Saturday, April 5, 2014


 ನನ್ನ ರಾಜಕೀಯ ಶಕ್ತಿ ಕುಂದಿಲ್ಲ : ಜೆ.ಸಿ.ಮಾಧುಸ್ವಾಮಿ 
ಚಿಕ್ಕನಾಯಕನಹಳ್ಳಿ,ಏ.05 : ಇನ್ನೂ ನನ್ನ ರಾಜಕೀಯ ಶಕ್ತಿ ಕುಂದಿಲ್ಲ, ತಾಲ್ಲೂಕಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಈಗಾಗಲೆ ಶಕ್ತಿಯಾಗಿ ಬೆಳೆದಿದ್ದೇವೆ, ವಿಧಾನಸಭೆ ಚುನಾವಣೆಯಲ್ಲಿ 50ಸಾವಿರಕ್ಕೂ ಹೆಚ್ಚು ಮತ ಪಡೆದು ಗುಂಪಾಗಿ ಬೆಳೆದಿದ್ದೇವೆ, ಈ ಮೂಲಕ ಕಾರ್ಯಕರ್ತರ ಹಿತವನ್ನು ಕಾಯುವುದಾಗಿ ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಪಟ್ಟಣದ ನವೋದಯ ಪ್ರಥಮ ದಜರ್ೆ ಕಾಲೇಜಿನಲ್ಲಿ ಮಾಜಿ ಶಾಸಕ ಜೆ.ಸಿ.ಎಂ ಅಭಿಮಾನಿಗಳ ಬಳಗ ಸಭೆಯಲ್ಲಿ ಮಾತನಾಡಿ ಅನಿವಾರ್ಯ ಕಾರಣದಿಂದ ಹಾಗೂ ಕಾರ್ಯಕರ್ತರ ಹಿತದೃಷ್ಠಿಯಿಂದ ಬಿಜೆಪಿಗೆ ಸೇರುವುದು ಅನಿವಾರ್ಯವಾಗಿದೆ, ಒಮ್ಮೆ ಕಾಂಗ್ರೆಸ್ಗೆ ಹೋಗಬೇಕೆಂಬ ತೀಮರ್ಾನ ತೆಗೆದುಕೊಂಡಿದ್ದು ಕೆಲವು ಕಾಂಗ್ರೆಸ್ ನಾಯಕರು ಅಡಚಣೆ ಮಾಡಿದುದರಿಂದ ಕಾಂಗ್ರೆಸ್ಗೆ ಹೋಗಲಿಲ್ಲ, ನಂತರ ಸಂಸದ ಅನಂತ್ಕುಮಾರ್ ಹಾಗೂ ಜಗದೀಶ್ ಶೆಟ್ಟರ್ ದೂರವಾಣಿಯ ಮುಖಾಂತರ ಸಂಪಕರ್ಿಸಿದರು, ಆಕಸ್ಮಿಕವಾಗಿ ಸಿದ್ದಗಂಗಾ ಮಠಾಧೀಶ್ವರರಾದ ಡಾ.ಶಿವಕುಮಾರಸ್ವಾಮಿಗಳ ಹುಟ್ಟುಹಬ್ಬಕ್ಕೆ ಶುಭ ಕೋರಲು ಹೋದಾಗ ಆಕಸ್ಮಿಕವಾಗಿ ಭೇಟಿಯಾದೆವು, ಆಗ ರಾಜಕೀಯದ ಬಗ್ಗೆ ಚಚರ್ೆ ನಡೆದು 5ನೇ ತಾರೀಖಿನವರೆಗೆ ಸಮಯ ನೀಡಿ ಕಾರ್ಯಕರ್ತರ ಅಭಿಪ್ರಾಯ ಪಡೆದು ಮುಂದಿನ ತೀಮರ್ಾನ ತೆಗೆದುಕೊಳ್ಳುವುದಾಗಿ ಹೇಳಿದ ನಂತರ ಇಂದು ಕಾರ್ಯಕರ್ತರೊಂದಿಗೆ ಸಭೆಯಲ್ಲಿ ತೀಮರ್ಾನ ಕೈಗೊಳ್ಳುತ್ತೇನೆ, ಕಾರ್ಯಕರ್ತರ ಅಭಿಪಾಯದಂತೆ ಬಿಜೆಪಿ ಪಕ್ಷ ಸೇರುತ್ತೇನೆ ಎಂದು ಹೇಳಿದರು.
 ನನ್ನನ್ನು ಪಕ್ಷಾಂತರಿ ಎಂದು ಕರೆಯಬೇಡಿ ಎಂದ ಅವರು ಕೆಜೆಪಿಗೆ ಹೋಗಬೇಕಾದರೆ ಕಾರ್ಯಕರ್ತರ ಅಭಿಪ್ರಾಯ ಪಡೆದೇ ನಾನು ಯಡಿಯೂರಪ್ಪನವರ ಸಮ್ಮುಖದಲ್ಲಿ ಕೆಜೆಪಿ ಪಕ್ಷಕ್ಕೆ ಸೇರ್ಪಡೆಯಾದೆನು, ಅದೇ ರೀತಿ ಈಗಲೂ ಕಾರ್ಯಕರ್ತರ ಅಭಿಪ್ರಾಯ ಪಡೆದು ಬಿಜೆಪಿಗೆ ಸೇರುತ್ತಿದ್ದೇನೆ ಕಾರ್ಯಕರ್ತರು ಬಿಜೆಪಿ ಸದಸ್ಯತ್ವ ಪಡೆದು ರಾತ್ರಿ ಹಗಲು ಬಿಜೆಪಿ ಅಭ್ಯಥರ್ಿ ಜಿ.ಎಸ್.ಬಸವರಾಜುರವರಿಗೆ ಕೆಲಸ ಮಾಡಿ ಅತಿ ಹೆಚ್ಚು ಮತವನ್ನು ಬಸವರಾಜುರವರಿಗೆ ಹಾಕಿಸಿ ನಮ್ಮ ಶಕ್ತಿಯನ್ನು ತೋರಿಸಿ ಎಂದ ಅವರು ಪ್ರಾಮಾಣಿಕವಾಗಿ ಕೆಲಸ ಮಾಡಿ ಯಾವುದೇ ಷರತ್ತುಗಳಿಲ್ಲದೆ ಎಲ್ಲರೂ ಬಿಜೆಪಿಗೆ ಸೇರಿ ಎಂದು ಕರೆ ನೀಡಿದರು.
ದೇಶದ ಬದಲಾವಣೆಯ ಗಾಳಿ ಬೀಸುತ್ತಿರುವುದರಿಂದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಅಭಿವೃದ್ದಿ ಕಾರ್ಯಗಳ ರೀತಿಯಲ್ಲಿ ದೇಶವನ್ನು ಅಭಿವೃದ್ದಿಯತ್ತ ಕೊಂಡೊಯ್ಯಲು ನಾವೆಲ್ಲರೂ ನರೇಂದ್ರ ಮೋದಿಯವರಿಗೆ ಬೆಂಬಲಿಸುವಂತೆ ಕಾರ್ಯಕರ್ತರಿಗೆ ಮನವಿ ಮಾಡಿದರು.
ನಾವೆಲ್ಲರೂ ಬಿಜೆಪಿಗೆ ಹೋಗುತ್ತಿರುವುದರಿಂದ ಮೂಲಕಾರ್ಯಕರ್ತರಿಗೆ ಸ್ವಲ್ಪ ಇರುಸು ಮುರುಸುವಾಗುವುದರಲ್ಲಿ ಅನುಮಾನವಿಲ್ಲ ಆದ್ದರಿಂದ ಅವರ ಜೊತೆಗೂಡಿ ಏನೇ ಬಿನ್ನಾಭಿಪ್ರಾಯವಿದ್ದರೂ ಬದಿಗೊತ್ತಿ ಬಿಜೆಪಿ ಗೆಲುವಿಗೆ ಶ್ರಮಿಸುವಂತೆ ಕರೆ ನೀಡಿದರು.
ಮಾಜಿ ಶಾಸಕ ಜೆಸಿಎಂ ಅಭಿಮಾನಿಗಳ ಸಭೆಗೆ ಬಿಜೆಪಿ ಲೋಕಸಭಾ ಅಭ್ಯಥರ್ಿ ಜಿ.ಎಸ್.ಬಸವರಾಜು ಬೇಟಿ ನೀಡಿದರು. ತಮ್ಮನ್ನು ಬೆಂಬಲಿಸುವಂತೆ ಕೋರಿದರು. 
ಸಭೆಯಲ್ಲಿ ಜಿ.ಪಂ.ಸದಸ್ಯ ಲೋಹಿತಬಾಯಿ, ಜಿಲ್ಲಾ ಹಾಲು ಒಕ್ಕೂಟದ ನಿದರ್ೇಶಕ ಶಿವನಂಜಪ್ಪ ಹಳೆಮನೆ, ಜಿಲ್ಲಾ ಡಿಸಿಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್, ತಾ.ಪಂ.ಉಪಾಧ್ಯಕ್ಷ ಹೊಸಳ್ಳಿ ಜಯಣ್ಣ, ತಾ.ಪಂ.ಸದಸ್ಯ ಹೆಚ್.ಆರ್.ಶಶಿಧರ್, ನಿರಂಜನಮೂತರ್ಿ, ಲತಾಕೇಶವಮೂತರ್ಿ,  ಎ.ಪಿ.ಎಂ.ಸಿ ಅಧ್ಯಕ್ಷ ಶಿವರಾಜ್, ಕೆ.ಜಿ.ಪಿ ಅಧ್ಯಕ್ಷ ಹೆಚ್.ಎಂ.ಸುರೇಂದ್ರಯ್ಯ, ಜಿ.ಪಂ.ಮಾಜಿ ಸದಸ್ಯ ಶಿವರಾಂ, ಯಳನಡು ಮಲ್ಲಿಕಾಜರ್ುನಯ್ಯ,  ಮತ್ತಿತರರು ಉಪಸ್ಥಿತರಿದ್ದರು.


ತುಮಕೂರು ಲೋಕಸಭಾ ಚುನಾವಣಾ ವೀಕ್ಷಕ ನಾನಿವಾಲಿ ತಾಲ್ಲೂಕಿಗೆ ಭೇಟಿ
ಚಿಕ್ಕನಾಯಕನಹಳ್ಳಿ,ಏ.05: ಶನಿವಾರ ತುಮಕೂರು ಲೋಕಸಭಾ ಚುನಾವಣಾ ವೀಕ್ಷಕ ನಾನಿವಾಲಿ ತಾಲ್ಲೂಕಿಗೆ ಭೇಟಿ ನೀಡಿ ಹಾಲುಗೊಣ, ಜೆ.ಸಿ.ಪುರ, ತರಬೇನಹಳ್ಳಿ, ಮತಿಘಟ್ಟ ಹಾಗೂ ಪಟ್ಟಣದ ಸಕರ್ಾರಿ ಸ್ವತಂತ್ರ ಪೂರ್ವ ಕಾಲೇಜಿನಲ್ಲಿದ್ದ ಮೆಸ್ಟರಿಂಗ್ ಹಾಗೂ ಡಿಮೆಸ್ಟಂಗ್ ಸ್ಥಳ ಹಾಗೂ ಮತಪೆಟ್ಟಿಗೆ ಭದ್ರತಾ ಕೊಠಡಿಯನ್ನು ಪರಿಶೀಲಿಸಿದರು.
ಚಿ.ನಾ.ಹಳ್ಳಿ ವಿಧಾನಸಭಾ ಕ್ಷೇತ್ರದ ಮತಗಟ್ಟೆಗಳ ರೂಟ್ಮ್ಯಾಪ್ ಹಾಗೂ ಸೆಕ್ಟರ್ ಮ್ಯಾಪ್ ವೀಕ್ಷಿಸಿದರು. ನಂತರ ಚುನಾವಣಾ ಇ.ವಿ.ಎಮ್ ತರಬೇತಿ ಸ್ಥಳಕ್ಕೆ ತೆರಳಿ ಅಧಿಕಾರಿಗಳು ಉತ್ತಮ ತರಬೇತಿಯನ್ನು ಪಡೆದು ಚುನಾವಣೆಯನ್ನು ಶಾಂತಿಯುತ ಮತದಾನ ನಡೆಯುವಂತೆ ಕ್ರಮಕೈಗೊಳ್ಳಿ ಎಂದು ಸಲಹೆ ನೀಡಿದರು.
ಪೋಲಿಸರು ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಮತಘಟ್ಟೆಗಳಿಗೆ ಹೆಚ್ಚಿನ ಪೋಲಿಸ್ ಸಿಬ್ಬಂದಿಯನ್ನು ನೇಮಕ ಮಾಡಿ ಮತದಾನ ಶಾಂತಿಯುತವಾಗಿ ನಡೆಸಲು ಬೇಕಾದ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಚುನಾವಣಾ ವೀಕ್ಷಕ ಇ.ಪ್ರಕಾಶ್, ತಹಶೀಲ್ದಾರ್ ಕಾಮಾಕ್ಷಮ್ಮ, ಇ.ಓ ಕೃಷ್ಣನಾಯ್ಕ್, ಸಿಡಿಪಿಓ ಅನೀಸ್ಖೈಸರ್ ಮತ್ತಿತರರು ಉಪಸ್ಥಿತರಿದ್ದರು. 

ಕುಡಿಯುವ ನೀರಿಗೆ ಹೆಚ್ಚಿನ ಆಧ್ಯತೆ ನೀಡಿ : ಗೋವಿಂದರಾಜು
ಚಿಕ್ಕನಾಯಕನಹಳ್ಳಿ,ಏ.05 : ಗ್ರಾ.ಪಂ. ಪಿಡಿಓಗಳು ಗ್ರಾಮ ಪಂಚಾಯ್ತಿ ಕೇಂದ್ರ ಸ್ಥಳದಲ್ಲಿದ್ದು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಗೋವಿಂದರಾಜು ಸಲಹೆ ನೀಡಿದರು.
ಪಟ್ಟಣದ ತಾಲ್ಲೂಕು ಪಂಚಾಯ್ತಿ ತರಬೇತಿ ಸಭಾಂಗಣದಲ್ಲಿ ಪಿಡಿಓ ಹಾಗೂ ಗ್ರಾಮ ಪಂಚಾಯ್ತಿ ಕಾರ್ಯದಶರ್ಿಗಳ ಸಭೆಯಲ್ಲಿ ಮಾತನಾಡಿ ಕುಡಿಯುವ ನೀರಿಗಾಗಿ ಜಿಲ್ಲೆಯಲ್ಲಿ 15.5 ಕೋಟಿ ಬಿಡುಗಡೆಯಾಗಿದ್ದು ತಾಲ್ಲೂಕಿಗೆ 3ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಲಾಗಿದೆ. ಎಲ್ಲೆಲ್ಲಿ ಬೋರ್ವೆಲ್ಗಳ ಅವಶ್ಯಕತೆ ಇದೆಯೋ ಅಲ್ಲಿ ಮಾತ್ರ ಹೊಸ ಕೊಳವೆ ಬಾವಿಗಳನ್ನು ಕೊರೆಸಿ ಎಂದು ಸಲಹೆ ನೀಡಿದ ಅವರು ಹಳೆ ಕೊಳವೆ ಬಾವಿಗಳನ್ನು ರೀಬೋರ್ ಮಾಡಿಸಿ ಇದರಿಂದ ಹಣ ಉಳಿತಾಯವಾಗುವುದು. ಪಿಡಿಓಗಳು ವಾಟರ್ಮನ್ಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದರೆ ನೀರಿನ ಸಮಸ್ಯೆ ಸ್ವಲ್ಪ ಮಟ್ಟಿಗೆ ಬಗೆಹರಿಸಬಹುದು, ಪ್ರತಿ ಸೋಮವಾರ ವಾಟರ್ಮನ್ಗಳ ಸಭೆ ಕರೆದು ಮಾಹಿತಿ ಪಡೆದು, ಹಳ್ಳಿಗಳಲ್ಲಿ 5ರಿಂದ 6ಗಂಟೆ ವಿದ್ಯುತ್ ಇರುವುದರಿಂದ ಅಷ್ಟರೊಳಗೆ ಸಿಸ್ಟನ್ಗಳನ್ನು ತುಂಬಿಸಿದರೆ ಮಾತ್ರ ನೀರಿನ್ನು ಸರಬರಾಜು ಮಾಡಲು ಸಾಧ್ಯ, ಕೆಲವು ಕಡೆ ನೀರು ಪೋಲಾದರೂ ಯಾರೂ ಗಮನ ಹರಿಸುವುದಿಲ್ಲ ಆದ್ದರಿಂದ ವಾಟರ್ಮನ್ಗಳು ಹಾಗೂ ಕಾರ್ಯದಶರ್ಿಗಳು ಗಮನ ಹರಿಸಿ ಎಂದರು. ಪಿಡಿಓಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳನ್ನು ಪ್ರವಾಸ ಮಾಡಿದರೆ ಮಾತ್ರ ನೀರಿನ ಸಮಸ್ಯೆ ತಿಳಿದುಕೊಂಡು ಸಮಸ್ಯೆ ಬಗೆಹರಿಸಲು ಪರಿಹಾರ ಕಂಡುಕೊಳ್ಳಬಹುದು ಎಂದರು.
ಚುನಾವಣೆ ಇರುವುದರಿಂದ ಪಿಡಿಓಗಳು, ಕಾರ್ಯದಶರ್ಿಗಳು ಎಚ್ಚರದಿಂದ ಕೆಲಸ ನಿರ್ವಹಿಸಿ ಸಾರ್ವಜನಿಕರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು, ಬೀದಿ ನಾಟಕದಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವಂತೆ ಸಲಹೆ ನೀಡಿದರು, ಜಿಲ್ಲೆಯಲ್ಲಿ 49ಸಾವಿರ ಹೊಸ ಮತದಾರರು ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ.  
ಪಿಡಿಓಗಳು ಗ್ರಾಮ ಪಂಚಾಯ್ತಿ ಹಣದಲ್ಲಿ ಕುಡಿಯುವ ನೀರಿಗೆ ಮಾತ್ರ ಉಪಯೋಗಿಸಿ ರಸ್ತೆ, ಮಣ್ಣು ಹಾಕುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಡಿ ಎಂದು ಸಲಹೆ ನೀಡಿದರು, ಕಳೆದ ವರ್ಷ ಅತಿ ಕಡಿಮೆ ಮತದಾನವಾಗಿರುವ ಸ್ಥಳಗಳಲ್ಲಿ ಮತದಾನದ ಬಗೆಗಿನ ಬೀದಿ ನಾಟಕಗಳ ಮೂಲಕ ಜಾಗೃತಿ ಮೂಡಿಸಿ ಎಂದರು.
ಈ ಸಂದರ್ಭದಲ್ಲಿ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಕೃಷ್ಣನಾಯ್ಕ, ಜಿ.ಪಂ. ಎಇಇ ಮಲ್ಲಿಕಾಜರ್ುನ್ ಹಾಗೂ ಪಿಡಿಓಗಳು ಹಾಗೂ ಕಾರ್ಯದಶರ್ಿಗಳು ಉಪಸ್ಥಿತರಿದ್ದರು.