್ರತಿಯೊಬ್ಬರ ಹಕ್ಕು ಹಾಗೂ ಕರ್ತವ್ಯ ಎಂದು ಸ್ವೀಪ್ ಸಮಿತಿಯ ಸದಸ್ಯರಾದ ನಟರಾಜ್ ತಿಳಿಸಿದರು.
ಪಟ್ಟಣದ ಮಹಿಳಾ ಮತ್ತು ಮಕ್ಕಳ ಇಲಾಖಾ ಸಭಾಂಗಣದಲ್ಲಿ ಸ್ವೀಪ್ ಸಮಿತಿ ವತಿಯಿಂದ ಅಂಗನವಾಡಿ ಕಾರ್ಯಕರ್ತರಿಗೆ ಮತ ಚಲಾಯಿಸುವ ಬಗ್ಗೆ ಮತದಾರರರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿ ಲೋಕಸಭಾ ಚುನಾವಣೆಯಲ್ಲಿ ಶೇ 50ರಿಂದ 60 ರಷ್ಟು ಮತದಾನವಾಗುತ್ತಿದೆ, ವಿಧಾನಸಭೆ, ಜಿ.ಪಂ, ತಾ.ಪಂ ಹಾಗೂ ಸ್ಥಳೀಯ ಚುನಾವಣೆಯಲ್ಲಿ ಅತಿ ಹೆಚ್ಚು ಮತದಾನವಾಗುತ್ತಿದೆ ಎಂಬ ವರದಿಯ ಆಧಾರದ ಮೇಲೆ ಮತದಾರರಲ್ಲಿ ಜಾಗೃತಿ ಮೂಡಿಸಿ ಮತದಾರರು ಮತಗಟ್ಟೆಯ ಕಡೆ ಬಂದು ಮತ ಚಲಾಯಿಸುವಂತೆ ಜಾಗೃತಿ ಮೂಡಿಸಬೇಕು ಎಂದರಲ್ಲದೆ ಅಂಗನವಾಡಿ ಕಾರ್ಯಕರ್ತರು ಯಾವುದೇ ಪಕ್ಷ, ಅಭ್ಯಥರ್ಿಯ ಪರವಾಗಿ ಕೆಲಸ ಮಾಡದೆ ಜಾಗೃತಿಯಿಂದ ಇರಬೇಕು, ಅಂಗನವಾಡಿ ಕೇಂದ್ರಗಳಲ್ಲಿ 1ಸಾವಿರದಿಂದ 2 ಸಾವಿರ ಜನಸಂಖ್ಯೆಯ ಮತದಾರರು ಇರುವುದರಿಂದ ಇವರಲ್ಲಿ ಕೆಲವರು ಮತದಾನದ ಬಗ್ಗೆ ತಿರಸ್ಕಾರ ಭಾವನೆ ಇರುವುದರಿಂದ ಅವರಲ್ಲಿ ಮತ ಚಲಾಯಿಸುವ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಪ್ರಜಾಪ್ರಭುತ್ವದ ಬಗ್ಗೆ ತಿಳುವಳಿಕೆಯನ್ನು ನೀಡಿ ಆಯಾ ಅಂಗನವಾಡಿ ಕೇಂದ್ರಗಳಲ್ಲಿ ಬೀದಿನಾಟಕ ಹಾಗೂ ರಂಗೋಲಿ ಸ್ಪಧರ್ೆಯಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸಿ ಎಂದು  ಸಲಹೆ ನೀಡಿದರು.
ಸಿ.ಡಿ.ಪಿ.ಓ ಅನೀಸ್ಖೈಸರ್ ಮಾತನಾಡಿ ಮತದಾರರು ತಾವು ಯಾರಿಗೂ ಮತ ಹಾಕಬಾರದೆಂಬ  ಅಭಿಪ್ರಾಯ ಹೊಂದಿರುತ್ತಾರೆ, ಅಂತಹವರು ಮತ ಯಂತ್ರಗಳ ನೋಟಾ ಎಂಬ ಬಟನ್ ಒತ್ತುವುದರಿಂದ ತಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದು ಎಂದರು. 
ಎ.ಸಿ.ಡಿ.ಪಿ.ಓ ಪರಮೇಶ್ವರಪ್ಪ, ಮಹದೇವಮ್ಮ, ಲಕ್ಷ್ಮಮ್ಮ ಮತ್ತಿತರರು ಉಪಸ್ಥಿತರಿದ್ದರು.