Thursday, March 21, 2013




     ಬಯೋಮೆಟ್ರಿಕ್ ಅಳವಡಿಕೆಯಿಂದಾಗಿ ಅಕ್ರಮಕ್ಕೆ       ಅವಕಾಶವಿಲ್ಲ: ಬಿ.ಸಿ.ಎಂ,ಡಿ.ಓ.ಮುದ್ದುಕುಮಾರ್
                                
ಚಿಕ್ಕನಾಯಕನಹಳ್ಳಿ,ಮಾ.21 : ಬಿ.ಸಿ.ಎಂ.ಹಾಸ್ಟೆಲ್ಗಳಲ್ಲಿ ಬಯೋಮೆಟ್ರಿಕ್ ಅಳವಡಿಸಿದ ನಂತರ ಹಾಜರಿದ್ದವರಿಗೆ ಮಾತ್ರ ಊಟದ ವ್ಯವಸ್ಥೆ ಮಾಡುತ್ತಿದ್ದು ಮಕ್ಕಳ ಹೆಸರಿನಲ್ಲಿ ಯಾವುದೇ ರೀತಿಯ ಅಕ್ರಮ ನಡೆಯಲು ಅವಕಾಶವಿಲ್ಲ ಎಂದು ಜಿಲ್ಲಾ ಬಿ.ಸಿ.ಎಂ.ಅಧಿಕಾರಿ ಸಿ.ಟಿ.ಮುದ್ದುಕುಮಾರ್ ತಿಳಿಸಿದ್ದಾರೆ.
    ಪಟ್ಟಣದ ಮೆಟ್ರಿಕ್ ಪೂರ್ವ ಬಾಲಕರ ಹಾಸ್ಟೆಲ್ಗೆ ಭೇಟಿ ನೀಡಿದ್ದ ಅವರು, ವಿದ್ಯಾಥರ್ಿಗಳೊಂದಿಗೆ ಊಟದ ವ್ಯವಸ್ಥೆ, ಸಕರ್ಾರಿ ಸವಲತ್ತುಗಳ ವಿತರಣೆಯ ಬಗ್ಗೆ ಸಮಾಲೋಚನೆ ನಡೆಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.
    ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಈ ಹಾಸ್ಟೆಲ್ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರು ನೀಡಿದ ಸೂಚನೆಗಳ ಅನುಷ್ಠಾನದ ಬಗ್ಗೆ ವೀಕ್ಷಿಸಲು ಆಗಮಿಸಿರುವುದಾಗಿ ತಿಳಿಸಿದ ಅವರು, ಪಟ್ಟಣದ ಈ ಹಾಸ್ಟೆಲ್ನ ವಾಡರ್್ನ್ ವಿರುದ್ದ ಶಿಸ್ತು ಕ್ರಮ ಜರುಗಿಸಿದ್ದು, ಅವರ ಜವಬ್ದಾರಿಯನ್ನು  ಪಕ್ಕದ ಹಾಸ್ಟೆಲ್ ವಾಡರ್್ನ್ಗೆ ವಹಿಸಿದೆ ಎಂದರು.
    ಸಕರ್ಾರಿ ಶಾಲೆಗಳ ಮಕ್ಕಳಿಗೆ ಈ ಶೈಕ್ಷಣಿಕ ವರ್ಷಕ್ಕೆ ಸಮವಸ್ತ್ರ ವಿತರಿಸಿದ್ದು, ಖಾಸಗಿ ಶಾಲೆಗಳ ಮಕ್ಕಳಿಗೆ ಸಮವಸ್ತ್ರ ಸಕರ್ಾರದಿಂದ ಸರಬರಾಜಾಗಿಲ್ಲ, ಸಮವಸ್ತ್ರ ಬಂದ ತಕ್ಷಣವೆ ಉಳಿದ ಮಕ್ಕಳಿಗೂ ಸಮವಸ್ತ್ರ ವಿತರಿಸಲಾಗುವುದು ಎಂದರು.
    ವಿದ್ಯಾಥರ್ಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ, ಸಂಜೆ ಸ್ನ್ಯಾಕ್ಸ್, ಬೆಳಗ್ಗೆ ಮತ್ತು ರಾತ್ರಿ ಊಟ ವ್ಯವಸ್ಥೆ ಸಮರ್ಪಕವಾಗಿದೆ ಎಂದರಲ್ಲದೆ, ರಾತ್ರಿ ಸಮಯದಲ್ಲಿ ಸೊಳ್ಳೆಗಳ ಕಾಟ ನಿಯಂತ್ರಿಸಲು ಗುಡ್ ನೈಟ್ ಲಿಕ್ವೀಡಿಟೇರ್ಗಳನ್ನು ಸರಬರಾಜು ಮಾಡಿದ್ದಾರೆ,  ಬೇಸಗಿಯಾದ್ದರಿಂದ ರಾತ್ರಿ ಸಮಯದಲ್ಲಿ ಸೆಕೆ ಜಾಸ್ತಿ ಎಂದರು. ವಿದ್ಯಾಥರ್ಿಗಳ ಸಮಸ್ಯೆಗೆ ಸ್ಪಂದಿಸಿದ ಜಿಲ್ಲಾ ಅಧಿಕಾರಿ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲಿದ್ದ ವಿಸ್ತರಣಾಧಿಕಾರಿ ವನಮಾಲಾ ಭೂಮ್ಕರ್ ರವರಿಗೆ ಸೂಚಿಸಿದರು.
       
ಕಾಂಗ್ರೆಸ್ ಅಬ್ಯಾಥರ್ಿಯಾಗಿ ಹೊರಗಿನವರು ಬಂದರೆ ಅಸಹಕಾರ: ಬ್ಲಾಕ್ ಕಾಂಗ್ರೆಸ್
                               
ಚಿಕ್ಕನಾಯಕನಹಳ್ಳಿ,ಮಾ.21 : ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಟಿಕೆಟ್ನ್ನು ಸ್ಥಳೀಯರಿಗೆ ಬಿಟ್ಟು ಹೊರಗಿನವರಿಗೆ ನೀಡಿದರೆ ಇಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ಚುನಾವಣೆಯಲ್ಲಿ ಕೆಲಸ ಮಾಡುವ ಬದಲು ವಿರೋಧಿಸುತ್ತಾರೆ ಎಂದು ಮಾಜಿ ಶಾಸಕ ಬಿ.ಲಕ್ಕಪ್ಪ ತಿಳಿಸಿದರು.
    ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ತಾಲ್ಲೂಕಿಗೆ ಹೊರ ಅಭ್ಯಥರ್ಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ನೀಡಲಾಗುತ್ತಿದೆ ಎಂಬ ಸುದ್ದಿ ಹರಡುತ್ತಿದ್ದು, ಹೊರಗಿನವರಿಗೆ ಏನಾದರು ಪಕ್ಷ ಟಿಕೆಟ್ ನೀಡಿದರೆ ಕಾಂಗ್ರೆಸ್ ಪಕ್ಷ ಹೀನಾಯ ಸ್ಥಿತಿ ತಲುಪುತ್ತದೆ.   ತಾಲ್ಲೂಕಿನಲ್ಲಿ ಕಾಂಗ್ರೆಸ್ ಪಕ್ಷ ಹಿಂದೆ ಬಿದ್ದಿದೆ, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ದುಡಿಯಬೇಕಾದವರು ಕಾರ್ಯಕರ್ತರು ಅವರ ಅಭಿಪ್ರಾಯವನ್ನು ಬಿಟ್ಟು ಹೊರಗಿನ ವ್ಯಕ್ತಿಗಳಿಗೆ ಟಿಕೆಟ್ ನೀಡಬಾರದು, ಯಾರಾದರು ಸರಿಯೇ ಸ್ಥಳೀಯ ಅಭ್ಯಥರ್ಿಗೆ ಟಿಕೆಟ್ ನೀಡಬಕೇಂದ್ರ ಒತ್ತಾಯಿಸಿದ ಅವರು ತಾಲ್ಲೂಕಿನಲ್ಲಿ ಕೆಪಿಸಿಸಿ ಸದಸ್ಯರು, ಮಾಜಿ ಶಾಸಕರು, ಡಿಸಿಸಿ ಸದಸ್ಯರುಗಳು ಅಲ್ಲದೆ ಪಕ್ಷದ ಪರವಾಗಿ ಮೊದಲಿನಿಂದಲೂ ದುಡಿದ ಹಲವು ಕಾರ್ಯಕರ್ತರು ಸ್ಪಧರ್ೆಯಲ್ಲಿದ್ದಾರೆ ಎಂದರಲ್ಲದೆ,      ಚಿ.ನಾ.ಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ ಒಂದುವರೆ ಲಕ್ಷದಷ್ಟು ಅಹಿಂದ ಮತದಾರರಿಂದ್ದಾರೆ ಎಂದರು.
    ಕಾಂಗ್ರೆಸ್ ಪಕ್ಷದ ಮುಖಂಡ ನಾರಾಯಣಗೌಡ ಮಾತನಾಡಿ ತಾಲ್ಲೂಕಿನ ವಿಷಯದಲ್ಲಿ ವರಿಷ್ಠರು ತೆಗೆದುಕೊಳ್ಳುವ ತೀಮರ್ಾನದಿಂದಲೇ ಪಕ್ಷ ಹೀನಾಯ ಸ್ಥಿತಿ ತಲುಪಿ, ಠೇವಣಿಯು ಇಲ್ಲದಂತೆ ನರಳುತ್ತಿದೆ, ಕಾಂಗ್ರೆಸ್ ಪಕ್ಷದಲ್ಲಿ ಈ ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟ್ ಬಯಸುವವರು ಆಥರ್ಿಕವಾಗಿ ಸಬಲರನ್ನು ನೋಡುತ್ತಿದ್ದು ಟಿಕೆಟ್ನ್ನು ಮಾರಿಕೊಳ್ಳುವ ಪ್ರಕ್ರಿಯೆಯೂ ನಡೆದಿದೆ ಏನೋ ಎಂಬ ಅನುಮಾನ ಕಾರ್ಯಕರ್ತರನ್ನು ಕಾಡುತ್ತಿದೆ,ರಾಜ್ಯಾಧ್ಯಕ್ಷರು ಈಗಲಾದರೂ ಎಚ್ಚೆತ್ತುಕೊಂಡು ಸ್ಥಳೀಯ ಅಭ್ಯಥರ್ಿಗಳಿಗೆ ಟಿಕೆಟ್ ನೀಡಲು ಒತ್ತಾಯಿಸಿದರು.
    ಗೋಷ್ಟಿಯಲ್ಲಿ ಪುರಸಭಾ ಸದಸ್ಯ ಸಿ.ಪಿ.ಮಹೇಶ್, ಮುಖಂಡರಾದ ಸಿ.ಎಂ.ಬೀರಲಿಂಗಯ್ಯ ಉಪಸ್ಥಿತರಿದ್ದರು.

ಮಳೆನೀರಿನ ಬಗ್ಗೆ ಸ್ತ್ರೀಶಕ್ತಿ ಸಂಘಗಳಿಗೆ ಹೆಚ್ಚಿನ ಜಾಗೃತಿ ಮೂಡಿಸಲು ಕರೆ
                                
ಚಿಕ್ಕನಾಯಕನಹಳ್ಳಿ,ಮಾ.21 : ಮಳೆ ನೀರು ಇಂಗಿಸುವ ಕಾರ್ಯಕ್ರಮದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಸ್ತ್ರೀಶಕ್ತಿ ಸ್ವಸಹಾಯ ಸಂಘಗಳು ಜನರಲ್ಲಿ ಜಾಗೃತಿ ಮೂಡಿಸುವಂತೆ ಶಾಸಕ ಸಿ.ಬಿ.ಸುರೇಶ್ಬಾಬು ಸಲಹೆ ನೀಡಿದರು.
    ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಸಮಗ್ರ ಜಲಾನಯನ ನಿರ್ವಹಣೆ ಕಾರ್ಯಕ್ರಮ ಆಹಾರ ಉತ್ಪನ್ನ ಚಟುವಟಿಕೆಗಳ ಘಟಕದಡಿ ಗೋಡೆಕೆರೆ, ಜೆ.ಸಿ.ಪುರ, ದುಗಡಿಹಳ್ಳಿ, ಶೆಟ್ಟಿಕೆರೆ ಗ್ರಾ.ಪಂ.ವ್ಯಾಪ್ತಿಯಲ್ಲಿ ಬರುವ 34ಸ್ವಸಹಾಯ ಸಂಘಗಳಿಗೆ ಸುತ್ತುನಿಧಿ ವಿತರಣೆ ಮಾಡಿದ ಅವರು  ಇಂಗುಗುಂಡಿ, ಉದಿಬದು ಹಾಕುವ ಮೂಲಕ ನೀರು ಇಂಗುವಂತೆ ಮಾಡುವುದರಿಂದ ಅಂತರ್ಜಲ ಹೆಚ್ಚಿಸಲು ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದ ಅವರು ತಾಲ್ಲೂಕಿನಲ್ಲಿ 800ರಿಂದ 1000ಅಡಿ ಕೊಳವೆ ಬಾವಿ ಕೊರೆದರು ನೀರು ಬರುತ್ತಿಲ್ಲ, ಇರುವ ನೀರಿನ್ನೇ ಸದ್ಭಳಕೆ ಮಾಡುವಂತೆ ತಿಳಿಸಿದರು. ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳು ಸುತ್ತುನಿಧಿಯನ್ನು ಸರಿಯಾಗಿ ಬಳಸಿಕೊಂಡು ಆಥರ್ಿಕವಾಗಿ ಸದೃಡರಾಗಬೇಕು ಎಂದು ಹೇಳಿದರು.
    ಸಂಪನ್ಮೂಲ ವ್ಯಕ್ತಿಯಾದ ಆನಂದಕುಮಾರ್ ಮಾತನಾಡಿ ಸಮಗ್ರ ಜಲಾನಯನ ಯೋಜನ ಅಡಿಯಲ್ಲಿ ಮಣ್ಣಿನ ಸಂರಕ್ಷಣೆ ಅಂತರ್ಜಲ ಹೆಚ್ಚಿಸಲು ಇಂಗುಗುಂಡಿ ಉದುಬದು ಮಳೆಯಿಂದ ಕೊಚ್ಚಿ ಹೋಗುವ ಮಣ್ಣಿನ ಸಂರಕ್ಷಣೆ ಮಾಡುವುದು ಕಡಿಮೆ ನೀರಿನಲ್ಲಿ ತೋಟಗಾರಿಕೆ ಬೆಳೆಳು ಅಭಿವೃದ್ದಿ ಅರಣ್ಯಕಾರಣದಂತಹ ಕಾರ್ಯಕ್ರಮವನ್ನು ಜನರ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸಲು ಹಾಗೂ ಸಕರ್ಾರ ಸ್ವಸಹಾಯ ಸಂಘಗಳ ಮೂಲಕ ಪ್ರತಿ ಸಂಘಗಳಿಗೆ 50ಸಾವಿರ ಸುತ್ತುನಿಧಿ ನೀಡುತ್ತಿದ್ದು ಸಂಘಗಳು ಸುತ್ತುನಿಧಿಯನ್ನು ಉಪಯೋಗಿಸಿಕೊಂಡು ಕೋಳಿಸಾಗಾಣಿಕೆ, ಕುರಿಸಾಗಾಣಿಕೆ, ಹೈನುಗಾರಿಕೆ, ಟೈಲರಿಂಗ್ ಸೇರಿದಂತೆ ನಾನಾ ಕಸುಬುಗಳನ್ನು ತಮ್ಮ ಕುಟುಂಬದ ಆಥರ್ಿಕ ಸುಧಾರಣೆಯನ್ನು ಮಾಡಿಕೊಳ್ಳಿ ಎಂದರು. ಸ್ವಸಹಾಯ ಸಂಘಗಳಿಗೆ ಕೌಶಲ್ಯಭಿವೃದ್ದಿ ಯೋಜನೆ ಅಡಿಯಲ್ಲಿ ತರಬೇತಿ ನೀಡಲಾಗುವುದು ಎಂದರು.
    ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯರಾದ ಲೋಹಿತಬಾಯಿ, ಹೆಚ್.ಬಿ.ಪಂಚಾಕ್ಷರಿ, ತಾ.ಪಂ.ಅಧ್ಯಕ್ಷ ಎಂ.ಎಂ.ಜಗದೀಶ್ ಮಾತನಾಡಿದರು.
    ತಾ.ಪಂ.ಉಪಾಧ್ಯಕ್ಷೆ ಲತಾಕೇಶವಮೂತರ್ಿ, ತಾ.ಪಂ.ಸದಸ್ಯರಾದ ಶಶಿಧರ್, ಜಯಣ್ಣ, ಲತಾ, ನವೀನ್ ಉಪಸ್ಥಿತರಿದ್ದರು.
    ಸಮಾರಂಭದಲ್ಲಿ ಕೃಷಿ ಇಲಾಖೆ ವತಿಯಿಂದ ಆಕಸ್ಮಿಕವಾಗಿ ಹಾವು ಕಡಿತದಿಂದ ನಿಧನ ಹೊಂದಿದ ಕುಟುಂಬದ ಸದಸ್ಯರಿಗೆ ರಾಮನಗರದ ಪಾತಲಿಂಗಯ್ಯ, ಅಂಬರಾಪುರದ ಭಾಗ್ಯಮ್ಮ, ಆಶ್ರಿಹಾಳ್ನ ಅನಿತರವರಿಗೆ ತಲಾ 1ಲಕ್ಷರೂ ಚೆಕ್ಕನ್ನು ಶಾಸಕ ಸಿ.ಬಿ.ಸುರೇಶ್ಬಾಬು ವಿತರಿಸಿದರು.

ಹಿಂದುಳಿದ ಹೋಬಳಿಗಳು ನೀರಿಗಾಗಿ ಹೋರಾಟ ಮಾಡಲೇಬೇಕು: ಸಿ.ಬಿ.ಎಸ್.
                       
ಚಿಕ್ಕನಾಯಕನಹಳ್ಳಿ,ಮಾ.21 : ಹೇಮಾವತಿ ನಾಲೆಯಿಂದ ಅತ್ಯಂತ ಹಿಂದುಳಿದ ಹೋಬಳಿಗೆ ನೀರು ಬರಬೇಕಾದರೆ ಸಂಘಟಿತರಾಗಿ ಹೋರಾಟ ಮಾಡಿದರೆ ನಾನು ತಮ್ಮೊಂದಿಗೆ ಇರುತ್ತೇನೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
    ತಾಲ್ಲೂಕಿನ ತೀರ್ಥಪುರ ಗ್ರಾಮದಲ್ಲಿ 10ಲಕ್ಷರೂ ಮಟ್ಟದ ಕಾಂಕ್ರಿಟ್ ರಸ್ತೆ ಹಾಗೂ ರಾಜ್ಯ ವಲಯ ಯೋಜನೇತರ ಅಡಿಯಲ್ಲಿ 5.36ಲಕ್ಷ ಮಟ್ಟದಲ್ಲಿ ನಿಮರ್ಿಸಿರುವ ಹೆಚ್ಚುವರಿ ಶಾಲಾ ಕೊಠಡಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸಕರ್ಾರಿ ಕುಡಿಯುವ ನೀರಿಗೆ ಎಷ್ಟೇ ಹಣ ಬಿಡುಗಡೆ ಮಾಡಿದರು. ಭೂಮಿಯಲ್ಲಿ ನೀರಿಲ್ಲದಿದ್ದರೆ ಏನು ಪ್ರಯೋಜನ, ಈಗಾಗಲೇ ತಾಲ್ಲೂಕಿನಲ್ಲಿ 200ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕೊಳವೆ ಬಾವಿಗಳನ್ನು ಕೊರೆಸಿದ್ದು ಅಲ್ಪ ಸ್ಪಲ್ಪ ನೀರು ಬರುತ್ತಿದೆ. ಇನ್ನು ಎರಡು ತಿಂಗಳಲ್ಲಿ ಮಳೆ ಬರದೇ ಇದ್ದರೆ ಕೊರೆಸಿರುವ ಕೊಳವೆ ಬಾವಿಗಳು ಬತ್ತಿ ಹೋಗುತ್ತವೆ ಆದ್ದರಿಂದ ಈ ಭಾಗಕ್ಕೆ ಹೇಮಾವತಿ ನಾಲೆಯಿಂದ ನೀರು ಹರಿದರೆ ಮಾತ್ರ ರೈತರ ಬದುಕು ಹಸನಾಗುವುದು  ಈ ಭಾಗಕ್ಕೆ ಗುಣಮಟ್ಟದ ವಿದ್ಯುತ್ ಸರಬರಾಜಿಗೆ ವಿದ್ಯುತ್ ಉಪಸ್ಥಾವರ ಕೇಂದ್ರಕ್ಕೂ ಚಾಲನೆ ನೀಡಲಾಗಿದೆ. ಪೋಷಕರು ತಮ್ಮ ಮಕ್ಕಳನ್ನು ನಗರ ಪ್ರದೇಶಗಳಿಗೆ ವಿದ್ಯಾಭ್ಯಾಸಕ್ಕೆ ಕಳಿಸುವ ಬದಲು ಗ್ರಾಮದಲ್ಲೇ ಇರುವ ಸಕರ್ಾರಿ ಶಾಲೆಗೆ ಕಳಿಸಿದರೆ ಮಾತ್ರ ಗ್ರಾಮೀಣ ಪ್ರದೇಶಗಳ ಶಾಲೆಗಳು ಉಳಿಯಲು ಸಾಧ್ಯ ಎಂದರು.
ಎಸ್.ಎಸ್.ಎಲ್.ಸಿ ಪರೀಕ್ಷೆ ಅತ್ಯುನ್ನತ ಸ್ಥಾನ ಅಥವ ಅತ್ಯಂತ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಬೆಳ್ಳಿ ಪದಕ ನೀಡಲಾಗುವುದು ಎಂದರು.
    ಜಿ.ಪಂ.ಸದಸ್ಯೆ ಲೋಹಿತಬಾಯಿ ಮಾತನಾಡಿ ವಿದ್ಯೆ ಸಾಧಕನ ಸುತ್ತಿ ಹೊರೆತು ಸೋಮಾರಿಯ ಸೊತ್ತಲ್ಲ್ಲ ಇದನ್ನು ಅರಿತು ಮಕ್ಕಳ ಶಾಲೆಯ ಪ್ರಾರಂಭದಿಂದಲೂ ಓದಿದರೆ ಮಾತ್ರ ಉನ್ನತದಜರ್ೆಯಲ್ಲಿ ಪಾಸಾಗುತ್ತಾರೆ, ಪರೀಕ್ಷೆ ಸಮಯದಲ್ಲಿ ಓದಿದರೆ ಪ್ರಯೋಜನವಿಲ್ಲ ಶಿಕ್ಷಕರ ಶಾಲೆಗಳಲ್ಲಿ ಪಾಠ ಮಾಡುವುದನ್ನು ಬಿಟ್ಟು ರಾಜಕೀಯ ಮಾಡುತ್ತಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿದ್ದು ಶಾಲೆಗಳಲ್ಲಿ ರಾಜಕೀಯ ನುಸುಳದಂತೆ ನೋಡಿಕೊಳ್ಳಿ ಎಂದರು. ಶಾಲೆಯ ಸಮಸ್ಯೆಗಳನ್ನು ಅರಿಯಲು ಗ್ರಾ.ಪಂ.ಅಧ್ಯಕ್ಷ ಎಸ್.ಡಿ.ಎಂ.ಸಿ ಸದಸ್ಯರು ಭೇಟಿ ನೀಡಿ ಎಂದು ಸಲಹೆ ನೀಡಿದರು.
    ಕಾರ್ಯಕ್ರಮದಲ್ಲಿ ಬಿ.ಇ.ಓ ಸಾ.ಚಿ.ನಾಗೇಶ್, ಗ್ರಾ.ಪಂ.ಅಧ್ಯಕ್ಷ ಪದ್ಮಮ್ಮಲಿಂಗರಾಜು, ಉಪಾಧ್ಯಕ್ಷೆ ಮಹಾಲಿಂಗಪ್ಪ, ಗ್ರಾ.ಪಂ.ಸದಸ್ಯರಾದ ಕೆಂಪರಾಜು, ಶಿವಣ್ಣ, ಗೋವಿಂದರಾಜು, ರಾಮಕೃಷ್ಣಪ್ಪ, ಒಬಣ್ಣರಾಜು, ಮಂಜುನಾಥ, ಮೋಹನ್ಕುಮಾರ್ ಮತ್ತಿತರು ಉಪಸ್ಥಿತರಿದ್ದರು.
ಶಿಕ್ಷಕ ರಮೇಶ್ ಸ್ವಾಗತಿಸಿದರು. ಮೋಹನ್ ನಿರೂಪಿಸಿ ಯೋಗೀಶ್ ವಂದಿಸಿದರು.;